2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಕುಸಿತ ಕಂಡ ಜೀಪ್ ಕಂಪಾಸ್ ಎಸ್‍ಯುವಿ

ಅಮೆರಿಕಾ ಮೂಲದ ಜೀಪ್ ಕಂಪನಿಯು 2020ರ ಡಿಸೆಂಬರ್ ತಿಂಗಳಿನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಒಟ್ಟು 384 ಕಂಪಾಸ್ ಎಸ್‍ಯುವಿಗಳನ್ನು ಮಾರಾಟಗೊಳಿಸಿವೆ. ಭಾರತೀಯ ಮಾರುಕಟ್ಟೆಯಲ್ಲಿ ಜೀಪ್ ಕಂಪಾಸ್ ಎಸ್‍ಯುವಿಯ ಮಾರಾಟದಲ್ಲಿ ಭಾರೀ ಕುಸಿತವನ್ನು ಕಂಡಿದೆ.

2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಕುಸಿತ ಕಂಡ ಜೀಪ್ ಕಂಪಾಸ್ ಎಸ್‍ಯುವಿ

2020ರ ನವೆಂಬರ್ ತಿಂಗಳಲ್ಲಿ ಜೀಪ್ ಕಂಪನಿಯು ಕಂಪಾಸ್ ಎಸ್‍ಯುವಿಯ 742 ಎಸ್‍ಯುವಿಗಳನ್ನು ಮಾರಾಟಗೊಳಿಸಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.48.24 ರಷ್ಟು ಮಾರಾಟದಲ್ಲಿ ಕುಸಿತವನ್ನು ಕಂಡಿದೆ. ಇನ್ನು ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲಿ ಜೀಪ್ ಕಂಪನಿಯು ಕಂಪಾಸ್ ಎಸ್‍ಯುವಿಯ 709 ಯುನಿಟ್‌ಗಳನ್ನು ಭಾರತದದಲ್ಲಿ ಮಾರಾಟಗೊಳಿಸಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ. 45.84 ರಷ್ಟು ಮಾರಾಟದಲ್ಲಿ ಕುಸಿತವಾಗಿದೆ.

2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಕುಸಿತ ಕಂಡ ಜೀಪ್ ಕಂಪಾಸ್ ಎಸ್‍ಯುವಿ

ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ಜೀಪ್ ಕಂಪಾಸ್ ಸ್ಪೋರ್ಟ್ ಪ್ಲಸ್, ಲಾಂಗಿಟ್ಯೂಡ್, ಲಾಂಗಿಟ್ಯೂಡ್ ಪ್ಲಸ್, ಲಿಮಿಟೆಡ್ ಪ್ಲಸ್, ನೈಟ್ ಈಗಲ್ ಮತ್ತು ಹಾರ್ಡ್‌ಕೋರ್ ಟ್ರೈಲ್‌ಹಾಕ್. ಟ್ರೈಲ್‌ಹಾಕ್ ಎಂಬ ಆರು ರೂಪಾಂತರಗಳಲ್ಲಿ ಲಭ್ಯವಿದೆ.

MOST READ: ನವೆಂಬರ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಕಾರುಗಳಿವು

2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಕುಸಿತ ಕಂಡ ಜೀಪ್ ಕಂಪಾಸ್ ಎಸ್‍ಯುವಿ

ಜೀಪ್ ಕಂಪಾಸ್ ಎಸ್‍ಯುವಿಯು ಪ್ರತಿ ತಿಂಗಳು 2,500 ಯುನಿಟ್‌ಗಳನ್ನು ಮಾರಾಟವಾಗುತ್ತಿತ್ತು. ನಂತರಲ್ಲಿ ಎಫ್‌ಸಿಎ ದೇಶಾದ್ಯಂತ ಬ್ರ್ಯಾಂಡ್‌ನ ವ್ಯಾಪ್ತಿಯನ್ನು ವಿಸ್ತರಿಸಿತು. ಸ್ಥಳೀಯವಾಗಿ ಪ್ರಾರಂಭವಾದ ಒಂದು ವರ್ಷದೊಳಗೆ ಇದು 25,000 ಯುನಿಟ್ ಮಾರಾಟವನ್ನು ತಲುಪಿತು.

2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಕುಸಿತ ಕಂಡ ಜೀಪ್ ಕಂಪಾಸ್ ಎಸ್‍ಯುವಿ

ಆದರೆ ನಂತರದಲ್ಲಿ ಜೀಪ್ ಕಂಪಾಸ್ ಎಸ್‍ಯುವಿಯ ಮಾರಾಟದಲ್ಲಿ ದೊಡ್ಡ ಕುಸಿತವನ್ನು ಕಂಡು ಮತ್ತೆ ಚೇತರಿಕೆಯನ್ನು ಕಂಡಿಲ್ಲ. ಜೀಪ್ ಕಂಪಾಸ್ ಎಸ್‍ಯುವಿಯ ಆರಂಭದ ಮಾರಾಟವನ್ನು ಇತ್ತೀಚಿನ ಮಾರಾಟಕ್ಕೆ ಹೋಲಿಸಿದರೆ ಪಾತಾಳಕ್ಕೆ ಕುಸಿದಿದೆ ಎಂದು ಹೇಳಬಹುದು.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಕುಸಿತ ಕಂಡ ಜೀಪ್ ಕಂಪಾಸ್ ಎಸ್‍ಯುವಿ

ಜೀಪ್ ಕಂಪಾಸ್ ಪೆಟ್ರೋಲ್ ಆವೃತ್ತಿಯು1.4 ಲೀಟರ್ ಟರ್ಬೊ ಎಂಜಿನ್ ಅನ್ನು ಹೊಂದಿದೆ. ಈ ಪೆಟ್ರೋಲ್ ಎಂಜಿನ್ 161 ಬಿ‍‍ಹೆಚ್‍‍ಪಿ ಪವರ್ ಮತ್ತು 250 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍ನೊಂದಿಗೆ 6 ಸ್ಪೀಡ್ ಮ್ಯಾನುವಲ್ ಮತ್ತು 9 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಕುಸಿತ ಕಂಡ ಜೀಪ್ ಕಂಪಾಸ್ ಎಸ್‍ಯುವಿ

ಜೀಪ್ ಕಂಪಾಸ್‍ನ ಲಾಂಗಿಟ್ಯೂಡ್ ಮತ್ತು ಲಿಮಿಟೆಡ್ ಪ್ಲಸ್ ರೂಪಾಂತದಲ್ಲಿ 2.0 ಲೀಟರ್ ಡೀಸೆಲ್ ಎಂಜಿನ್ ಹೊಂದಿದೆ. ಈ ಎಂಜಿನ್ 173 ಬಿ‍‍ಹೆಚ್‍‍ಪಿ ಪವರ್ ಮತ್ತು 350 ಎನ್‍ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್‍‍ನೊಂದಿಗೆ ಆಟೋಮ್ಯಾಟಿಕ್ ಗೇರ್‍‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ ಆಲ್-ವ್ಹೀಲ್-ಡ್ರೈವ್ ಸಿಸ್ಟಂ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಕುಸಿತ ಕಂಡ ಜೀಪ್ ಕಂಪಾಸ್ ಎಸ್‍ಯುವಿ

ಇನ್ನು ಜೀಪ್ ಕಂಪನಿಯು ಹೊಸ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಹೊಸ ಜೀಪ್ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯು 2021ರ ಜನವರಿ 7ರಂದು ಭಾರತದಲ್ಲಿ ಅನಾವರಣವಾಗಲಿದೆ.

2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಕುಸಿತ ಕಂಡ ಜೀಪ್ ಕಂಪಾಸ್ ಎಸ್‍ಯುವಿ

2021ರ ಕಂಪಾಸ್ ಫೇಸ್‌ಲಿಫ್ಟ್ ಎಸ್‌ಯುವಿಯಲ್ಲಿ ಹೊಸ ಫೀಚರ್ ಗಳನ್ನು ಅಳವಡಿಸಲಾಗಿದೆ. ಇನ್ನು 2021ರ ಜೀಪ್ ಕಂಪಾಸ್‌ನಲ್ಲಿ ಹೊಸ ವಿನ್ಯಾಸ ಮತ್ತು ಹೊಸ ಎಂಜಿನ್ ಆಯ್ಕೆಯನ್ನು ನೀಡಲಾಗಿದೆ. ಹೊಸದಾಗಿ 1.4 ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ 2.0 ಲೀಟರ್ ಡೀಸೆಲ್ ಎಂಜಿನ್ ಅನ್ನು ಕೂಡ ಅಳವಡಿಸಲಾಗಿದೆ.

2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಕುಸಿತ ಕಂಡ ಜೀಪ್ ಕಂಪಾಸ್ ಎಸ್‍ಯುವಿ

ಜೀಪ್ ಕಂಪಾಸ್ ಫೇಸ್‌ಲಿಫ್ಟ್ ಮಾದರಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಫೋಕ್ಸ್‌ವ್ಯಾಗನ್ ಟಿ-ರೋಕ್, ಸ್ಕೋಡಾ ಕರೋಕ್, ನಿಸ್ಸಾನ್ ಕಿಕ್ಸ್, ಹ್ಯುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
Read more on ಜೀಪ್ jeep
English summary
Jeep Sold 384 Units Of Compass In Dec 2020. Read In Kannada.
Story first published: Monday, January 4, 2021, 9:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X