ಇಸುಝು ಹೈ-ಲ್ಯಾಂಡರ್ ಪಿಕ್ಅಪ್ ಖರೀದಿ ಮೇಲೆ ಭರ್ಜರಿ ಆಫರ್

ಇಸುಝು ಇಂಡಿಯಾ ಕಂಪನಿಯು ಕಳೆದ ವಾರವಷ್ಟೇ ತನ್ನ ಜನಪ್ರಿಯ ಪಿಕ್‌ಅಪ್ ಮಾದರಿಯಾದ ಡಿ-ಮ್ಯಾಕ್ಸ್ ವಿ-ಕ್ರಾಸ್ ಬಿಎಸ್-6 ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಹೊಸ ಆವೃತ್ತಿಯಲ್ಲಿ ಕಂಪನಿಯು ಆರಂಭಿಕ ಮಾದರಿಯಾಗಿ ಹೈ-ಲ್ಯಾಂಡರ್ ಪರಿಚಯಯಿಸಿದೆ.

ಇಸುಝು ಹೈ-ಲ್ಯಾಂಡರ್ ಪಿಕ್ಅಪ್ ಖರೀದಿ ಮೇಲೆ ಭರ್ಜರಿ ಆಫರ್

ಹೈ-ಲ್ಯಾಂಡರ್ ಪಿಕ್ಅಪ್ ಮಾದರಿಯು ಬಿಡುಗಡೆಗೊಂಡ ಮೊದಲ ತಿಂಗಳಿನಲ್ಲಿಯೇ ಹೊಸ ಕಾರು ಖರೀದಿಯ ಮೇಲೆ ಇಸುಝು ಕಂಪನಿಯು ಆಕರ್ಷಕ ಘೋಷಣೆ ಮಾಡಿದ್ದು, ಹೊಸ ಆಫರ್‌ನಲ್ಲಿ ಡಿ-ಮ್ಯಾಕ್ಸ್ ವಿ-ಕ್ರಾಸ್ ಕಾರಿನ ಆರಂಭಿಕ ಮಾದರಿಯಾದ ಹೈ-ಲ್ಯಾಂಡರ್ ಮಾದರಿಯ ಮೇಲೆ ಎಕ್ಸ್‌ಚೆಂಜ್ ಆಫರ್ ನೀಡಲಾಗುತ್ತಿದೆ.

ಇಸುಝು ಹೈ-ಲ್ಯಾಂಡರ್ ಪಿಕ್ಅಪ್ ಖರೀದಿ ಮೇಲೆ ಭರ್ಜರಿ ಆಫರ್

ಹಳೆಯದಾಗಿರುವ ಯಾವುದೇ ಬ್ರಾಂಡ್‌ನ ಎಸ್‌ಯುವಿಗಳೊಂದಿಗೆ ಎಕ್ಸ್‌ಚೆಂಜ್ ಬಯಸುವ ಗ್ರಾಹಕರಿಗೆ ಇಸುಝು ಕಂಪನಿಯು ರೂ. 1.50 ಲಕ್ಷದಷ್ಟು ಬೋನಸ್ ನೀಡಲಿದ್ದು, ಹೊಸ ಮಾದರಿಯೊಂದಿಗೆ ಉನ್ನತೀಕರಣ ಬಯಸುವ ಗ್ರಾಹಕರಿಗೆ ಅತ್ಯುತ್ತಮ ಕೊಡುಗೆ ನೀಡಿದೆ.

ಇಸುಝು ಹೈ-ಲ್ಯಾಂಡರ್ ಪಿಕ್ಅಪ್ ಖರೀದಿ ಮೇಲೆ ಭರ್ಜರಿ ಆಫರ್

ಹೊಸ ಡಿ-ಕ್ರಾಸ್ ವಿ-ಕ್ರಾಸ್ ಲೈಫ್‌ಸ್ಟೈಲ್ ಪಿಕ್‌ಅಪ್ ಟ್ರಕ್ ಮಾದರಿಯು ಹಳೆಯ ಆವೃತ್ತಿಗಿಂತಲೂ ಹಲವಾರು ಹೊಸ ಬದಲಾವಣೆಗಳೊಂದಿಗೆ ಬಿಡುಗಡೆಗೊಂಡಿದ್ದು, ಹೊಸ ಡಿ-ಕ್ರಾಸ್ ವಿ-ಕ್ರಾಸ್ ಪಿಕ್‌ಅಪ್ ಎಸ್‌ಯುವಿ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಹೊಸದಾಗಿ ಹೈ-ಲ್ಯಾಂಡರ್ ವೆರಿಯೆಂಟ್‌ನೊಂದಿಗೆ ಪ್ರಮುಖ ಮೂರು ಆವೃತ್ತಿಗಳಲ್ಲಿ ಖರೀದಿಗೆ ಲಭ್ಯವಿದೆ.

ಇಸುಝು ಹೈ-ಲ್ಯಾಂಡರ್ ಪಿಕ್ಅಪ್ ಖರೀದಿ ಮೇಲೆ ಭರ್ಜರಿ ಆಫರ್

ಇಸುಝು ಡಿ-ಕ್ರಾಸ್ ವಿ-ಕ್ರಾಸ್ ಪಿಕ್ಅಪ್ ಮಾದರಿಯಲ್ಲಿ ಆರಂಭಿಕ ಮಾದರಿಯಾದ ಹೈ-ಲ್ಯಾಂಡರ್ ಆವೃತ್ತಿಯು ಎಕ್ಸ್‌ಶೋರೂಂ ಪ್ರಕಾರ ರೂ. 16.98 ಲಕ್ಷ ಬೆಲೆ ಹೊಂದಿದ್ದರೆ, ಹೈ ಎಂಡ್ ಮಾದರಿಯಾದ ಜೆಡ್ ಸೀರಿಸ್ ಆವೃತ್ತಿಗಳು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 19.98 ಲಕ್ಷದಿಂದ ರೂ.24.49 ಲಕ್ಷ ಬೆಲೆ ಹೊಂದಿವೆ.

ಇಸುಝು ಹೈ-ಲ್ಯಾಂಡರ್ ಪಿಕ್ಅಪ್ ಖರೀದಿ ಮೇಲೆ ಭರ್ಜರಿ ಆಫರ್

ಸದ್ಯ ಇಸುಝು ಕಂಪನಿಯು ಘೋಷಣೆ ಮಾಡಿರುವ ಎಕ್ಸ್‌ಚೆಂಜ್ ಆಫರ್ ಆರಂಭಿಕ ಮಾದರಿಯಾದ ಹೈ ಲ್ಯಾಂಡರ್ ಆವೃತ್ತಿಗೆ ಮಾತ್ರ ಅನ್ವಯವಾಗಲಿದ್ದು, ಸೀಮಿತ ಅವಧಿಗಾಗಿ ಮಾತ್ರ ಹೊಸ ಆಫರ್ ನೀಡಲಾಗುತ್ತಿದೆ.

ಇಸುಝು ಹೈ-ಲ್ಯಾಂಡರ್ ಪಿಕ್ಅಪ್ ಖರೀದಿ ಮೇಲೆ ಭರ್ಜರಿ ಆಫರ್

ಇನ್ನು ಡಿ-ಕ್ರಾಸ್ ವಿ-ಕ್ರಾಸ್ ಜೆಡ್ ಸರಣಿಯಲ್ಲಿ ಇಸುಝು ಕಂಪನಿಯು ಗ್ರಾಹಕರ ಬೇಡಿಕೆ ಅನುಸಾರವಾಗಿ ಜೆಡ್ 2 ವೀಲ್ಹ್ ಡ್ರೈವ್ ಆಟೋಮ್ಯಾಟಿಕ್, ಜೆಡ್ 4 ವೀಲ್ಹ್ ಡ್ರೈವ್ ಮ್ಯಾನುವಲ್ ಮತ್ತು ಜೆಡ್ ಪ್ರೆಸ್ಟಿಜ್ 4 ವೀಲ್ಹ್ ಡ್ರೈವ್ ಆಟೋಮ್ಯಾಟಿಕ್ ಮಾದರಿಗಳನ್ನು ಪರಿಚಯಿಸಲಾಗಿದೆ.

ಇಸುಝು ಹೈ-ಲ್ಯಾಂಡರ್ ಪಿಕ್ಅಪ್ ಖರೀದಿ ಮೇಲೆ ಭರ್ಜರಿ ಆಫರ್

ಹೈ-ಲ್ಯಾಂಡರ್ ಮಾದರಿಯು ಬಿಎಸ್-6 ಇಸುಝು ಡಿ-ಕ್ರಾಸ್ ವಿ-ಕ್ರಾಸ್ ಮಾದರಿಯ ಬೆಸ್ ವೆರಿಯೆಂಟ್ ಆಗಿ ಮಾರಾಟಗೊಳ್ಳಲಿದ್ದು, ಹಲವಾರು ಫೀಚರ್ಸ್ ಮ್ಯಾನುವಲ್ ಕಂಟ್ರೋಲ್ ಹೊಂದಿವೆ. ಪಿಕ್ಅಪ್ ಮಾದರಿಯನ್ನು ಹೊಂದಲು ಬಯುಸುವ ಎಸ್‌ಯುವಿ ಗ್ರಾಹಕರಿಗಾಗಿ ಈ ಮಾದರಿಯನ್ನು ಆಕರ್ಷಕ ಬೆಲೆಯೊಂದಿಗೆ ಬಿಡುಗಡೆ ಮಾಡಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಇಸುಝು ಹೈ-ಲ್ಯಾಂಡರ್ ಪಿಕ್ಅಪ್ ಖರೀದಿ ಮೇಲೆ ಭರ್ಜರಿ ಆಫರ್

ಬೆಸ್ ವೆರಿಯೆಂಟ್‌ ಸೇರಿದಂತೆ ಜೆಡ್ ಸರಣಿಯಲ್ಲೂ ಹಲವಾರು ಪ್ರೀಮಿಯಂ ಫೀಚರ್ಸ್‌ಗಳಿದ್ದು, ಬಿ-ಎಲ್ಇಡಿ ಪ್ರೊಜೆಕ್ಟರ್, ಎಲ್ಇಡಿ ಡಿಆರ್‌ಎಲ್ಎಸ್, ಎಲ್ಇಡಿ ಟೈಲ್‌ಲೈಟ್ಸ್, 7-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ಸೇರಿದಂತೆ ಆರಾಮದಾಯಕ ಆಸನ ಸೌಲಭ್ಯ ಜೋಡಿಸಿದೆ.

ಇಸುಝು ಹೈ-ಲ್ಯಾಂಡರ್ ಪಿಕ್ಅಪ್ ಖರೀದಿ ಮೇಲೆ ಭರ್ಜರಿ ಆಫರ್

ಬಿಎಸ್-6 ವಿ-ಕ್ರಾಸ್ ಮಾದರಿಯಲ್ಲಿ ಈ ಹಿಂದಿನ 2.5-ಲೀಟರ್ ಡೀಸೆಲ್ ಮಾದರಿಯನ್ನು ಸ್ಥಗಿತಗೊಳಿಸಲಾಗಿದ್ದು, 1.9-ಲೀಟರ್ 4-ಸಿಲಿಂಡರ್ ಕಾಮನ್ ರೈಲ್ ಡೀಸೆಲ್ ಎಂಜಿನ್‌ ಅನ್ನು ಮಾತ್ರ ಮಾರಾಟ ಮಾಡುತ್ತಿದೆ.

MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ಇಸುಝು ಹೈ-ಲ್ಯಾಂಡರ್ ಪಿಕ್ಅಪ್ ಖರೀದಿ ಮೇಲೆ ಭರ್ಜರಿ ಆಫರ್

ಹೊಸ ವಾಹನದಲ್ಲಿ ಪ್ರಯಾಣಿಕ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ಇಎಸ್ಸಿ ), ಹಿಲ್ ಸ್ಟಾರ್ಟ್ ಅಸಿಸ್ಟ್ (ಎಚ್‌ಎಎಸ್), ಕ್ರೂಸ್ ಕಂಟ್ರೋಲ್, ಹಿಲ್ ಡಿಸೆಂಟ್ ಕಂಟ್ರೋಲ್ (ಎಚ್‌ಡಿಸಿ), ಸೈಡ್ ಏರ್‌ಬ್ಯಾಗ್, ರೂಫ್ ಕರ್ಟನ್, 18-ಇಂಚಿನ ಅಲಾಯ್ ವೀಲ್ಹ್, ರಿಯರ್ ಪಾರ್ಕಿಂಗ್ ಕ್ಯಾಮೆರಾ ಮತ್ತು ಟ್ರಾಸ್‌ಫರ್‌ಕೇಸ್ ಪ್ರೊಟೆಕ್ಟರ್ ಫೀಚರ್ ಗಳನ್ನು ಒಳಗೊಂಡಿದೆ.

Most Read Articles

Kannada
Read more on ಇಸುಝು isuzu
English summary
Isuzu Hi-Lander Offers & Benefits Of Up To Rs 1.5 Lakh. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X