ಭಾರತದಲ್ಲಿ V8 ಎಂಜಿನ್ ಪ್ರೇರಿತ Land Rover Defender SUV ಬಿಡುಗಡೆ

Jaguar Land Rover ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ತನ್ನ ಹೊಚ್ಚ ಹೊಸ v8 ಎಂಜಿನ್ ಪ್ರೇರಿತ Defender SUV ಮಾದರಿಗಳನ್ನು ಬಿಡುಗಡೆ ಮಾಡಿದ್ದು, ಹೊಸ ಕಾರು ಎಕ್ಸ್‌ಶೋರೂಂ ಪ್ರಕಾರ ರೂ. 1.82 ಕೋಟಿ ಬೆಲೆ ಹೊಂದಿವೆ.

ಭಾರತದಲ್ಲಿ V8 ಎಂಜಿನ್ ಪ್ರೇರಿತ Land Rover Defender SUV ಬಿಡುಗಡೆ

ದೇಶಿಯ ಮಾರುಕಟ್ಟೆಯಲ್ಲಿ ಈ ವರ್ಷದ ಆರಂಭದಲ್ಲಿ Defender SUV ಮಾದರಿಯ ಸ್ಟ್ಯಾಂಡರ್ಡ್ ಆವೃತ್ತಿಗಳನ್ನು ಬಿಡುಗಡೆ ಮಾಡಿದ್ದ Land Rover ಕಂಪನಿಯು ಇದೀಗ V8 ಎಂಜಿನ್ ಹೊಂದಿರುವ ಟಾಪ್ ಎಂಡ್ ಮಾದರಿಗಳನ್ನು ಸಹ ಬಿಡುಗಡೆ ಮಾಡಿದ್ದು, ಹೊಸ ಕಾರು ಸ್ಟ್ಯಾಂಡರ್ಡ್ ಮಾದರಿಗಿಂತಲೂ ಹೆಚ್ಚು ಪ್ರೀಮಿಯಂ ಮತ್ತು ಪವರ್‌ಫುಲ್ ಎಂಜಿನ್ ಆಯ್ಕೆ ಹೊಂದಿದೆ.

ಭಾರತದಲ್ಲಿ V8 ಎಂಜಿನ್ ಪ್ರೇರಿತ Land Rover Defender SUV ಬಿಡುಗಡೆ

Land Rover ಕಂಪನಿಯು Defender SUV ಮಾದರಿಯನ್ನು Defender 90 ಮತ್ತು Defender 110 ಮಾದರಿಗಳಲ್ಲಿ ಮಾರಾಟ ಮಾಡುತ್ತಿದ್ದು, ಇದೀಗ ಹೊಸದಾಗಿ ಬಿಡುಗಡೆಯಾಗಿರುವ ಹೊಸ V8 ಎಂಜಿನ್ ಮಾದರಿಯು ಸಹ ಎರಡು ಮಾದರಿಗಳಲ್ಲಿ ಪರಿಚಯಿಸಲಾಗಿದೆ.

ಭಾರತದಲ್ಲಿ V8 ಎಂಜಿನ್ ಪ್ರೇರಿತ Land Rover Defender SUV ಬಿಡುಗಡೆ

ಸ್ಟ್ಯಾಂಡರ್ಡ್ Defender 90 ಮತ್ತು Defender 110 ಮಾದರಿಗಳು ಎಕ್ಸ್‌ಶೋರೂಂ ಪ್ರಕಾರ ರೂ. 76.57 ಲಕ್ಷದಿಂದ ರೂ. 1.15 ಕೋಟಿ ಬೆಲೆ ಹೊಂದಿದ್ದು, V8 ಎಂಜಿನ್ ಮಾದರಿಗಳು ಆರಂಭಿಕವಾಗಿಯೇ ಎಕ್ಸ್‌ಶೋರೂಂ ಪ್ರಕಾರ ರೂ. 1.82 ಕೋಟಿ ಬೆಲೆ ಹೊಂದಿವೆ.

ಭಾರತದಲ್ಲಿ V8 ಎಂಜಿನ್ ಪ್ರೇರಿತ Land Rover Defender SUV ಬಿಡುಗಡೆ

ಸ್ಟ್ಯಾಂಡರ್ಡ್ Defender 90 ಮತ್ತು Defender 110 ಮಾದರಿಗಳಲ್ಲಿ Land Rover ಕಂಪನಿಯು 2.0-ಲೀಟರ್ ಪೆಟ್ರೋಲ್, 3.0-ಲೀಟರ್ ಪೆಟ್ರೋಲ್ ಹೈಬ್ರಿಡ್, 3.0-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ನೀಡಲಾಗಿದ್ದು, V8 ಎಂಜಿನ್ ಹೊಂದಿರುವ Defender SUV ಮಾದರಿಗಳಲ್ಲಿ ಕಂಪನಿಯು 5.0-ಲೀಟರ್(4998 ಸಿಸಿ) ಪೆಟ್ರೋಲ್ ಎಂಜಿನ್ ಹೊಂದಿದೆ.

ಭಾರತದಲ್ಲಿ V8 ಎಂಜಿನ್ ಪ್ರೇರಿತ Land Rover Defender SUV ಬಿಡುಗಡೆ

V8 ಎಂಜಿನ್ ಹೊಂದಿರುವ ಕಾರುಗಳು ಸ್ಟ್ಯಾಂಡರ್ಡ್ ಫೋರ್ ಸಿಲಿಂಡರ್ ಕಾರು ಮಾದರಿಗಳಿಂತಲೂ ಹೆಚ್ಚು ಬಲಶಾಲಿಯಾಗಿರಲಿದ್ದು, V8 ಮಾದರಿಗಳು ಎಂಟು ಸಿಲಿಂಡರ್ ಪ್ರೇರಣೆ ಹೊಂದಿದೆ. ಇವು ಸೂಪರ್ ಸ್ಪೋರ್ಟ್ಸ್, ಅಡ್ವೆಂಚರ್ ಕಾರು ಮಾದರಿಗಳಿಗೆ ಹೆಚ್ಚು ಸೂಕ್ತವಾಗಿದ್ದು, Land Rover ಕಂಪನಿಯು ಇದೀಗ Defender SUV ಮಾದರಿಗಳಲ್ಲಿ ಜೋಡಣೆ ಮಾಡಿದೆ.

ಭಾರತದಲ್ಲಿ V8 ಎಂಜಿನ್ ಪ್ರೇರಿತ Land Rover Defender SUV ಬಿಡುಗಡೆ

ಯುರೋಪಿನ ಪ್ರಮುಖ ಮಾರುಕಟ್ಟೆಗಳಲ್ಲಿ V8 ಎಂಜಿನ್ ಹೊಂದಿರುವ Defender SUV ಮಾದರಿಯು 2019ರಿಂದಲೇ ಮಾರಾಟಗೊಳ್ಳುತ್ತಿದ್ದು, ಕಂಪನಿಯು ಇದೀಗ ಭಾರತದಲ್ಲೂ ಬಿಡುಗಡೆಗೊಳಿಸುವ ಮೂಲಕ ಸೂಪರ್ ಕಾರು ಖರೀದಿದಾರರನ್ನು ಸೆಳೆಯಲು ಮುಂದಾಗಿದೆ.

ಭಾರತದಲ್ಲಿ V8 ಎಂಜಿನ್ ಪ್ರೇರಿತ Land Rover Defender SUV ಬಿಡುಗಡೆ

Defender 90 ಮಾದರಿಯು ತ್ರಿ ಡೋರ್ ಮತ್ತು Defender 110 ಮಾದರಿಯು ಫೈವ್ ಡೋರ್ ಸೌಲಭ್ಯದೊಂದಿಗೆ ಹಲವಾರು ಹೊಸ ಫೀಚರ್ಸ್‌ಗಳನ್ನು ಹೊಂದಿದ್ದು, ಸ್ಟ್ಯಾಂಡರ್ಡ್ ಮಾದರಿಗಿಂತ V8 ಎಂಜಿನ್ ಮಾದರಿಯು ಹೆಚ್ಚು ಬಲಿಶಾಲಿ ಮತ್ತು ಸ್ಪೋಟಿ ವಿನ್ಯಾಸವನ್ನು ಹೊಂದಿವೆ.

ಭಾರತದಲ್ಲಿ V8 ಎಂಜಿನ್ ಪ್ರೇರಿತ Land Rover Defender SUV ಬಿಡುಗಡೆ

V8 ಎಂಜಿನ್ ಹೊಂದಿರುವ Defender SUV ಮಾದರಿಯು 5.0-ಲೀಟರ್ ಎಂಜಿನ್‌ನೊಂದಿಗೆ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿದ್ದು, ಆಲ್ ವ್ಹೀಲ್ ಡ್ರೈವ್ ಟೆಕ್ನಾಲಜಿಯೊಂದಿಗೆ 525-ಬಿಎಚ್‌ಪಿ ಮತ್ತು 625-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಭಾರತದಲ್ಲಿ V8 ಎಂಜಿನ್ ಪ್ರೇರಿತ Land Rover Defender SUV ಬಿಡುಗಡೆ

ಹೊಸ V8 Defender SUV ಮಾದರಿಗಳು ಆನ್ ರೋಡ್ ಪರ್ಫಾಮೆನ್ಸ್‌ನಲ್ಲ ಮಾತ್ರ ಆಫ್-ರೋಡ್ ಪರ್ಫಾಮೆನ್ಸ್‌ನಲ್ಲೂ ಅತ್ಯುತ್ತಮ ಪ್ರದರ್ಶನ ನೀಡಲಿದ್ದು, ಹೊಸ ಕಾರು ಕೇವಲ 5.2 ಸೆಕೆಂಡುಗಳಲ್ಲಿ ಸೊನ್ನೆಯಿಂದ 100ಕಿ.ಮೀ ವೇಗದಲ್ಲಿ ಚಲಿಸಬಲ್ಲದು.

ಭಾರತದಲ್ಲಿ V8 ಎಂಜಿನ್ ಪ್ರೇರಿತ Land Rover Defender SUV ಬಿಡುಗಡೆ

ಹಾಗೆಯೇ V8 Defender SUV ಮಾದರಿಗಳು ಪ್ರತಿ ಗಂಟೆಗೆ 240 ಕಿ.ಮೀ ಟಾಪ್ ಸ್ಪೀಡ್ ಪಡೆದುಕೊಂಡಿದ್ದು, V8 ಮಾದರಿಗಳಲ್ಲಿ ಸ್ಟ್ಯಾಂಡರ್ಡ್ ಮಾದರಿಗಿಂತಲೂ ಹೆಚ್ಚಿನ ಮಟ್ಟದ ತಾಂತ್ರಿಕ ಅಂಶಗಳನ್ನು ನೀಡಲಾಗಿದೆ.

ಭಾರತದಲ್ಲಿ V8 ಎಂಜಿನ್ ಪ್ರೇರಿತ Land Rover Defender SUV ಬಿಡುಗಡೆ

V8 Defender SUV ಮಾದರಿಗಳು ವಿಶೇಷವಾಗಿ ಕಾರ್ಪೈತನ್ ಎಡಿಷನ್‌ನೊಂದಿಗೆ ಕಡುಗಪ್ಪು ಬಣ್ಣದ ಆಯ್ಕೆ ಹೊಂದಿದ್ದು, ಹೊಸ ಕಾರುಗಳಲ್ಲಿ 22-ಇಂಚಿನ ಅಲಾಯ್ ವ್ಹೀಲ್, 15 ಇಂಚಿನ ಡಿಸ್ಕ್, ಬ್ಲ್ಯೂ ಕ್ಯಾಲಿಪರ್, ಕ್ವಾಡ್ ಎಕ್ಸಿಕ್ಟ್ ಎಕ್ಸಾಸ್ಟ್ ಮತ್ತು V8 ಬ್ಯಾಡ್ಜಿಂಗ್ ಜೋಡಿಸಲಾಗಿದೆ.

ಭಾರತದಲ್ಲಿ V8 ಎಂಜಿನ್ ಪ್ರೇರಿತ Land Rover Defender SUV ಬಿಡುಗಡೆ

ಹೊಸ ಕಾರಿನ ಒಳಭಾಗದಲ್ಲೂ ಸಾಕಷ್ಟು ಸುಧಾರಿತ ತಂತ್ರಜ್ಞಾನ ಪ್ರೇರಿತ ಫೀಚರ್ಸ್‌ಗಳನ್ನು ನೀಡಲಾಗಿದ್ದು, 11.4-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ಸೇರಿದಂತೆ ಹಲವಾರು ಹೊಸ ಸೌಲಭ್ಯಗಳು ಸ್ಟ್ಯಾಂಡರ್ಡ್ ಮಾದರಿಗಿಂತಲೂ ಉತ್ತಮವಾಗಿವೆ.

ಭಾರತದಲ್ಲಿ V8 ಎಂಜಿನ್ ಪ್ರೇರಿತ Land Rover Defender SUV ಬಿಡುಗಡೆ

V8 ಎಂಜಿನ್ ಹೊಂದಿರುವ Defender SUV ಮಾದರಿಗಳು ವಿಶೇಷವಾಗಿ ಐಷಾರಾಮಿ ಮತ್ತು ಅಡ್ವೆಂಚರ್ ಎರಡು ವಿಭಾಗದಲ್ಲೂ ಗುರುತಿಸಿಕೊಳ್ಳಲಿದ್ದು, Mercedes Benz G-class ಕಾರಿಗೆ ಪ್ರಬಲ ಪೈಪೋಟಿಯಾಗಿದೆ.

ಭಾರತದಲ್ಲಿ V8 ಎಂಜಿನ್ ಪ್ರೇರಿತ Land Rover Defender SUV ಬಿಡುಗಡೆ

ಇನ್ನು Defender 110 ಮಾದರಿಯು 5,018-ಎಂಎಂ ಉದ್ದ, 2,105-ಎಂಎಂ ಅಗಲ ಮತ್ತು 1,967-ಎಂಎಂ ಎತ್ತರವನ್ನು ಹೊಂದಿದ್ದು, ಈ ಎಸ್‍ಯುವಿಯು 3,022 ಎಂಎಂ ವ್ಹೀಲ್ ಬೇಸ್‌ನೊಂದಿಗೆ 218-ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿದ್ದು, ಆರಾಮದಾಯಕ ಮತ್ತು ಸುರಕ್ಷಿತ ಪ್ರಯಾಣ ಒದಗಿಸುವಲ್ಲಿ ಹೊಸ ಕಾರು ಗ್ರಾಹಕರ ಮೆಚ್ಚುಗೆಗೆ ಕಾರಣವಾಗಿದೆ.

Most Read Articles

Kannada
English summary
Jaguar land rover launched v8 powered defender suv in india details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X