ವೀಡಿಯೊ ಕಾಲ್ ಮೂಲಕ ಕಾರು ಖರೀದಿಸಲು ನೆರವಾಗಲಿದೆ ಈ ಆ್ಯಪ್

ಕಿಯಾ ಡಿಜಿ ಕನೆಕ್ಟ್ ಎಂಬ ಹೊಸ ಇಂಟಿಗ್ರೇಟೆಡ್ ಸೊಲ್ಯುಷನ್ ಅಪ್ಲಿಕೇಷನ್ ಬಿಡುಗಡೆಗೊಳಿಸುವ ಮೂಲಕ ಕಿಯಾ ಮೋಟಾರ್ಸ್ ಇಂಡಿಯಾ ಕಂಪನಿಯು ತನ್ನ ಡಿಜಿಟಲ್ ಮಾರಾಟವನ್ನು ಇನ್ನಷ್ಟು ವಿಸ್ತರಿಸುವುದಾಗಿ ತಿಳಿಸಿದೆ.

ವೀಡಿಯೊ ಕಾಲ್ ಮೂಲಕ ಕಾರು ಖರೀದಿಸಲು ನೆರವಾಗಲಿದೆ ಈ ಆ್ಯಪ್

ಕಿಯಾ ಡಿಜಿ ಕನೆಕ್ಟ್ ಆಟೋ ಮೊಬೈಲ್ ಉದ್ಯಮದ ಮೊದಲ ವೀಡಿಯೊ ಆಧಾರಿತ ಲೈವ್ ಮಾರಾಟ ಅಪ್ಲಿಕೇಶನ್ ಆಗಿದೆ. ಕರೋನಾ ಸಾಂಕ್ರಾಮಿಕ ಕಾಲದಲ್ಲಿ ಗ್ರಾಹಕರು ಶೋ ರೂಂಗಳಿಗೆ ಭೇಟಿ ನೀಡುವುದಕ್ಕೆ ಸಾಧ್ಯವಿಲ್ಲದ ಕಾರಣ ಎಲ್ಲಾ ಆಟೋ ಮೊಬೈಲ್ ಕಂಪನಿಗಳು ಡಿಜಿಟಲ್ ಪ್ಲಾಟ್ ಫಾರಂ ಅನ್ನು ತೆರೆಯುತ್ತಿವೆ.

ವೀಡಿಯೊ ಕಾಲ್ ಮೂಲಕ ಕಾರು ಖರೀದಿಸಲು ನೆರವಾಗಲಿದೆ ಈ ಆ್ಯಪ್

ಭಾರತದಲ್ಲಿ ಕರೋನಾ ವೈರಸ್ ಎರಡನೇ ಅಲೆ ಆರ್ಭಟಿಸುತ್ತಿರುವುದರಿಂದ ಬಹುತೇಕ ರಾಜ್ಯಗಳಲ್ಲಿ ಲಾಕ್‌ಡೌನ್ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆಟೋ ಮೊಬೈಲ್ ಕಂಪನಿಗಳು ತಮ್ಮ ಶೋರೂಂಗಳನ್ನು ಮುಚ್ಚಿವೆ.

MOST READ: ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ವೀಡಿಯೊ ಕಾಲ್ ಮೂಲಕ ಕಾರು ಖರೀದಿಸಲು ನೆರವಾಗಲಿದೆ ಈ ಆ್ಯಪ್

ಕಿಯಾ ಡಿಜಿ ಕನೆಕ್ಟ್ ಅಪ್ಲಿಕೇಷನ್ ಮೂಲಕ ಕಿಯಾ ಮೋಟಾರ್ಸ್ ಗ್ರಾಹಕರು ತಮ್ಮ ಹತ್ತಿರದ ಮಾರಾಟಗಾರರೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗಲಿದೆ ಎಂದು ಕಿಯಾ ಮೋಟಾರ್ಸ್ ಇಂಡಿಯಾ ಹೇಳಿದೆ.

ವೀಡಿಯೊ ಕಾಲ್ ಮೂಲಕ ಕಾರು ಖರೀದಿಸಲು ನೆರವಾಗಲಿದೆ ಈ ಆ್ಯಪ್

ಈ ವೀಡಿಯೊ ಕಾನ್ಫರೆನ್ಸಿಂಗ್ ಪ್ಲಾಟ್‌ಫಾರಂ ಮೂಲಕ ವಾಹನ ಮಾರಾಟ ಸಲಹೆಗಾರರು ಕಿಯಾ ಕಾರುಗಳ ಬಗೆಗಿನ ಸಂಪೂರ್ಣ ವಿವರಗಳನ್ನು ಸಂಭಾವ್ಯ ಖರೀದಿದಾರರಿಗೆ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಒದಗಿಸಲಿದ್ದಾರೆ.

MOST READ: ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ವೀಡಿಯೊ ಕಾಲ್ ಮೂಲಕ ಕಾರು ಖರೀದಿಸಲು ನೆರವಾಗಲಿದೆ ಈ ಆ್ಯಪ್

ಗ್ರಾಹಕರು ವೀಡಿಯೊ ಕಾಲ್, ವೀಡಿಯೊ ಶೇರ್ ಮೂಲಕ 360 ಡಿಗ್ರಿ ವರ್ಚುವಲ್ ಅನುಭವ ಪಡೆಯಬಹುದು. ಬೇರೆ ಬೇರೆ ಸ್ಥಳಗಳಲ್ಲಿರುವ ಕುಟುಂಬ ಸದಸ್ಯರನ್ನು ಒಂದೇ ಕಾಲ್ ಮೂಲಕ ಸೇರಿಸಬಹುದು.

ವೀಡಿಯೊ ಕಾಲ್ ಮೂಲಕ ಕಾರು ಖರೀದಿಸಲು ನೆರವಾಗಲಿದೆ ಈ ಆ್ಯಪ್

ಈ ಸಾಂಕ್ರಾಮಿಕ ಕಾಲದಲ್ಲಿ ಗ್ರಾಹಕರ ಕಾರು ಖರೀದಿ ಅನುಭವವನ್ನು ಹೆಚ್ಚಿಸಲು ಈ ಫೀಚರ್ ನೆರವಾಗುತ್ತದೆ ಎಂದು ಕಿಯಾ ಇಂಡಿಯಾ ತಿಳಿಸಿದೆ. ಈ ಬಗ್ಗೆ ಕಿಯಾ ಇಂಡಿಯಾದ ಮುಖ್ಯ ಮಾರಾಟ ಹಾಗೂ ವ್ಯವಹಾರ ಕಾರ್ಯತಂತ್ರ ಕಾರ್ಯನಿರ್ವಾಹಕ ನಿರ್ದೇಶಕರಾದ ಟೇ ಜಿನ್ ಪಾರ್ಕ್ ಮಾಹಿತಿ ನೀಡಿದ್ದಾರೆ.

MOST READ: ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ವೀಡಿಯೊ ಕಾಲ್ ಮೂಲಕ ಕಾರು ಖರೀದಿಸಲು ನೆರವಾಗಲಿದೆ ಈ ಆ್ಯಪ್

ಆಟೋ ಮೊಬೈಲ್ ಉದ್ಯಮದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ಅಪ್ಲಿಕೇಷನ್ ನೀಡಲಾಗುತ್ತಿದೆ. ಈ ಮೂಲಕ ನಮ್ಮ ಗ್ರಾಹಕರಿಗೆ ಡಿಜಿಟಲ್ ಪ್ಲಾಟ್ ಫಾರಂ ಮೂಲಕ ವಿನೂತನ ಖರೀದಿ ಅನುಭವವನ್ನು ನೀಡಲಾಗುವುದು ಎಂದು ಟೇ ಜಿನ್ ಪಾರ್ಕ್ ಹೇಳಿದರು.

ವೀಡಿಯೊ ಕಾಲ್ ಮೂಲಕ ಕಾರು ಖರೀದಿಸಲು ನೆರವಾಗಲಿದೆ ಈ ಆ್ಯಪ್

ಭಾರತೀಯ ವಾಹನ ಉದ್ಯಮದಲ್ಲಿ ಡಿಜಿಟಲ್ ಕ್ರಾಂತಿಯನ್ನುಂಟು ಮಾಡಲು ನಾವು ನಿರ್ಧರಿಸಿದ್ದೇವೆ ಎಂದು ಅವರು ಹೇಳಿದರು. ಕರೋನಾ ಸಾಂಕ್ರಾಮಿಕಕ್ಕೂ ಮುನ್ನ ಈ ರೀತಿಯ ಯೋಜನೆಯೇ ಕಲ್ಪನೆಯಾಗಿತ್ತು.

MOST READ: ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ವೀಡಿಯೊ ಕಾಲ್ ಮೂಲಕ ಕಾರು ಖರೀದಿಸಲು ನೆರವಾಗಲಿದೆ ಈ ಆ್ಯಪ್

ಆದರೆ ಈಗ ಅದು ನಿಜವಾಗಿದೆ. ಸಂಭಾವ್ಯ ಖರೀದಿದಾರರನ್ನು ತಲುಪಲು ಬಿಡಿ ಭಾಗ ತಯಾರಕ ಕಂಪನಿಗಳು ಸಹ ಇದೇ ಮಾರ್ಗವನ್ನು ಹುಡುಕುತ್ತಿದ್ದವು. ಕಿಯಾ ಇಂಡಿಯಾ ಗ್ರಾಹಕರೊಂದಿಗೆ ಸಂಪರ್ಕ ಸಾಧಿಸಲು ಇತರ ಅಂಶಗಳತ್ತಲೂ ಗಮನ ಹರಿಸುತ್ತಿದೆ ಎಂದು ಟೇ ಜಿನ್ ಪಾರ್ಕ್ ಹೇಳಿದರು.

Most Read Articles

Kannada
English summary
KIA India launches video call based Kia Digi Connect app for sales consultation. Read in Kannada.
Story first published: Thursday, June 3, 2021, 20:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X