ಹೊಸ ಲೊಗೊದೊಂದಿಗೆ 2021ರ ಸೆಲ್ಟೊಸ್ ಕಾರಿನ ವಿಡಿಯೋ ಪ್ರಕಟಿಸಿದ ಕಿಯಾ ಇಂಡಿಯಾ

ಭಾರತದಲ್ಲಿ ಕಿಯಾ ಮೋಟಾರ್ಸ್ ಹೆಸರಿನಿಂದ ಕಿಯಾ ಇಂಡಿಯಾ ಎಂಬುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿರುವ ಕಿಯಾ ಕಂಪನಿಯು ತನ್ನ ಪ್ರಮುಖ ಕಾರುಗಳಲ್ಲಿ ಹೊಸ ವಿನ್ಯಾಸದ ಲೊಗೊ ಪರಿಚಯಿಸಿದ್ದು,ಶೀಘ್ರದಲ್ಲೇ ಹೊಸ ಲೊಗೊ ಹೊಂದಿರುವ ಸೆಲ್ಟೋಲ್ ಮತ್ತು ಸೊನೆಟ್ ಕಾರುಗಳು ಮಾರುಕಟ್ಟೆ ಪ್ರವೇಶಿಸಲಿವೆ.

ಹೊಸ ಲೊಗೊದೊಂದಿಗೆ 2021ರ ಸೆಲ್ಟೊಸ್ ಕಾರಿನ ವಿಡಿಯೋ ಪ್ರಕಟಿಸಿದ ಕಿಯಾ

ದಕ್ಷಿಣ ಕೊರಿಯಾದ ಜನಪ್ರಿಯ ಕಾರು ಉತ್ಪಾದನಾ ಕಂಪನಿಯಾಗಿರುವ ಕಿಯಾ ಭಾರತ ಸೇರಿ ವಿಶ್ವದ ಪ್ರಮುಖ ಮಾರುಕಟ್ಟೆಗಳಲ್ಲಿ ಕಾರು ಮಾರಾಟ ಜಾಲ ಹೊಂದಿದ್ದು, ಕಂಪನಿಯು ತನ್ನ ಕಾರು ಮಾದರಿಗಳಲ್ಲಿ ಹೊಸ ಬದಲಾವಣೆ ತರುವ ಉದ್ದೇಶದಿಂದ ವಿನೂತನ ಲೊಗೊ ಸೇರ್ಪಡೆಗೊಳಿಸಿದೆ. ಹೊಸ ಕಾರು ಉತ್ಪನ್ನಗಳಲ್ಲಿ ಲೊಗೊ ಬದಲಾವಣೆ ಕುರಿತು ಕಳೆದ ತಿಂಗಳ ಹಿಂದಷ್ಟೇ ಅಧಿಕೃತ ಮಾಹಿತಿ ಹಂಚಿಕೊಂಡಿದ್ದ ಕಿಯಾ ಕಂಪನಿಯು ಇದೀಗ ಹೊಸ ಲೊಗೊ ಹೊಂದಿರುವ ಸೆಲ್ಟೊಸ್ ಮತ್ತು ಸೊನೆಟ್ ಮಾದರಿಗಳನ್ನು ಭಾರತದಲ್ಲಿ ಅನಾವರಣಗೊಳಿಸಿದೆ.

ಹೊಸ ಲೊಗೊದೊಂದಿಗೆ 2021ರ ಸೆಲ್ಟೊಸ್ ಕಾರಿನ ವಿಡಿಯೋ ಪ್ರಕಟಿಸಿದ ಕಿಯಾ

ಭಾರತದಲ್ಲಿ ಒಟ್ಟು ಮೂರು ಕಾರು ಮಾದರಿಗಳ ಮಾರಾಟ ಹೊಂದಿರುವ ಕಿಯಾ ಕಂಪನಿಯು ಶೀಘ್ರದಲ್ಲೇ ಕಾರ್ನಿವಾಲ್ ಕಾರು ಮಾದರಿಯಲ್ಲೂ ಹೊಸ ಲೊಗೊ ನೀಡುವ ಸುಳಿವು ನೀಡಿದ್ದು, ಹೊಸ ಲೊಗೊ ಪಡೆದುಕೊಂಡಿರುವ ಸೆಲ್ಟೊಸ್ ಮತ್ತು ಸೊನೆಟ್ ಕಾರುಗಳು ಶೀಘ್ರದಲ್ಲೇ ಮಾರುಕಟ್ಟೆ ಪ್ರವೇಶಿಸಲಿವೆ.

ಹೊಸ ಲೊಗೊದೊಂದಿಗೆ 2021ರ ಸೆಲ್ಟೊಸ್ ಕಾರಿನ ವಿಡಿಯೋ ಪ್ರಕಟಿಸಿದ ಕಿಯಾ

ಹೊಸ ಲೊಗೊ ಅನಾವರಣದ ಜೊತೆಗೆ ಭಾರತದಲ್ಲಿ ಕಿಯಾ ಮೋಟಾರ್ಸ್ ಕಂಪನಿಯು ಕಿಯಾ ಇಂಡಿಯಾ ಕಂಪನಿಯಾಗಿ ಬದಲಾವಣೆಗೊಂಡಿದ್ದು, ಹೊಸ ಲೊಗೊ ಹೊಂದಿರುವ ಸೆಲ್ಟೊಸ್ ಮಾದರಿಯ ವಿಡಿಯೋಗಳನ್ನು ಹಂಚಿಕೊಳ್ಳಲಾಗಿದೆ.

ಸೆಲ್ಟೊಸ್ ಮತ್ತು ಹೊಸ ಲೊಗೊ ವಿನ್ಯಾಸವು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಲೊಗೊ ವಿನ್ಯಾಸಕ್ಕಿಂತಲೂ ಆಕರ್ಷಕವಾಗಿರಲಿದ್ದು, ಹಸ್ತಾಕ್ಷರ ಮಾದರಿಯಲ್ಲಿರುವ ಹೊಸ ಲೊಗೊ ವಿನ್ಯಾಸವು ಕಿಯಾ ಕಾರುಗಳಿಗೆ ಮತ್ತಷ್ಟು ಮೆರಗು ನೀಡಲಿದೆ. ಹೊಸ ಕಾರುಗಳ ಬ್ಯಾನೆಟ್, ಟೈಲ್‌ಗೆಟ್, ಅಲಾಯ್ ವೀಲ್ಹ್ ಮತ್ತು ಸ್ಟೀರಿಂಗ್ ವೀಲ್ಹ್ ಮೇಲೆ ಹೊಸ ಲೊಗೊ ವಿನ್ಯಾಸವು ಗಮನಸೆಳೆಯುತ್ತಿದ್ದು, ಹೊಸ ಲೊಗೊ ಪ್ರೇರಿತ ಸೆಲ್ಟೊಸ್ ಫೇಸ್‌ಲಿಫ್ಟ್ ಬಿಡುಗಡೆಯ ಯೋಜನೆಯಲ್ಲಿದ್ದ ಕಿಯಾ ಕಂಪನಿಗೆ ಕೋವಿಡ್ ಹಿನ್ನಡೆ ಉಂಟು ಮಾಡಿದೆ.

ಹೊಸ ಲೊಗೊದೊಂದಿಗೆ 2021ರ ಸೆಲ್ಟೊಸ್ ಕಾರಿನ ವಿಡಿಯೋ ಪ್ರಕಟಿಸಿದ ಕಿಯಾ

ಫೇಸ್‌ಲಿಫ್ಟ್ ಮೂಲಕ ಹೊಸ ಸೆಲ್ಟೊಸ್‌ದಲ್ಲಿ ಹಲವಾರು ಬದಲಾವಣೆಗಳನ್ನು ಪರಿಚಯಿಸುವ ತವಕದಲ್ಲಿದ್ದ ಕಿಯಾ ಮೋಟಾರ್ಸ್ ಕಂಪನಿಯ ಯೋಜನೆಗೆ ಕೋವಿಡ್ ಕಾರಣಕ್ಕೆ ಫೇಸ್‌ಲಿಫ್ಟ್ ಬಿಡುಗಡೆಯನ್ನು 2022ಕ್ಕೆ ಮುಂದೂಡಿಕೆ ಮಾಡಿ ಸದ್ಯ ಹೊಸ ಲೊಗೊ ಹೊಂದಿರುವ ಮಾದರಿಯು ಮುಂದಿನ ತಿಂಗಳಿನಿಂದ ಖರೀದಿಗೆ ಲಭ್ಯವಿರಲಿದೆ.

MOST READ: ಬಿಡುಗಡೆಯಾಗಲಿರುವ 4x4 ಡ್ರೈವ್ ಸಿಸ್ಟಂ ಸೌಲಭ್ಯವುಳ್ಳ ಟಾಪ್ 5 ಕಾರುಗಳಿವು..!

ಹೊಸ ಲೊಗೊದೊಂದಿಗೆ 2021ರ ಸೆಲ್ಟೊಸ್ ಕಾರಿನ ವಿಡಿಯೋ ಪ್ರಕಟಿಸಿದ ಕಿಯಾ

ಹೊಸ ಲೊಗೊ ಪ್ರೇರಿತ ಸೆಲ್ಟೊಸ್ ಮತ್ತು ಸೊನೆಟ್ ಮಾದರಿಗಳು ಸದ್ಯ ಮಾರುಕಟ್ಟೆಯಲ್ಲಿರುವ ಆವೃತ್ತಿಗಳಂತೆಯೇ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿದ್ದು, ಲೊಗೊ ಹೊರತುಪಡಿಸಿ ಯಾವುದೇ ಬದಲಾವಣೆ ತರಲಾಗಿಲ್ಲ.

ಹೊಸ ಲೊಗೊದೊಂದಿಗೆ 2021ರ ಸೆಲ್ಟೊಸ್ ಕಾರಿನ ವಿಡಿಯೋ ಪ್ರಕಟಿಸಿದ ಕಿಯಾ

ಸದ್ಯ ಮಾರುಕಟ್ಟೆಯಲ್ಲಿರುವ ಸೆಲ್ಟೊಸ್ ಕಾರು ಮಾದರಿಯು ಬಿಎಸ್-6 ನಿಯಮ ಅನುಸಾರ ಜಿಟಿ ಲೈನ್ ಕಾರುಗಳಲ್ಲಿ 1.4-ಲೀಟರ್ ಟಿ-ಜಿಡಿಐ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದರೆ ಸಾಮಾನ್ಯ ಮಾದರಿಯ ಟೆಕ್-ಲೈನ್ ಕಾರುಗಳು ಬಿಎಸ್-6 ಪ್ರೇರಿತ ನ್ಯಾಚುರಲಿ ಆಸ್ಪೆರೆಟೆಡ್ 1.5-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಸಿಆರ್‌ಡಿಐ ಡೀಸೆಲ್ ಎಂಜಿನ್ ಪಡೆದುಕೊಂಡಿವೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಹೊಸ ಲೊಗೊದೊಂದಿಗೆ 2021ರ ಸೆಲ್ಟೊಸ್ ಕಾರಿನ ವಿಡಿಯೋ ಪ್ರಕಟಿಸಿದ ಕಿಯಾ

ಸೆಲ್ಟೊಸ್ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.9.90 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.17.66 ಲಕ್ಷ ಬೆಲೆ ಹೊಂದಿದ್ದು, ಇತ್ತೀಚೆಗೆ ಕಂಪನಿಯು ಸೆಲ್ಟೊಸ್ ಮಾದರಿಯಲ್ಲಿ ಆ್ಯನಿವರ್ಸರಿ ಎಡಿಷನ್ ಬಿಡುಗಡೆಗೊಳಿಸುವ ಮೂಲಕ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುತ್ತಿದೆ.

Most Read Articles

Kannada
English summary
KIA Shares 2021 Seltos Teaser Video Ahead Of Launch In India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X