Just In
- 10 hrs ago ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- 11 hrs ago Suzuki Access Electric: ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್ ಈ ವರ್ಷ ಬಿಡುಗಡೆ ಸಾಧ್ಯತೆ!
- 12 hrs ago Royal Enfield Himalayan ಸುಲಭವಾಗಿ ಖರೀದಿಸುವುದು ಹೇಗೆ?: ಇಲ್ಲಿದೆ ಡೌನ್ಪೇಮೆಂಟ್, EMI ಮಾಹಿತಿಗಳು!
- 13 hrs ago ಮಿಂಚಿನ ವೇಗಕ್ಕೆ ಸರಿಸಾಟಿಯಾಗಿ ಬೆಂಗಳೂರಿನ ಹೊಸ ಅಲ್ಟ್ರಾವೈಲೆಟ್ ಬೈಕ್ ಬಿಡುಗಡೆ: 323KM ರೇಂಜ್
Don't Miss!
- Movies ನೀಲಿ ಪ್ರಪಂಚದ ಕರಾಳ ಸತ್ಯವನ್ನ ಹೇಳಿದ ಲಾನಾ ರೋಡ್ಸ್
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಾರುಗಳ ಮಾರಾಟದಲ್ಲಿ ಹೊಸ ಬದಲಾವಣೆಗಾಗಿ ಡಿಜಿಟಲ್ ಶೋರೂಂ ತೆರೆದ ಕಿಯಾ ಇಂಡಿಯಾ
ಕಿಯಾ ಇಂಡಿಯಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿನ ಕಾರು ಮಾರಾಟದಲ್ಲಿ ಸಾಕಷ್ಟು ಬದಲಾವಣೆಗಳನ್ನು ಪರಿಚಯಿಸುತ್ತಿದ್ದು, ವಾಹನಗಳ ಖರೀದಿ ಪ್ರಕ್ರಿಯೆಗೆ ಆನ್ಲೈನ್ ಪ್ಲ್ಯಾಟ್ಫಾರ್ಮ್ ಬಳಕೆಗೆ ಹೆಚ್ಚಿನ ಒತ್ತು ನೀಡುತ್ತಿದೆ.
ಆಟೋ ಉದ್ಯಮವು ಕಳೆದ ಕೆಲ ವರ್ಷಗಳಲ್ಲಿ ಹಲವಾರು ಬದಲಾವಣೆಗಳಿಗೆ ಸಾಕ್ಷಿಯಾಗಿದ್ದು, ಹೊಸ ವಾಹನಗಳ ಮಾರಾಟವು ಪರಿಸ್ಥಿತಿಗೆ ಅನುಗುಣವಾಗಿ ಏರಿಳಿಕೆ ಆಗುತ್ತಿರುತ್ತದೆ. ಆದರೆ ಕರೋನಾ ವೈರಸ್ ಪರಿಣಾಮದಿಂದಾಗಿ ಹೊಸ ವಾಹನ ಮಾರಾಟಕ್ಕಾಗಿ ಆನ್ಲೈನ್ ಪ್ಲ್ಯಾಟ್ಫಾರ್ಮ್ಗಳು ಸಾಕಷ್ಟು ಬಳಕೆಯಾಗುತ್ತಿರುವುದು ಹೊಸ ಬೆಳವಣಿಗೆಗೆ ಕಾರಣವಾಗಿದೆ.
ಹೌದು, ಹೊಸ ವಾಹನ ಖರೀದಿಗಾಗಿ ಬಹುತೇಕ ಗ್ರಾಹಕರು ನೇರವಾಗಿ ಮಾರಾಟ ಮಳಿಗೆಗಳಿಗೆ ಭೇಟಿ ನೀಡುವುದು ಸಾಮಾನ್ಯವಾಗಿರುತ್ತದೆ. ಆದರೆ ಕರೋನಾ ವೈರಸ್ ಪರಿಣಾಮ ಗ್ರಾಹಕರನ್ನು ಮಳಿಗೆಗಳಿಗೆ ಭೇಟಿ ನೀಡದೆ ವಾಹನ ಖರೀದಿ ಪ್ರಕ್ರಿಯೆಯತ್ತ ಸೆಳೆಯಲು ಆಟೋ ಕಂಪನಿಗಳು ಮಾಡಿದ ಹೊಸ ಪ್ರಯತ್ನವು ಇದೀಗ ಸಾಕಷ್ಟು ಪ್ರಯೋಜಕಾರಿಯಾಗುತ್ತಿದೆ.
ವೈರಸ್ ಹರಡುವಿಕೆಯ ಸಂದರ್ಭದಲ್ಲಿ ಮಾರಾಟ ಮಳಿಗೆಗಳಿಗೆ ಭೇಟಿ ನೀಡದೆ ವಾಹನ ಪ್ರಕ್ರಿಯೆಯನ್ನು ಸರಳಗೊಳಿಸಲು ಆನ್ಲೈನ್ ಮಾರಾಟ ಮಳಿಗೆಗಳು ಸಾಕಷ್ಟು ಸಹಕಾರಿಯಾಗಿದ್ದು, ಬಳಕೆದಾರರ ಸಂಖ್ಯೆಯಲ್ಲೂ ಕೂಡಾ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ.
ಕೋವಿಡ್ 19 ಹರಡುವಿಕೆಗೂ ಮೊದಲೇ ಹಲವಾರು ಆಟೋ ಕಂಪನಿಗಳು ಆನ್ಲೈನ್ ಪ್ಲ್ಯಾಟ್ ತೆರೆದಿದ್ದರೂ ಬಳಕೆದಾರರ ಸಂಖ್ಯೆಯು ತೀರಾ ವಿರಳವಾಗಿತ್ತು. ಆದರೆ ಕರೋನಾ ವೈರಸ್ ಹೆಚ್ಚಳವಾಗುತ್ತಿದ್ದಂತೆ ಸಾಮಾಜಿಕ ಅಂತರ ಅಗತ್ಯವಾಯಿತೋ ಆಗಿನಿಂದ ವಾಹನ ಮಾರಾಟಕ್ಕಾಗಿ ಆನ್ಲೈನ್ ಪ್ಲ್ಯಾಟ್ಫಾರ್ಮ್ಗಳ ಬಳಕೆಯು ಹೆಚ್ಚಳವಾಯ್ತು.
ಆನ್ಲೈನ್ ಪ್ಲ್ಯಾಟ್ಫಾರ್ಮ್ನಲ್ಲಿ ವರ್ಚುವಲ್ ಶೋರೂಂಗಳ ಮೂಲಕ ವಾಹನ ಕುರಿತಾದ ಮಾಹಿತಿಯನ್ನು ಅತಿ ಸುಲಭವಾಗಿ ಪಡೆಯಬಹುದಾಗಿದ್ದು, ಆನ್ಲೈನ್ ಮೂಲಕವೇ ವಾಹನಗಳಲ್ಲಿನ ತಾಂತ್ರಿಕ ಅಂಶಗಳ ಆಯ್ಕೆಯ ಮೂಲಕ ನಾವು ಖರೀದಿ ಮಾಡುವ ವಾಹನವು ಹೀಗೆ ಇರಬೇಕು ಎಂಬುವುದನ್ನು ನಿರ್ಧರಿಸಬಹುದಾಗಿದೆ.
ವರ್ಚುವಲ್ ಶೋರೂಂ ಆಧಾರದ ಮೇಲೆಯೇ ಕಿಯಾ ಇಂಡಿಯಾ ಇದೀಗ ಡಿಜಿಟಲ್ ಶೋರೂಂ ತೆರೆದಿದ್ದು, ವಾಹನ ಮಾರಾಟ ಮಳಿಗೆಯಲ್ಲಿಯೇ ವಾಹನ ವೀಕ್ಷಣೆಗೆ ಬಯಸುವ ಗ್ರಾಹಕರಿಗೆ ಡಿಜಿಟಲ್ ಶೋರೂಂ ಸಹಕಾರಿಯಾಗಿದೆ.
ಡಿಜಿಟಲ್ ಶೋರೂಂನಲ್ಲಿ ಕಿಯಾ ಕಂಪನಿಯು 3ಡಿ ಪರದೆಗಳ ಮೂಲಕ ಹೊಸ ವಾಹನಗಳನ್ನು ಪ್ರದರ್ಶನಗೊಳಿಸಲಿದ್ದು, ಶೋರೂಂ ಭೇಟಿ ನೀಡುವ ಗ್ರಾಹಕರು 3ಡಿ ಪರದೆ ಮೂಲಕ ತಮ್ಮ ಇಷ್ಟದ ಕಾರು ಮಾದರಿಯ ಕುರಿತು ಸಂಪೂರ್ಣ ಮಾಹಿತಿ ಪಡೆಯಬಹುದಾಗಿದೆ.
ಹೊಸ ಡಿಜಿಟಲ್ ಶೋರೂಂಗಳ ಮತ್ತೊಂದು ಉಪಯೋಗವೆಂದರೆ ಸಾಮಾನ್ಯ ಶೋರೂಂಗಳನ್ನು ಬೇಕಿರುವಷ್ಟು ಸ್ಥಳಾವಕಾಶದ ಲಭ್ಯತೆ ಇದಕ್ಕೆ ಅವಶ್ಯವಿಲ್ಲ. ಅತಿ ಕಡಿಮೆ ಸ್ಥಳಾವಕಾಶದಲ್ಲಿಯೇ ಎಲ್ಲಾ ಕಾರುಗಳನ್ನು 3ಡಿ ಪರದೆಗಳ ಮೂಲಕ ಪ್ರದರ್ಶನಗೊಳಿಸಬಹುದಾಗಿದೆ.
ಹೊಸ ಡಿಜಿಟಲ್ ಶೋರೂಂಗಳ ಮತ್ತೊಂದು ಉಪಯೋಗವೆಂದರೆ ಸಾಮಾನ್ಯ ಶೋರೂಂಗಳನ್ನು ಬೇಕಿರುವಷ್ಟು ಸ್ಥಳಾವಕಾಶದ ಲಭ್ಯತೆ ಇದಕ್ಕೆ ಅವಶ್ಯವಿಲ್ಲ. ಅತಿ ಕಡಿಮೆ ಸ್ಥಳಾವಕಾಶದಲ್ಲಿಯೇ ಎಲ್ಲಾ ಕಾರುಗಳನ್ನು 3ಡಿ ಪರದೆಗಳ ಮೂಲಕ ಪ್ರದರ್ಶನಗೊಳಿಸಬಹುದಾಗಿದೆ.
ದೇಶಿಯ ಮಾರುಕಟ್ಟೆಯಲ್ಲಿ ಸದ್ಯ ಕಿಯಾ ಕಂಪನಿಯು ಸೆಲ್ಟೊಸ್, ಸೊನೆಟ್ ಮತ್ತು ಕಾರ್ನಿವಾಲ್ ಕಾರುಗಳನ್ನು ಮಾರಾಟ ಮಾಡುತ್ತಿದ್ದು, ಶೀಘ್ರದಲ್ಲೇ ಕಂಪನಿಯು ಹೊಸ ಎಂಪಿವಿ ಸೇರಿದಂತೆ ಎಲೆಕ್ಟ್ರಿಕ್ ಕಾರು ಮಾದರಿಯೊಂದನ್ನು ಬಿಡುಗಡೆ ಮಾಡುವ ಸಿದ್ದತೆಯಲ್ಲಿದೆ.