2021ರ ಎಂಯು-ಎಕ್ಸ್ ಎಸ್‌ಯುವಿ ಕಾರಿನ ಅಧಿಕೃತ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ

ಇಸುಝು ಇಂಡಿಯಾ ಕಂಪನಿಯು ಕಳೆದ ವಾರವಷ್ಟೇ ತನ್ನ 2021ರ ಎಂಯು-ಎಕ್ಸ್ ಎಸ್‍‌ಯುವಿ ಆವೃತ್ತಿಯನ್ನು ಬಿಡುಗಡೆಗಡೆಗೊಳಿಸಿದ್ದು, ಕಂಪನಿಯು ಇದೀಗ ಎಸ್‌ಯುವಿ ಪ್ರಿಯರ ಬೇಡಿಕೆಗೆ ಅನುಗಣವಾಗಿ ಹೊಸ ಕಾರಿನ ಆಕ್ಸೆಸರಿಸ್ ಪ್ಯಾಕೇಜ್ ಪರಿಚಯಿಸಿದೆ.

2021ರ ಎಂಯು-ಎಕ್ಸ್ ಎಸ್‌ಯುವಿ ಕಾರಿನ ಅಧಿಕೃತ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ

ಹೊಸ ಎಮಿಷನ್‌ ನಿಯಮದೊಂದಿಗೆ ಪ್ರಸ್ತುತ ಕಾರು ಮಾದರಿಗಳ ಎಂಜಿನ್ ಆಯ್ಕೆಯಲ್ಲಿ ಮಹತ್ವದ ಬದಲಾವಣೆ ಪರಿಚಯಿಸಿರುವ ಇಸುಝು ಕಂಪನಿಯು ಎಂಯು-ಎಕ್ಸ್ ಮಾದರಿಯಲ್ಲಿ 4x2 ಆಟೋಮ್ಯಾಟಿಕ್ ಮತ್ತು 4x4 ಆಟೋಮ್ಯಾಟಿಕ್ ಬಿಡುಗಡೆ ಮಾಡಿದ್ದು, ಹೊಸ ಕಾರು ಮಾದರಿಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 33.23 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ. 35.19 ಲಕ್ಷ ಬೆಲೆ ಹೊಂದಿದೆ.

2021ರ ಎಂಯು-ಎಕ್ಸ್ ಎಸ್‌ಯುವಿ ಕಾರಿನ ಅಧಿಕೃತ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ

ಹೊಸ ಕಾರು ಎಂಜಿನ್ ಆಯ್ಕೆ ಸೇರಿದಂತೆ ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ಪಡೆದುಕೊಂಡಿದ್ದು, ಕಂಪನಿಯು ಆಸಕ್ತ ಗ್ರಾಹಕರಿಗಾಗಿ ಹೆಚ್ಚುವರಿ ದರಗಳಲ್ಲಿ ಹಲವಾರು ಸ್ಪೋರ್ಟಿ ವಿನ್ಯಾಸ ಹೊಂದಿರುವ ಆಕ್ಸೆಸರಿಸ್ ಪ್ಯಾಕೇಜ್ ನೀಡುತ್ತಿದೆ.

2021ರ ಎಂಯು-ಎಕ್ಸ್ ಎಸ್‌ಯುವಿ ಕಾರಿನ ಅಧಿಕೃತ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ

ಆಕ್ಸೆಸರಿಸ್ ಪ್ಯಾಕೇಜ್‌ನಲ್ಲಿ ಟೈಲ್ ಲ್ಯಾಂಪ್, ಇಲ್ಯುಮೆಷನ್ ರಾಕರ್ ಪ್ಲೇಟ್, ಹೆಡ್ ಲ್ಯಾಂಪ್ ಕ್ರೊಮ್ ಗಾರ್ನಿಶ್, ರಿಯರ್ ಡೋರ್ ಕ್ರೋಮ್ ಗಾರ್ನಿಷ್, ಎಂಜಿನ್ ಹುಡ್ ಪ್ರೊಟೆಕ್ಟರ್, ಫಾಗ್ ಲ್ಯಾಂಪ್ ರಿಂಗ್, ರಿಯರ್ ಡೋರ್ ಲೋವರ್ ಕ್ರೋಮ್ ಗಾರ್ನಿಷ್, ಆರ್ಗನೈಷರ್ ಬಾಕ್ಸ್, ಡೋರ್ ವಿಸರ್, ಡೋರ್ ಹ್ಯಾಂಡಲ್ ಕ್ರೋಮ್ ಗಾರ್ನಿಷ್, ಮಫ್ಲರ್ ಕಟರ್, ರಿಯರ್ ಬಂಪರ್ ಗಾರ್ನಿಷ್, ರಿವರ್ಸ್ ಪಾರ್ಕಿಂಗ್ ಸೆನ್ಸಾರ್ ಸೌಲಭ್ಯಗಳಿವೆ.

2021ರ ಎಂಯು-ಎಕ್ಸ್ ಎಸ್‌ಯುವಿ ಕಾರಿನ ಅಧಿಕೃತ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ

ಇನ್ನು ಹೊಸ ಕಾರಿನಲ್ಲಿ ಬಿಎಸ್-4 ಎಂಯು-ಎಕ್ಸ್ ಮಾದರಿಯಲ್ಲಿ 3.0-ಲೀಟರ್ ಡೀಸೆಲ್ ಎಂಜಿನ್ ಮಾರಾಟ ಮಾಡುತ್ತಿದ್ದ ಇಸುಝು ಕಂಪನಿಯು ಹೊಸ ಎಮಿಷನ್ ನಿಯಮ ಪಾಲನೆ ಸಾಧ್ಯವಿಲ್ಲ ಹಿನ್ನಲೆಯಲ್ಲಿ ಹೊಸ ಕಾರಿನಲ್ಲಿ 1.9-ಲೀಟರ್ ಡೀಸೆಲ್ ಮಾದರಿಯನ್ನು ಪರಿಚಯಿಸಿದೆ. 1.9-ಲೀಟರ್ ಡೀಸೆಲ್ ಮಾದರಿಯನ್ನು ಡಿ-ಮ್ಯಾಕ್ಸ್ ವಿ-ಕ್ರಾಸ್ ಮಾದರಿಯಲ್ಲಿ ಮಾರಾಟ ಮಾಡುತ್ತಿರುವ ಇಸುಝು ಕಂಪನಿಯು ಎಂಯು-ಎಕ್ಸ್ ಪಿಕ್ಅಪ್ ಮಾದರಿಯ ಎಂಜಿನ್ ಮಾದರಿಯನ್ನು ಪರಿಚಯಿಸಿದ್ದು, ಹೊಸ ಕಾರು ಪ್ರಮುಖ ಎರಡು ವೆರಿಯೆಂಟ್‌ಗಳೊಂದಿಗೆ 4x2 ಆಟೋಮ್ಯಾಟಿಕ್ ಮತ್ತು 4x4 ಆಟೋಮ್ಯಾಟಿಕ್ ಮಾದರಿಗಳೊಂದಿಗೆ ಫುಲ್ ಸೈಜ್ ಎಸ್‌ಯುವಿ ಮಾರಾಟದಲ್ಲಿ ಗಮನಸೆಳೆಯಲಿದೆ.

2021ರ ಎಂಯು-ಎಕ್ಸ್ ಎಸ್‌ಯುವಿ ಕಾರಿನ ಅಧಿಕೃತ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ

ಹೊಸ ಎಮಿಷನ್ ಪ್ರೇರಿತ 1.9-ಲೀಟರ್ 4-ಸಿಲಿಂಡರ್ ಕಾಮನ್ ರೈಲ್ ಡೀಸೆಲ್ ಎಂಜಿನ್‌ ಮಾದರಿಯು 161-ಬಿಎಚ್‌ಪಿ ಮತ್ತು 360-ಎನ್ಎಂ ಟಾರ್ಕ್ ಉತ್ಪಾದಿಸಲಿದ್ದು, ಇಸುಝು ಕಂಪನಿಯು ಹೊಸ ಕಾರಿನಲ್ಲಿ ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್ ನೀಡಿದೆ.

2021ರ ಎಂಯು-ಎಕ್ಸ್ ಎಸ್‌ಯುವಿ ಕಾರಿನ ಅಧಿಕೃತ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ

ಹೊಸ ಕಾರಿನಲ್ಲಿ ಇಸುಝು ಕಂಪನಿಯು ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ಇಂಟಾಗ್ರೆಟೆಡ್ ಡಿಆರ್‌ಎಲ್ಎಸ್, ಎಲ್ಇಡಿ ಟೈಲ್‌ಲ್ಯಾಂಪ್ಸ್, 18-ಇಂಚಿನ ಅಲಾಯ್ ವೀಲ್ಹ್, ಸೈಡ್ ಸ್ಟೆಪ್ಸ್, ವೀಲ್ಹ್ ಆರ್ಚ್, ಸ್ಕಫ್ಲ್ ಪ್ಲೇಟ್, ಡ್ಯುಯಲ್ ಟೋನ್ ಬಂಪರ್ ನೀಡಲಾಗಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

2021ರ ಎಂಯು-ಎಕ್ಸ್ ಎಸ್‌ಯುವಿ ಕಾರಿನ ಅಧಿಕೃತ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ

ಹೊಸ ಕಾರಿನಲ್ಲಿ ಒಳಭಾಗದಲ್ಲಿನ ಫೀಚರ್ಸ್‌ಗಳು ಕೂಡಾ ಉನ್ನತೀಕರಣಗೊಂಡಿದ್ದು, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೊಲ್, ಕ್ರೂಸ್ ಕಂಟ್ರೋಲ್, ಸೆಮಿ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಎಂಡಿಐ ಸ್ಕ್ರೀನ್ ಮತ್ತು 7-ಇಂಚಿನ ಟಚ್ ಸ್ಕ್ರೀನ್ ಇನ್ಪೊಟೈನ್‌ಮೆಂಟ್ ಸಿಸ್ಟಂ ಸರ್ಪೊಟ್ ಮಾಡುವ ಅಂಡ್ರಾಯಿಡ್ ಆಟೋ ಮತ್ತು ಆಟೋ ಕಾರ್ ಪ್ಲೇ ಸೌಲಭ್ಯಗಳಿವೆ.

2021ರ ಎಂಯು-ಎಕ್ಸ್ ಎಸ್‌ಯುವಿ ಕಾರಿನ ಅಧಿಕೃತ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ

ಪ್ರಯಾಣಿಕರ ಸುರಕ್ಷಿತೆಗಾಗಿ ಆರು ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಐಸೋ ಫಿಕ್ಸ್ ಚೈಲ್ಡ್ ಸೀಟ್ ಮೌಂಟ್, ರಿಯರ್ ಪಾರ್ಕಿಂಗ್ ಕ್ಯಾಮೆರಾ ಸೇರಿದಂತೆ ಹಲವಾರು ಹೊಸ ಫೀಚರ್ಸ್ ಪಡೆದುಕೊಂಡಿದ್ದು, ಹೊಸ ಕಾರು ಆರು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ.

MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

2021ರ ಎಂಯು-ಎಕ್ಸ್ ಎಸ್‌ಯುವಿ ಕಾರಿನ ಅಧಿಕೃತ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ

ನ್ಯೂಟಿಲಸ್ ಬ್ಲ್ಯೂ ಬಣ್ಣ ಸೇರಿದಂತೆ ಹೊಸ ಕಾರು ರೆಡ್ ಸ್ಪಾನಿಯಲ್ ಮಿಕಾ, ಸ್ಕೈ ವೈಟ್ ಪರ್ಲ್, ಗಲೆನಾ ಗ್ರೇ, ಬ್ಲ್ಯಾಕ್ ಮಿಕಾ ಮತ್ತು ಸಿಲ್ವರ್ ಮೆಟಾಲಿಕ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದ್ದು, ಹೊಸ ಕಾರು ಟೊಯೊಟಾ ಫಾರ್ಚೂನರ್ ಮತ್ತು ಫೋರ್ಡ್ ಎಂಡೀವರ್ ಕಾರುಗಳಿಗೆ ಉತ್ತಮ ಪ್ರತಿಸ್ಪರ್ಧಿಯಾಗಿದೆ.

Most Read Articles

Kannada
English summary
Isuzu Introduced Accessories Specially Designed For The MU-X SUV. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X