ಲಾಕ್‌ಡೌನ್ ಉಲ್ಲಂಘನೆ ಮಾಡಿರುವ ವಾಹನ ಮಾಲೀಕರಿಗೆ ಜೈಲು ಶಿಕ್ಷೆ ಫಿಕ್ಸ್

ದೇಶಾದ್ಯಂತ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳು ಸೋಂಕು ಹರಡುವಿಕೆಯನ್ನು ತಗ್ಗಿಸಲು ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ಸೋಂಕು ಹೆಚ್ಚಿರುವ ನಗರಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

ಲಾಕ್‌ಡೌನ್ ಉಲ್ಲಂಘನೆ ಮಾಡಿರುವ ವಾಹನ ಮಾಲೀಕರಿಗೆ ಎದುರಾಗಲಿದೆ ಕಠಿಣ ಕಾನೂನು ಹೋರಾಟ

ಹೆಚ್ಚುತ್ತಿರುವ ಕರೋನಾ ವೈರಸ್ ತಡೆಗಾಗಿ ಕೇಂದ್ರ ಸರ್ಕಾರದ ಸಲಹೆ ಮೇರೆಗೆ ಕರ್ನಾಟಕ ಸರ್ಕಾರವು ಕೂಡಾ ಹಲವಾರು ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಕಠಿಣ ನಿರ್ಬಂಧಗಳನ್ನು ಜಾರಿಗೆ ತಂದಿದ್ದು, ನಿಗದಿತ ಅವಧಿ ನಂತರ ಸಾರ್ವಜನಿಕ ಸಾರಿಗೆ ಸಂಚಾರಕ್ಕೆ ಬ್ರೇಕ್ ಹಾಕಲು ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.

ಲಾಕ್‌ಡೌನ್ ಉಲ್ಲಂಘನೆ ಮಾಡಿರುವ ವಾಹನ ಮಾಲೀಕರಿಗೆ ಎದುರಾಗಲಿದೆ ಕಠಿಣ ಕಾನೂನು ಹೋರಾಟ

ಅಗತ್ಯ ಸೇವೆಗಳಿಗಾಗಿ ಬಳಕೆಯಾಗುವ ವಾಹನ ಸಂಚಾರವನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ಮಾದರಿಯ ವಾಹನ ಸಂಚಾರವನ್ನು ಕಟ್ಟುನಿಟ್ಟಾಗಿ ಬಂದ್ ಮಾಡಲಾಗಿದ್ದು, ಕಠಿಣ ಕ್ರಮ ಜಾರಿ ನಡುವೆಯೂ ಖಾಸಗಿ ವಾಹನ ಮಾಲೀಕರು ನಿಯಮ ಉಲ್ಲಂಘಿಸುತ್ತಿದ್ದಾರೆ.

ಲಾಕ್‌ಡೌನ್ ಉಲ್ಲಂಘನೆ ಮಾಡಿರುವ ವಾಹನ ಮಾಲೀಕರಿಗೆ ಎದುರಾಗಲಿದೆ ಕಠಿಣ ಕಾನೂನು ಹೋರಾಟ

ಅಗತ್ಯ ಸೇವೆಗಳನ್ನು ಒದಗಿಸುವ ವಾಹನಗಳಿಗೆ, ಸರಕು ಸಾಗಣೆ ವಾಹನಗಳಿಗೆ ಮತ್ತು ಆರೋಗ್ಯ ಸೇವೆಯ ವಾಹನಗಳಿಗೆ ಮಾತ್ರವೇ ಅವಕಾಶ ನೀಡಿದ್ದರೂ ಸಾರ್ವಜನಿಕರು ಮಾತ್ರ ಅನಗತ್ಯವಾಗಿ ವಾಹನಗಳನ್ನು ರಸ್ತೆಗಿಳಿಸುತ್ತಿದ್ದಾರೆ.

ಲಾಕ್‌ಡೌನ್ ಉಲ್ಲಂಘನೆ ಮಾಡಿರುವ ವಾಹನ ಮಾಲೀಕರಿಗೆ ಎದುರಾಗಲಿದೆ ಕಠಿಣ ಕಾನೂನು ಹೋರಾಟ

ಕಠಿಣ ಕಾನೂನು ಕ್ರಮದ ಮುನ್ನೆಚ್ಚರಿಕೆಯ ನಡುವೆಯೂ ರಾಜ್ಯಾದ್ಯಂತ ದಿನಂಪ್ರತಿ ಸಾವಿರಾರು ವಾಹನಗಳನ್ನು ಪೊಲೀಸ್ ಇಲಾಖೆಯು ಜಪ್ತಿ ಮಾಡುತ್ತಿದ್ದು, ಜಪ್ತಿ ಮಾಡಿದ ವಾಹನಗಳ ಮಾಲೀಕರ ವಿರುದ್ದ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾಯ್ದೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ ಅಡಿ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ.

ಲಾಕ್‌ಡೌನ್ ಉಲ್ಲಂಘನೆ ಮಾಡಿರುವ ವಾಹನ ಮಾಲೀಕರಿಗೆ ಎದುರಾಗಲಿದೆ ಕಠಿಣ ಕಾನೂನು ಹೋರಾಟ

ಲಾಕ್‌ಡೌನ್ ಉಲ್ಲಂಘನೆ ಮಾಡಿದ ವಾಹನಗಳ ಮೇಲೆ ದಾಖಲಿಸಲಾಗುತ್ತಿರುವ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾಯ್ದೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ ಅಡಿಯ ಪ್ರಕರಣಗಳು ಸಾಮಾನ್ಯ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಕ್ಕಿಂತಲೂ ಹೆಚ್ಚು ಕಠಿಣವಾಗಿವೆ.

ಲಾಕ್‌ಡೌನ್ ಉಲ್ಲಂಘನೆ ಮಾಡಿರುವ ವಾಹನ ಮಾಲೀಕರಿಗೆ ಎದುರಾಗಲಿದೆ ಕಠಿಣ ಕಾನೂನು ಹೋರಾಟ

ಸಾಮಾನ್ಯ ಟ್ರಾಫಿಕ್ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಸ್ಥಳದಲ್ಲೇ ದಂಡ ಪಾವತಿಸಿ ನಿಯಮ ಉಲ್ಲಂಘನೆ ಪ್ರಕರಣ ಹಿಂಪಡೆಯಬಹುದಾಗಿದ್ದು, ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾಯ್ದೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ ಉಲ್ಲಂಘನೆಯ ಪ್ರಕರಣಗಳಿಗೆ ಕಡ್ಡಾಯವಾಗಿ ಕೋರ್ಟ್‌ನಲ್ಲೇ ಪ್ರಕರಣಗಳನ್ನು ಇತ್ಯರ್ಥ ಮಾಡಿಕೊಳ್ಳಬೇಕು.

ಲಾಕ್‌ಡೌನ್ ಉಲ್ಲಂಘನೆ ಮಾಡಿರುವ ವಾಹನ ಮಾಲೀಕರಿಗೆ ಎದುರಾಗಲಿದೆ ಕಠಿಣ ಕಾನೂನು ಹೋರಾಟ

ಇದಕ್ಕಾಗಿ ನೀವು ವಕೀಲರನ್ನು ನೇಮಕ ಮಾಡಿಕೊಂಡ ಕಾನೂನು ಹೋರಾಟ ಮಾಡಬೇಕಾಗುವುದಲ್ಲದೆ ನಿರ್ಬಂಧದ ಅವಧಿಯಲ್ಲಿ ವಾಹನವನ್ನು ಬಳಕೆ ಮಾಡಿದ್ದಕ್ಕೆ ಸೂಕ್ತ ಕಾರಣ ಮತ್ತು ದಾಖಲೆಗಳನ್ನು ಹಾಜರುಪಡಿಸಬೇಕು.

ಲಾಕ್‌ಡೌನ್ ಉಲ್ಲಂಘನೆ ಮಾಡಿರುವ ವಾಹನ ಮಾಲೀಕರಿಗೆ ಎದುರಾಗಲಿದೆ ಕಠಿಣ ಕಾನೂನು ಹೋರಾಟ

ಒಂದು ವೇಳೆ ಕೋರ್ಟ್ ವಿಚಾರಣೆಯಲ್ಲಿ ಸೂಕ್ತ ದಾಖಲೆ ಮತ್ತು ಕಾರಣವನ್ನು ನೀಡುವಲ್ಲಿ ವಿಫಲವಾದರೆ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾಯ್ದೆ ಅಡಿ ಕನಿಷ್ಠ 7 ವರ್ಷ ಶಿಕ್ಷೆ ಅನುಭವಿಸಬೇಕಾಗುತ್ತದೆ.

MOST READ: ಕರೋನಾ ಸೋಂಕಿತರಿಗಾಗಿ ಕಾರುಗಳನ್ನು ಮೊಬೈಲ್ ಆಸ್ಪತ್ರೆಗಳಾಗಿ ಬದಲಿಸಿದ ಯುವಕರು

ಲಾಕ್‌ಡೌನ್ ಉಲ್ಲಂಘನೆ ಮಾಡಿರುವ ವಾಹನ ಮಾಲೀಕರಿಗೆ ಎದುರಾಗಲಿದೆ ಕಠಿಣ ಕಾನೂನು ಹೋರಾಟ

ಇಷ್ಟು ದಿನ ಕಾಲ ಲಾಕ್‌ಡೌನ್ ಸಂದರ್ಭದಲ್ಲಿ ನಿಯಮ ಉಲ್ಲಂಘಿಸಿದ ವಾಹನ ಮಾಲೀಕರ ವಿರುದ್ದ ಕೇವಲ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಿ ದಂಡ ವಸೂಲಿ ಮಾಡಿ ಕೈಬಿಡುತ್ತಿದ್ದ ಪೊಲೀಸರು ಇದೀಗ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾಯ್ದೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ ಅಡಿ ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ.

ಲಾಕ್‌ಡೌನ್ ಉಲ್ಲಂಘನೆ ಮಾಡಿರುವ ವಾಹನ ಮಾಲೀಕರಿಗೆ ಎದುರಾಗಲಿದೆ ಕಠಿಣ ಕಾನೂನು ಹೋರಾಟ

ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾಯ್ದೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ ಅಡಿಯಲ್ಲಿ ನಿಯಮ ಉಲ್ಲಂಘಿಸುವ ವಾಹನ ಸವಾರರು ಸೆಷನ್ಸ್ ಕೋರ್ಟ್ ಮಟ್ಟದಲ್ಲಿ ಕಾನೂನು ಹೋರಾಟ ಮಾಡಬೇಕಲ್ಲದೆ ಪ್ರಕರಣ ಸಾಬೀತಾದರೆ ಜೈಲು ಶಿಕ್ಷೆ ತಪ್ಪಿದ್ದಲ್ಲ.

MOST READ: ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕಿನಲ್ಲಿ ದೇಶ ಸುತ್ತುತ್ತಿದ್ದ ವೃದ್ಧ ದಂಪತಿಯ ಬಲಿ ಪಡೆದ ಕರೋನಾ ವೈರಸ್

ಲಾಕ್‌ಡೌನ್ ಉಲ್ಲಂಘನೆ ಮಾಡಿರುವ ವಾಹನ ಮಾಲೀಕರಿಗೆ ಎದುರಾಗಲಿದೆ ಕಠಿಣ ಕಾನೂನು ಹೋರಾಟ

ಹಾಗೆಯೇ ಕೋರ್ಟ್ ವಿಚಾರಣೆ ಅವಧಿಯಲ್ಲಿ ಯಾವುದೇ ಕಾರಣಕ್ಕೂ ನಿಮ್ಮ ವಾಹನವನ್ನು ಮರುಮಾರಾಟ ಮಾಡುವಂತಿಲ್ಲ, ಮಾಡಿಫೈಗೊಳಿಸುವಂತಿಲ್ಲ ಇನ್ನೊಬ್ಬರ ಹೆಸರಿಗೆ ವರ್ಗಾವಣೆ ಮಾಡುವಂತಿಲ್ಲ ಎಂಬ ನಿಯಮಗಳಿದ್ದು, ಪ್ರಕರಣದ ವಿಚಾರಣೆಗೆ ಕನಿಷ್ಠ 2 ವರ್ಷ ಕಾಲಾವಕಾಶ ತೆಗೆದುಕೊಳ್ಳಬಹುದಾಗಿದೆ.

ಲಾಕ್‌ಡೌನ್ ಉಲ್ಲಂಘನೆ ಮಾಡಿರುವ ವಾಹನ ಮಾಲೀಕರಿಗೆ ಎದುರಾಗಲಿದೆ ಕಠಿಣ ಕಾನೂನು ಹೋರಾಟ

ಬೆಂಗಳೂರು ಮತ್ತು ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾಯ್ದೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ ಉಲ್ಲಂಘನೆ ಅಡಿಯಲ್ಲೇ ಸಾವಿರಾರು ಪ್ರಕರಣಗಳು ದಾಖಲಾಗಿದ್ದು, ವಾಹನ ಸವಾರರ ಮೇಲಿನ ಹಲ್ಲೆ ಪ್ರಕರಣಗಳಿಗೆ ಬ್ರೇಕ್ ಹಾಕಿದ ನಂತರ ಕಠಿಣ ಕಾನೂನು ಕ್ರಮಗಳನ್ನು ಜರುಗಿಸಲಾಗುತ್ತಿದೆ.

ಲಾಕ್‌ಡೌನ್ ಉಲ್ಲಂಘನೆ ಮಾಡಿರುವ ವಾಹನ ಮಾಲೀಕರಿಗೆ ಎದುರಾಗಲಿದೆ ಕಠಿಣ ಕಾನೂನು ಹೋರಾಟ

ಇದರಿಂದ ಅಗತ್ಯ ಸಂದರ್ಭಗಳನ್ನು ಹೊರತುಪಡಿಸಿ ನಿರ್ಬಂಧದ ವೇಳೆ ಅನಗತ್ಯವಾಗಿ ವಾಹನಗಳನ್ನು ಹೊರೆಗೆ ತೆಗೆದಲ್ಲಿ ಕಠಿಣ ಕ್ರಮಗಳನ್ನು ಎದುರಿಸಬೇಕಲ್ಲದೆ ದುಬಾರಿ ಮೊತ್ತದ ದಂಡದ ಜೊತೆಗೆ ಜೈಲು ಶಿಕ್ಷೆ ಅನುಭವಿಸಬೇಕಾಗಬಹುದು.

ಲಾಕ್‌ಡೌನ್ ಉಲ್ಲಂಘನೆ ಮಾಡಿರುವ ವಾಹನ ಮಾಲೀಕರಿಗೆ ಎದುರಾಗಲಿದೆ ಕಠಿಣ ಕಾನೂನು ಹೋರಾಟ

ಇನ್ನು 2020ರಲ್ಲಿಯೂ ಪೊಲೀಸರು ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿ ಹೊರ ಬಂದವರಿಂದ ಸಾವಿರಾರು ವಾಹನಗಳನ್ನು ವಶಕ್ಕೆ ಪಡೆದಿದ್ದರು. ವಾಹನಗಳ ದಾಖಲೆಗಳನ್ನು ಪರಿಶೀಲಿಸಿದ ನಂತರ ವಾಹನಗಳನ್ನು ಹಿಂದಿರುಗಿಸಲಾಗಿತ್ತು.

ಲಾಕ್‌ಡೌನ್ ಉಲ್ಲಂಘನೆ ಮಾಡಿರುವ ವಾಹನ ಮಾಲೀಕರಿಗೆ ಎದುರಾಗಲಿದೆ ಕಠಿಣ ಕಾನೂನು ಹೋರಾಟ

2020ರಲ್ಲಿ ಜಾರಿಗೊಳಿಸಲಾಗಿದ್ದ ಲಾಕ್‌ಡೌನ್'ನಲ್ಲಿ ಜನರ ಓಡಾಟದ ಮೇಲೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿತ್ತು. ಆದರೆ ಈ ಬಾರಿ ಬೆಳಿಗ್ಗೆ 6ರಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದ್ದರೂ ನಿಯಮ ಮೀರಿ ಹೊರಹೋಗುವ ವಾಹನ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ.

Most Read Articles

Kannada
English summary
Karnataka Police Book Lockdown Violators Under Epidemic Act and National Disaster Management act. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X