ಕಮಾಂಡರ್ ಎಸ್‌ಯುವಿ ಕಾರಿನ ಇಂಟಿರಿಯರ್ ಟೀಸರ್ ಬಿಡುಗಡೆ ಮಾಡಿದ ಜೀಪ್

ಜೀಪ್ ಕಂಪನಿಯು ಜಾಗತಿಕ ಮಾರುಕಟ್ಟೆಗಳಿಗಾಗಿ ಹೊಸ 7 ಸೀಟರ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಜ್ಜಾಗಿದ್ದು, ಹೊಸ ಕಾರು ವಿವಿಧ ರಾಷ್ಟ್ರಗಳಲ್ಲಿ ವಿವಿಧ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತದೆ.

ಕಮಾಂಡರ್ ಎಸ್‌ಯುವಿ ಕಾರಿನ ಇಂಟಿರಿಯರ್ ಟೀಸರ್ ಬಿಡುಗಡೆ ಮಾಡಿದ ಜೀಪ್

ಕಾರು ಮಾರಾಟದಲ್ಲಿ ವಿಶ್ವಾದ್ಯಂತ ತನ್ನ ವಿಸ್ತೃತ ಮಾರಾಟ ಜಾಲ ಹೊಂದಿರುವ ಜೀಪ್ ಕಂಪನಿಯು ಭಾರತದಲ್ಲೂ ತನ್ನ ಹೊಸ 7 ಸೀಟರ್ ಎಸ್‌ಯುವಿ ಮಾದರಿಯನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, ಹೊಸ ಕಾರಿನ ಇಂಟಿರಿಯರ್ ಮಾಹಿತಿ ಕುರಿತಾಗಿ ಕಂಪನಿಯು ಕಮಾಂಡರ್ ಹೆಸರಿನಲ್ಲಿ ಟೀಸರ್ ಬಿಡುಗಡೆ ಮಾಡಿದೆ.

ಕಮಾಂಡರ್ ಎಸ್‌ಯುವಿ ಕಾರಿನ ಇಂಟಿರಿಯರ್ ಟೀಸರ್ ಬಿಡುಗಡೆ ಮಾಡಿದ ಜೀಪ್

ಚೀನಿ ಮಾರುಕಟ್ಟೆಯಲ್ಲಿ ಈಗಾಗಲೇ ಮಾರಾಟಗೊಳ್ಳುತ್ತಿರುವ ಜೀಪ್ ಹೊಸ 7 ಸೀಟರ್ ಕಾರು ಗ್ರ್ಯಾಂಡ್ ಕಮಾಂಡರ್ ಹೆಸರಿನಲ್ಲಿ ಮಾರಾಟಗೊಳ್ಳುತ್ತಿದ್ದು, ಇದೀಗ ಹೊಸದಾಗಿ ನವೀಕೃತ ಮಾದರಿಯನ್ನು ಕಮಾಂಡರ್ ಮತ್ತು ಮೆರಿಡಿಯನ್ ಹೆಸರಿನಲ್ಲಿ ವಿವಿಧ ರಾಷ್ಟ್ರಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ.

ಕಮಾಂಡರ್ ಎಸ್‌ಯುವಿ ಕಾರಿನ ಇಂಟಿರಿಯರ್ ಟೀಸರ್ ಬಿಡುಗಡೆ ಮಾಡಿದ ಜೀಪ್

ಕಮಾಂಡರ್ ಕಾರು ಮಾದರಿಯೊಂದಿಗೆ ಜೀಪ್ ಕಂಪನಿಯು ಫೋರ್ಡ್ ಎಂಡೀವರ್ ಮತ್ತು ಟೊಯೊಟಾ ಫಾರ್ಚೂನರ್ ಮಾದರಿಗಾಗಿ ಭರ್ಜರಿ ಪೈಪೋಟಿ ನೀಡುವ ತವಕದಲ್ಲಿದ್ದು, ಹೊಸ ಕಾರಿನಲ್ಲಿ ಪವರ್‌ಫುಲ್ ಎಂಜಿನ್ ಆಯ್ಕೆ, ಪ್ರೀಮಿಯಂ ಫೀಚರ್ಸ್ ಮತ್ತು ಬೆಲೆ ಆಯ್ಕೆಯಲ್ಲೂ ಗಮನಸೆಳೆಯಲಿದೆ.

ಹೊಸ ಕಾರು ಮಾದರಿಯು ಈ ವರ್ಷಾಂತ್ಯದೊಳಗೆ ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದ್ದು, ಜೀಪ್ ಕಂಪನಿಯು ಹಂತ-ಹಂತವಾಗಿ ಹೊಸ ಕಾರನ್ನು ವಿವಿಧ ರಾಷ್ಟ್ರಗಳಲ್ಲಿ ಬಿಡುಗಡೆ ಮಾಡಲಿದೆ.

ಕಮಾಂಡರ್ ಎಸ್‌ಯುವಿ ಕಾರಿನ ಇಂಟಿರಿಯರ್ ಟೀಸರ್ ಬಿಡುಗಡೆ ಮಾಡಿದ ಜೀಪ್

ಸದ್ಯಕ್ಕೆ ಜೀಪ್ ಕಂಪನಿಯು ಹೊಸ ಕಾರನ್ನು ಹೆಚ್6 ಎನ್ನುವ ಕೋಡ್ ನೆಮ್ ಆಧಾರದ ಮೇಲೆ ರೋಡ್ ಟೆಸ್ಟಿಂಗ್ ನಡೆಸುತ್ತಿದ್ದು, 2.0-ಲೀಟರ್ ಸಾಮರ್ಥ್ಯದ ನಾಲ್ಕು ಸಿಲಿಂಡರ್ ಪ್ರೇರಣೆಯ ಮಲ್ಟಿಜೆಟ್ ಟರ್ಬೊ-ಡೀಸೆಲ್ ಎಂಜಿನ್ ಜೋಡಣೆ ಹೊಂದಿರಲಿದೆ.

ಕಮಾಂಡರ್ ಎಸ್‌ಯುವಿ ಕಾರಿನ ಇಂಟಿರಿಯರ್ ಟೀಸರ್ ಬಿಡುಗಡೆ ಮಾಡಿದ ಜೀಪ್

ಹೊಸ ಮಲ್ಟಿ ಜೆಟ್ ಟರ್ಬೊ ಡೀಸೆಲ್ ಮಾದರಿಯು 9 ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ ಆಯ್ಕೆಯೊಂದಿಗೆ 200-ಬಿಎಚ್‌ಪಿ ಉತ್ಪಾದನಾ ಗುಣಹೊಂದಿರಲಿದ್ದು, ಆಫ್ ರೋಡ್ ಕೌಶಲ್ಯದಲ್ಲೂ ಗಮನಸೆಳೆಯಲಿರುವ ಹೊಸ ಕಾರಿನಲ್ಲಿ 4x4 ಡ್ರೈವ್ ಸಿಸ್ಟಂ ಅನ್ನು ಸ್ಟ್ಯಾಂಡರ್ಡ್ ಆಗಿ ಜೋಡಣೆ ಮಾಡಲಾಗುತ್ತಿದೆ.

ಕಮಾಂಡರ್ ಎಸ್‌ಯುವಿ ಕಾರಿನ ಇಂಟಿರಿಯರ್ ಟೀಸರ್ ಬಿಡುಗಡೆ ಮಾಡಿದ ಜೀಪ್

ಆ ಮೂಲಕ ಹೊಸ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಎಂಜಿ ಗ್ಲೊಸ್ಟರ್, ಟೊಯೊಟಾ ಫಾರ್ಚೂನರ್ ಮತ್ತು ಫೋರ್ಡ್ ಎಂಡೀವರ್ ಕಾರು ಮಾದರಿಗಳಿಗೆ ಹೊಸ ಕಾರು ಪ್ರಬಲ ಪೈಪೋಟಿ ನೀಡಲಿದ್ದು, ಹೊಸ ಕಾರಿನ ಬೆಲೆ ಕೂಡಾ ಪ್ರತಿಸ್ಪರ್ಧಿ ಕಾರುಗಳಿಂತಲೂ ಉತ್ತಮವಾಗಿರಲಿದೆ.

ಕಮಾಂಡರ್ ಎಸ್‌ಯುವಿ ಕಾರಿನ ಇಂಟಿರಿಯರ್ ಟೀಸರ್ ಬಿಡುಗಡೆ ಮಾಡಿದ ಜೀಪ್

ಹೊಸ ಟೀಸರ್‌ನಲ್ಲಿ ಸದ್ಯಕ್ಕೆ ಹೊಸ ಕಾರಿನಲ್ಲಿ ಕಂಪಾಸ್ ಮಾದರಿಯಲ್ಲಿಯೇ ಪ್ರೀಮಿಯಂ ಲೆದರ್ ಆಸನಗಳು, 10.25 ಇಂಚಿನ ಟಚ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಮಲ್ಟಿ ಫಂಕ್ಷನಲ್ ಡಿಜಿಟಲ್ ಡಿಸ್‌ಪ್ಲೇ, ಸ್ಟ್ರೀರಿಂಗ್ ವೀಲ್ಹ್ ಜೊತೆ ಮೌಟೆಂಡ್ ಕಂಟ್ರೋಲ್ ಸೇರಿಸಲಾಗಿದೆ.

Most Read Articles

Kannada
Read more on ಜೀಪ್ jeep
English summary
Jeep 7-Seater SUV Interior Teased. Read in Kannada.
Story first published: Friday, July 9, 2021, 0:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X