ಕಾರಿನೊಳಗೆ ಅಲಂಕಾರಿಕ ವಸ್ತುಗಳಿಡುವುದನ್ನು ನಿಷೇಧಿಸಿದ ಸರ್ಕಾರ

ಕಾರುಗಳ ಒಳಗೆ ಯಾವುದೇ ರೀತಿಯ ಅಲಂಕಾರಿಕ ವಸ್ತುಗಳನ್ನು ಇಡುವಂತಿಲ್ಲವೆಂದು ಕೇರಳ ಸರ್ಕಾರವು ಆದೇಶ ಹೊರಡಿಸಿದೆ. ಹೊಸ ಮಾರ್ಗಸೂಚಿಯ ಪ್ರಕಾರ ಚಾಲಕರ ವೀಕ್ಷಣೆಗೆ ಅಡ್ಡಿಯುಂಟುಮಾಡುವ ಅಲಂಕಾರಿಕ ವಸ್ತುಗಳನ್ನು ಕಾರಿನಲ್ಲಿ ಇಡುವುದನ್ನು ನಿಷೇಧಿಸಲಾಗಿದೆ.

ಕಾರಿನೊಳಗೆ ಅಲಂಕಾರಿಕ ವಸ್ತುಗಳಿಡುವುದನ್ನು ನಿಷೇಧಿಸಿದ ಸರ್ಕಾರ

ಈ ರೀತಿಯ ವಸ್ತುಗಳನ್ನು ಹೊಂದುವ ಕಾರುಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರವು ಸಾರಿಗೆ ಆಯುಕ್ತರಿಗೆ ಸೂಚನೆ ನೀಡಿದೆ. ಈಗ ಹಲವು ಕಾರುಗಳಲ್ಲಿ ಹಿಂಭಾಗದ ಮಿರರ್'ಗೆ ಅಡ್ಡಿ ಪಡಿಸುವಂತಹ ಕಲಾಕೃತಿ ಹಾಗೂ ಹೂಮಾಲೆಗಳನ್ನು ಇಡಲಾಗುತ್ತಿದೆ. ಇವುಗಳು ಚಾಲಕನ ನೋಟಕ್ಕೆ ಅಡ್ಡಿಪಡಿಸಿ ಅಪಘಾತಗಳಿಗೆ ಕಾರಣವಾಗುತ್ತಿವೆ ಎಂದು ಕೇರಳ ಸರ್ಕಾರ ಹೇಳಿದೆ.

ಕಾರಿನೊಳಗೆ ಅಲಂಕಾರಿಕ ವಸ್ತುಗಳಿಡುವುದನ್ನು ನಿಷೇಧಿಸಿದ ಸರ್ಕಾರ

ಇನ್ನು ಮುಂದೆ ಗೊಂಬೆ, ಕುಷನ್ ಹಾಗೂ ಇನ್ನಿತರ ಅಲಂಕಾರಿಕ ವಸ್ತುಗಳನ್ನು ಕಾರಿನ ಹಿಂದಿನ ಪಾರ್ಸೆಲ್ ಟ್ರೇನಲ್ಲಿ ಇಡುವುದನ್ನು ಕಾನೂನುಬಾಹಿರವೆಂದುಪರಿಗಣಿಸಲಾಗುತ್ತದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಕಾರಿನೊಳಗೆ ಅಲಂಕಾರಿಕ ವಸ್ತುಗಳಿಡುವುದನ್ನು ನಿಷೇಧಿಸಿದ ಸರ್ಕಾರ

ಕೇರಳ ಸಾರಿಗೆ ಇಲಾಖೆಯು ಈಗಾಗಲೇ ಹೈಕೋರ್ಟ್ ಮಾರ್ಗಸೂಚಿಗಳ ಅನುಸಾರವಾಗಿ ಸನ್ ಫಿಲ್ಮ್ ಬಳಸುವ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿದೆ.ಈಗ ಅಲಂಕಾರಿಕ ವಸ್ತುಗಳನ್ನು ಇಡುವುದನ್ನು ನಿಷೇಧಿಸಲಾಗಿದೆ.

ಕಾರಿನೊಳಗೆ ಅಲಂಕಾರಿಕ ವಸ್ತುಗಳಿಡುವುದನ್ನು ನಿಷೇಧಿಸಿದ ಸರ್ಕಾರ

ಯಾವುದೇ ಕಾರುಗಳಲ್ಲಿ ಅಳವಡಿಸಿರುವ ಸ್ಕ್ರೀನ್ ಹಾಗೂ ಸ್ಯಾನ್ ಫಿಲ್ಮ್ ಗಳನ್ನು ತೆಗೆದುಹಾಕುವಂತೆ ಕೇರಳ ಹೈಕೋರ್ಟ್ ಆದೇಶ ನೀಡಿದೆ. ಕಾರುಗಳಲ್ಲಿ ಇಡುವಅಲಂಕಾರಿಕ ವಸ್ತುಗಳು ಚಾಲಕನ ನೋಟಕ್ಕೆ ಅಡ್ಡಿಪಡಿಸುತ್ತವೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಕಾರಿನೊಳಗೆ ಅಲಂಕಾರಿಕ ವಸ್ತುಗಳಿಡುವುದನ್ನು ನಿಷೇಧಿಸಿದ ಸರ್ಕಾರ

ಈ ಅಲಂಕಾರಿಕ ವಸ್ತುಗಳಲ್ಲಿ ಹೆಚ್ಚಿನವು ಸಡಿಲವಾಗಿ ಅಚ್ಚು ಹಾಕಲ್ಪಟ್ಟಿರುತ್ತವೆ. ಅವುಗಳು ಸುರಕ್ಷಿತವಾಗಿರುವುದಿಲ್ಲ. ಅಪಘಾತ ಸಂಭವಿಸಿದಲ್ಲಿ ಈ ವಸ್ತುಗಳು ಅದರಲ್ಲೂ ಸಣ್ಣ ಆಟಿಕೆಗಳು ಸ್ಪೋಟಕಗಳಾಗಿ ಪರಿಣಮಿಸಬಹುದು.

ಕಾರಿನೊಳಗೆ ಅಲಂಕಾರಿಕ ವಸ್ತುಗಳಿಡುವುದನ್ನು ನಿಷೇಧಿಸಿದ ಸರ್ಕಾರ

ಇದರಿಂದ ಕಾರಿನಲ್ಲಿರುವ ಚಾಲಕ ಅಥವಾ ಪ್ರಯಾಣಿಕರಿಗೆ ಗಾಯಗಳಾಗಬಹುದು. ಮೊಬೈಲ್ ಫೋನ್ ಹಾಗೂ ಪರ್ಸ್'ಗಳನ್ನು ಸಹ ಕಾರಿನಲ್ಲಿ ಸುರಕ್ಷಿತವಾಗಿಡಬೇಕು. ಈ ಎಲ್ಲ ವಸ್ತುಗಳನ್ನು ಡ್ಯಾಶ್ ಬೋರ್ಡ್'ನಲ್ಲಿಡುವುದು ಒಳ್ಳೆಯದು.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಕಾರಿನೊಳಗೆ ಅಲಂಕಾರಿಕ ವಸ್ತುಗಳಿಡುವುದನ್ನು ನಿಷೇಧಿಸಿದ ಸರ್ಕಾರ

ಕಾರಿನ ಒಳಭಾಗವನ್ನು ಅಲಂಕರಿಸಲು ಬಯಸುವವರು ಚಾಲಕನ ನೋಟಕ್ಕೆ ಅಡ್ಡಿಪಡಿಸದಂತಹ ವಸ್ತುಗಳನ್ನು ಇಡಬಹುದು. ಚಿಕ್ಕ ಚಿಕ್ಕ ಅಲಂಕಾರಿಕ ವಸ್ತುಗಳನ್ನು ಕಾರಿನ ಡ್ಯಾಶ್‌ಬೋರ್ಡ್‌ ಮೇಲೆ ಇಡಬಹುದು.

ಕಾರಿನೊಳಗೆ ಅಲಂಕಾರಿಕ ವಸ್ತುಗಳಿಡುವುದನ್ನು ನಿಷೇಧಿಸಿದ ಸರ್ಕಾರ

ಸ್ಟಿಕ್ಕರ್‌ ಹಾಗೂ ಕಾಗದದ ಅಲಂಕಾರಗಳನ್ನು ಬಳಸಿ ಸೀಟ್ ಕವರ್'ಗಳನ್ನು ಅಲಂಕೃತಗೊಳಿಸಬಹುದು. ಇದರಿಂದ ಯಾವುದೇ ಸಮಸ್ಯೆಗಳಾಗುವುದಿಲ್ಲ. ಅಲಂಕಾರಿಕ ವಸ್ತುಗಳನ್ನು ತೆಗೆದು ಹಾಕಲು ತಿಳಿಸಿರುವ ಕೇರಳ ಸರ್ಕಾರದ ಕ್ರಮವು ನಿಜಕ್ಕೂ ಶ್ಲಾಘನೀಯ.

Most Read Articles

Kannada
English summary
Kerala government bans interior decoration in cars. Read in Kannada.
Story first published: Monday, March 8, 2021, 15:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X