ಮುಂದಿನ ತಿಂಗಳಿನಿಂದ ದುಬಾರಿಯಾಗಲಿವೆ ಇಸುಝು ಡಿ-ಮ್ಯಾಕ್ಸ್ ಮತ್ತು ಎಸ್-ಕ್ಯಾಬ್

ಜಪಾನ್ ಮೂಲದ ವಾಹನ ತಯಾರಕ ಕಂಪನಿಯಾದ ಇಸುಝು ಮೋಟಾರ್ಸ್ ತನ್ನ ಡಿ-ಮ್ಯಾಕ್ಸ್ ಮತ್ತು ಎಸ್-ಕ್ಯಾಬ್ ವಾಹನ ಮಾದರಿಗಳನ್ನು ಬಿಎಸ್-6 ಎಂಜಿನ್‌ನೊಂದಿಗೆ ಕಳೆದ ವರ್ಷ ಬಿಡುಗಡೆಗೊಳಿಸಿತ್ತು. ಪ್ರಸ್ತುತ ಈ ಎರಡು ಕಮರ್ಷಿಯಲ್ ವಾಹನಗಳು ಇಸುಝು ಸರಣಿಯ ಪ್ರಮುಖ ಮಾದರಿಗಳಾಗಿವೆ.

ಮುಂದಿನ ತಿಂಗಳಿನಿಂದ ದುಬಾರಿಯಾಗಲಿವೆ ಇಸುಝು ಡಿ-ಮ್ಯಾಕ್ಸ್ ಮತ್ತು ಎಸ್-ಕ್ಯಾಬ್

ಇನ್ನು ಇಸುಝು ಮೋಟಾರ್ಸ್ ಕಂಪನಿಯು ಡಿ-ಮ್ಯಾಕ್ಸ್ ರೆಗ್ಯುಲರ್ ಕ್ಯಾಬ್ ಮತ್ತು ಭಾರತದಲ್ಲಿ ಡಿ-ಮ್ಯಾಕ್ಸ್ ಎಸ್-ಕ್ಯಾಬ್ ಬೆಲೆಗಳನ್ನು ಹೆಚ್ಚಿಸುವುದಾಗಿ ಘೋಷಿಸಿದೆ. ಪ್ರಸ್ತುತ ಎಕ್ಸ್ ಶೋರೂಂ ಬೆಲೆಯಲ್ಲಿ ರೂ.1 ಲಕ್ಷ ಹೆಚ್ಚಾಗಲಿದೆ. ಈ ಹೊಸ ದರ ಏಪ್ರಿಲ್ ತಿಂಗಳಿನಿಂದ ಜಾರಿಯಾಗಲಿದೆ. ಇದರಿಂದ ಮುಂದಿನ ತಿಂಗಳು ಭಾರತೀಯ ಮಾರುಕಟ್ಟೆಯಲ್ಲಿ ಡಿ-ಮ್ಯಾಕ್ಸ್ ಮತ್ತು ಎಸ್-ಕ್ಯಾಬ್ ಮಾದರಿಗಳು ದುಬಾರಿಯಾಗಲಿವೆ.

ಮುಂದಿನ ತಿಂಗಳಿನಿಂದ ದುಬಾರಿಯಾಗಲಿವೆ ಇಸುಝು ಡಿ-ಮ್ಯಾಕ್ಸ್ ಮತ್ತು ಎಸ್-ಕ್ಯಾಬ್

ಪ್ರಸ್ತುತ ಇಸುಝು ಡಿ-ಮ್ಯಾಕ್ಸ್ ಕ್ಯಾಬ್ ಆರಂಭಿಕ ಬೆಲೆಯು ರೂ.8.75 ಲಕ್ಷಗಳಾದರೆ, ಡಿ-ಮ್ಯಾಕ್ಸ್ ಎಸ್-ಕ್ಯಾಬ್ ಬೆಲೆಯು ರೂ.10.74 ಲಕ್ಷಗಳಾಗಿದೆ. ಈ ಎಲ್ಲಾ ಬೆಲೆಗಳು ದೆಹಲಿ ಎಕ್ಸ್ ಶೋರೂಂ ಪ್ರಕಾರವಾಗಿದೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಮುಂದಿನ ತಿಂಗಳಿನಿಂದ ದುಬಾರಿಯಾಗಲಿವೆ ಇಸುಝು ಡಿ-ಮ್ಯಾಕ್ಸ್ ಮತ್ತು ಎಸ್-ಕ್ಯಾಬ್

ಡಿ-ಮ್ಯಾಕ್ಸ್ ಮಾದರಿಯು ಕ್ಯಾಬ್ ಚಾರ್ಸಿಸ್, ಡಿ-ಮ್ಯಾಕ್ಸ್ ಮತ್ತು ಸೂಪರ್ ಸ್ಟ್ರಾಂಗ್ ಎಂಬ ಮೂರು ವೆರಿಯೆಂಟ್ ಗಳಲ್ಲಿ ಲಭ್ಯವಿದೆ. ಟಾಪ್ ಎಂಡ್ ಮಾದರಿಯಾದ ಸೂಪರ್ ಸ್ಟ್ರಾಂಗ್ ವೆರಿಯೆಂಟ್ ಮಾದರಿಯು ಗರಿಷ್ಠ 1,710 ಕೆ.ಜಿ ಸಾಗಾಣಿಕೆ ಸಾಮರ್ಥ್ಯ ಹೊಂದಿದೆ.

ಮುಂದಿನ ತಿಂಗಳಿನಿಂದ ದುಬಾರಿಯಾಗಲಿವೆ ಇಸುಝು ಡಿ-ಮ್ಯಾಕ್ಸ್ ಮತ್ತು ಎಸ್-ಕ್ಯಾಬ್

ಮಧ್ಯಮ ಆವೃತ್ತಿಯಲ್ಲಿರುವ ಡಿ-ಮ್ಯಾಕ್ಸ್ ಮಾದರಿಯು 1,240 ಕೆ.ಜಿ ಸಾಗಾಣಿಕೆ ಸಾಮಾರ್ಥ್ಯವನ್ನ ಹೊಂದಿದೆ. ಹಿಂದಿನ ಬಿಎಸ್-4 ಮಾದರಿಗಿಂತಲೂ ಹೆಚ್ಚಿನ ಮಟ್ಟದ ಲೋಡ್ ಸಾಮಾರ್ಥ್ಯದೊಂದಿಗೆ ಸಾಗಾಣಿಕೆ ವೆಚ್ಚವನ್ನು ತಗ್ಗಿಸಲು ಸಹಕಾರಿಯಾಗಿದೆ.

MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಮುಂದಿನ ತಿಂಗಳಿನಿಂದ ದುಬಾರಿಯಾಗಲಿವೆ ಇಸುಝು ಡಿ-ಮ್ಯಾಕ್ಸ್ ಮತ್ತು ಎಸ್-ಕ್ಯಾಬ್

ಹಾಗೆಯೇ ಎಸ್-ಕ್ಯಾಬ್ ಮಾದರಿಯು ಸ್ಟ್ಯಾಂಡರ್ಡ್ ಮತ್ತು ಹೈ-ರೈಡ್ ಎಂಬ ಎರಡೂ ವೆರಿಯೆಂಟ್‌ಗಳನ್ನು ಹೊಂದಿದೆ. ಡಿ-ಮ್ಯಾಕ್ಸ್ ಮಾದರಿಗಿಂತೂ ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್ ಹೊಂದಿರುವ ಎಸ್-ಕ್ಯಾಬ್ ಮಾದರಿಯು ಒಂದೇ ಮಾದರಿಯ ಎಂಜಿನ್ ಅನ್ನು ಒಳಗೊಂಡಿದೆ.

ಮುಂದಿನ ತಿಂಗಳಿನಿಂದ ದುಬಾರಿಯಾಗಲಿವೆ ಇಸುಝು ಡಿ-ಮ್ಯಾಕ್ಸ್ ಮತ್ತು ಎಸ್-ಕ್ಯಾಬ್

ಎಸ್ ಕ್ಯಾಬ್ ಮಾದರಿಯಲ್ಲಿ ಇಸುಝು ಕಂಪನಿಯು ಹೊಂದಾಣಿಕೆ ಮಾಡಬಹುದಾದ ಪವರ್ ಸ್ಟೀಯರಿಂಗ್, ಹೊಸ ವಿನ್ಯಾಸದ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಮಲ್ಟಿ ಇನ್ಪಾಮೆಷನ್ ಡಿಸ್‌ಪ್ಲೇ, ಫ್ಯಾಬ್ರಿಕ್ ಸೀಟುಗಳು, ಮೌಟೆಂಡ್ ರೂಫ್ ಲೈನಿಂಗ್, ಸೆಂಟರ್ ಲಾಕಿಂಗ್, ಎತ್ತರವನ್ನು ಹೊಂದಾಣಿಕೆ ಮಾಡಬಹುದಾದ ಸೀಟ್ ಬೆಲ್ಟ್ ಅನ್ನು ಒಳಗೊಂಡಿವೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಮುಂದಿನ ತಿಂಗಳಿನಿಂದ ದುಬಾರಿಯಾಗಲಿವೆ ಇಸುಝು ಡಿ-ಮ್ಯಾಕ್ಸ್ ಮತ್ತು ಎಸ್-ಕ್ಯಾಬ್

ಇದರೊಂದಿಗೆ ಹೈಡ್ರಾಲಿಕ್ ಬ್ರೇಕ್ಸ್, ವಿಸ್ತರಿತ ಬೂಸ್ಟರ್, ಬ್ರೇಕ್ ಓವರ್ ರೈಡ್ ಸಿಸ್ಟಂ, ರಿಯರ್ ಪಾರ್ಕಿಂಗ್ ಅಸಿಸ್ಟ್ ಸಿಸ್ಟಂ, ಡೋರ್ ಸೈಡ್ ಇನ್‌ಸ್ಟ್ರುಷನ್ ಭೀಮ್, ಡೇ ಆ್ಯಂಡ್ ನೈಟ್ ಇನ್ನರ್ ರಿಯರ್ ವ್ಯೂ ಮಿರರ್, ಸ್ಟ್ರೀಲ್ ಸ್ಕೀಡ್ ಪ್ಲೇಟ್, ವಾರ್ನಿಂಗ್ ಲೈಟ್ ಸೇರಿದಂತೆ ಹಲವಾರು ಪ್ರೀಮಿಯಂ ಫೀಚರ್ಸ್‌ಗಳಿವೆ.

ಮುಂದಿನ ತಿಂಗಳಿನಿಂದ ದುಬಾರಿಯಾಗಲಿವೆ ಇಸುಝು ಡಿ-ಮ್ಯಾಕ್ಸ್ ಮತ್ತು ಎಸ್-ಕ್ಯಾಬ್

ಡಿ-ಮ್ಯಾಕ್ಸ್ ಮತ್ತು ಎಸ್-ಕ್ಯಾಬ್ ಮಾದರಿಗಳಲ್ಲಿ ಇ2.5-ಲೀಟರ್ ಫೋರ್ ಸಿಲಿಂಡರ್ ಡೀಸೆಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಇದು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 78 ಬಿಎಚ್‌ಪಿ 176 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

Most Read Articles

Kannada
Read more on ಇಸುಝು isuzu
English summary
Isuzu Motors To Hike Prices Across D-Max Range. Read In Kannada.
Story first published: Thursday, March 4, 2021, 19:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X