ಚಾರ್ಜಿಂಗ್ ನಿಲ್ದಾಣ, ಬ್ಯಾಟರಿ ವಿನಿಮಯ ಪರಿಹಾರಕ್ಕಾಗಿ ಕೈಜೋಡಿಸಿದ ಜಿಯೋ-ಬಿಪಿ ಮತ್ತು ಮಹೀಂದ್ರಾ ಗ್ರೂಪ್

ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರದೊಂದಿಗೆ ವಿವಿಧ ರಾಜ್ಯ ಸರ್ಕಾರಗಳು ಸಹ ಹಲವಾರು ಹೊಸ ಯೋಜನೆಗಳನ್ನು ಜಾರಿಗೆ ತಂದಿದ್ದು, ಫೇಮ್ 2 ಸಬ್ಸಡಿ ಯೋಜನೆ ಅಡಿಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಲು ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಿರುವುದು ಹೊಸ ಬದಲಾವಣೆಗೆ ಕಾರಣವಾಗಿದೆ.

ಚಾರ್ಜಿಂಗ್ ನಿಲ್ದಾಣ, ಬ್ಯಾಟರಿ ವಿನಿಯಮ ಪರಿಹಾರಕ್ಕಾಗಿ ಕೈಜೋಡಿಸಿದ ಜಿಯೋ-ಬಿಪಿ ಮತ್ತು ಮಹೀಂದ್ರಾ ಗ್ರೂಪ್

ಹೆಚ್ಚುತ್ತಿರುವ ಇಂಧನಗಳ ಬೆಲೆ ಮತ್ತು ಮಾಲಿನ್ಯದ ಕಾರಣಕ್ಕೆ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಇವಿ ವಾಹನ ವಾಹನಗಳಿಗೆ ಪೂರಕವಾದ ಹೊಸ ಯೋಜನೆಗಳು ರೂಪಗೊಳ್ಳುತ್ತಿವೆ. ಇತ್ತೀಚೆಗೆ ಚಾರ್ಜಿಂಗ್ ನಿಲ್ದಾಣ ಮತ್ತು ಬ್ಯಾಟರಿ ವಿನಿಮಯ ಪರಿಹಾರಗಳನ್ನು ಕಂಡುಕೊಳ್ಳಲು ಮುಂದಾಗಿರುವ ಜಿಯೋ-ಬಿಪಿ ಮತ್ತು ಮಹೀಂದ್ರಾ ಗ್ರೂಪ್‌ನ ಎಲೆಕ್ಟ್ರಿಕ್ ವಾಹನ ವಿಭಾಗವು ಸಹ ಹೊಸ ಒಡಂಬಡಿಕೆಗೆ ಸಹಿ ಹಾಕಿದ್ದು, ಕೊನೆಯ ಮೈಲಿ ತನಕವು ಚಾರ್ಜಿಂಗ್ ನಿಲ್ದಾಣ ಸೌಲಭ್ಯಗಳ ಲಭ್ಯತೆಗೆ ಇದು ಸಹಕಾರಿಯಾಗಿದೆ.

ಚಾರ್ಜಿಂಗ್ ನಿಲ್ದಾಣ, ಬ್ಯಾಟರಿ ವಿನಿಯಮ ಪರಿಹಾರಕ್ಕಾಗಿ ಕೈಜೋಡಿಸಿದ ಜಿಯೋ-ಬಿಪಿ ಮತ್ತು ಮಹೀಂದ್ರಾ ಗ್ರೂಪ್

ಜಿಯೋ-ಬಿಪಿ ಬ್ರಾಂಡ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಿಲಯನ್ಸ್ ಬಿಪಿ ಮೊಬಿಲಿಟಿ ಲಿಮಿಟೆಡ್ (ಆರ್‌ಬಿಎಂಎಲ್) ಮತ್ತು ಮಹೀಂದ್ರಾ ಗ್ರೂಪ್‌ನ ಮಹೀಂದ್ರಾ ಎಲೆಕ್ಟ್ರಿಕ್ ಕಂಪನಿಯ ನಡುವೆ ಹೊಸ ಒಡಂಬಡಿಕೆಯಾಗಿದ್ದು, ಹೊಸ ಒಡಂಬಡಿಕೆಯೊಂದಿಗೆ ಉಭಯ ಕಂಪನಿಗಳು ಕಡಿಮೆ ಇಂಗಾಲ ಹೊರಸೂಸುವಿಕೆಯೊಂದಿಗೆ ಸಾಂಪ್ರದಾಯಿಕ ಇಂಧನಗಳಲ್ಲಿ ಸಮನ್ವಯತೆ ಕಾಯ್ದುಕೊಳ್ಳುವುದು ಹಾಗೂ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯೊಂದಿಗೆ ಇವಿ ಸೇವೆಗಳನ್ನು ಅನ್ವೇಷಿಸಲು ನಿರ್ಧರಿಸಲಾಗಿದೆ.

ಚಾರ್ಜಿಂಗ್ ನಿಲ್ದಾಣ, ಬ್ಯಾಟರಿ ವಿನಿಯಮ ಪರಿಹಾರಕ್ಕಾಗಿ ಕೈಜೋಡಿಸಿದ ಜಿಯೋ-ಬಿಪಿ ಮತ್ತು ಮಹೀಂದ್ರಾ ಗ್ರೂಪ್

ರಿಲಯನ್ಸ್ ಬಿಪಿ ಮೊಬಿಲಿಟಿ ಕಂಪನಿಯು ಹೊಸ ಪಾಲುದಾರಿಕೆಯೊಂದಿಗೆ ಇನ್ಮುಂದೆ ಮಹೀಂದ್ರಾ ನಿರ್ಮಾಣದ ತ್ರಿ ಚಕ್ರ ಎಲೆಕ್ಟ್ರಿಕ್ ವಾಹನಗಳು, ವಾಣಿಜ್ಯ ವಾಹನಗಳು, ಕ್ವಾಡ್ರಿಸೈಕಲ್‌ಗಳಿಗೆ ಮತ್ತು ಸಣ್ಣ ಗಾತ್ರದ ಇವಿ ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳಿಗೆ ಚಾರ್ಜಿಂಗ್ ವ್ಯವಸ್ಥೆಯನ್ನು ಒದಗಿಸಲಿದೆ.

ಚಾರ್ಜಿಂಗ್ ನಿಲ್ದಾಣ, ಬ್ಯಾಟರಿ ವಿನಿಯಮ ಪರಿಹಾರಕ್ಕಾಗಿ ಕೈಜೋಡಿಸಿದ ಜಿಯೋ-ಬಿಪಿ ಮತ್ತು ಮಹೀಂದ್ರಾ ಗ್ರೂಪ್

ಚಾರ್ಜಿಂಗ್ ನಿಲ್ದಾಣಗಳ ಜೊತೆಗೆ ಬ್ಯಾಟರಿ ವಿನಿಮಯ ಕೇಂದ್ರಗಳನ್ನು ಸಹ ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಬ್ಯಾಟರಿ ವಿನಿಮಯ ಕೇಂದ್ರಗಳಿಂದಾಗಿ ಚಾರ್ಜಿಂಗ್‌ಗಾಗಿ ಕಾಯುವ ಸಮಯವನ್ನು ಉಳಿತಾಯ ಮಾಡಲಿದೆ.

ಚಾರ್ಜಿಂಗ್ ನಿಲ್ದಾಣ, ಬ್ಯಾಟರಿ ವಿನಿಯಮ ಪರಿಹಾರಕ್ಕಾಗಿ ಕೈಜೋಡಿಸಿದ ಜಿಯೋ-ಬಿಪಿ ಮತ್ತು ಮಹೀಂದ್ರಾ ಗ್ರೂಪ್

ಇ ಮೊಲಿಬಿಟಿ ಅಳವಡಿಕೆಯು ಸದ್ಯ ಪ್ರಾಥಮಿಕ ಹಂತದಲ್ಲಿರುವುದರಿಂದ ಚಾರ್ಜಿಂಗ್ ನಿಲ್ದಾಣಗಳನ್ನು ಹೆಚ್ಚಿಸುತ್ತಿರುವ ಪ್ರಮುಖ ಖಾಸಗಿ ಕಂಪನಿಗಳು ಚಾರ್ಜಿಂಗ್ ನಿಲ್ದಾಣಗಳ ಜೊತೆಗೆ ಬ್ಯಾಟರಿ ವಿನಿಮಯ ಕೇಂದ್ರಗಳನ್ನು ಸಹ ಅಳವಡಿಸಿಕೊಳ್ಳುತ್ತಿವೆ.

ಚಾರ್ಜಿಂಗ್ ನಿಲ್ದಾಣ, ಬ್ಯಾಟರಿ ವಿನಿಯಮ ಪರಿಹಾರಕ್ಕಾಗಿ ಕೈಜೋಡಿಸಿದ ಜಿಯೋ-ಬಿಪಿ ಮತ್ತು ಮಹೀಂದ್ರಾ ಗ್ರೂಪ್

ಇದೀಗ ಹೊಸ ಪಾಲುದಾರಿಕೆಯಲ್ಲಿ ರಿಲಯನ್ಸ್ ಬಿಪಿ ಮೊಬಿಲಿಟಿ ಮತ್ತು ಮಹೀಂದ್ರಾ ಎಲೆಕ್ಟ್ರಿಕ್ ಕಂಪನಿಯು ಸಹ ಇವಿ ವಾಹನ ಉದ್ಯಮಕ್ಕೆ ಪೂರಕವಾದ ಯೋಜನೆಗಳ ಅನುಸ್ಠಾನಕ್ಕೆ ಪರಸ್ಪರ ಒಪ್ಪಿಗೆ ಸೂಚಿಸಿದ್ದು, ಚಾರ್ಜಿಂಗ್ ನಿಲ್ದಾಣಗಳನ್ನು ಬಲಪಡಿಸುವುದು, ಬ್ಯಾಟರಿ ವಿನಿಮಯ ಕೇಂದ್ರಗಳ ಸ್ಥಾಪನೆ ಮತ್ತು ಹೊಸ ಪ್ರಯಾಣಿಕರ ಸೇವೆಯ ಇವಿ ವಾಹನಗಳನ್ನು ಅಭಿವೃದ್ದಿಪಡಿಸಲಿವೆ.

ಚಾರ್ಜಿಂಗ್ ನಿಲ್ದಾಣ, ಬ್ಯಾಟರಿ ವಿನಿಯಮ ಪರಿಹಾರಕ್ಕಾಗಿ ಕೈಜೋಡಿಸಿದ ಜಿಯೋ-ಬಿಪಿ ಮತ್ತು ಮಹೀಂದ್ರಾ ಗ್ರೂಪ್

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆಯು ಇನ್ನೂ ಆರಂಭಿಕ ಹಂತದಲ್ಲಿರುವುದರಿಂದ ಹೊಸ ಈ ಒಡಂಬಡಿಕೆಯು ಇವಿ ವಾಹನ ಉದ್ಯಮದಲ್ಲಿನ ಸಾಧ್ಯತೆಗಳನ್ನು ಅನ್ವೇಷಿಸಲು ಸಹಕಾರಿಯಾಗಲಿದ್ದು, ಹೊಸ ಯೋಜನೆಯು ಮುಂಬರುವ ದಿನಗಳಲ್ಲಿ ಹಲವಾರು ಹೊಸ ಬದಲಾವಣೆಗೆ ಕಾರಣವಾಗಲಿದೆ.

ಚಾರ್ಜಿಂಗ್ ನಿಲ್ದಾಣ, ಬ್ಯಾಟರಿ ವಿನಿಯಮ ಪರಿಹಾರಕ್ಕಾಗಿ ಕೈಜೋಡಿಸಿದ ಜಿಯೋ-ಬಿಪಿ ಮತ್ತು ಮಹೀಂದ್ರಾ ಗ್ರೂಪ್

ಇನ್ನು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಜಿಯೋ ಹಾಗೂ ಭಾರತ್ ಪೆಟ್ರೋಲಿಯಂ ಕಂಪನಿಯ ಫ್ಯೂಯಲ್ ಅಂಡ್ ಮೊಬಿಲಿಟಿ ಜಂಟಿ ಉದ್ಯಮಗಳು ಜೊತೆಗೂಡಿ ರಿಲಯನ್ಸ್ ಬಿಪಿ ಮೊಬಿಲಿಟಿ ಲಿಮಿಟೆಡ್ (RBML) ಅನ್ನು ಆರಂಭಿಸಿದ್ದು, ಈ ಸಹಭಾಗಿತ್ವದ ಮೊದಲ ಜಿಯೋ ಬಿಪಿ ಮೊಬಿಲಿಟಿ ನಿಲ್ದಾಣವನ್ನು ಮಹಾರಾಷ್ಟ್ರದ ನವಿ ಮುಂಬೈನಲ್ಲಿ ಆರಂಭಿಸಲಾಗಿದೆ.

ಚಾರ್ಜಿಂಗ್ ನಿಲ್ದಾಣ, ಬ್ಯಾಟರಿ ವಿನಿಯಮ ಪರಿಹಾರಕ್ಕಾಗಿ ಕೈಜೋಡಿಸಿದ ಜಿಯೋ-ಬಿಪಿ ಮತ್ತು ಮಹೀಂದ್ರಾ ಗ್ರೂಪ್

ಹೊಸ ಸಹಭಾಗಿತ್ವದ ಅಡಿಯಲ್ಲಿ ಗ್ರಾಹಕರು ಒಂದೇ ಸೂರಿನಡಿ ವಿವಿಧ ಇಂಧನಗಳ ಆಯ್ಕೆಗಳನ್ನು ಆಯ್ಕೆ ಮಾಡುವ ವಿಶ್ವ ದರ್ಜೆಯ ಸೇವೆ ಇದಾಗಿದ್ದು, ಹೊಸ ಸಹಭಾಗಿತ್ವ ಯೋಜನೆಯಡಿ ಅಸ್ತಿತ್ವದಲ್ಲಿರುವ 1,400ಕ್ಕೂ ಪೆಟ್ರೋಲ್ ಬಂಕ್ ಗಳನ್ನು ಜಿಯೋ - ಬಿಪಿ ಎಂದು ಮರುಬ್ರಾಂಡ್ ಮಾಡಲು ನಿರ್ಧರಿಸಲಾಗಿದೆ.

ಚಾರ್ಜಿಂಗ್ ನಿಲ್ದಾಣ, ಬ್ಯಾಟರಿ ವಿನಿಯಮ ಪರಿಹಾರಕ್ಕಾಗಿ ಕೈಜೋಡಿಸಿದ ಜಿಯೋ-ಬಿಪಿ ಮತ್ತು ಮಹೀಂದ್ರಾ ಗ್ರೂಪ್

ಇದರ ಜೊತೆಗೆ ಈ ಸಹಭಾಗಿತ್ವವು ಮುಂಬರುವ ದಿನಗಳಲ್ಲಿ ಹೊಸ ಸರಣಿಯ ಗ್ರಾಹಕ ಮೌಲ್ಯಗಳನ್ನು ಪ್ರಸ್ತುತಪಡಿಸಲಿದ್ದು, 2025 ರ ವೇಳೆಗೆ 5,500ಕ್ಕೂ ಹೆಚ್ಚು ಜಿಯೋ-ಬಿಪಿ ಹೊಸ ಮಾದರಿಯ ಇಂಧನ ಮಾರಾಟ ಮಳಿಗೆಗಳು ಕಾರ್ಯಾರಂಭ ನಡೆಸಲಿವೆ.

ಚಾರ್ಜಿಂಗ್ ನಿಲ್ದಾಣ, ಬ್ಯಾಟರಿ ವಿನಿಯಮ ಪರಿಹಾರಕ್ಕಾಗಿ ಕೈಜೋಡಿಸಿದ ಜಿಯೋ-ಬಿಪಿ ಮತ್ತು ಮಹೀಂದ್ರಾ ಗ್ರೂಪ್

ಹೊಸ ಮಾದರಿಯ ಪೆಟ್ರೋಲ್ ಬಂಕ್ ಗಳಲ್ಲಿ ಜಿಯೋ - ಬಿಪಿ ಕಂಪನಿಗಳು ಗ್ರಾಹಕರಿಗೆ ಇಂಧನ ಪೂರೈಕೆ ಸೇವೆಗಳೊಂದಿಗೆ, ಇವಿ ಚಾರ್ಜಿಂಗ್ ನಿಲ್ದಾಣಗಳ ಲಭ್ಯತೆ, ರೆಸ್ಟೊರೆಂಟ್ ಮತ್ತು ಸಣ್ಣ ಪ್ರಮಾಣದ ಶಾಪಿಂಗ್ ಸೇವೆಗಳನ್ನು ಒದಗಿಸಲಿವೆ.

ಚಾರ್ಜಿಂಗ್ ನಿಲ್ದಾಣ, ಬ್ಯಾಟರಿ ವಿನಿಯಮ ಪರಿಹಾರಕ್ಕಾಗಿ ಕೈಜೋಡಿಸಿದ ಜಿಯೋ-ಬಿಪಿ ಮತ್ತು ಮಹೀಂದ್ರಾ ಗ್ರೂಪ್

ಒಟ್ಟಿನಲ್ಲಿ ಭವಿಷ್ಯದಲ್ಲಿ ಕಡಿಮೆ ಕಾರ್ಬನ್ ಡೈ ಆಕ್ಸೈಡ್ ಪರಿಹಾರಗಳನ್ನು ಪರಿಚಯಿಸುವುದೇ ಈ ಯೋಜನೆಯ ಉದ್ದೇಶವಾಗಿದ್ದು, ಬಿಪಿ ಮೊಬಿಲಿಟಿ ಕೇಂದ್ರಗಳು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಸಂಯೋಜಕ ಇಂಧನವನ್ನು ನೀಡುತ್ತವೆ. ಈ ಇಂಧನವು ಅಂತರ್ ರಾಷ್ಟ್ರೀಯವಾಗಿ ಅಭಿವೃದ್ಧಿಪಡಿಸಲಾದ ಸಕ್ರಿಯ ತಂತ್ರಜ್ಞಾನವನ್ನು ಒಳಗೊಂಡಿದೆ. ಈ ತಂತ್ರಜ್ಞಾನವು ಎಂಜಿನ್ ಅನ್ನು ಸ್ವಚ್ಛವಾಗಿಡಲು ನೆರವಾಗುತ್ತದೆ ಹಾಗೂ ಎಂಜಿನ್'ನ ಪ್ರಮುಖ ಭಾಗಗಳಲ್ಲಿ ರಕ್ಷಣಾತ್ಮಕ ಪದರವನ್ನು ರೂಪಿಸುತ್ತದೆ.

Most Read Articles

Kannada
English summary
Jio bp and mahindra group sign mou for ev and low carbon solutions details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X