ಹರಾಜು ಮೂಲಕ ಮಾರಾಟವಾಗಲಿದೆ ವಿಶ್ವವಿಖ್ಯಾತ ನಟನ ಐಷಾರಾಮಿ ಕಾರು

ಹಾಲಿವುಡ್‌ನ ಅತ್ಯಂತ ಜನಪ್ರಿಯ ಸಿನಿಮಾಗಳಲ್ಲಿ ಒಂದಾದ ಜೇಮ್ಸ್ ಬಾಂಡ್ ಚಿತ್ರದಲ್ಲಿ ನಟ ಸೀನ್ ಕಾನರಿ ಅಭಿನಯಿಸಿದ್ದಾರೆ. ಅವರು ಬಳಸಿದ ಐಷಾರಾಮಿ ಬಿಎಂಡಬ್ಲ್ಯು 635 ಸಿಎಸ್ಐ ಕಾರನ್ನು ಈಗ ಮಾರಾಟಕ್ಕೀಡಾಲಾಗಿದೆ.

ಹರಾಜು ಮೂಲಕ ಮಾರಾಟವಾಗಲಿದೆ ವಿಶ್ವವಿಖ್ಯಾತ ನಟನ ಐಷಾರಾಮಿ ಕಾರು

1986ರ ಮಾದರಿಯ ಇಂಗ್ಲೆಂಡ್'ನ ದಾಖಲೆಗಳನ್ನು ಹೊಂದಿರುವ 34 ವರ್ಷ ಹಳೆಯ ಈ ಬಿಎಂಡಬ್ಲ್ಯು 635 ಸಿಎಸ್ಐ ಕಾರು ಈಗಲೂ ಹೊಸ ಕಾರಿನಂತೆ ಕಾಣುತ್ತದೆ. ಈ ಕಾರಿನ ಎಂಜಿನ್ ಸಹ ದಕ್ಷತೆಯಿಂದ ಕೂಡಿದೆ ಎಂದು ಹೇಳಲಾಗಿದೆ. ಈ ಕಾರನ್ನು ಆನ್‌ಲೈನ್‌ ಮೂಲಕ ಹರಾಜು ಹಾಕಲಾಗುತ್ತಿದೆ.

ಹರಾಜು ಮೂಲಕ ಮಾರಾಟವಾಗಲಿದೆ ವಿಶ್ವವಿಖ್ಯಾತ ನಟನ ಐಷಾರಾಮಿ ಕಾರು

ವಿಶ್ವವಿಖ್ಯಾತ ನಟ ನಟ ಸೀನ್ ಕಾನರಿ ಬಳಸುತ್ತಿದ್ದ ಈ ಕ್ಲಾಸಿಕ್ ಐಷಾರಾಮಿ ಕಾರ್ ಅನ್ನು ಹರಾಜು ಮೂಲಕ ಖರೀದಿಸಲು ಜನರು ಮುಗಿ ಬೀಳುತ್ತಿದ್ದಾರೆ. ಹರಾಜಿನಲ್ಲಿ ಇದುವರೆಗೂ 17,250 ಮಂದಿ ಬಿಡ್ ಸಲ್ಲಿಸಿದ್ದಾರೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಹರಾಜು ಮೂಲಕ ಮಾರಾಟವಾಗಲಿದೆ ವಿಶ್ವವಿಖ್ಯಾತ ನಟನ ಐಷಾರಾಮಿ ಕಾರು

ಈ ಕಾರನ್ನು ಜನವರಿ 15ರಂದು ಹರಾಜು ಹಾಕಲಾಗುವುದು. ಹರಾಜು ದಿನ ಹತ್ತಿರವಾದಂತೆ ಬಿಡ್ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಗಳಿವೆ. ಹರಾಜು ಹಾಕುತ್ತಿರುವವರು ಸುಮಾರು 30,000 ಯುರೋಗಳಿಂದ 60,000 ಯುರೋಗಳವರೆಗೆ ಬಿಡ್‌ಗಳನ್ನು ನಿರೀಕ್ಷಿಸಿದ್ದಾರೆ.

ಹರಾಜು ಮೂಲಕ ಮಾರಾಟವಾಗಲಿದೆ ವಿಶ್ವವಿಖ್ಯಾತ ನಟನ ಐಷಾರಾಮಿ ಕಾರು

ಈ ಕಾರಿನ ಹರಾಜು ಬೆಲೆಯನ್ನು ಭಾರತದ ರೂಪಾಯಿ ಮೌಲ್ಯದಂತೆ ರೂ.15.41 ಲಕ್ಷಗಳಿಗೆ ನಿಗದಿಪಡಿಸಲಾಗಿದೆ. ಇದು ಅಂದಾಜು ಮೌಲ್ಯ ಮಾತ್ರ. ಹರಾಜಿನಲ್ಲಿ ಈ ಕಾರು ಎರಡು ಪಟ್ಟು ಹೆಚ್ಚಿನ ಬೆಲೆಗೆ ಮಾರಾಟವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಹರಾಜು ಮೂಲಕ ಮಾರಾಟವಾಗಲಿದೆ ವಿಶ್ವವಿಖ್ಯಾತ ನಟನ ಐಷಾರಾಮಿ ಕಾರು

ಈ ಕಾರನ್ನು ಸೀನ್ ಕಾನರಿ 1998ರಲ್ಲಿ ಖರೀದಿಸಿದ್ದರು ಎಂದು ಹೇಳಲಾಗಿದೆ. ಅಂದಿನಿಂದಲೂ ಈ ಕಾರನ್ನು ಮುತುವರ್ಜಿಯಿಂದ ನೋಡಿಕೊಳ್ಳಲಾಗಿದೆ. ಈ ಕಾರಣಕ್ಕೆ ಈ ಕಾರು ಈಗಲೂ ಹೊಸದರಂತೆ ಕಾಣುತ್ತದೆ.

ಹರಾಜು ಮೂಲಕ ಮಾರಾಟವಾಗಲಿದೆ ವಿಶ್ವವಿಖ್ಯಾತ ನಟನ ಐಷಾರಾಮಿ ಕಾರು

ಈ ಐಷಾರಾಮಿ ಕಾರಿನಲ್ಲಿ 6 ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ ಗರಿಷ್ಠ 220 ಬಿಹೆಚ್‌ಪಿ ಪವರ್ ಹಾಗೂ 232 ಐಪಿ / ಎಫ್‌ಟಿ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಕಾರು ಪ್ರತಿ ಗಂಟೆಗೆ 230 ಕಿ.ಮೀ ವೇಗದಲ್ಲಿ ಚಲಿಸುತ್ತದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಹರಾಜು ಮೂಲಕ ಮಾರಾಟವಾಗಲಿದೆ ವಿಶ್ವವಿಖ್ಯಾತ ನಟನ ಐಷಾರಾಮಿ ಕಾರು

ಕಾರಿನ ಹೊರಭಾಗವು ಅದ್ಭುತವಾಗಿ ಕಾಣುತ್ತದೆ. ಈ ಕಾರಿನಲ್ಲಿ ಒಷಿಯನ್ ಬ್ಲೂ ಬಣ್ಣದ ಸೀಟುಗಳನ್ನು ಅಳವಡಿಸಲಾಗಿದೆ. ಈ ಕಾರಿನಲ್ಲಿದ್ದ ಕಾರ್ಪೆಟ್, ಮ್ಯಾಟ್, ಟೂರ್ ಕಾರ್ಡ್, ಸೆಂಟರ್ ಕನ್ಸೋಲ್, ಡ್ಯಾಶ್‌ಬೋರ್ಡ್ ಸೇರಿದಂತೆ ವಿವಿಧ ಬಿಡಿಭಾಗಗಳನ್ನು ತೆಗೆದುಹಾಕಿ ಹೊಸ ಬಿಡಿಭಾಗಗಳನ್ನು ಅಳವಡಿಸಲಾಗಿದೆ.

ಹರಾಜು ಮೂಲಕ ಮಾರಾಟವಾಗಲಿದೆ ವಿಶ್ವವಿಖ್ಯಾತ ನಟನ ಐಷಾರಾಮಿ ಕಾರು

ಇದರಿಂದಾಗಿ ಈ ಕಾರು ಹೊಸದರಂತೆ ಕಾಣುತ್ತದೆ. ಬಿಎಂಡಬ್ಲ್ಯು ಕಂಪನಿಯು 6 ಸೀರಿಸ್ ಕಾರ್ ಅನ್ನು ಮೊದಲ ಬಾರಿಗೆ 1976ರಲ್ಲಿ ಬಿಡುಗಡೆಗೊಳಿಸಿತು. 1989ರಲ್ಲಿ ಈ ಕಾರಿನ ಉತ್ಪಾದನೆಯನ್ನು ಸಂಪೂರ್ಣವಾಗಿ ನಿಲ್ಲಿಸಿತು.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಹರಾಜು ಮೂಲಕ ಮಾರಾಟವಾಗಲಿದೆ ವಿಶ್ವವಿಖ್ಯಾತ ನಟನ ಐಷಾರಾಮಿ ಕಾರು

ಆದರೆ ಈ ಕಾರ್ ಅನ್ನು ಈಗಲೂ ವಿಶ್ವದ ಪ್ರಮುಖ ವ್ಯಕ್ತಿಗಳು ಬಳಸುತ್ತಿದ್ದಾರೆ. ಅವರಲ್ಲಿ ನಟ ಸೀನ್ ಕಾನರಿ ಸಹ ಒಬ್ಬರು. ಈಗ ಅವರ ಬಳಿಯಿದ್ದ ಕಾರ್ ಅನ್ನು ಹರಾಜು ಹಾಕಲಾಗುತ್ತಿದೆ.

Most Read Articles

Kannada
English summary
James Bond actor Sean Connery's luxury car comes up for auction. Read in Kannada.
Story first published: Thursday, January 14, 2021, 10:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X