ಕರೋನಾ ಭೀತಿಯ ನಡುವೆ ಜೂನ್ ತಿಂಗಳಿನಲ್ಲಿ 15,015 ಕಾರುಗಳನ್ನು ಮಾರಾಟ ಮಾಡಿದ ಕಿಯಾ ಇಂಡಿಯಾ

ಜನಪ್ರಿಯ ಕಾರು ತಯಾರಕ ಕಂಪನಿಯಾದ ಕಿಯಾ ಇಂಡಿಯಾ 2021ರ ಜೂನ್ ತಿಂಗಳ ಕಾರು ಮಾರಾಟ ವರದಿಯನ್ನು ಪ್ರಕಟಿಸಿದೆ. ವರದಿಗಳ ಪ್ರಕಾರ, ಕಿಯಾ ಇಂಡಿಯಾವು ಕಳೆದ ತಿಂಗಳಿನಲ್ಲಿ 15,015 ಯುನಿಟ್‌ಗಳನ್ನು ಮಾರಾಟ ಮಾಡಿದೆ.

ಕರೋನಾ ಭೀತಿಯ ನಡುವೆ ಜೂನ್ ತಿಂಗಳಿನಲ್ಲಿ 15,015 ಕಾರುಗಳನ್ನು ಮಾರಾಟ ಮಾಡಿದ ಕಿಯಾ ಇಂಡಿಯಾ

ಕಳೆದ ವರ್ಷದ ಜೂನ್ ತಿಂಗಳ ಮಾರಾಟವನ್ನು ಈ ವರ್ಷದ ಜೂನ್ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.106 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ. ಕೊರಿಯಾದ ಬ್ರ್ಯಾಂಡ್ ಕಿಯಾ ಕಳೆದ ತಿಂಗಳು ಕ್ರಮವಾಗಿ ಕಿಯಾ ಸೆಲ್ಟೋಸ್, ಸೊನೆಟ್ ಮತ್ತು ಕಾರ್ನಿವಲ್‌ನ 8,549, 5,963 ಮತ್ತು 503 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಕರೋನಾ ಭೀತಿಯ ನಡುವೆ ಕಿಯಾ ಸೆಲ್ಟೋಸ್ ಕಾರು ಭರ್ಜರಿಯಾಗಿ ಮಾರಾಟವಾಗಿದೆ. ಇನ್ನು ಕಂಪನಿಯ ತನ್ನ ತಿಂಗಳಿನಿಂದ ತಿಂಗಳ ಮಾರಾಟವು ಶೇ.36 ರಷ್ಟು ಏರಿಕೆಯಾಗಿದೆ.

ಕರೋನಾ ಭೀತಿಯ ನಡುವೆ ಜೂನ್ ತಿಂಗಳಿನಲ್ಲಿ 15,015 ಕಾರುಗಳನ್ನು ಮಾರಾಟ ಮಾಡಿದ ಕಿಯಾ ಇಂಡಿಯಾ

ಕಾರು ಮಾರಾಟದ ಬಗ್ಗೆ ಪ್ರತಿಕ್ರಿಯಿಸಿದ ಕಿಯಾ ಇಂಡಿಯಾದ ಚೀಪ್ ಸೇಲ್ಸ್ ಮತ್ತು ವ್ಯವಹಾರ ಕಾರ್ಯತಂತ್ರ ಅಧಿಕಾರಿ ಟೇ-ಜಿನ್ ಪಾರ್ಕ್ ಅವರು ಮಾತನಾಡಿ, ಕಳೆದ ಕೆಲವು ವಾರಗಳಿಂದ ಗ್ರಾಹಕರ ಪ್ರತಿಕ್ರಿಯೆಯು ಸುಧಾರಣೆಯಾಗಿದೆ, ನಾವು ಭವಿಷ್ಯದ ಬಗ್ಗೆ ಆಶಾವಾದಿಯಾಗಿ ಮುಂದುವರಿಯುತ್ತೇವೆ.

ಕರೋನಾ ಭೀತಿಯ ನಡುವೆ ಜೂನ್ ತಿಂಗಳಿನಲ್ಲಿ 15,015 ಕಾರುಗಳನ್ನು ಮಾರಾಟ ಮಾಡಿದ ಕಿಯಾ ಇಂಡಿಯಾ

ಬ್ರ್ಯಾಂಡ್ ಗಮನಹರಿಸಿದೆ ಡಿಜಿ-ಕನೆಕ್ಟ್‌ನಂತಹ ಉನ್ನತ ಮಟ್ಟದ ಗ್ರಾಹಕ ಸೇವೆ ಮತ್ತು ಡಿಜಿಟಲ್ ಇಕೋಸಿಸ್ಟಂ ಬಲಪಡಿಸುವ ಯೋಜನೆಗಳನ್ನು ಒದಗಿಸುತ್ತೇವೆ, ನಾವು ಸದ್ಯದ ಪರಿಸ್ಥಿತಿಯನ್ನು ಅರಿತುಕೊಂಡಿದ್ದೇವೆ ಮತ್ತು ವಾರದಲ್ಲಿ ವಾರಕ್ಕೆ ನಮ್ಮ ಕಾರ್ಯಾಚರಣೆಗಳನ್ನು ಪರಿಶೀಲಿಸುತ್ತಿದ್ದೇವೆ. ನಮ್ಮ ವಾಹನಗಳಿಗೆ ಬೇಡಿಕೆಗೆ ಅನುಗುಣವಾಗಿ ಪೂರೈಸುವ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಹೇಳಿದರು.

ಕರೋನಾ ಭೀತಿಯ ನಡುವೆ ಜೂನ್ ತಿಂಗಳಿನಲ್ಲಿ 15,015 ಕಾರುಗಳನ್ನು ಮಾರಾಟ ಮಾಡಿದ ಕಿಯಾ ಇಂಡಿಯಾ

2021ರ ಜನವರಿ ಮತ್ತು ಜೂನ್ ತಿಂಗಳುಗಳ ನಡುವೆ ಕಿಯಾ ಕಂಪನಿಯು ದೇಶೀಯ ಮಾರುಕಟ್ಟೆಯಲ್ಲಿ ಸುಮಾರು 1 ಲಕ್ಷ ಯುನಿಟ್ ವಾಹನಗಳನ್ನು ಮಾರಾಟ ಮಾಡಿದರು. ಕಿಯಾ ಸೆಲ್ಟೋಸ್ ಒಟ್ಟಾರೆ ಮಾರಾಟದಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರೆಸಿದ್ದು, ಶೇ.50 ಕ್ಕಿಂತ ಹೆಚ್ಚು ಕೊಡುಗೆಯನ್ನು ನೀಡಿದೆ.

ಕರೋನಾ ಭೀತಿಯ ನಡುವೆ ಜೂನ್ ತಿಂಗಳಿನಲ್ಲಿ 15,015 ಕಾರುಗಳನ್ನು ಮಾರಾಟ ಮಾಡಿದ ಕಿಯಾ ಇಂಡಿಯಾ

ಕಂಪನಿಯು ಇತ್ತೀಚೆಗೆ ಸೆಲ್ಟೊಸ್ ಕಾರಿನ 2021ರ ಐಎಂಟಿ(ಇಂಟಲಿಜೆನ್ಸ್ ಮ್ಯಾನುವಲ್ ಟ್ರಾನ್‌ಮಿಷನ್) ಆವೃತ್ತಿಯ ಟಿವಿ ಜಾಹೀರಾತು ಬಿಡುಗಡೆಗೊಳಿಸಿತು. ಹೊಸ ಕಾರು ಮಾದರಿಯು ಬ್ರಾಂಡ್ ನ್ಯೂ ಲೊಗೊ ಸೇರಿದಂತೆ ಕೆಲವು ಪ್ರಮುಖ ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

ಕರೋನಾ ಭೀತಿಯ ನಡುವೆ ಜೂನ್ ತಿಂಗಳಿನಲ್ಲಿ 15,015 ಕಾರುಗಳನ್ನು ಮಾರಾಟ ಮಾಡಿದ ಕಿಯಾ ಇಂಡಿಯಾ

ಹೊಸ ಕಿಯಾ ಸೆಲ್ಟೋಸ್ ಕಾರಿನಲ್ಲಿ ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್‌ಗಳನ್ನು ಜೋಡಣೆ ಮಾಡಲಾಗಿದೆ. ಹೊಸ ಕಾರಿನಲ್ಲಿ ಕಂಪನಿಯು ಇತ್ತೀಚೆಗೆ ಕ್ಲಚ್ ಲೆಸ್ ವೈಶಿಷ್ಟ್ಯತೆ ಹೊಂದಿರುವ ಐಎಂಟಿ(ಇಂಟಲಿಜೆನ್ಸ್ ಮ್ಯಾನುವಲ್ ಟ್ರಾನ್‌ಮಿಷನ್) ಆವೃತ್ತಿಯನ್ನು ಹೊಸದಾಗಿ ಅಭಿವೃದ್ದಿಗೊಳಿಸಿದೆ. ಹೊಸ ಆವೃತ್ತಿಯು ಮ್ಯಾನುವಲ್ ಮಾದರಿಯಲ್ಲೇ ಉತ್ತಮ ಕಾರ್ಯನಿರ್ವಹಣೆ ಬಯಸುವ ಗ್ರಾಹಕರಿಗೆ ಹೊಸ ಆವೃತ್ತಿಯು ಆಕರ್ಷಕವಾಗಿದೆ.

ಕರೋನಾ ಭೀತಿಯ ನಡುವೆ ಜೂನ್ ತಿಂಗಳಿನಲ್ಲಿ 15,015 ಕಾರುಗಳನ್ನು ಮಾರಾಟ ಮಾಡಿದ ಕಿಯಾ ಇಂಡಿಯಾ

ಕಿಯಾ ಡಿಜಿ ಕನೆಕ್ಟ್ ಆಟೋ ಮೊಬೈಲ್ ಉದ್ಯಮದ ಮೊದಲ ವೀಡಿಯೊ ಆಧಾರಿತ ಲೈವ್ ಮಾರಾಟ ಅಪ್ಲಿಕೇಶನ್ ಆಗಿದೆ. ಕರೋನಾ ಸಾಂಕ್ರಾಮಿಕ ಕಾಲದಲ್ಲಿ ಗ್ರಾಹಕರು ಶೋ ರೂಂಗಳಿಗೆ ಭೇಟಿ ನೀಡುವುದಕ್ಕೆ ಸಾಧ್ಯವಿಲ್ಲದ ಕಾರಣ ಎಲ್ಲಾ ಆಟೋ ಮೊಬೈಲ್ ಕಂಪನಿಗಳು ಡಿಜಿಟಲ್ ಪ್ಲಾಟ್ ಫಾರಂ ಅನ್ನು ತೆರೆದಿದೆ.

ಕರೋನಾ ಭೀತಿಯ ನಡುವೆ ಜೂನ್ ತಿಂಗಳಿನಲ್ಲಿ 15,015 ಕಾರುಗಳನ್ನು ಮಾರಾಟ ಮಾಡಿದ ಕಿಯಾ ಇಂಡಿಯಾ

ಈ ವೀಡಿಯೊ ಕಾನ್ಫರೆನ್ಸಿಂಗ್ ಪ್ಲಾಟ್‌ಫಾರಂ ಮೂಲಕ ವಾಹನ ಮಾರಾಟ ಸಲಹೆಗಾರರು ಕಿಯಾ ಕಾರುಗಳ ಬಗೆಗಿನ ಸಂಪೂರ್ಣ ವಿವರಗಳನ್ನು ಸಂಭಾವ್ಯ ಖರೀದಿದಾರರಿಗೆ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಒದಗಿಸಲಿದ್ದಾರೆ. ಇನ್ನು ಕಿಯಾ ಇಂಡಿಯಾ ಈಗಾಗಲೇ ತನ್ನ ನೆಟ್‌ವರ್ಕ್ ಅನ್ನು ದೇಶಾದ್ಯಂತ 300 ಟಚ್ ಪಾಯಿಂಟ್‌ಗಳಿಗೆ ವಿಸ್ತರಿಸಿದೆ ಮತ್ತು ಟೈರ್ 4 ಮಾರುಕಟ್ಟೆಗಳಲ್ಲಿ ಹೆಚ್ಚಿನ ಶೋ ರೂಂಗಳನ್ನು ತೆರೆಯಲು ಕಿಯಾ ಯೋಜಿಸುತ್ತಿದೆ.

Most Read Articles

Kannada
English summary
Kia India Sells 15,015 Units In Domestic Market. Read In Kannada.
Story first published: Thursday, July 1, 2021, 20:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X