ರ‍್ಯಾಂಗ್ಲರ್ ಎಸ್‍ಯುವಿಯ 80ನೇ ಆನಿವರ್ಸರಿ ಸ್ಪೆಷಲ್ ಎಡಿಷನ್ ಪರಿಚಯಿಸಿದ ಜೀಪ್

ಎಂಟು ದಶಕಗಳ ಕಾಲ 4x4 ವಿಭಾಗದಲ್ಲಿ ಪಾರುಪತ್ಯ ಸಾಧಿಸುತ್ತಿರುವ ಎಸ್‍ಯುವಿ ಎಂಬ ಹೆಗ್ಗಳಿಕೆಗೆ ರ‍್ಯಾಂಗ್ಲರ್ ಪಾತ್ರವಗಿದೆ. ಈ ಜನಪ್ರಿಯ ಜೀಪ್ ರ‍್ಯಾಂಗ್ಲರ್ 80ನೇ ವರ್ಷದ ಸಂಭ್ರಮದ ಭಾಗವಾಗಿ 80ನೇ ರ‍್ಯಾಂಗ್ಲರ್ ಆನಿವರ್ಸರ್ ಎಡಿಷನ್ ಅನ್ನು ಪರಿಚಯಿಸಿದೆ.

ರ‍್ಯಾಂಗ್ಲರ್ ಎಸ್‍ಯುವಿಯ 80ನೇ ಆನಿವರ್ಸರಿ ಸ್ಪೆಷಲ್ ಎಡಿಷನ್ ಪರಿಚಯಿಸಿದ ಜೀಪ್

2021ರ ಜೀಪ್ ರ‍್ಯಾಂಗ್ಲರ್ ಸುರಕ್ಷತಾ ವೈಶಿಷ್ಟ್ಯಗಳು, ಆಫ್-ರೋಡ್ ಸಾಮರ್ಥ್ಯಗಳನ್ನು ಮತ್ತು ಹೊಸ ಬಣ್ಣಗಳ ಸೇರ್ಪಡೆಯಾಗಿದೆ. ನವೀಕರಿಸಿದ ವಾಹನದ ಎಲ್ಲಾ ಮಾದರಿಗಳಿಗೆ 2.0ಎಲ್ ಯುರೋ6ಡಿ ಪೆಟ್ರೋಲ್ ಎಂಜಿನ್ ಅಳವಡಿಸಲಿದ್ದು. ಈ ಎಂಜಿನ್ 272 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಹೊಸ ರ‍್ಯಾಂಗ್ಲರ್ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ (ಎಸಿಸಿ) ಅನ್ನು ಸ್ಟಾಪ್ ಅಂಡ್ ಗೋ, ಎಮರ್ಜನ್ಸಿ ಬ್ರೇಕಿಂಗ್ (ಎಇಬಿ) ಮತ್ತು ಆಟೋ ಹೈ ಬೀಪ್ ಪಡೆಯುತ್ತದೆ.

ರ‍್ಯಾಂಗ್ಲರ್ ಎಸ್‍ಯುವಿಯ 80ನೇ ಆನಿವರ್ಸರಿ ಸ್ಪೆಷಲ್ ಎಡಿಷನ್ ಪರಿಚಯಿಸಿದ ಜೀಪ್

ಈ 2021ರ ಜೀಪ್ ರ‍್ಯಾಂಗ್ಲರ್ ಎಸ್‍ಯುವಿಯಲ್ಲಿ ಹೊಸ ಫೀಚರ್ಸ್ ಗಳನ್ನು ಸೇರಿಸಿದ್ದು, ಇದು ಹೆಚ್ಚು ಸಮರ್ಥ ಆಫ್-ರೋಡರ್ ಆಗಿ ಮಾರ್ಪಟ್ಟಿದೆ. ಈ ಹೊಸ ಮಾದರಿಯು ಸೆಲೆಕ್-ಸ್ಪೀಡ್ ಕಂಟ್ರೋಲ್ ಅನ್ನು ಹೊಂದಿರುತ್ತದೆ.

ರ‍್ಯಾಂಗ್ಲರ್ ಎಸ್‍ಯುವಿಯ 80ನೇ ಆನಿವರ್ಸರಿ ಸ್ಪೆಷಲ್ ಎಡಿಷನ್ ಪರಿಚಯಿಸಿದ ಜೀಪ್

ಇದು ಆಫ್-ರೋಡ್ ಕ್ರೂಸ್ ಕಂಟ್ರೋಲ್ ಆಗಿದ್ದು, ಇದು ರಾಕ್ ಕ್ರಾಲ್ ಮತ್ತು ಚಾಲಕನಿಗೆ ಸ್ಥಿರವಾದ ವೇಗವನ್ನು ಕಾಯ್ದುಕೊಳ್ಳಲು ಅನುವು ಮಾಡಿಕೊಡುತ್ತದೆ. ಈ ಮಾದರಿಯ ಹಲವಾರು ಅತ್ಯಾಧ್ಯುನಿಕ ತಂತ್ರಜ್ಙಾನಗಳನ್ನು ಪಡೆದುಕೊಂಡಿದೆ.

ರ‍್ಯಾಂಗ್ಲರ್ ಎಸ್‍ಯುವಿಯ 80ನೇ ಆನಿವರ್ಸರಿ ಸ್ಪೆಷಲ್ ಎಡಿಷನ್ ಪರಿಚಯಿಸಿದ ಜೀಪ್

ಇನ್ನು 8.4 ಇಂಚಿನ ಟಚ್‌ಸ್ಕ್ರೀನ್ ಮೂಲಕ ಗ್ರಾಹಕರು ಆಯ್ಕೆ ಮಾಡಬಹುದಾದ ಟೈರ್ ಫಿಲ್ ಅಲರ್ಟ್ ಅನ್ನು ಹೊಂದಿಸಲು ಸಾಧ್ಯವಾಗುತ್ತದೆ. ರುಬಿಕಾನ್ ಮಾದರಿಯಂತೆ ಪ್ರತ್ಯೇಕವಾಗಿ ಹೊಸ ಆಫ್-ರೋಡ್ ಪ್ಲಸ್ ಮೋಡ್ ಸಹ ಇದೆ.

ರ‍್ಯಾಂಗ್ಲರ್ ಎಸ್‍ಯುವಿಯ 80ನೇ ಆನಿವರ್ಸರಿ ಸ್ಪೆಷಲ್ ಎಡಿಷನ್ ಪರಿಚಯಿಸಿದ ಜೀಪ್

ರ‍್ಯಾಂಗ್ಲರ್ ಸ್ಪೆಷಲ್ ಎಡಿಷನ್ ಹೈಡ್ರೊ ಬ್ಲೂ, ಸ್ನ್ಯಾಜ್‌ಬೆರಿ ಮತ್ತು ಸರ್ಜ್ ಗ್ರೀನ್ ಎಂಬ ಬಣ್ಣಗಳಲ್ಲಿ ಲಭ್ಯವಿರುತ್ತದೆ. ಜೀಪ್ ರ‍್ಯಾಂಗ್ಲರ್ 80ನೇ ಆನಿವರ್ಸರ್ ಎಡಿಷನ್ ಗ್ರೇ ಬಣ್ಣದ ಗ್ರಿಲ್, ಹೆಡ್‌ಲೈಟ್ ಮತ್ತು ಫಾಗ್ ಲೈಟ್ ಬೆಜೆಲ್‌ಗಳು ಮತ್ತು ಗ್ರಾನೈಟ್ ಕ್ರಿಸ್ಟಲ್ ಅಸ್ಸೆಂಟ್ ಗಳನ್ನು ಹೊಂದಿವೆ.

ರ‍್ಯಾಂಗ್ಲರ್ ಎಸ್‍ಯುವಿಯ 80ನೇ ಆನಿವರ್ಸರಿ ಸ್ಪೆಷಲ್ ಎಡಿಷನ್ ಪರಿಚಯಿಸಿದ ಜೀಪ್

ಇನ್ನು ಈ ಎಸ್‍ಯುವಿಯಲ್ಲಿ 18-ಇಂಚಿನ ಎರಡು-ಟೋನ್ ಅಲಾಯ್ ವ್ಹೀಲ್ ಗಳನ್ನು ಹೊಂದಿವೆ. ಬಾಡಿ-ಕಲರ್ ಹಾರ್ಡ್‌ಟಾಪ್ ಮತ್ತು ಫ್ರಂಟ್ ವ್ಹೀಲ್ ಕಮಾನುಗಳಲ್ಲಿನ 80ನೇ ಆನಿವರ್ಸ ಬ್ಯಾಡ್ಜ್ ಹೊಂದಿರುವ ಪೂರ್ಣ ಎಲ್ಇಡಿ ಹೈ-ಬೀಮ್ ಹೆಡ್‌ಲೈಟ್‌ಗಳು ಈ ಸ್ಪೆಷಲ್ ಎಡಿಷನ್ ಮಾದರಿಯನ್ನು ಗುರುತಿಸಲು ಸಹಾಯ ಮಾಡುತ್ತದೆ.

ರ‍್ಯಾಂಗ್ಲರ್ ಎಸ್‍ಯುವಿಯ 80ನೇ ಆನಿವರ್ಸರಿ ಸ್ಪೆಷಲ್ ಎಡಿಷನ್ ಪರಿಚಯಿಸಿದ ಜೀಪ್

ಜೊತೆಗೆ ಹಿಂಭಾಗದ ಸ್ವಿಂಗ್ ಗೇಟ್‌ನಲ್ಲಿ ಸ್ಮರಣಾರ್ಥ ಪ್ಯಾನ್ಲ್ ಇದೆ. ಇನ್ನು ಈ ಸ್ಪೆಷಲ್ ಎಡಿಷನ್ ಒಳಭಾಗದಲ್ಲಿ ಡ್ಯಾಶ್‌ಬೋರ್ಡ್ ಜೊತೆಗೆ ಕಾಂಟ್ರಾಸ್ಟ್ ಸ್ಟಿಚಿಂಗ್ ಮತ್ತು ಬರ್ಬರ್ ಫ್ಲೋರ್ ಮ್ಯಾಟ್‌ಗಳನ್ನು ಒಳಗೊಂಡಿದೆ. ಇನ್ನು ಇದರಲ್ಲಿ 8.4-ಇಂಚಿನ ಟಚ್‌ಸ್ಕ್ರೀನ್ ಹೊಂದಿರುವ ಯುಕನೆಕ್ಟ್ 8.4 ಎನ್‌ಎವಿ ಸಿಸ್ಟಂ, ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಜೊತೆ ಸ್ಮಾರ್ಟ್‌ಫೋನ್ ಅನ್ನು ಒಳಗೊಂಡಿದೆ.

ರ‍್ಯಾಂಗ್ಲರ್ ಎಸ್‍ಯುವಿಯ 80ನೇ ಆನಿವರ್ಸರಿ ಸ್ಪೆಷಲ್ ಎಡಿಷನ್ ಪರಿಚಯಿಸಿದ ಜೀಪ್

ಇನ್ನು ಇದರಲ್ಲಿ 7 ಇಂಚಿನ ಟಿಎಫ್‌ಟಿ ಡಿಸ್ ಪ್ಲೇ ಮತ್ತು 552ಡಬ್ಲ್ಯು ವೂಫರ್ ಹೊಂದಿರುವ 9-ಸ್ಪೀಕರ್ ಆಲ್ಪೈನ್ ಆಡಿಯೊ ಸಿಸ್ಟಂ ಅನ್ನು ಒಳಗೊಂಡಿದೆ. ಇದರೊದಿಗೆ ಹಿಂಭಾಗದ ಕ್ಯಾಮೆರಾ, ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್ ಗಳು, ಕೀಲೆಸ್ ಎಂಟರ್ 'ಎನ್ ಗೋ, ಫಾರ್ವರ್ಡ್ ಕೊಲಿಷನ್ ಅಸಿಸ್ಟ್ ಮತ್ತು ಸ್ಟಾಪ್ನೊಂದಿಗೆ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಅನ್ನು ಹೊಂದಿದೆ.

Most Read Articles

Kannada
English summary
Jeep Wrangler 80th Anniversary Special Edition Introduced. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X