Just In
- 1 hr ago
ಫೋಕ್ಸ್ವ್ಯಾಗನ್ ಐಡಿ.4 ಜಿಟಿಎಕ್ಸ್ ಪರ್ಫಾಮೆನ್ಸ್ ಎಲೆಕ್ಟ್ರಿಕ್ ಕಾರಿನ ಟೀಸರ್ ಬಿಡುಗಡೆ
- 1 hr ago
ಕೇವಲ 48 ನಿಮಿಷಗಳಲ್ಲಿ ಸೋಲ್ಡ್ ಔಟ್ ಆದ ಕೆಟಿಎಂ 1290 ಸೂಪರ್ ಡ್ಯೂಕ್ ಆರ್ಆರ್
- 3 hrs ago
ಹೆರ್ಮೆಸ್ 75 ವಾಣಿಜ್ಯ ಬಳಕೆಯ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ ಕಬೀರಾ ಮೊಬಿಲಿಟಿ
- 3 hrs ago
ದುಬಾರಿ ಬೆಲೆಯ ಲ್ಯಾಂಡ್ ರೋವರ್ ಡಿಫೆಂಡರ್ ಎಸ್ಯುವಿ ಖರೀದಿಸಿದ ನಟ ಅರ್ಜುನ್ ಕಪೂರ್
Don't Miss!
- Sports
ಐಪಿಎಲ್ 2021: ಕಣಕ್ಕಿಳಿಯಲು ಪಡಿಕ್ಕಲ್ ಸಜ್ಜು, ಆರ್ಸಿಬಿ ಸಂಭಾವ್ಯ ತಂಡ ಹೀಗಿದೆ
- Movies
'ನೀವು ಬಸ್ ಡ್ರೈವರ್ ಮಗನೇ, ನಮ್ಮ ಮುಷ್ಕರ ಬೆಂಬಲಿಸಿ': ಯಶ್ಗೆ ಪತ್ರ ಬರೆದ ಸಾರಿಗೆ ನೌಕರರು?
- News
ಸರ್ಕಾರ v/s ಸಾರಿಗೆ ನೌಕರರು: 8ನೇ ದಿನಕ್ಕೆ ಕಾಲಿಟ್ಟ ಮುಷ್ಕರ
- Lifestyle
ರಕ್ತದಲ್ಲಿ ಕಬ್ಬಿಣದಂಶ ಹೆಚ್ಚಾದರೆ ಆಯುಸ್ಸು ಕಡಿಮೆಯಾಗುವುದು
- Education
NEET PG Admit Card 2021: ನೀಟ್ ಪಿಜಿ ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Finance
ಸುಮಾರು 5,550 ಕೋಟಿ ರು ಡಿವಿಡೆಂಡ್ ಘೋಷಿಸಿದ ಟಿಸಿಎಸ್
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮುಂದಿನ ತಿಂಗಳಿನಿಂದ ದುಬಾರಿಯಾಗಲಿವೆ ಇಸುಝು ಡಿ-ಮ್ಯಾಕ್ಸ್ ಮತ್ತು ಎಸ್-ಕ್ಯಾಬ್
ಜಪಾನ್ ಮೂಲದ ವಾಹನ ತಯಾರಕ ಕಂಪನಿಯಾದ ಇಸುಝು ಮೋಟಾರ್ಸ್ ತನ್ನ ಡಿ-ಮ್ಯಾಕ್ಸ್ ಮತ್ತು ಎಸ್-ಕ್ಯಾಬ್ ವಾಹನ ಮಾದರಿಗಳನ್ನು ಬಿಎಸ್-6 ಎಂಜಿನ್ನೊಂದಿಗೆ ಕಳೆದ ವರ್ಷ ಬಿಡುಗಡೆಗೊಳಿಸಿತ್ತು. ಪ್ರಸ್ತುತ ಈ ಎರಡು ಕಮರ್ಷಿಯಲ್ ವಾಹನಗಳು ಇಸುಝು ಸರಣಿಯ ಪ್ರಮುಖ ಮಾದರಿಗಳಾಗಿವೆ.

ಇನ್ನು ಇಸುಝು ಮೋಟಾರ್ಸ್ ಕಂಪನಿಯು ಡಿ-ಮ್ಯಾಕ್ಸ್ ರೆಗ್ಯುಲರ್ ಕ್ಯಾಬ್ ಮತ್ತು ಭಾರತದಲ್ಲಿ ಡಿ-ಮ್ಯಾಕ್ಸ್ ಎಸ್-ಕ್ಯಾಬ್ ಬೆಲೆಗಳನ್ನು ಹೆಚ್ಚಿಸುವುದಾಗಿ ಘೋಷಿಸಿದೆ. ಪ್ರಸ್ತುತ ಎಕ್ಸ್ ಶೋರೂಂ ಬೆಲೆಯಲ್ಲಿ ರೂ.1 ಲಕ್ಷ ಹೆಚ್ಚಾಗಲಿದೆ. ಈ ಹೊಸ ದರ ಏಪ್ರಿಲ್ ತಿಂಗಳಿನಿಂದ ಜಾರಿಯಾಗಲಿದೆ. ಇದರಿಂದ ಮುಂದಿನ ತಿಂಗಳು ಭಾರತೀಯ ಮಾರುಕಟ್ಟೆಯಲ್ಲಿ ಡಿ-ಮ್ಯಾಕ್ಸ್ ಮತ್ತು ಎಸ್-ಕ್ಯಾಬ್ ಮಾದರಿಗಳು ದುಬಾರಿಯಾಗಲಿವೆ.

ಪ್ರಸ್ತುತ ಇಸುಝು ಡಿ-ಮ್ಯಾಕ್ಸ್ ಕ್ಯಾಬ್ ಆರಂಭಿಕ ಬೆಲೆಯು ರೂ.8.75 ಲಕ್ಷಗಳಾದರೆ, ಡಿ-ಮ್ಯಾಕ್ಸ್ ಎಸ್-ಕ್ಯಾಬ್ ಬೆಲೆಯು ರೂ.10.74 ಲಕ್ಷಗಳಾಗಿದೆ. ಈ ಎಲ್ಲಾ ಬೆಲೆಗಳು ದೆಹಲಿ ಎಕ್ಸ್ ಶೋರೂಂ ಪ್ರಕಾರವಾಗಿದೆ.
MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್ಯುವಿ300

ಡಿ-ಮ್ಯಾಕ್ಸ್ ಮಾದರಿಯು ಕ್ಯಾಬ್ ಚಾರ್ಸಿಸ್, ಡಿ-ಮ್ಯಾಕ್ಸ್ ಮತ್ತು ಸೂಪರ್ ಸ್ಟ್ರಾಂಗ್ ಎಂಬ ಮೂರು ವೆರಿಯೆಂಟ್ ಗಳಲ್ಲಿ ಲಭ್ಯವಿದೆ. ಟಾಪ್ ಎಂಡ್ ಮಾದರಿಯಾದ ಸೂಪರ್ ಸ್ಟ್ರಾಂಗ್ ವೆರಿಯೆಂಟ್ ಮಾದರಿಯು ಗರಿಷ್ಠ 1,710 ಕೆ.ಜಿ ಸಾಗಾಣಿಕೆ ಸಾಮರ್ಥ್ಯ ಹೊಂದಿದೆ.

ಮಧ್ಯಮ ಆವೃತ್ತಿಯಲ್ಲಿರುವ ಡಿ-ಮ್ಯಾಕ್ಸ್ ಮಾದರಿಯು 1,240 ಕೆ.ಜಿ ಸಾಗಾಣಿಕೆ ಸಾಮಾರ್ಥ್ಯವನ್ನ ಹೊಂದಿದೆ. ಹಿಂದಿನ ಬಿಎಸ್-4 ಮಾದರಿಗಿಂತಲೂ ಹೆಚ್ಚಿನ ಮಟ್ಟದ ಲೋಡ್ ಸಾಮಾರ್ಥ್ಯದೊಂದಿಗೆ ಸಾಗಾಣಿಕೆ ವೆಚ್ಚವನ್ನು ತಗ್ಗಿಸಲು ಸಹಕಾರಿಯಾಗಿದೆ.
MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್ಯುವಿ

ಹಾಗೆಯೇ ಎಸ್-ಕ್ಯಾಬ್ ಮಾದರಿಯು ಸ್ಟ್ಯಾಂಡರ್ಡ್ ಮತ್ತು ಹೈ-ರೈಡ್ ಎಂಬ ಎರಡೂ ವೆರಿಯೆಂಟ್ಗಳನ್ನು ಹೊಂದಿದೆ. ಡಿ-ಮ್ಯಾಕ್ಸ್ ಮಾದರಿಗಿಂತೂ ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್ ಹೊಂದಿರುವ ಎಸ್-ಕ್ಯಾಬ್ ಮಾದರಿಯು ಒಂದೇ ಮಾದರಿಯ ಎಂಜಿನ್ ಅನ್ನು ಒಳಗೊಂಡಿದೆ.

ಎಸ್ ಕ್ಯಾಬ್ ಮಾದರಿಯಲ್ಲಿ ಇಸುಝು ಕಂಪನಿಯು ಹೊಂದಾಣಿಕೆ ಮಾಡಬಹುದಾದ ಪವರ್ ಸ್ಟೀಯರಿಂಗ್, ಹೊಸ ವಿನ್ಯಾಸದ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಮಲ್ಟಿ ಇನ್ಪಾಮೆಷನ್ ಡಿಸ್ಪ್ಲೇ, ಫ್ಯಾಬ್ರಿಕ್ ಸೀಟುಗಳು, ಮೌಟೆಂಡ್ ರೂಫ್ ಲೈನಿಂಗ್, ಸೆಂಟರ್ ಲಾಕಿಂಗ್, ಎತ್ತರವನ್ನು ಹೊಂದಾಣಿಕೆ ಮಾಡಬಹುದಾದ ಸೀಟ್ ಬೆಲ್ಟ್ ಅನ್ನು ಒಳಗೊಂಡಿವೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಇದರೊಂದಿಗೆ ಹೈಡ್ರಾಲಿಕ್ ಬ್ರೇಕ್ಸ್, ವಿಸ್ತರಿತ ಬೂಸ್ಟರ್, ಬ್ರೇಕ್ ಓವರ್ ರೈಡ್ ಸಿಸ್ಟಂ, ರಿಯರ್ ಪಾರ್ಕಿಂಗ್ ಅಸಿಸ್ಟ್ ಸಿಸ್ಟಂ, ಡೋರ್ ಸೈಡ್ ಇನ್ಸ್ಟ್ರುಷನ್ ಭೀಮ್, ಡೇ ಆ್ಯಂಡ್ ನೈಟ್ ಇನ್ನರ್ ರಿಯರ್ ವ್ಯೂ ಮಿರರ್, ಸ್ಟ್ರೀಲ್ ಸ್ಕೀಡ್ ಪ್ಲೇಟ್, ವಾರ್ನಿಂಗ್ ಲೈಟ್ ಸೇರಿದಂತೆ ಹಲವಾರು ಪ್ರೀಮಿಯಂ ಫೀಚರ್ಸ್ಗಳಿವೆ.

ಡಿ-ಮ್ಯಾಕ್ಸ್ ಮತ್ತು ಎಸ್-ಕ್ಯಾಬ್ ಮಾದರಿಗಳಲ್ಲಿ ಇ2.5-ಲೀಟರ್ ಫೋರ್ ಸಿಲಿಂಡರ್ ಡೀಸೆಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಇದು 5-ಸ್ಪೀಡ್ ಮ್ಯಾನುವಲ್ ಗೇರ್ಬಾಕ್ಸ್ ಆಯ್ಕೆಯೊಂದಿಗೆ 78 ಬಿಎಚ್ಪಿ 176 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.