Just In
- 54 min ago
ಫೋಕ್ಸ್ವ್ಯಾಗನ್ ಐಡಿ.4 ಜಿಟಿಎಕ್ಸ್ ಪರ್ಫಾಮೆನ್ಸ್ ಎಲೆಕ್ಟ್ರಿಕ್ ಕಾರಿನ ಟೀಸರ್ ಬಿಡುಗಡೆ
- 55 min ago
ಕೇವಲ 48 ನಿಮಿಷಗಳಲ್ಲಿ ಸೋಲ್ಡ್ ಔಟ್ ಆದ ಕೆಟಿಎಂ 1290 ಸೂಪರ್ ಡ್ಯೂಕ್ ಆರ್ಆರ್
- 2 hrs ago
ಹೆರ್ಮೆಸ್ 75 ವಾಣಿಜ್ಯ ಬಳಕೆಯ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ ಕಬೀರಾ ಮೊಬಿಲಿಟಿ
- 3 hrs ago
ದುಬಾರಿ ಬೆಲೆಯ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‌ಯುವಿ ಖರೀದಿಸಿದ ನಟ ಅರ್ಜುನ್ ಕಪೂರ್
Don't Miss!
- Movies
'ನೀವು ಬಸ್ ಡ್ರೈವರ್ ಮಗನೇ, ನಮ್ಮ ಮುಷ್ಕರ ಬೆಂಬಲಿಸಿ': ಯಶ್ಗೆ ಪತ್ರ ಬರೆದ ಸಾರಿಗೆ ನೌಕರರು?
- News
ಸರ್ಕಾರ v/s ಸಾರಿಗೆ ನೌಕರರು: 8ನೇ ದಿನಕ್ಕೆ ಕಾಲಿಟ್ಟ ಮುಷ್ಕರ
- Sports
ಸ್ವಿಗ್ಗಿಯಿಂದ ರೋಹಿತ್ ಶರ್ಮಾಗೆ ಅವಮಾನ ; ಕಿಡಿಕಾರಿದ ಫ್ಯಾನ್ಸ್
- Lifestyle
ರಕ್ತದಲ್ಲಿ ಕಬ್ಬಿಣದಂಶ ಹೆಚ್ಚಾದರೆ ಆಯುಸ್ಸು ಕಡಿಮೆಯಾಗುವುದು
- Education
NEET PG Admit Card 2021: ನೀಟ್ ಪಿಜಿ ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Finance
ಸುಮಾರು 5,550 ಕೋಟಿ ರು ಡಿವಿಡೆಂಡ್ ಘೋಷಿಸಿದ ಟಿಸಿಎಸ್
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಭಾರತದಲ್ಲಿ ಹೊಸ ಕಾರು ಮಾದರಿಗಾಗಿ ಸಿಟ್ರನ್ ಪ್ಲ್ಯಾಟ್‌ಫಾರ್ಮ್ ಬಳಕೆ ಮಾಡಲಿದೆ ಜೀಪ್ ಇಂಡಿಯಾ
ಕಂಪಾಸ್ ಎಸ್‌ಯುವಿಯೊಂದಿಗೆ ಮಧ್ಯಮ ಕ್ರಮಾಂಕದ ಎಸ್‌ಯುವಿ ಕಾರು ಮಾರಾಟದಲ್ಲಿ ಉತ್ತಮ ಬೇಡಿಕೆ ಪಡೆದುಕೊಂಡಿರುವ ಜೀಪ್ ಇಂಡಿಯಾ ಕಂಪನಿಯು ಮುಂಬರುವ ದಿನಗಳಲ್ಲಿ ನಾಲ್ಕು ಹೊಸ ಕಾರುಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, ಹೊಸ ಕಾರುಗಳ ಅಭಿವೃದ್ದಿಗಾಗಿ ಜೀಪ್ ಕಂಪನಿಯು ಸಿಟ್ರನ್ ಕಂಪನಿಯ ಕಾರು ಉತ್ಪಾದನಾ ಪ್ಲ್ಯಾಟ್‌ಫಾರ್ಮ್ ಬಳಕೆ ಮಾಡಲು ನಿರ್ಧರಿಸಿದೆ.

ಯುರೋಪಿನ್ ಕಾರು ಉತ್ಪಾದನಾ ಕಂಪನಿಯಾಗಿರುವ ಸಿಟ್ರನ್ ಮೊದಲ ಬಾರಿಗೆ ಭಾರತದಲ್ಲಿ ಕಾರು ಮಾರಾಟವನ್ನು ಆರಂಭಿಸುತ್ತಿದ್ದು, ಸಿಟ್ರನ್ ಕಂಪನಿಯು ತನ್ನ ಮೊದಲ ಕಾರು ಬಿಡುಗಡೆಗೂ ಮುನ್ನ ಜೀಪ್ ಇಂಡಿಯಾ ಜೊತೆಗೆ ಭಾರತದಲ್ಲಿ ಕಾರು ಉತ್ಪಾದನಾ ಸೌಲಭ್ಯವನ್ನು ಸಹಭಾಗಿತ್ವ ಯೋಜನೆ ಅಡಿ ಬಳಕೆ ಮಾಡಿಕೊಳ್ಳುವ ಸಿದ್ದತೆಯಲ್ಲಿವೆ.ಕಳೆದ ಕೆಲ ತಿಂಗಳ ಹಿಂದಷ್ಟೇ ಯುರೋಪ್ ಮಾರುಕಟ್ಟೆಯಲ್ಲಿ ಜೀಪ್ ಮಾತೃಸಂಸ್ಥೆಯಾದ ಫಿಯೆಟ್ ಕ್ಲೈಸರ್ ಮತ್ತು ಸಿಟ್ರನ್ ಮಾತೃಸಂಸ್ಥೆಯಾದ ಪಿಎಸ್ಎ ಗ್ರೂಪ್ ಕಂಪನಿಯು ವಿಲೀನವಾಗುವ ಮೂಲಕ ಹೊಸ ಸ್ಟೆಲ್ಯಾಂಡಿಸ್ ಎನ್ನುವ ಕಾರು ತಯಾರಕ ಕಂಪನಿಯನ್ನು ಹುಟ್ಟುಹಾಕಿದ್ದು, ಹೊಸ ಯೋಜನೆಯ ಭಾಗವಾಗಿ 14 ಕಾರ್ ಬ್ರಾಂಡ್‌ಗಳು ಇದೀಗ ಹೊಸ ಕಾರು ಕಂಪನಿಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದೇ ಜೀಪ್ ಮತ್ತು ಸಿಟ್ರನ್ ನಡುವಿನ ಹೊಸ ಯೋಜನೆಗೆ ಪ್ರಮುಖ ಕಾರಣವಾಗಿದೆ.

ಸ್ಟೆಲ್ಯಾಂಡಿಸ್ ಅಧೀನದಲ್ಲಿ ಸಿಟ್ರನ್, ಜೀಪ್ ಕಂಪನಿಗಳು ಈಗಾಗಲೇ ಯುರೋಪಿನ ಪ್ರಮುಖ ಮಾರುಕಟ್ಟೆಗಳಲ್ಲಿ ಸಹಭಾಗೀತ್ವ ಯೋಜನೆಯಡಿ ಕಾರ್ಯನಿರ್ವಹಿಸುತ್ತಿದ್ದು, ಇದೀಗ ಭಾರತದಲ್ಲೂ ಈ ಎರಡು ಕಂಪನಿಗಳು ಹೊಸ ಕಾರುಗಳ ಉತ್ಪಾದನಾ ವೆಚ್ಚ ತಗ್ಗಿಸಲು ತಂತ್ರಜ್ಞಾನ ಮತ್ತು ಉತ್ಪಾದನಾ ಪ್ಲ್ಯಾಟ್‌ಫಾರ್ಮ್‌ಗಳನ್ನು ಜೊತೆಯಾಗಿ ಬಳಕೆ ಮಾಡಿಕೊಳ್ಳಲು ನಿರ್ಧರಿಸಿವೆ.

ಸಿಟ್ರನ್ ಕಂಪನಿಯ ಹೊಸ ಕಾಮನ್ ಮ್ಯಾಡಲರ್ ಪ್ಲ್ಯಾಟ್‌ಫಾರ್ಮ್(ಸಿಎಂಪಿ) ಬಳಕೆ ಮಾಡಿಕೊಳ್ಳುವ ಬಗ್ಗೆ ಜೀಪ್ ಇಂಡಿಯಾ ಕಂಪನಿಯು ಸಹ ಈಗಾಗಲೇ ಮಾಹಿತಿ ಹಂಚಿಕೊಂಡಿದ್ದು, ಸದ್ಯ ಎರಡು ಕಂಪನಿಗಳು ಭಾರತದಲ್ಲಿ ಸಹಭಾಗೀತ್ವ ಯೋಜನೆಯನ್ನು ಘೋಷಣೆ ಮಾಡದೆ ಕೇವಲ ಕಾರು ಉತ್ಪಾದನಾ ಪ್ಲ್ಯಾಟ್‌ಫಾರ್ಮ್ ಹಂಚಿಕೊಳ್ಳುವಿಕೆ ಮತ್ತು ತಂತ್ರಜ್ಞಾನ ಮಾತ್ರ ಎರವಲು ಪಡೆದುಕೊಳ್ಳುವ ಯೋಜನೆಯಲ್ಲಿವೆ.

ಹಣಕಾಸು, ಹೂಡಿಕೆ, ಕಾರು ಉತ್ಪಾದನಾ ಯೋಜನೆಗಳನ್ನು ಸದ್ಯಕ್ಕೆ ಸ್ವತಂತ್ರವಾಗಿ ನಿರ್ವಹಣೆ ಮಾಡಲಿರುವ ಎರಡು ಕಂಪನಿಗಳು ವಿಭಿನ್ನವಾದ ಕಾರು ಮಾದರಿಗಳ ಮೂಲಕ ಗ್ರಾಹಕರನ್ನು ಸೆಳೆಯಲಿದ್ದು, ಸಿಟ್ರನ್ ಕಂಪನಿಯ ಹೊಸ ಸಿಎಂಪಿ ಪ್ಲ್ಯಾಟ್‌ಫಾರ್ಮ್ ಕಾರು ಉತ್ಪಾದನಾ ತಂತ್ರಜ್ಞಾನವು ಖಂಡಿತವಾಗಿಯೂ ಭಾರತದಲ್ಲಿ ಜೀಪ್ ಕಂಪನಿಗೆ ಭಾರೀ ಪ್ರಮಾಣದ ಆದಾಯ ತಂದುಕೊಡುವ ನೀರಿಕ್ಷೆಯಿದೆ. ಏಕೆಂದರೆ ಸಿಟ್ರನ್ ಕಂಪನಿಯು ಶೇ.90ರಷ್ಟು ಸ್ಥಳೀಯ ಬಿಡಿಭಾಗಗಳನ್ನು ಬಳಕೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಉತ್ಪಾದನಾ ವೆಚ್ಚದಲ್ಲಿನ ನಿರ್ವಹಣೆಯು ಜೀಪ್ ಕಂಪನಿಯ ಲಾಭಾಂಶದಲ್ಲಿ ಹೆಚ್ಚಳ ಮಾಡಲಿದೆ.

ಇದೇ ಕಾರಣಕ್ಕೆ ಜೀಪ್ ಕಂಪನಿಯು ತನ್ನ ಬಹುನೀರಿಕ್ಷಿತ ರೆನೆಗಡ್ ಕಂಪ್ಯಾಕ್ಟ್ ಎಸ್‌ಯುವಿ ಬಿಡುಗಡೆ ಪ್ರಕ್ರಿಯೆಯನ್ನು ತೀವ್ರಗೊಳಿಸುತ್ತಿದ್ದು, ಸಿಟ್ರನ್ ಕಂಪನಿಯ ಕಾರು ಮಾರಾಟದ ಆರಂಭಕ್ಕೂ ಮುನ್ನ ರನೆಗಡ್ ಬಿಡುಗಡೆ ಯೋಜನೆಯಲ್ಲಿದ್ದರೂ ಪ್ರತಿಸ್ಪರ್ಧಿ ಕಾರಿಗಿಂತಲೂ ಬೆಲೆ ಹೆಚ್ಚಳವಾಗುವ ಸಾಧ್ಯತೆಯಿಂದಾಗಿ ಬಿಡುಗಡೆ ಪ್ರಕ್ರಿಯೆಯಿಂದ ಹಿಂದೆ ಸರಿದಿತ್ತು.

ಇದೀಗ ಸಿಟ್ರನ್ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ಹೊಸ ಕಾರನ್ನು ಉತ್ಪಾದನೆ ಮಾಡಿದ್ದಲ್ಲಿ ಉತ್ಪಾದನಾ ವೆಚ್ಚವನ್ನು ತಗ್ಗಿಸಬಹುದೆಂದು ಅಂದಾಜಿಸಿರುವ ಜೀಪ್ ಕಂಪನಿಯು ಶೀಘ್ರದಲ್ಲೇ ಹೊಸ ಕಾರಿನ ರೋಡ್ ಟೆಸ್ಟಿಂಗ್ ಮತ್ತೆ ಪುನಾರಂಭಿಸಲಿದೆ.

ರೆನೆಗಡ್ ಕಾರು ಮಾದರಿಯನ್ನು ಈ ಮೊದಲು ರೂ. 11 ಲಕ್ಷದಿಂದ ರೂ. 16 ಲಕ್ಷ ಬೆಲೆ ಅಂತರದಲ್ಲಿ ಮಾರಾಟ ಮಾಡಬೇಕೆಂಬ ಜೀಪ್ ಕಂಪನಿಯ ಲೆಕ್ಕಾಚಾರವು ರೋಡ್ ಟೆಸ್ಟಿಂಗ್ ವೇಳೆ ಯೋಜನೆಗಿಂತಲೂ ಹೆಚ್ಚು ದುಬಾರಿಯಾಗುವ ಸೂಚನೆ ನೀಡಿತ್ತು.
MOST READ: ಗ್ರಾಹಕರ ದೂರು ಹಿನ್ನೆಲೆ...ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ಸಬ್ಸಿಡಿ ರದ್ದು

ಬೆಲೆ ಹೆಚ್ಚಳವಾಗುವ ಕಾರಣಕ್ಕೆ ರೆನೆಗಡ್ ಬಿಡುಗಡೆಯಿಂದ ಹಿಂದೆ ಸರಿದಿದ್ದ ಜೀಪ್ ಕಂಪನಿಯು ಇದೀಗ ಸಿಟ್ರನ್ ಹೊಸ ಸಿಎಫ್ಎ ಪ್ಲ್ಯಾಟ್‌ಫಾರ್ಮ್ ಬಳಕೆಯ ಮೂಲಕ ಉತ್ಪಾದನಾ ವೆಚ್ಚ ತಗ್ಗಿಸುವುದರ ಜೊತೆಗೆ ಸ್ಪರ್ಧಾತ್ಮಕ ಬೆಲೆ ನಿರ್ಧಾರಕ್ಕೆ ಸಹಕಾರಿಯಾಗಲಿದ್ದು, ರೆನೆಗಡ್ ಕಾರು ಸಿಟ್ರನ್ ಸಿ3 ಏರ್‌ಕ್ರಾಸ್ ಮಾದರಿಯಲ್ಲಿ ಅಳವಡಿಸಲು ನಿರ್ಧರಿಸಿರುವ 1.2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಪಡೆದುಕೊಳ್ಳಲಿದೆ.

ಸಿಟ್ರನ್ ಕಂಪನಿಯು ಸದ್ಯ ಬಿಡುಗಡೆಗೆ ಸಿದ್ದವಾಗಿರುವ ಸಿ5 ಏರ್‌ಕ್ರಾಸ್ ಮಾದರಿಯಲ್ಲಿ 2.0-ಲೀಟರ್ ಡೀಸೆಲ್ ಎಂಜಿನ್ ಜೋಡಿಸಿದ್ದು, ಸಿ5 ಏರ್‌ಕ್ರಾಸ್ ಹೊರತುಪಡಿಸಿ ಮುಂಬರುವ ಕಾರುಗಳಲ್ಲಿ ಕೇವಲ ಪೆಟ್ರೋಲ್ ಎಂಜಿನ್ ಮಾತ್ರವೇ ಜೋಡಿಸುವುದಾಗಿ ಸಿಟ್ರನ್ ಕಂಪನಿಯು ಹೇಳಿಕೊಂಡಿದೆ.
MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಇದರಿಂದ ಜೀಪ್ ರೆನೆಗಡ್ ಕಾರು ಮಾದರಿಯು ಸಿಟ್ರನ್ ಭಾರತದಲ್ಲಿ ಬಿಡುಗಡೆ ಮಾಡಲಿರುವ ಎರಡನೇ ಕಾರು ಮಾದರಿಯಾದ ಸಿ3 ಏರ್‌ಕ್ರಾಸ್ ಮಾದರಿಯಲ್ಲೇ ಕೇವಲ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಲಿದ್ದು, ಹೊಸ ರೆನೆಗಡ್ ಕಾರು ಮಾದರಿಯು ಮಾರುತಿ ಸುಜುಕಿ ವಿಟಾರಾ ಬ್ರೆಝಾ, ಕಿಯಾ ಸೊನೆಟ್ ಮತ್ತು ಹ್ಯುಂಡೈ ವೆನ್ಯೂ ಪೈಪೋಟಿಯಾಗಿ ಬೆಲೆ ಪಡೆದುಕೊಳ್ಳುವ ನೀರಿಕ್ಷೆಗಳಿವೆ. ಇನ್ನು ಜೀಪ್ ಹೊಸ ಕಾರು ಪಟ್ಟಿಯಲ್ಲಿರುವ ನಾಲ್ಕು ಹೊಸ ಕಾರುಗಳಲ್ಲಿ ಕಂಪಾಸ್ 7 ಸೀಟರ್ ಮೊದಲು ಬಿಡುಗಡೆಯಾಗಲಿದ್ದು, ಈ ವರ್ಷಾಂತ್ಯಕ್ಕೆ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಬಿಡುಗಡೆಯಾಗಲಿದೆ.