ಆಕ್ಸಸ್ ಬ್ಯಾಂಕ್ ಜೊತೆಗೂಡಿ ಹೊಸ ಸಾಲಸೌಲಭ್ಯಗಳನ್ನು ಘೋಷಿಸಿದ ಜೀಪ್ ಇಂಡಿಯಾ

ಹೊಸ ಕಾರು ಮಾರಾಟದಲ್ಲಿ ತನ್ನದೆ ಆದ ಜನಪ್ರಿಯತೆ ಹೊಂದಿರುವ ಜೀಪ್ ಇಂಡಿಯಾ ಕಂಪನಿಯು ಗ್ರಾಹಕರಿಗೆ ಹೊಸ ಕಾರುಗಳ ಖರೀದಿಯನ್ನು ಸುಲಭವಾಗಿಸಲು ವಿವಿಧ ಬ್ಯಾಂಕ್‌ಗಳ ಜೊತೆಗೂಡಿ ಹಲವಾರು ಸಾಲ ಸೌಲಭ್ಯಗಳನ್ನು ಆಫರ್ ಮಾಡುತ್ತಿದ್ದು, ಇದೀಗ ಆಕ್ಸಸ್ ಬ್ಯಾಂಕ್ ಜೊತೆಗೂಡಿ ಹೊಸ ಮಾದರಿಯ ಸಾಲ ಸೌಲಭ್ಯಗಳನ್ನು ನೀಡುತ್ತಿದೆ.

ಆಕ್ಸಸ್ ಬ್ಯಾಂಕ್ ಜೊತೆಗೂಡಿ ಹೊಸ ಸಾಲಸೌಲಭ್ಯಗಳನ್ನು ಘೋಷಿಸಿದ ಜೀಪ್ ಇಂಡಿಯಾ

ದೇಶಿಯ ಮಾರುಕಟ್ಟೆಯಲ್ಲಿನ ಕಾರು ಮಾರಾಟದಲ್ಲಿ ಪ್ರಮುಖ ಬದಲಾವಣೆಗಳನ್ನು ಪರಿಚಯಿಸುತ್ತಿರುವ ಜೀಪ್ ಇಂಡಿಯಾ ಕಂಪನಿಯು ಮುಂದಿನ ಎರಡು ವರ್ಷಗಳಿಗೆ ನಾಲ್ಕು ಹೊಸ ಕಾರುಗಳ ಬಿಡುಗಡೆಗಾಗಿ ಬೃಹತ್ ಯೋಜನೆ ರೂಪಿಸುತ್ತಿದ್ದು, ಇತ್ತೀಚೆಗೆ 2021ರ ರ‍್ಯಾಂಗ್ಲರ್ ಎಸ್‌ಯುವಿ ಮತ್ತು ಕಂಪಾಸ್ ಎಸ್‌ಯುವಿ ಮಾದರಿಗಳ ಬಿಡುಗಡೆಯೊಂದಿಗೆ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದೆ.

ಆಕ್ಸಸ್ ಬ್ಯಾಂಕ್ ಜೊತೆಗೂಡಿ ಹೊಸ ಸಾಲಸೌಲಭ್ಯಗಳನ್ನು ಘೋಷಿಸಿದ ಜೀಪ್ ಇಂಡಿಯಾ

ಗ್ರಾಹಕರ ಬೇಡಿಕೆಗೆ ಪೂರಕವಾಗಿ ಸರಳ ಮತ್ತು ಗರಿಷ್ಠ ಪ್ರಮಾಣದ ಸೌಲ ಸೌಲಭ್ಯಗಳನ್ನು ಖಾತ್ರಿಪಡಿಸುತ್ತಿರುವ ಜೀಪ್ ಕಂಪನಿಯು ಆಕ್ಸಸ್ ಬ್ಯಾಂಕ್ ಜೊತೆಗೂಡಿ ಗರಿಷ್ಠ ಅವಧಿಗೆ ಆಕರ್ಷಕ ಬಡ್ಡಿದರದಲ್ಲಿ ಸಾಲಗಳನ್ನು ನೀಡುತ್ತಿದೆ.

ಆಕ್ಸಸ್ ಬ್ಯಾಂಕ್ ಜೊತೆಗೂಡಿ ಹೊಸ ಸಾಲಸೌಲಭ್ಯಗಳನ್ನು ಘೋಷಿಸಿದ ಜೀಪ್ ಇಂಡಿಯಾ

ದೇಶಾದ್ಯಂತ 4586 ಶಾಖೆಗಳನ್ನು ಆಕ್ಸಸ್ ಬ್ಯಾಂಕ್ ಜೀಪ್ ಕಾರುಗಳನ್ನು ಖರೀದಿಸುವ ಗ್ರಾಹಕರಿಗೆ ಅಗತ್ಯವಿರುವ ಗರಿಷ್ಠ ಮಟ್ಟದ ಸಾಲ ಸೌಲಭ್ಯವನ್ನು ಅತಿ ಕಡಿಮೆ ಅವಧಿಯಲ್ಲಿ ಒದಗಿಸುವ ಭರವಸೆ ನೀಡಿದ್ದು, ಹೊಸ ಒಡಂಬಡಿಕೆ ಕುರಿತು ಜೀಪ್ ಇಂಡಿಯಾ ಕೂಡಾ ವ್ಯಕ್ತಪಡಿಸಿ ಗ್ರಾಹಕರಿಗೆ ಗರಿಷ್ಠ ಸೌಲಭ್ಯಗಳನ್ನು ನೀಡುವ ಭರವಸೆ ನೀಡಿದೆ.

ಆಕ್ಸಸ್ ಬ್ಯಾಂಕ್ ಜೊತೆಗೂಡಿ ಹೊಸ ಸಾಲಸೌಲಭ್ಯಗಳನ್ನು ಘೋಷಿಸಿದ ಜೀಪ್ ಇಂಡಿಯಾ

ಇನ್ನು ಜೀಪ್ ಇಂಡಿಯಾ ಕಂಪನಿಯು ತನ್ನ ಹೊಸ ಕಾರುಗಳ ಉತ್ಪಾದನೆ ಮಹತ್ವದ ಬದಲಾವಣೆ ಪರಿಚಯಿಸುತ್ತಿದ್ದು, ತನ್ನ ಹೊಸ ರ‍್ಯಾಂಗ್ಲರ್ ಆಫ್ ರೋಡ್ ಎಸ್‌ಯುವಿ ಮಾದರಿಯನ್ನು ಸಂಪೂರ್ಣವಾಗಿ ಭಾರತದಲ್ಲೇ ನಿರ್ಮಾಣ ಮಾಡಿ ಮಾರಾಟಕ್ಕೆ ಚಾಲನೆ ನೀಡಿದೆ. ರ‍್ಯಾಂಗ್ಲರ್ ಎಸ್‌ಯುವಿ ಮಾದರಿಯನ್ನು ಇದುವರೆಗೂ ಸಂಪೂರ್ಣವಾಗಿ ವಿದೇಶಿ ಮಾರುಕಟ್ಟೆಯಿಂದಲೇ ಪೂರ್ಣ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತಿದ್ದ ಜೀಪ್ ಕಂಪನಿಯು ಇದೀಗ ಮೇಕ್ ಇನ್ ಇಂಡಿಯಾ ಅಭಿಯಾನದಡಿಯಲ್ಲಿ ಮಹಾರಾಷ್ಟ್ರದ ರಂಜನ್ಗಾಂವ್ ಕಾರು ಉತ್ಪಾದನಾ ಘಟಕದಲ್ಲಿ ನಿರ್ಮಾಣ ಮಾಡುತ್ತಿದೆ.

ಆಕ್ಸಸ್ ಬ್ಯಾಂಕ್ ಜೊತೆಗೂಡಿ ಹೊಸ ಸಾಲಸೌಲಭ್ಯಗಳನ್ನು ಘೋಷಿಸಿದ ಜೀಪ್ ಇಂಡಿಯಾ

ಹೊಸ ಯೋಜನೆಯಡಿ ನಿರ್ಮಾಣ ಮಾಡಿರುವ 2021ರ ರ‍್ಯಾಂಗ್ಲರ್ ಎಸ್‌ಯುವಿ ಮಾದರಿಯು ಈ ಹಿಂದಿನ ಮಾದರಿಗಿಂತಲೂ ರೂ. 10 ಲಕ್ಷದಿಂದ ರೂ. 11 ಲಕ್ಷದಷ್ಟು ಕಡಿಮೆ ಬೆಲೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

ಆಕ್ಸಸ್ ಬ್ಯಾಂಕ್ ಜೊತೆಗೂಡಿ ಹೊಸ ಸಾಲಸೌಲಭ್ಯಗಳನ್ನು ಘೋಷಿಸಿದ ಜೀಪ್ ಇಂಡಿಯಾ

ದೇಶಿಯ ಮಾರುಕಟ್ಟೆಯಲ್ಲಿ ಅಭಿವೃದ್ದಿಗೊಂಡ ರ‍್ಯಾಂಗ್ಲರ್ ಎಸ್‌ಯುವಿ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 53.90 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ. 57.9 ಲಕ್ಷ ಬೆಲೆ ಹೊಂದಿದ್ದು, ಅನ್‌ಲಿಮಿಟೆಡ್ ಮತ್ತು ರೂಬಿಕಾನ್ ಎನ್ನುವ ಎರಡು ವೆರಿಯೆಂಟ್‌ಗಳನ್ನು ಪಡೆದುಕೊಂಡಿದೆ.

MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ಆಕ್ಸಸ್ ಬ್ಯಾಂಕ್ ಜೊತೆಗೂಡಿ ಹೊಸ ಸಾಲಸೌಲಭ್ಯಗಳನ್ನು ಘೋಷಿಸಿದ ಜೀಪ್ ಇಂಡಿಯಾ

ಆಫ್ ರೋಡ್ ವೈಶಿಷ್ಟ್ಯತೆಯೊಂದಿಗೆ ತನ್ನದೆ ಆದ ಗ್ರಾಹಕ ವರ್ಗವನ್ನು ಹೊಂದಿರುವ ಜೀಪ್ ರ‍್ಯಾಂಗ್ಲರ್ ಎಸ್‌ಯುವಿ ಮಾದರಿಯು ಜಾಗತಿಕ ಮಾರುಕಟ್ಟೆ ಪ್ರವೇಶಿಸಿ ಯಶಸ್ವಿ 80 ವರ್ಷ ಪೂರೈಸಿದ್ದು, ಭಾರತದಲ್ಲೂ ಆಫ್ ರೋಡ್ ಕಾರು ಖರೀದಿದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಆಕ್ಸಸ್ ಬ್ಯಾಂಕ್ ಜೊತೆಗೂಡಿ ಹೊಸ ಸಾಲಸೌಲಭ್ಯಗಳನ್ನು ಘೋಷಿಸಿದ ಜೀಪ್ ಇಂಡಿಯಾ

2021ರ ಆವೃತ್ತಿಯು ಇದೀಗ ಸಂಪೂರ್ಣವಾಗಿ ಭಾರತದಲ್ಲಿ ನಿರ್ಮಾಣವಾಗಿರುವುದರಿಂದ ಉತ್ತಮ ಮಾರಾಟ ನೀರಿಕ್ಷೆಯಲ್ಲಿರುವ ಜೀಪ್ ಕಂಪನಿಯು ಹೊಸ ಕಾರನ್ನು 5 ಡೋರ್ ವಿನ್ಯಾಸದಲ್ಲಿ ಬಿಡುಗಡೆ ಮಾಡಿದ್ದು, ಹೊಸ ಕಾರು ಈ ಹಿಂದಿನಂತೆಯೇ ಎಂಜಿನ್ ಮತ್ತು ಗೇರ್‌ಬಾಕ್ಸ್ ಆಯ್ಕೆ ಪಡೆದುಕೊಂಡಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಆಕ್ಸಸ್ ಬ್ಯಾಂಕ್ ಜೊತೆಗೂಡಿ ಹೊಸ ಸಾಲಸೌಲಭ್ಯಗಳನ್ನು ಘೋಷಿಸಿದ ಜೀಪ್ ಇಂಡಿಯಾ

ಹೊಸ ಕಾರಿನಲ್ಲಿ ಜೀಪ್ ಕಂಪನಿಯು 2.0-ಲೀಟರ್, ಫೋರ್ ಸಿಲಿಂಡರ್ ಪ್ರೇರಣೆಯ ಟರ್ಬೊ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಿದ್ದು, ಇದು 8-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 268-ಬಿಎಚ್‌ಪಿ ಉತ್ಪಾದನಾ ಗುಣಹೊಂದಿದೆ.

Most Read Articles

Kannada
Read more on ಜೀಪ್ jeep
English summary
Jeep India & Axis Banks Partner To Announce New Financial Services. Read in Kannada.
Story first published: Saturday, April 10, 2021, 8:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X