ಭಾರತದಲ್ಲಿ ಬಿಡುಗಡೆಯಾಗಲಿದೆ ಜೀಪ್ ಕಂಪಾಸ್ ಟ್ರೈಲ್‌ಹಾಕ್ ಫೇಸ್‌ಲಿಫ್ಟ್ ಎಸ್‍ಯುವಿ

ಅಮೆರಿಕ ಮೂಲದ ವಾಹನ ತಯಾರಕ ಕಂಪನಿಯಾದ ಜೀಪ್ ತನ್ನ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯನ್ನು ಈ ವರ್ಷದ ಜನವರಿ ತಿಂಗಳಿನಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಿತು. ಇದೀಗ ಫೇಸ್‌ಲಿಫ್ಟೆಡ್ ಕಂಪಾಸ್ ಟ್ರೈಲ್‌ಹಾಕ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಲು ಜೀಪ್ ಕಂಪನಿಯು ಸಜ್ಜಾಗುತ್ತಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಜೀಪ್ ಕಂಪಾಸ್ ಟ್ರೈಲ್‌ಹಾಕ್ ಫೇಸ್‌ಲಿಫ್ಟ್ ಎಸ್‍ಯುವಿ

ಈ ಹೊಸ ಜೀಪ್ ಕಂಪಾಸ್ ಟ್ರೈಲ್‌ಹಾಕ್ ಫೇಸ್‌ಲಿಫ್ಟ್ ಎಸ್‍ಯುವಿಯು ಭಾರತದಲ್ಲಿ ಒಂದೆರಡು ಬಾರಿ ರೋಡ್ ಟೆಸ್ಟ್ ಅನ್ನು ನಡೆಸಿದೆ. ನವೀಕರಿಸಿದ ಟ್ರೈಲ್‌ಹಾಕ್ ಎಸ್‍ಯುವಿಯನ್ನು ದೀಪಾವಳಿಯ ಮೊದಲು ಅಥವಾ ವರ್ಷದ ಕೊನೆಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ನವೀಕರಿಸಿದ ಕಂಪಾಸ್ ಟ್ರೈಲ್‌ಹಾಕ್ ಹಿಂದಿನ ಮಾದರಿಗಿಂತ ಹೆಚ್ಚು ಸ್ಪೋರ್ಟಿಯರ್ ಆಗಿ ಕಾಣುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಜೀಪ್ ಕಂಪಾಸ್ ಟ್ರೈಲ್‌ಹಾಕ್ ಫೇಸ್‌ಲಿಫ್ಟ್ ಎಸ್‍ಯುವಿ

ಕಂಪಾಸ್ ಟ್ರೈಲ್‌ಹಾಕ್ ಫೇಸ್‌ಲಿಫ್ಟ್ ಎಸ್‍ಯುವಿಯ ಕ್ಯಾಬಿನ್ ಒಳಗೆ ಕೆಲವು ನವೀಕರಣಗಳನ್ನು ನಡೆಸಿದ್ದಾರೆ. ಒಳಭಾಗವು ಡ್ಯುಯಲ್-ಟೋನ್ ರೆಡ್ ಮತ್ತು ಬ್ಲ್ಯಾಕ್ ಬಣ್ಣಗಳಿಂದ ಕೂಡಿರುತ್ತದೆ ಮತ್ತು ಕೆಲವು ಹೊಸ ಫೀಚರ್ ಗಳನ್ನು ಪಡೆಯಬಹುದು.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಭಾರತದಲ್ಲಿ ಬಿಡುಗಡೆಯಾಗಲಿದೆ ಜೀಪ್ ಕಂಪಾಸ್ ಟ್ರೈಲ್‌ಹಾಕ್ ಫೇಸ್‌ಲಿಫ್ಟ್ ಎಸ್‍ಯುವಿ

ಫೇಸ್‌ಲಿಫ್ಟೆಡ್ ಕಂಪಾಸ್ ಟ್ರೈಲ್‌ಹಾಕ್ ಹೊಸ ಮ್ಯಾಟ್ ಬ್ಲ್ಯಾಕ್ ಗ್ರಿಲ್ ಮತ್ತು ಹೊಸ ಶೈಲಿಯ ಶೈಲಿಯ ಬಂಪರ್ ಏರ್‌ಡ್ಯಾಮ್‌ಗಳು ಮತ್ತು ಪಾಗ್ ಲ್ಯಾಂಪ್ ಅನ್ನು ಹೊಂದಿದೆ. ಇದರೊಂದಿಗೆ ನಯವಾದ ಮತ್ತು ಸ್ವಲ್ಪ ದೊಡ್ಡದಾದ ಎಲ್ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಡ್ಯುಯಲ್ ಟೋನ್ ಅಲಾಯ್ ವ್ಹೀಲ್‌ಗಳನ್ನು ಸಹ ಪಡೆಯಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಜೀಪ್ ಕಂಪಾಸ್ ಟ್ರೈಲ್‌ಹಾಕ್ ಫೇಸ್‌ಲಿಫ್ಟ್ ಎಸ್‍ಯುವಿ

ಟ್ರಯಲ್ ರೇಟೆಡ್ ಬ್ಯಾಡ್ಜ್ ಅನ್ನು ಫೆಂಡರ್‌ಗಳಲ್ಲಿ ಸಂಯೋಜಿಸಲಾಗುವುದು. ಈ ಎಸ್‍ಯುವಿಯು ಬ್ಲ್ಯಾಕ್ ರೂಫ್ ನೊಂದಿಗೆ ಬಾನೆಟ್‌ನಲ್ಲಿ ವ್ಯತಿರಿಕ್ತ ಬ್ಲ್ಯಾಕ್ ಬಣ್ಣವನ್ನು ನೀಡಿದೆ. ಎಸ್‌ಯುವಿ ಅದೇ 225/60/ಆರ್ 17 ವಿಭಾಗ ಫಾಲ್ಕೆನ್ ಆಲ್-ಟೆರೈನ್ ಟೈರ್‌ಗಳನ್ನು ಹೊಂದಿವೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಭಾರತದಲ್ಲಿ ಬಿಡುಗಡೆಯಾಗಲಿದೆ ಜೀಪ್ ಕಂಪಾಸ್ ಟ್ರೈಲ್‌ಹಾಕ್ ಫೇಸ್‌ಲಿಫ್ಟ್ ಎಸ್‍ಯುವಿ

ಈ ಹೊಸ ಎಸ್‍ಯುವಿಯು 205 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ. ಇನ್ನು 480 ಎಂಎಂ ಅಷ್ಟು ವಾಟರ್ ವೇಡಿಂಗ್ ಆಳವನ್ನು ನೀಡುತ್ತದೆ, ಇನ್ನು ಈ ಕಂಪಾಸ್ ಟ್ರೈಲ್‌ಹಾಕ್ ಫೇಸ್‌ಲಿಫ್ಟ್ ಎಸ್‍ಯುವಿಯು 360 ಡಿಗ್ರಿ ಕ್ಯಾಮೆರಾವನ್ನು ಹೊಂದಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಜೀಪ್ ಕಂಪಾಸ್ ಟ್ರೈಲ್‌ಹಾಕ್ ಫೇಸ್‌ಲಿಫ್ಟ್ ಎಸ್‍ಯುವಿ

ಎಸ್‍ಯುವಿಯಲ್ಲಿ ಸ್ಮಾರ್ಟ್ ಫೋನ್ ಕನೆಕ್ಟಿವಿಟಿ, ಹೊಸ ಸ್ಟೀಯರಿಂಗ್ ವ್ಹೀಲ್ ಮತ್ತು ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಇದರೊಂದಿಗೆ ಆಕರ್ಷಕ ಮತ್ತು ದೊಡ್ಡದಾದ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಅಳವಡಿಸಲಾಗುವುದು.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಭಾರತದಲ್ಲಿ ಬಿಡುಗಡೆಯಾಗಲಿದೆ ಜೀಪ್ ಕಂಪಾಸ್ ಟ್ರೈಲ್‌ಹಾಕ್ ಫೇಸ್‌ಲಿಫ್ಟ್ ಎಸ್‍ಯುವಿ

ಕಂಪಾಸ್ ಟ್ರೈಲ್‌ಹಾಕ್ ಫೇಸ್‌ಲಿಫ್ಟ್ ಎಸ್‍ಯುವಿಯು ಅದೇ 2.0-ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್‌ ಅನ್ನು ಹೊಂದಿರುತ್ತದೆ. ಈ ಎಂಜಿನ್ 173 ಬಿಹೆಚ್‌ಪಿ ಪವರ್ ಮತ್ತು 350 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಜೀಪ್ ಕಂಪಾಸ್ ಟ್ರೈಲ್‌ಹಾಕ್ ಫೇಸ್‌ಲಿಫ್ಟ್ ಎಸ್‍ಯುವಿ

ಇನ್ನು ಈ ಎಂಜಿನ್ ನೊಂದಿಗೆ 9-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಅನ್ನು ಜೋಡಿಸಲಾಗಿದೆ. ಅತ್ಯಾಧುನಿಕ ತಂತ್ರಜ್ಞಾನಗಳನ್ನು ಹೊಂದಿರುವ ಕಂಪಾಸ್ ಟ್ರೈಲ್‌ಹಾಕ್ ಫೇಸ್‌ಲಿಫ್ಟ್ ಎಸ್‍ಯುವಿಯ ದೀಪಾವಳಿ ಹಬ್ಬಗಿಂತ ಮೊದಲೇ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
English summary
Facelifted Jeep Compass Trailhawk Launch Likely This Festive Season. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X