ಜುಲೈ ತಿಂಗಳಿನಲ್ಲಿ 15,016 ಕಾರುಗಳನ್ನು ಮಾರಾಟ ಮಾಡಿದ ಕಿಯಾ ಇಂಡಿಯಾ

ಜನಪ್ರಿಯ ಕಾರು ತಯಾರಕ ಕಂಪನಿಯಾದ ಕಿಯಾ ಇಂಡಿಯಾ 2021ರ ಜುಲೈ ತಿಂಗಳ ಕಾರು ಮಾರಾಟ ವರದಿಯನ್ನು ಪ್ರಕಟಿಸಿದೆ. ವರದಿಗಳ ಪ್ರಕಾರ, ಕಿಯಾ ಇಂಡಿಯಾ ಕಂಪನಿಯು ಕಳೆದ ತಿಂಗಳಿನಲ್ಲಿ ಒಟ್ಟು 15,016 ಯುನಿಟ್‌ಗಳನ್ನು ಮಾರಾಟ ಮಾಡಿದೆ.

ಜುಲೈ ತಿಂಗಳಿನಲ್ಲಿ 15,016 ಕಾರುಗಳನ್ನು ಮಾರಾಟ ಮಾಡಿದ ಕಿಯಾ ಇಂಡಿಯಾ

2020ರ ಜುಲೈ ತಿಂಗಳಿನಲ್ಲಿ ಕಿಯಾ ಕಂಪನಿಯು 8502 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.76 ರಷ್ಟು ಬೆಳವಣಿಗೆಯನ್ನು ಕಂಡಿದೆ. ಇನ್ನು ಈ ವರ್ಷದ ಜೂನ್ ತಿಂಗಳಿನಲ್ಲಿ ಕಿಯಾ ಕಂಪನಿಯು 15,015 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಕೇವಲ ಒಂದು ಯುನಿಟ್ ಮಾತ್ರ ಹೆಚ್ಚು ಮಾರಾಟವಾಗಿದೆ.

ಜುಲೈ ತಿಂಗಳಿನಲ್ಲಿ 15,016 ಕಾರುಗಳನ್ನು ಮಾರಾಟ ಮಾಡಿದ ಕಿಯಾ ಇಂಡಿಯಾ

ಕಳೆದ ತಿಂಗಳು ಕಿಯಾ ಸೊನೆಟ್ ಮತ್ತೊಮ್ಮೆ 7,675 ಯುನಿಟ್‌ಗಳಲ್ಲಿ ಕಂಪನಿಯ ಅತ್ಯುತ್ತಮ ಮಾರಾಟವಾದ ಮಾದರಿಯಾಗಿದೆ. ನಂತರ ಕಿಯಾ ಸೆಲ್ಟೋಸ್ ಮಾದರಿಯ 6,983 ಯುನಿಟ್‌ಗಳು ಮಾರಾಟವಾಗಿವೆ.

ಜುಲೈ ತಿಂಗಳಿನಲ್ಲಿ 15,016 ಕಾರುಗಳನ್ನು ಮಾರಾಟ ಮಾಡಿದ ಕಿಯಾ ಇಂಡಿಯಾ

ಇನ್ನು ಕಾರು ತಯಾರಕರ ಪ್ರಮುಖ ಮಾದರಿಯಾದ ಕಿಯಾ ಕಾರ್ನಿವಲ್‌ಗೆ ಸಂಬಂಧಿಸಿದಂತೆ, ಕಂಪನಿಯು ಭಾರತದಲ್ಲಿ ಪ್ರೀಮಿಯಂ ಎಂಪಿವಿಯ 358 ಯುನಿಟ್‌ಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದೆ.

ಜುಲೈ ತಿಂಗಳಿನಲ್ಲಿ 15,016 ಕಾರುಗಳನ್ನು ಮಾರಾಟ ಮಾಡಿದ ಕಿಯಾ ಇಂಡಿಯಾ

ಕಿಯಾ ಇಂಡಿಯಾ, ಸೇಲ್ಸ್ ಅಂಡ್ ಬಿಸಿನೆಸ್ ಸ್ಟ್ರಾಟಜಿ ಆಫೀಸರ್ ಟೇ-ಜಿನ್ ಪಾರ್ಕ್ ಅವರು ಮಾತನಾಡಿ, ಈ ಕಠಿಣ ಸಮಯದಲ್ಲಿ, ನಮ್ಮ ತಂಡಗಳು ಮತ್ತು ಪಾಲುದಾರರ ಅವಿರತ ಪ್ರಯತ್ನಗಳು ಕಿಯಾ ಇಂಡಿಯಾವನ್ನು ಆರೋಗ್ಯಕರ ಮಾರಾಟದ ವೇಗವನ್ನು ಸಾಧಿಸಲು ಸಹಾಯವಾಗಿದೆ.

ಜುಲೈ ತಿಂಗಳಿನಲ್ಲಿ 15,016 ಕಾರುಗಳನ್ನು ಮಾರಾಟ ಮಾಡಿದ ಕಿಯಾ ಇಂಡಿಯಾ

2021ರಲ್ಲಿ ದೇಶಾದ್ಯಂತ ಕೋವಿಡ್ -19 ನಿರ್ಬಂಧಗಳು ಮತ್ತು ಲಸಿಕೆ ಹಾಕುವಿಕೆಯನ್ನು ಹೆಚ್ಚಿಸುವ ಮೂಲಕ ವೈಯಕ್ತಿಕ ಚಲನಶೀಲತೆಯ ಬೇಡಿಕೆಯು ಭವಿಷ್ಯದಲ್ಲಿ ಏರಿಕೆಯಾಗಲಿದೆ ಎಂದು ನಾವು ಆಶಾವಾದಿಗಳಾಗಿದ್ದೇವೆ. ಮುಂಬರುವ ವಾರಗಳಲ್ಲಿ ಮತ್ತು ನಾವು ನಮ್ಮ ಗ್ರಾಹಕರಿಗೆ ಚಲನಶೀಲತೆಯನ್ನು ಹೆಚ್ಚು ಲಭ್ಯವಾಗುವಂತೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು,

ಜುಲೈ ತಿಂಗಳಿನಲ್ಲಿ 15,016 ಕಾರುಗಳನ್ನು ಮಾರಾಟ ಮಾಡಿದ ಕಿಯಾ ಇಂಡಿಯಾ

ಜುಲೈ 2021 ರಲ್ಲಿ ಕಿಯೋ ಇಂಡಿಯಾ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ಸ್ ಫೆಡರೇಶನ್ ಅಥವಾ FADA ಇಂಡಿಯಾ, ಪ್ರೀಮನ್ ಏಷಿಯಾ ಸಹಯೋಗದೊಂದಿಗೆ ನಡೆಸಿದ ಡೀಲರ್ ತೃಪ್ತಿ ಅಧ್ಯಯನ 2021 ರಲ್ಲಿ ಅಗ್ರಸ್ಥಾನ ಪಡೆದಿದೆ. ಕಿಯಾ ಕಂಪನಿಯು 1000 ಕ್ಕೆ 879 ಅಂಕಗಳನ್ನು ಗಳಿಸಿದರು,

ಜುಲೈ ತಿಂಗಳಿನಲ್ಲಿ 15,016 ಕಾರುಗಳನ್ನು ಮಾರಾಟ ಮಾಡಿದ ಕಿಯಾ ಇಂಡಿಯಾ

ಕರೋನಾ ವೈರಸ್ ಪರಿಣಾಮ ಗ್ರಾಹಕರನ್ನು ಮಳಿಗೆಗಳಿಗೆ ಭೇಟಿ ನೀಡದೆ ವಾಹನ ಖರೀದಿ ಪ್ರಕ್ರಿಯೆಯತ್ತ ಸೆಳೆಯಲು ಆಟೋ ಕಂಪನಿಗಳು ಮಾಡಿದ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ಗಳು ಇದೀಗ ಸಾಕಷ್ಟು ಪ್ರಯೋಜಕಾರಿಯಾಗುತ್ತಿದೆ. ವರ್ಚುವಲ್ ಶೋರೂಂ ಆಧಾರದ ಮೇಲೆಯೇ ಕಿಯಾ ಇಂಡಿಯಾ ಡಿಜಿಟಲ್ ಶೋರೂಂ ತೆರೆದಿದೆ.

ಜುಲೈ ತಿಂಗಳಿನಲ್ಲಿ 15,016 ಕಾರುಗಳನ್ನು ಮಾರಾಟ ಮಾಡಿದ ಕಿಯಾ ಇಂಡಿಯಾ

ವಾಹನ ಮಾರಾಟ ಮಳಿಗೆಯಲ್ಲಿಯೇ ವಾಹನ ವೀಕ್ಷಣೆಗೆ ಬಯಸುವ ಗ್ರಾಹಕರಿಗೆ ಡಿಜಿಟಲ್ ಶೋರೂಂ ಸಹಕಾರಿಯಾಗಿದೆ. ಡಿಜಿಟಲ್ ಶೋರೂಂನಲ್ಲಿ ಕಿಯಾ ಕಂಪನಿಯು 3ಡಿ ಡಿಸ್ ಪ್ಲೇ ಮೂಲಕ ಹೊಸ ವಾಹನಗಳನ್ನು ಪ್ರದರ್ಶನಗೊಳಿಸಲಿದ್ದು, ಶೋರೂಂ ಭೇಟಿ ನೀಡುವ ಗ್ರಾಹಕರು 3ಡಿ ಡಿಸ್ ಪ್ಲೇ ಮೂಲಕ ತಮ್ಮ ಇಷ್ಟದ ಕಾರು ಮಾದರಿಯ ಕುರಿತು ಸಂಪೂರ್ಣ ಮಾಹಿತಿ ಪಡೆಯಬಹುದಾಗಿದೆ.

ಜುಲೈ ತಿಂಗಳಿನಲ್ಲಿ 15,016 ಕಾರುಗಳನ್ನು ಮಾರಾಟ ಮಾಡಿದ ಕಿಯಾ ಇಂಡಿಯಾ

ಭಾರತೀಯ ಮಾರುಕಟ್ಟೆಯಲ್ಲಿ ಸದ್ಯ ಕಿಯಾ ಕಂಪನಿಯು ಸೆಲ್ಟೊಸ್, ಸೊನೆಟ್ ಮತ್ತು ಕಾರ್ನಿವಾಲ್ ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಶೀಘ್ರದಲ್ಲೇ ಕಂಪನಿಯು ಹೊಸ ಎಂಪಿವಿ ಸೇರಿದಂತೆ ಎಲೆಕ್ಟ್ರಿಕ್ ಕಾರು ಮಾದರಿಯೊಂದನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಇದರ ಮೂಲಕ ಮಾರಾಟದಲ್ಲಿ ಮತ್ತಷ್ಟು ಬೆಳವಣಿಗೆಯನ್ನು ಸಾಧಿಸಲು ಪ್ರಯತ್ನಿಸುತ್ತಿದೆ.

Most Read Articles

Kannada
English summary
Kia India Sold 15,016 Units In July 2021. Read In Kannada.
Story first published: Monday, August 2, 2021, 20:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X