ಎಂಟೇ ನಿಮಿಷಗಳಲ್ಲಿ ರಸ್ತೆ ಗುಂಡಿಗಳನ್ನು ಸರಿ ಪಡಿಸಲಿದೆ ಜೆಸಿಬಿಯ ಈ ಹೊಸ ಯಂತ್ರ

ನಿರ್ಮಾಣ ಸಲಕರಣೆಗಳ ತಯಾರಕ ಕಂಪನಿಯಾದ ಜೆಸಿಬಿ ರಸ್ತೆ ಗುಂಡಿಗಳನ್ನು ಸರಿಪಡಿಸಲು ಹೊಸ ಯಂತ್ರವನ್ನು ಬಿಡುಗಡೆಗೊಳಿಸಿದೆ. ಮಾಹಿತಿಗಳ ಪ್ರಕಾರ ಈ ಯಂತ್ರವು 8 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ರಸ್ತೆ ಗುಂಡಿಗಳನ್ನು ಸರಿಪಡಿಸಬಲ್ಲದು.

ಎಂಟೇ ನಿಮಿಷಗಳಲ್ಲಿ ರಸ್ತೆ ಗುಂಡಿಗಳನ್ನು ಸರಿ ಪಡಿಸಲಿದೆ ಜೆಸಿಬಿಯ ಈ ಹೊಸ ಯಂತ್ರ

ಈ ಯಂತ್ರಕ್ಕೆ ಪಾಟ್ ಹೋಲ್ ಪ್ರೊ ಎಂಬ ಹೆಸರಿಡಲಾಗಿದೆ. ರಸ್ತೆ ದುರಸ್ತಿ ಮಾಡುವ ಈ ತ್ರೀ-ಇನ್-ಒನ್ ಯಂತ್ರವು ಸಮಯ ಹಾಗೂ ಹಣವನ್ನು ಉಳಿಸುತ್ತದೆ. ಇದಕ್ಕಾಗಿ ಯಾವುದೇ ಹೆಚ್ಚುವರಿ ಉಪಕರಣ ಅಥವಾ ಸಿಬ್ಬಂದಿಗಳ ಅಗತ್ಯವಿಲ್ಲ. ಜೆಸಿಬಿ ಕಂಪನಿಯು ಈ ಪಾಟ್ ಹೋಲ್ ಪ್ರೊ ಯಂತ್ರವನ್ನು ಸ್ಟಾಫರ್ಡ್ ಶೈರ್, ಡರ್ಬಿಶೈರ್ ಹಾಗೂ ವ್ರೆಕ್ಸ್ ಹ್ಯಾಮ್'ನಲ್ಲಿರುವ ಉತ್ಪಾದನಾ ಘಟಕದಲ್ಲಿ ಬಿಡುಗಡೆಗೊಳಿಸಿತು.

ಎಂಟೇ ನಿಮಿಷಗಳಲ್ಲಿ ರಸ್ತೆ ಗುಂಡಿಗಳನ್ನು ಸರಿ ಪಡಿಸಲಿದೆ ಜೆಸಿಬಿಯ ಈ ಹೊಸ ಯಂತ್ರ

ಈ ಯಂತ್ರದ ಬಿಡುಗಡೆಯ ಸಂದರ್ಭದಲ್ಲಿ ಮಾತನಾಡಿದ ಜೆಸಿಬಿ ಕಂಪನಿಯ ಅಧ್ಯಕ್ಷ ಲಾರ್ಡ್ ಬಾಮ್‌ಫೋರ್ಡ್, ರಸ್ತೆ ಗುಂಡಿಗಳು ಯಾವುದೇ ದೇಶಕ್ಕೆ ಕಪ್ಪು ಚುಕ್ಕೆಯಾಗಿವೆ. ಅವುಗಳನ್ನು ಸರಿಯಾದ ಸಮಯಕ್ಕೆ ಸರಿಪಡಿಸುವುದು ಬಹಳ ಮುಖ್ಯ. ಅದನ್ನು ಸರಿಪಡಿಸುವ ವೆಚ್ಚವನ್ನು ಕಡಿಮೆ ಮಾಡುವುದು ಸಹ ಮುಖ್ಯ ಎಂದು ಹೇಳಿದರು.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಎಂಟೇ ನಿಮಿಷಗಳಲ್ಲಿ ರಸ್ತೆ ಗುಂಡಿಗಳನ್ನು ಸರಿ ಪಡಿಸಲಿದೆ ಜೆಸಿಬಿಯ ಈ ಹೊಸ ಯಂತ್ರ

250 ಚದರ ಮೀಟರ್ ಅಂದರೆ 2,691 ಚದರ ಅಡಿ ರಸ್ತೆಯನ್ನು ಜೆಸಿಬಿಯ ಪಾಟ್ ಹೋಲ್ ಪ್ರೊನಿಂದ 25 ಎಂಪಿಹೆಚ್ ವೇಗದಲ್ಲಿ ಅಂದರೆ 40 ಕಿ.ಮೀ ವೇಗದಲ್ಲಿ ಸರಿಪಡಿಸಬಹುದು. ಟ್ರೈಲರ್ ನೆರವಿಲ್ಲದೇ ಒಂದು ಗುಂಡಿಯಿಂದ ಮತ್ತೊಂದು ಗುಂಡಿಗೆ ಚಲಿಸಬಹುದು.

ಎಂಟೇ ನಿಮಿಷಗಳಲ್ಲಿ ರಸ್ತೆ ಗುಂಡಿಗಳನ್ನು ಸರಿ ಪಡಿಸಲಿದೆ ಜೆಸಿಬಿಯ ಈ ಹೊಸ ಯಂತ್ರ

ಜೆಸಿಬಿ ಪಾಟ್ ಹೋಲ್ ಪ್ರೊನ ಟ್ರಯಲ್ ರನ್ ಅನ್ನು 2020ರಲ್ಲಿ ಸ್ಟೋಕ್-ಆನ್-ಟ್ರೆಂಟ್‌ನಲ್ಲಿ ನಡೆಸಲಾಗಿತ್ತು. ಈ ರನ್'ನಲ್ಲಿ ಪಾಟ್ ಹೋಲ್ ಪ್ರೊ ಯಂತ್ರವು ತಿಂಗಳಿಗೆ ಸರಾಸರಿ 700 ಗುಂಡಿಗಳನ್ನು ಸರಿಪಡಿಸಬಹುದು ಎಂಬ ಅಂಶ ಬಹಿರಂಗವಾಗಿತ್ತು.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಎಂಟೇ ನಿಮಿಷಗಳಲ್ಲಿ ರಸ್ತೆ ಗುಂಡಿಗಳನ್ನು ಸರಿ ಪಡಿಸಲಿದೆ ಜೆಸಿಬಿಯ ಈ ಹೊಸ ಯಂತ್ರ

ಈ ಪರೀಕ್ಷೆಯಲ್ಲಿ 20 ದಿನಗಳಲ್ಲಿ 51 ಗುಂಡಿಗಳನ್ನು ಸರಿಪಡಿಸಲಾಗಿದೆ. ಇದು ಪೂರ್ಣಗೊಳ್ಳಲು 63 ದಿನಗಳಲ್ಲಿ 6 ಫಿಲ್ಲರ್'ಗಳನ್ನು ತೆಗೆದುಕೊಳ್ಳಲಾಗಿತ್ತು. ಇದರಲ್ಲಿರುವ ಹೈಡ್ರಾಲಿಕ್ ಟಿಲ್ಟ್ ಹಾಗೂ ಆಳ ನಿಯಂತ್ರಣವು ದೊಡ್ಡ ಪ್ರದೇಶಗಳಿಗೆ ಸ್ಥಿರವಾದ ಆಳವನ್ನು ನೀಡುತ್ತದೆ.

ಎಂಟೇ ನಿಮಿಷಗಳಲ್ಲಿ ರಸ್ತೆ ಗುಂಡಿಗಳನ್ನು ಸರಿ ಪಡಿಸಲಿದೆ ಜೆಸಿಬಿಯ ಈ ಹೊಸ ಯಂತ್ರ

ಗುಂಡಿಗಳು ರಾಷ್ಟ್ರೀಯ ಸಮಸ್ಯೆಯಾಗಿರುವ ಇಂಗ್ಲೆಂಡ್ ದೇಶಕ್ಕಾಗಿ ಜೆಸಿಬಿ ಪಾಟ್ ಹೋಲ್ ಪ್ರೊ ಯಂತ್ರವನ್ನು ಬಿಡುಗಡೆಗೊಳಿಸಲಾಗಿದೆ. ಗಮನಿಸಬೇಕಾದ ಸಂಗತಿಯೆಂದರೆ ಗುಂಡಿ ಹಾಗೂ ರಸ್ತೆಗಳನ್ನು ಸರಿಪಡಿಸಲು ಬ್ರಿಟಿಷ್ ಚಾನ್ಸೆಲರ್ ಸೇಜ್ ಕ್ರೇಜ್ 1.6 ಬಿಲಿಯನ್ ಯುರೋಗಳಷ್ಟು ಬಜೆಟ್ ನಿಗದಿಪಡಿಸಿದ್ದಾರೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಇದು ಬ್ಯಾಕ್‌ಹೋ ಲೋಡರ್ ಅನ್ನು ಆಧರಿಸಿದ ಯಂತ್ರವಾಗಿದ್ದು ಸ್ಪಷ್ಟವಾದ ಮೇಲ್ಮೈಯನ್ನು ರಚಿಸಲು ಪಿಟ್‌ನ ಅಂಚುಗಳನ್ನು ಕತ್ತರಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಯಂತ್ರವು ಮನುಷ್ಯರ ಅವಶ್ಯಕತೆಯನ್ನು ಕಡಿಮೆ ಮಾಡಿ ಖರ್ಚನ್ನು 50%ನಷ್ಟು ಉಳಿಸುತ್ತದೆ.

ಎಂಟೇ ನಿಮಿಷಗಳಲ್ಲಿ ರಸ್ತೆ ಗುಂಡಿಗಳನ್ನು ಸರಿ ಪಡಿಸಲಿದೆ ಜೆಸಿಬಿಯ ಈ ಹೊಸ ಯಂತ್ರ

ಜೆಸಿಬಿ ಯಂತ್ರದ ಕೆಲಸವು ಪೂರ್ತಿಯಾದ ನಂತರ ಟಾರ್ ಅನ್ನು ಮಾತ್ರ ಹಾಕಬೇಕಾಗುತ್ತದೆ. ಇದರಿಂದಾಗಿ ಗುಂಡಿಗಳನ್ನು ಕಡಿಮೆ ವೆಚ್ಚದಲ್ಲಿ ಸುಸ್ಥಿರ ರೀತಿಯಲ್ಲಿ ಸರಿಪಡಿಸಲು ಸಾಧ್ಯವಾಗುತ್ತದೆ. ಈ ರೀತಿಯ ಯಂತ್ರಗಳು ಭಾರತಕ್ಕೂ ಬೇಕಾಗಿವೆ. ಈ ಚಿತ್ರಗಳನ್ನು ಡಿಗ್ಗರ್ಸ್ ಅಂಡ್ ಡೋಜರ್ಸ್'ನಿಂದ ಪಡೆಯಲಾಗಿದೆ.

Most Read Articles
 

Kannada
English summary
JCB Pothole Pro machine repairs potholes in 8 minutes. Read in Kannada.
Story first published: Tuesday, January 19, 2021, 20:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X