ಕಾರ್ ಸಬ್‌ಸ್ಕ್ರೈಬ್ ಆರಂಭಿಸಲು ಸಿದ್ದವಾದ ಕಿಯಾ ಇಂಡಿಯಾ ಕಂಪನಿ

ಕೋವಿಡ್ ಪರಿಣಾಮ ಉದ್ಯಮ ವ್ಯವಹಾರಗಳಲ್ಲಿ ಸಾಕಷ್ಟು ಹೊಸ ಬದಲಾವಣೆಗಳನ್ನು ಪರಿಚಯಿಸಿರುವ ಆಟೋ ಕಂಪನಿಗಳು ಪರಿಸ್ಥಿತಿಗೆ ಅನುಗುಣವಾಗಿ ವಿವಿಧ ವಾಹನಗಳ ಮೇಲೆ ಲೀಸ್ ಆಯ್ಕೆಯನ್ನು ಹೆಚ್ಚಿಸುತ್ತಿದ್ದು, ಕಿಯಾ ಇಂಡಿಯಾ ಕಂಪನಿಯು ಕೂಡಾ ತನ್ನ ಪ್ರಮುಖ ಕಾರು ಮಾದರಿಗಳ ಮೇಲೆ ವಿವಿಧ ಕಾರ್ ರೆಂಟಲ್ ಕಂಪನಿಗಳೊಂದಿಗೆ ಜೊತೆಗೂಡಿ ಲೀಸ್ ಆಯ್ಕೆ ನೀಡಲು ಸಿದ್ದವಾಗಿದೆ.

ಕಾರ್ ಸಬ್‌ಸ್ಕ್ರೈಬ್ ಆರಂಭಿಸಲು ಸಿದ್ದವಾದ ಕಿಯಾ ಇಂಡಿಯಾ ಕಂಪನಿ

ಆಟೋ ಕಂಪನಿಗಳಿಗೆ ಕೋವಿಡ್‌ನಿಂದಾಗುತ್ತಿರುವ ಆರ್ಥಿಕ ಸಂಕಷ್ಟದಿಂದ ಹೊರಬರಲು ಕಾರ್ ಸಬ್‌ಸ್ಕೈಬ್ ಯೋಜನೆಗಳು ಸಾಕಷ್ಟು ಸಹಕಾರಿಯಾಗುತ್ತಿದ್ದು, ಕಿಯಾ ಇಂಡಿಯಾ ಕಂಪನಿಯು ಕೂಡಾ ತನ್ನ ತನ್ನ ಪ್ರಮುಖ ಕಾರು ಮಾದರಿಯನ್ನು ವಿವಿಧ ಕಾರ್ ರೆಂಟಲ್‌ ಕಂಪನಿಗಳಲ್ಲಿ ಆಸಕ್ತ ಗ್ರಾಹಕರಿಗೆ ಸಬ್‌ಸ್ಕ್ರೈಬ್ ಆಯ್ಕೆ ಪರಿಚಯಿಸುತ್ತಿದೆ. ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಗ್ರಾಹಕರು ಹೊಸ ವಾಹನಗಳ ಖರೀದಿಗೆ ಬದಲು ತಾತ್ಕಲಿಕವಾಗಿ ಸೆಲ್ಫ್ ಡ್ರೈವ್ ಲೀಸ್‌ ವಾಹನಗಳ ಮಾಲೀಕತ್ವವನ್ನು ಪಡೆದುಕೊಳ್ಳಲು ಮುಂದಾಗುತ್ತಿದ್ದು, ಈ ನಿಟ್ಟಿನಲ್ಲಿ ಆಸಕ್ತಿ ವಹಿಸಿರುವ ಪ್ರಮುಖ ಕಾರು ಕಂಪನಿಗಳು ಲೀಸ್ ಕಾರುಗಳ ಸಂಖ್ಯೆಯನ್ನು ಹೆಚ್ಚಿಸುತ್ತಿವೆ.

ಕಾರ್ ಸಬ್‌ಸ್ಕ್ರೈಬ್ ಆರಂಭಿಸಲು ಸಿದ್ದವಾದ ಕಿಯಾ ಇಂಡಿಯಾ ಕಂಪನಿ

ಗ್ರಾಹಕರು ಹೊಸ ಕಾರು ಮಾದರಿಯನ್ನು ಪ್ರತಿ ತಿಂಗಳು ಲೀಸ್ ದರದ ಮೇಲೆ 12, 24, 36 ತಿಂಗಳ ಅವಧಿಗೆ ಮಾಲೀಕತ್ವ ಪಡೆದುಕೊಳ್ಳಬಹುದಾಗಿದ್ದು, ಕಾರುಗಳು ಮತ್ತು ವೆರಿಯೆಂಟ್‌ಗಳಿಗೆ ಅನುಗುಣವಾಗಿ ಪ್ರತಿ ತಿಂಗಳ ಲೀಸ್ ದರ ಅನ್ವಯವಾಗುತ್ತದೆ.

ಕಾರ್ ಸಬ್‌ಸ್ಕ್ರೈಬ್ ಆರಂಭಿಸಲು ಸಿದ್ದವಾದ ಕಿಯಾ ಇಂಡಿಯಾ ಕಂಪನಿ

ಲೀಸ್ ಪಡೆದ ಕಾರುಗಳ ಚಂದಾ ದರವನ್ನು ಪ್ರತಿ ತಿಂಗಳು ಪಾವತಿಸಬೇಕಿರುವ ಗ್ರಾಹಕರ ತಮ್ಮ ಆದ್ಯತೆ ಮೇರೆಗೆ ಕಾರುಗಳನ್ನು 12 ರಿಂದ 24, 36 ತಿಂಗಳಿಗೆ ಲೀಸ್ ಪಡೆದುಕೊಳ್ಳಬಹುದಾಗಿದ್ದು, ಲೀಸ್ ಮೊತ್ತದಲ್ಲೇ ಕಾರಿನ ನಿರ್ವಹಣಾ ವೆಚ್ಚ, ಪಾಲಿಸಿ ಶುಲ್ಕಗಳು ಒಳಗೊಂಡಿರುತ್ತವೆ.

ಕಾರ್ ಸಬ್‌ಸ್ಕ್ರೈಬ್ ಆರಂಭಿಸಲು ಸಿದ್ದವಾದ ಕಿಯಾ ಇಂಡಿಯಾ ಕಂಪನಿ

ಲೀಸ್‌ನಲ್ಲಿ ನೀಡಲಾಗುವ ಪ್ರತಿ ಕಾರು ಮಾದರಿಯು ಸಹ ಹೊಸ ಕಾರು ಆವೃತ್ತಿಯಾಗಿದ್ದು, ಮಾಲೀಕ್ವದ ಸಂದರ್ಭದಲ್ಲಿ ಸಾಮಾನ್ಯ ತಾಂತ್ರಿಕ ಅಂಶಗಳ ಸಮಸ್ಯೆಗಳನ್ನು ಹೊರತುಪಡಿಸಿ ತಪ್ಪು ಚಾಲನೆಯಿಂದಾಗುವ ಅಪಘಾತ, ಸಂಚಾರಿ ನಿಯಮ ಉಲ್ಲಂಘನೆಗಳಿಗೆ ಚಂದಾದಾರರೇ ಹೊಣೆಯಾಗಿರುತ್ತಾರೆ. ಲೀಸ್ ಹೊಂದಿರುವ ಕಾರುಗಳಿಗೆ ಗರಿಷ್ಠ ಸುರಕ್ಷತೆ ನೀಡುವ ಸಲುವಾಗಿ ಕಂಪನಿಯು ಬಂಪರ್ ಟು ಬಂಪರ್ ಸುರಕ್ಷೆಗೆಗಾಗಿ ದುಬಾರಿ ಬೆಲೆಯ ಸಮಗ್ರ ವಿಮಾ ಪಾಲಿಸಿ ಹೊಂದಿರಲಿದ್ದು, ಲೀಸ್ ಸಂದರ್ಭದಲ್ಲಿ ಕಾರುಗಳ ಚಾಲನೆಗೆ ಪ್ರತಿ ತಿಂಗಳು ಇಂತಿಷ್ಟು ಕಿ.ಮೀ ನಿಗದಿಪಡಿಸಲಾಗಿರುತ್ತದೆ.

ಕಾರ್ ಸಬ್‌ಸ್ಕ್ರೈಬ್ ಆರಂಭಿಸಲು ಸಿದ್ದವಾದ ಕಿಯಾ ಇಂಡಿಯಾ ಕಂಪನಿ

ಲೀಸ್‌ಗೆ ಪಡೆದ ಕಾರುಗಳು ವಾರ್ಷಿಕವಾಗಿ ನಿಗದಿಪಡಿಸಿದ ಕಿ.ಮೀಗಿಂತಲೂ ಹೆಚ್ಚು ಸಂಚರಿಸಿದ್ದಲ್ಲಿ ಪ್ರತಿ ಕಿ.ಮೀ ಇಂತಿಷ್ಟು ಹೆಚ್ಚುವರಿ ಪಾವತಿ ಮಾಡಬೇಕಿದ್ದು, ತುರ್ತು ಸಂದರ್ಭಗಳಲ್ಲಿ ರೋಡ್ ಅಸಿಸ್ಟ್ ಸೌಲಭ್ಯಗಳನ್ನು ಸಹ ಒದಗಿಸಲಾಗುತ್ತಿದೆ.

MOST READ: ಬಿಡುಗಡೆಯಾಗಲಿರುವ 4x4 ಡ್ರೈವ್ ಸಿಸ್ಟಂ ಸೌಲಭ್ಯವುಳ್ಳ ಟಾಪ್ 5 ಕಾರುಗಳಿವು..!

ಕಾರ್ ಸಬ್‌ಸ್ಕ್ರೈಬ್ ಆರಂಭಿಸಲು ಸಿದ್ದವಾದ ಕಿಯಾ ಇಂಡಿಯಾ ಕಂಪನಿ

ಇದು ಹೊಸ ಕಾರು ಖರೀದಿಯಿಂದಾಗುವ ಆರ್ಥಿಕ ಹೊರೆಗಿಂತಲೂ ತುಸು ಭಿನ್ನವಾಗಿದ್ದು, ಚಂದಾದಾರಿಕೆಯ ನಂತರ ಬಳಕೆಯ ಅವಶ್ಯಕತೆಯಿಲ್ಲ ಎಂದಾದಲ್ಲಿ ವಾಪಸ್ ನೀಡಬಹುದಾದ ಆಯ್ಕೆಯಿರುತ್ತದೆ. ಆದರೆ ಹೊಸ ವಾಹನ ಖರೀದಿ ನಂತರ ಆರ್ಥಿಕ ಹೊರೆಯಾದರೂ ನೀವು ಅದನ್ನು ನಿರ್ವಹಣೆ ಮಾಡಲೇಬೇಕಾದ ಅನಿವಾರ್ಯತೆಯಿರುತ್ತದೆ.

ಕಾರ್ ಸಬ್‌ಸ್ಕ್ರೈಬ್ ಆರಂಭಿಸಲು ಸಿದ್ದವಾದ ಕಿಯಾ ಇಂಡಿಯಾ ಕಂಪನಿ

ಹೀಗಾಗಿ ಲೀಸ್ ಕಾರುಗಳು ಅವಶ್ಯಕ ಸಂದರ್ಭಗಳಲ್ಲಿ ಸಾಕಷ್ಟು ಅನುಕೂಲ ಎನ್ನಬಹುದಾಗಿದ್ದು, ಗ್ರಾಹಕರು ವಿವಿಧ ಕಂಪನಿಗಳ ಪಾಲಿಸಿಗಳಿಗೆ ಅನುಗುಣವಾಗಿ ಗ್ರಾಹಕರು ಕನಿಷ್ಠ 12 ಕಾಲ ಕಾರ್ ಸಬ್‌ಸ್ಕ್ರೈಬ್ ಪಡೆದುದುಕೊಳ್ಳಲೇಬೇಕಾಗುತ್ತದೆ.

MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ಕಾರ್ ಸಬ್‌ಸ್ಕ್ರೈಬ್ ಆರಂಭಿಸಲು ಸಿದ್ದವಾದ ಕಿಯಾ ಇಂಡಿಯಾ ಕಂಪನಿ

ದೇಶಾದ್ಯಂತ ಪ್ರಮುಖ ಮಾಹಾನಗರಗಳಲ್ಲಿ ಈಗಾಗಲೇ ಮಾರುತಿ ಸುಜುಕಿ, ಟಾಟಾ ಮೋಟಾರ್ಸ್, ಎಂಜಿ ಮೋಟಾರ್ ಸೇರಿದಂತೆ ವಿವಿಧ ಕಂಪನಿಗಳು ಕಾರ್ ಸಬ್‌ಸ್ಕ್ರೈಬ್ ಆರಂಭಿಸಿದ್ದು, ದಕ್ಷಿಣ ಕೊರಿಯಾದ ಕಿಯಾ ಕಂಪನಿಯು ಸಹ ಕಾರು ಮಾರಾಟ ಸುಧಾರಿಸಲು ಇದೀಗ ಹೊಸ ಯೋಜನೆಯ ಸಿದ್ದತೆಯಲ್ಲಿದೆ.

Most Read Articles

Kannada
English summary
Kia Motors Could Introduce Subscription Service. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X