ಹೊಸ ಕಮಾಂಡರ್ ಎಸ್‌ಯುವಿಯ ಟೀಸರ್ ಬಿಡುಗಡೆಗೊಳಿಸಿದ ಜೀಪ್

ಅಮೆರಿಕ ಮೂಲದ ಜೀಪ್ ಕಂಪನಿಯಕಂಪಾಸ್ ಮಾದರಿಯನ್ನು ಆಧರಿಸಿ 7-ಸೀಟರ್ ಪ್ರೀಮಿಯಂ ಪೂರ್ಣ ಗಾತ್ರದ ಎಸ್‍ಯುವಿಯನ್ನು ಸಿದ್ಧಪಡಿಸುತ್ತಿದೆ. ಈ ಹೊಸ ಎಸ್‍ಯುವಿಗೆ ಕಮಾಂಡರ್ ಎಂಬ ಹೆಸರನ್ನು ಅಧಿಕೃತವಾಗಿ ನೀಡಿರುವುದಾಗಿ ಕಂಪನಿಯು ಟೀಸರ್ ಮೂಲಕ ಬಹಿರಂಗಪಡಿಸಿದ್ದಾರೆ.

ಹೊಸ ಕಮಾಂಡರ್ ಎಸ್‌ಯುವಿಯ ಟೀಸರ್ ಬಿಡುಗಡೆಗೊಳಿಸಿದ ಜೀಪ್

ಬ್ರೆಜಿಲ್ ಮಾರುಕಟ್ಟೆಗಾಗಿ ತನ್ನ ಹೊಸ ಕಮಾಂಡರ್ 7 ಸೀಟರ್ ಎಸ್‍ಯುವಿಯ ಟೀಸರ್ ಅನ್ನು ಬಿಡುಗಡೆಗೊಳಿಸಿದೆ. ಈ ಹೊಸ ಜೀಪ್ 7 ಸೀಟರ್ ಎಸ್‍ಯುವಿಯು ಭಾರತದಲ್ಲಿ ಹಲವು ಬಾರಿ ಸ್ಪಾಟ್ ಟೆಸ್ಟ್ ಅನು ನಡೆಸಿದೆ. ಈ ಹೊಸ ಎಸ್‍ಯುವಿಯು ಎಫ್‌ಸಿಎಯ ಸ್ಮಾಲ್ ವೈಡ್ 4×4 ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಇದು ರೆನೆಗೇಡ್ ಮತ್ತು ಕಂಪಾಸ್‌ಗೆ ಸಹ ಆಧಾರವಾಗಿದೆ. ಉದ್ದವಾದ ದೇಹ ಮತ್ತು ಹೆಚ್ಚಿನ ವ್ಹೀಲ್‌ಬೇಸ್‌ಗೆ ಅನುಕೂಲವಾಗುವಂತೆ ಈ ಪ್ಲಾಟ್‌ಫಾರ್ಮ್ ಅನ್ನು ಮಾರ್ಪಡಿಸಲಾಗುತ್ತದೆ.

ಹೊಸ ಕಮಾಂಡರ್ ಎಸ್‌ಯುವಿಯ ಟೀಸರ್ ಬಿಡುಗಡೆಗೊಳಿಸಿದ ಜೀಪ್

ಮೂರು-ಸಾಲಿನ ಎಸ್‌ಯುವಿ ಜೀಪ್‌ನ ಡಿಎನ್‌ಎಯನ್ನು ಒಳಗೊಂಡಂತೆ ತುಸು ಅಗ್ರೇಸಿವ್ ಲುಕ್ ಅನ್ನು ಹೊಂದಿದೆ. ಈ ಹೊಸ ಮೂರು ಸಾಲಿನ ಎಸ್‍ಯುವಿಯಯನ್ನು ಮಿಡ್ ಎಸ್‍ಯುವಿಯ ಕಂಪಾಸ್ ಮಾದರಿಗೆ ಹೋಲಿಸಿದರೆ ವಿಭಿನ್ನ ಮಾನಿಕರ್ ಪಡೆದಿದೆ. ಇನ್ನು ಹೊಸ 7-ಸೀಟರ್ ಜೀಪ್ ಎಸ್‍ಯುವಿಯು ಆಫ್-ರೋಡಿಂಗ್ ಸಾಮರ್ಥ್ಯದ ಜೊತೆಗೆ ದುಬಾರಿ ಒಳಾಂಗಣವನ್ನು ಹೊಂದಿರುತ್ತದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಹೊಸ ಕಮಾಂಡರ್ ಎಸ್‌ಯುವಿಯ ಟೀಸರ್ ಬಿಡುಗಡೆಗೊಳಿಸಿದ ಜೀಪ್

ಹೊಸ ಕಮಾಂಡರ್ ಎಸ್‍ಯುವಿಯ ಮುಂಭಾಗವನ್ನು ಕಂಪಾಸ್‌ಗೆ ಹೋಲಿಸಿದರೆ ವಿಭಿನ್ನ ಸ್ಟೈಲಿಂಗ್ ಅಂಶಗಳೊಂದಿಗೆ ಇದು ಹೆಚ್ಚು ಮಸ್ಕ್ಲರ್ ಲುಕ್ ಅನ್ನು ಹೊಂದಿರಬಹುದು. ಇದರಲ್ಲಿ ಲಂಬವಾದ ಗ್ರಿಲ್ ಸ್ಲ್ಯಾಟ್‌ಗಳು, ತೀಕ್ಷ್ಣವಾದ ಎಲ್ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಹೆಚ್ಚು ಅಗ್ರೇಸಿವ್ ಬಂಪರ್ ಪೈಪ್‌ಲೈನ್‌ನಲ್ಲಿರಬಹುದು.

ಹೊಸ ಕಮಾಂಡರ್ ಎಸ್‌ಯುವಿಯ ಟೀಸರ್ ಬಿಡುಗಡೆಗೊಳಿಸಿದ ಜೀಪ್

ಜೀಪ್ ಕಮಾಂಡರ್ ಎಸ್‍ಯುವಿಯ ಡ್ಯಾಶ್‌ಬೋರ್ಡ್ ವಿನ್ಯಾಸವನ್ನು ಕಂಪಾಸ್ ಫೇಸ್‌ಲಿಫ್ಟ್‌ ಮಾದರಿಯೊಂದಿಗೆ ಹಂಚಿಕೊಳ್ಳಲಿದೆ. ಹೊಸ ಎಸ್‍ಯುವಿಯಲ್ಲಿ ಎಸಿ ವೆಂಟ್ಸ್, ಸ್ಪೀಕರ್‌ಗಳು, ಡೋರ್ ಹ್ಯಾಂಡಲ್ಸ್ ಫ್ರೇಮ್ ಮತ್ತು ಇತರ ಭಾಗಗಳ ಸುತ್ತಲೂ ಕ್ರೋಮ್ ಔಟ್ ಲೈನ್ ಅನ್ನು ಒಳಗೊಂಡಿರುತ್ತದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಹೊಸ ಕಮಾಂಡರ್ ಎಸ್‌ಯುವಿಯ ಟೀಸರ್ ಬಿಡುಗಡೆಗೊಳಿಸಿದ ಜೀಪ್

ಇದರೊಂದಿಗೆ ಪನೋರಮಿಕ್ ಸನ್‌ರೂಫ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ, ಕ್ರೂಸ್ ಕಂಟ್ರೋಲ್, ಫುಲ್ ಎಲ್ಇಡಿ ಆಟೋ ಹೆಡ್‌ಲ್ಯಾಂಪ್‌ಗಳು, ಅಪ್‌ಡೇಟೆಡ್ ಯುಕನೆಕ್ಟ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಜೊತೆಗೆ ಕಾರ್ ಕನೆಕ್ಟಿವಿಟಿ ತಂತ್ರಜ್ಞಾನ ಮತ್ತು ಇತರ ಅತ್ಯಾಧುನಿಕ ಫೀಚರ್ ಗಳನ್ನು ಹೊಂದಿರಲಿದೆ.

ಹೊಸ ಕಮಾಂಡರ್ ಎಸ್‌ಯುವಿಯ ಟೀಸರ್ ಬಿಡುಗಡೆಗೊಳಿಸಿದ ಜೀಪ್

ಹೊಸ ಜೀಪ್ ಕಮಾಂಡರ್ ಎಸ್‍ಯುವಿಯಲ್ಲಿ 2.0-ಲೀಟರ್ ಮಲ್ಟಿಜೆಟ್ ಡೀಸೆಲ್ ಎಂಜಿನ್ ಅನ್ನು ಹೊಂದಿರಬಹುದು. ಈ ಎಂಜಿನ್ 173 ಬಿಹೆಚ್‌ಪಿ ಪವರ್ ಮತ್ತು 350 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿರುತ್ತದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಹೊಸ ಕಮಾಂಡರ್ ಎಸ್‌ಯುವಿಯ ಟೀಸರ್ ಬಿಡುಗಡೆಗೊಳಿಸಿದ ಜೀಪ್

ಇದರೊಂದಿಗೆ ಫಿಯೆಟ್ ಮೂಲದ 2.0-ಲೀಟರ್ ನಾಲ್ಕು-ಸಿಲಿಂಡರ್ ಡೀಸೆಲ್ ಟ್ವಿನ್-ಟರ್ಬೋಚಾರ್ಜ್ಡ್ ಎಂಜಿನ್ ಅನ್ನು ಕೂಡ ಅಳವಡಿಸಬಹುದು. ಈ ಎಂಜಿನ್ 200 ಬಿಹೆಚ್‌ಪಿ ಪವರ್ ಮತ್ತು 400 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಹೊಸ ಕಮಾಂಡರ್ ಎಸ್‌ಯುವಿಯ ಟೀಸರ್ ಬಿಡುಗಡೆಗೊಳಿಸಿದ ಜೀಪ್

ಈ ಎಂಜಿನ್ ಅನ್ನು 9-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಜೋಡಿಸಲಾಗುವುದು. ಇದರೊಂದಿಗೆ ಎಡಬ್ಲ್ಯೂ ಸಿಸ್ಟಂ ಅನ್ನು ಒಳಗೊಂಡಿರುತ್ತದೆ ಇದು ಎರಡೂ ಆಕ್ಸಲ್‌ಗಳಿಗೆ ಪವರ್ ಅನ್ನು ಕಳುಹಿಸುವ ಸಾಧ್ಯತೆಯಿದೆ.

ಹೊಸ ಕಮಾಂಡರ್ ಎಸ್‌ಯುವಿಯ ಟೀಸರ್ ಬಿಡುಗಡೆಗೊಳಿಸಿದ ಜೀಪ್

ಜೀಪ್ ಕಮಾಂಡರ್ ಎಸ್‍ಯುವಿಯಯು ಭಾರತೀಯ ಮಾರುಕಟ್ಟೆಯಲ್ಲಿಯು ಕೂಡ ಬಿಡುಗಡೆಯಾಗಲಿದೆ. ಈ ಹೊಸ ಮಾದರಿಯು ಭಾರತದಲ್ಲಿ ಬಿಡುಗಡೆಯಾದ ಬಳಿಕ ಟೊಯೊಟಾ ಫಾರ್ಚೂನರ್, ಫೋರ್ಡ್ ಎಂಡೀವರ್, ಫೋಕ್ಸ್‌ವ್ಯಾಗನ್ ಟಿಗ್ವಾನ್ ಆಲ್‌ಸ್ಪೇಸ್, ಮಹೀಂದ್ರಾ ಅಲ್ತುರಾಸ್ ಜಿ4 ಮತ್ತು ಸ್ಕೋಡಾ ಕೊಡಿಯಾಕ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
Read more on ಜೀಪ್ jeep
English summary
Jeep Commander 7-Seater Suv Confirmed Via A New Teaser. Read In Kananda.
Story first published: Saturday, May 29, 2021, 9:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X