ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ Jeep Wrangler ಎಸ್‍ಯುವಿ

ಅಮೆರಿಕ ಮೂಲದ ಜೀಪ್ ಕಂಪನಿಯು ಮೇಡ್ ಇನ್ ಇಂಡಿಯಾ 2021ರ ರ‍್ಯಾಂಗ್ಲರ್ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಈ ವರ್ಷದ ಜುಲೈ ತಿಂಗಳಿನಲ್ಲಿ ಬಿಡುಗಡೆಗೊಳಿಸಿತು. ಇದೀಗ ಜೀಪ್ ಕಂಪನಿಯು ಈ ರ‍್ಯಾಂಗ್ಲರ್ ಎಸ್‍ಯುವಿಯ ಬೆಲೆಯನ್ನು ಹೆಚ್ಚಿಸಿದೆ.

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ Jeep Wrangler ಎಸ್‍ಯುವಿ

ಜೀಪ್ ಇಂಡಿಯಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಕಳೆದ ವಾರ ಕಂಪಾಸ್ ಎಸ್‍ಯುವಿಯ ಬೆಲೆಯನ್ನು ಹೆಚ್ಚಿಸಿದ್ದರೆ, ಈ ಬಾರಿ ರ‍್ಯಾಂಗ್ಲರ್ ಬೆಲೆಗಳಲ್ಲಿ ಗಣನೀಯ ಏರಿಕೆ ಮಾಡಿದೆ, ಈ ಜೀಪ್ ರ‍್ಯಾಂಗ್ಲರ್ ಎಸ್‍ಯುವಿಯು ಅನ್ಲಿಮಿಟೆಡ್ ಮತ್ತು ರುಬಿಕಾನ್ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಈ ಎರಡೂ ರೂಪಾಂತರಗಳ ಬೆಲೆಗಳನ್ನು ರೂ.1,25,000 ವರೆಗೆ ಹೆಚ್ಚಿಸಿದೆ. ಬೆಲೆ ಏರಿಕೆಯ ಬಳಿಕ ಜೀಪ್ ರ‍್ಯಾಂಗ್ಲರ್ ಎಸ್‍ಯುವಿಯ ಅನ್ಲಿಮಿಟೆಡ್ ರೂಪಾಂತರದ ಬೆಲೆಯು ರೂ.55.15 ಲಕ್ಷಗಳಾದರೆ, ರುಬಿಕಾನ್ ರೂಪಾಂತರದ ಬೆಲೆಯು ರೂ.59.15 ಲಕ್ಷಗಳಾಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ.

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ Jeep Wrangler ಎಸ್‍ಯುವಿ

ಬೆಲೆ ಏರಿಕೆಯನ್ನು ಹೊರತುಪಡಿಸಿ ಉಳಿದಂತೆ ಯಾವುದೇ ಬದಲಾವಣೆಗಳಿಲ್ಲ, ಜೀಪ್ ಕಂಪನಿಯು ಮೇಕ್ ಇನ್ ಇಂಡಿಯಾ ಅಭಿಯಾನದಡಿಯಲ್ಲಿ ಮಹಾರಾಷ್ಟ್ರದ ರಂಜನ್ಗಾಂವ್ ಕಾರು ಉತ್ಪಾದನಾ ಘಟಕದಲ್ಲಿ ತಯಾರಿಸಲಾಗಿದೆ. ಈ ಹೊಸ ಯೋಜನೆಯಡಿ ನಿರ್ಮಾಣ ಮಾಡಿರುವ 2021ರ ರ‍್ಯಾಂಗ್ಲರ್ ಎಸ್‌ಯುವಿ ಮಾದರಿಯು ಈ ಹಿಂದಿನ ಮಾದರಿಗಿಂತಲೂ ರೂ.10 ಲಕ್ಷ ಕಡಿಮೆಯಾಗಿದೆ.

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ Jeep Wrangler ಎಸ್‍ಯುವಿ

ಈ ಜೀಪ್ ರ‍್ಯಾಂಗ್ಲರ್ ಎಸ್‍ಯುವಿ 2.0-ಲೀಟರ್, ಫೋರ್ ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ, ಈ ಎಂಜಿನ್ 268 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 8-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ.

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ Jeep Wrangler ಎಸ್‍ಯುವಿ

ಆಫ್ ರೋಡ್ ಸಾಮರ್ಥ್ಯದ ಹೊಸ ಎಸ್‍ಯುವಿ ಮಾದರಿಯಲ್ಲಿ ವೆರಿಯೆಂಟ್ ಅನುಗುಣವಾಗಿ ಸೆಲೆಕ್ಟ್ ಟ್ರಾಕ್ ಮತ್ತು ರಾಕ್ ಟ್ರಾಕ್ ಎನ್ನುವ ಆಲ್ ವೀಲ್ಹ್ ಡ್ರೈವ್ ಸಿಸ್ಟಂ ಟೆಕ್ನಾಲಜಿಯನ್ನು ನೀಡಲಾಗಿದ್ದು, ಪರ್ಫಾಮೆನ್ಸ್ ಸಸ್ಷೆಷನ್‌ಗಳು ಕಠಿಣ ಭೂಪ್ರದೇಶಗಳಲ್ಲೂ ಕಾರನ್ನು ಸರಾಗವಾಗಿ ಚಲಿಸಲು ಸಹಕಾರಿಯಾಗಿವೆ.

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ Jeep Wrangler ಎಸ್‍ಯುವಿ

ಇದರ ಟಾಪ್ ಎಂಡ್ ಆವೃತ್ತಿಯಾದ ರೂಬಿಕಾನ್ ಆವೃತ್ತಿಯು ಬೆಸ್ ಮಾದರಿಗಿಂತಲೂ ಇನ್ನು ಹೆಚ್ಚಿನ ಮಟ್ಟದ ಫೀಚರ್ಸ್‌ಗಳೊಂದಿಗೆ ಕಾರು ಚಾಲನೆಯನ್ನು ಸುಲಭಗೊಳಿಸಲಿದ್ದು, ಎರಡು ಮಾದರಿಯಲ್ಲೂ 18-ಇಂಚಿನ ಅಲಾಯ್ ವೀಲ್ಹ್ ಜೋಡಣೆಯೊಂದಿಗೆ ಅತ್ಯುತ್ತಮ ಗ್ರೌಂಡ್ ಕ್ಲಿಯೆರೆನ್ಸ್ ಪಡೆದುಕೊಂಡಿವೆ.

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ Jeep Wrangler ಎಸ್‍ಯುವಿ

ಹೊಸ ಎಸ್‍ಯುವಿ ಆಫ್ ರೋಡ್ ಸಾಮರ್ಥ್ಯದ ಜೊತೆಗೆ ಐಷಾರಾಮಿ ಪ್ರಯಾಣಕ್ಕೂ ಸಹಕಾರಿಯಾಗುವ ಹಲವಾರು ತಾಂತ್ರಿಇನ್ನು ಹೊಸ ಕಾರು ಬ್ರೈಟ್ ವೈಟ್, ಸ್ಟಿಂಗ್ ಗ್ರೇ, ಗ್ರಾನೈಟ್ ಕ್ರಿಸ್ಟಲ್, ಬ್ಲ್ಯಾಕ್ ಮತ್ತು ಫೈರ್‌ಕ್ರ್ಯಾಕರ್ ರೆಡ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದ್ದು, ಹೊಸ ಕಾರು ಇತ್ತೀಚೆಗೆ ಬಿಡುಗಡೆಯಾಗಿರುವ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‍ಯುವಿಗೆ ಉತ್ತಮ ಪೈಪೋಟಿ ನೀಡುತ್ತಿದೆ.

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ Jeep Wrangler ಎಸ್‍ಯುವಿ

ಈ ರ‍್ಯಾಂಗ್ಲರ್ ಎಸ್‍ಯುವಿಯಲ್ಲಿ ಎಲ್ಇಡಿ ಹೆಡ್‌ಲ್ಯಾಂಪ್, ಡಿಆರ್‌ಎಲ್ಎಸ್, ಎಲ್ಇಡಿ ಫಾಗ್ ಲ್ಯಾಂಪ್, ಲೆದರ್ ಅಪ್‌ಹೋಲಿಸ್ಟ್ರಿ, 7-ಇಂಚಿನ ಮಲ್ಟಿ ಕಲರ್ ಎಂಐಡಿ ಸ್ಕ್ರೀನ್, 8.4-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಆ್ಯಪಲ್ ಕಾರ್ ಪ್ಲೇ ಮತ್ತು ಆಂಡ್ರಾಯಿಡ್ ಆಟೋ, ಡ್ಯುಯಲ್ ಜೋನ್ ಕ್ಲೈಮೆಟ್ ಕಂಟ್ರೋಲ್ ಹೊಂದಿವೆ.

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ Jeep Wrangler ಎಸ್‍ಯುವಿ

ಇದರೊಂದಿಗೆ ತೆಗೆದುಹಾಕಬಹುದು ಡೋರ್ ಸಿಸ್ಟಂ, ಹಾರ್ಡ್ ಟಾಪ್ ಆಯ್ಕೆ ಸಹ ಹೊಸ ಕಾರಿನಲ್ಲಿದ್ದು, ಸುರಕ್ಷತೆಗಾಗಿ ಎಬಿಸ್ ಜೊತೆ ಇಬಿಡಿ, ಫ್ರಂಟ್ ಮತ್ತು ಸೈಡ್ ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೊಲ್, ಹಿಲ್ ಸ್ಟಾರ್ಟ್ ಅಸಿಸ್ಟ್, ಹಿಲ್ ಡಿಸೆಂಟ್ ಕಂಟ್ರೋಲ್, ಎಲೆಕ್ಟ್ರಾನಿಕ್ ರೋಲ್ ಮಿಟಿಗೇಷನ್, ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್ಸ್, ಟೈರ್ ಪ್ರೆಷರ್ ಮಾನಿಟರ್ ಸಿಸ್ಟಂ, ರಿಯರ್ ಪಾರ್ಕಿಂಗ್ ಸೆನ್ಸಾರ್ ಒಳಗೊಂಡಿದೆ.

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ Jeep Wrangler ಎಸ್‍ಯುವಿ

ಇನ್ನು ಜೀಪ್ ಇಂಡಿಯಾ ಕಂಪನಿಯು ತನ್ನ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯ ಬೆಲೆ ಏರಿಕೆಯನ್ನು ಕಳೆದ ವಾರ ಮಾಡಿದೆ. ಸ್ಪೋರ್ಟ್ ಮತ್ತು ಲಾಂಗಿಟ್ಯೂಡ್ (O) ವೆರಿಯಂಟ್‌ಗಳ ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳು ಇದರ ಬೆಲೆಯನ್ನು ರೂ,10,000 ಹೆಚ್ಚು ಮಾಡಿದ್ದಾರೆ. ಉಳಿದಂತೆ ಎಸ್‌ಯುವಿಯ ಟಾಪ್-ಸ್ಪೆಕ್ ವೆರಿಯಂಟ್‌ಗಳ ಬೆಲೆಯನ್ನು ರೂ,20,000 ಗಳವರೆಗೆ ಹೆಚ್ಚಿಸಲಾಗಿದೆ. ಬೆಲೆ ಏರಿಕೆಯನ್ನು ಹೊರತುಪಡಿಸಿ ಉಳಿದಂತೆ ಯಾವುದೇ ಬದಲಾವಣೆಗಳನ್ನು ಹೊಂದಿಲ್ಲ.

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ Jeep Wrangler ಎಸ್‍ಯುವಿ

ಇನ್ನು ಜೀಪ್ ಕಂಪನಿಯು 2021ರ ಸೆಪ್ಟೆಂಬರ್ ತಿಂಗಳ ಕಾರು ಮಾರಾಟದ ವರದಿಯನ್ನು ಬಹಿರಂಗಪಡಿಸಿದೆ. ವರದಿ ಪ್ರಕಾರ, ಕಳೆದ ತಿಂಗಳು ಜೀಪ್ ಕಂಪನಿಯು ಒಟ್ಟು 1377 ಯುನಿಟ್ ಗಳನ್ನು ಮಾರಾಟಗೊಳಿಸಿವೆ.ಜೀಪ್ ಇಂಡಿಯಾ ಕಳೆದ ತಿಂಗಳ ಮಾರಾಟವನ್ನು ತಿಂಗಳಿಗೊಮ್ಮೆ (MoM) ಮಾರಾಟಕ್ಕೆ ಹೋಲಿಸಿದರೆ ಶೇ,13 ರಷ್ಟು ಬೆಳವಣಿಗೆಯನ್ನು ಕಂಡಿದೆ. ಅದೇ ಸಮಯದಲ್ಲಿ, ಕಂಪನಿಯು ಒಂದು ವರ್ಷದ ಹಿಂದೆ ಸೆಪ್ಟೆಂಬರ್ ತಿಂಗಳ ಮಾರಾಟಕ್ಕೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ ಶೇ,144 ರಷ್ಟು ಬೆಳವಣಿಗೆಯನ್ನು ಕಂಡಿದೆ, ಇದು ಖಂಡಿತವಾಗಿಯೂ ಭರವಸೆಯ ಸಂಖ್ಯೆಯಾಗಿದೆ.

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ Jeep Wrangler ಎಸ್‍ಯುವಿ

ಜೀಪ್ ಕಂಪಾಸ್ ಎಸ್‍ಯುವಿಯನ್ನು ನವೀಕರಿಸಿ ಬಿಡುಗಡೆಗೊಳಿಸಿದ ಬಳಿಕ ಮಾರಾಟದಲ್ಲಿ ಬೆಳವಣಿಗೆಯನ್ನು ಕಂಡಿದೆ. ಅಲ್ಲದ್ಪೇ ಕರೋನಾ ಆತಂಕ ಕಡಿಮೆಯಾಗಿರುವುದು ಕೂಡ ಜೀಪ್ ಕಂಪನಿಯ ಎಸ್‍ಯುವಿಗಳ ಮಾರಾಟ ಹೆಚ್ಚಳಕ್ಕೆ ಕಾರಣವಾಗಿದೆ. ಇನ್ನು ಜೀಪ್ ರ‍್ಯಾಂಗ್ಲರ್ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಎಸ್‍ಯುವಿಗಳಲ್ಲಿ ಒಂದಾಗಿದೆ.

Most Read Articles

Kannada
Read more on ಜೀಪ್ jeep
English summary
Jeep india increased prices of the wrangler suv find here details
Story first published: Monday, October 11, 2021, 20:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X