ಸೆಲ್ಟೊಲ್ ಮತ್ತು ಸೊನೆಟ್ ಕಾರಿನ ಪ್ರಮುಖ ವೆರಿಯೆಂಟ್‌ಗಳನ್ನು ಸ್ಥಗಿತಗೊಳಿಸಲಿದೆ ಕಿಯಾ ಮೋಟಾರ್ಸ್

ಹೊಸ ಕಾರುಗಳ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ಕಿಯಾ ಮೋಟಾರ್ಸ್ ಕಂಪನಿಯು ಶೀಘ್ರದಲ್ಲೇ ತನ್ನ ಕಾರುಗಳಲ್ಲಿ ಫೇಸ್‌ಲಿಫ್ಟ್ ಮಾದರಿಗಳನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದ್ದು, ಗ್ರಾಹಕರ ಬೇಡಿಕೆ ಆಧರಿಸಿ ಸೆಲ್ಟೊಸ್ ಮತ್ತು ಸೊನೆಟ್ ಮಾದರಿಯ ಕೆಲವು ವೆರಿಯೆಂಟ್‌ಗಳನ್ನು ಸ್ಥಗಿತಗೊಳಿಸುವ ಸುಳಿವು ನೀಡಿದೆ.

ಸೆಲ್ಟೊಲ್ ಮತ್ತು ಸೊನೆಟ್ ಕಾರಿನ ಪ್ರಮುಖ ವೆರಿಯೆಂಟ್‌ಗಳನ್ನು ಸ್ಥಗಿತಗೊಳಿಸಲಿದೆ ಕಿಯಾ ಮೋಟಾರ್ಸ್

ಕಿಯಾ ಮೋಟಾರ್ಸ್ ಕಂಪನಿಯು ಸೆಲ್ಟೊಸ್ ಮತ್ತು ಸೊನೆಟ್ ಕಾರುಗಳಲ್ಲಿ ಸದ್ಯ ವಿವಿಧ ಎಂಜಿನ್ ಮತ್ತು ಗೇರ್‌ಬಾಕ್ಸ್ ಆಯ್ಕೆಗಳಿಗೆ ಅನುಗುಣವಾಗಿ 23ರಿಂದ 24 ವೆರಿಯೆಂಟ್‌ಗಳನ್ನು ಮಾರಾಟ ಮಾಡುತ್ತಿದ್ದು, ಹೊಸ ಆವೃತ್ತಿಗಳಲ್ಲಿ ಕೆಲವು ಬೇಡಿಕೆಯಿಲ್ಲದ ವೆರಿಯೆಂಟ್‌ಗಳನ್ನು ವೀಲಿನಗೊಳಿಸಿ ಗ್ರಾಹಕರ ಆಯ್ಕೆಯನ್ನು ಸರಳಗೊಳಿಸಲು ನಿರ್ಧರಿಸಲಾಗಿದೆ. ಹೆಚ್ಚುವರಿ ವೆರಿಯೆಂಟ್‌ಗಳಿಂದಾಗಿ ಗ್ರಾಹಕರ ಆಯ್ಕೆಯಲ್ಲಿ ಗೊಂದಲ ಉಂಟಾಗುತ್ತಿದ್ದು, ಎರಡು ಕಾರುಗಳಲ್ಲಿ ಮಧ್ಯಮ ಗಾತ್ರದ ಪ್ರಮುಖ ವೆರಿಯೆಂಟ್‌ಗಳನ್ನು ತೆಗೆದುಹಾಕುವ ಸಾಧ್ಯತೆಗಳಿವೆ.

ಸೆಲ್ಟೊಲ್ ಮತ್ತು ಸೊನೆಟ್ ಕಾರಿನ ಪ್ರಮುಖ ವೆರಿಯೆಂಟ್‌ಗಳನ್ನು ಸ್ಥಗಿತಗೊಳಿಸಲಿದೆ ಕಿಯಾ ಮೋಟಾರ್ಸ್

ಸೊನೆಟ್ ಕಾರು ಮಾದರಿಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 1.2-ಲೀಟರ್ ಪೆಟ್ರೋಲ್, 1.5-ಲೀಟರ್ ಡೀಸೆಲ್ ಮತ್ತು ಪರ್ಫಾಮೆನ್ಸ್ ಪ್ರಿಯರಿಗಾಗಿ 1.0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಪಡೆದುಕೊಂಡಿದ್ದು, ಪ್ರತಿಸ್ಪರ್ಧಿ ಕಾರುಗಳಿಂತಲೂ ಉತ್ತಮ ಫೀಚರ್ಸ್ ಹೊಂದಿದೆ.

ದೆಹಲಿ ಎಕ್ಸ್‌ಶೋರೂಂ ಪ್ರಕಾರ ಹೊಸ ಸೊನೆಟ್ ಕಾರು ಆರಂಭಿಕವಾಗಿ ರೂ. 6.71 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 12.89 ಲಕ್ಷ ಬೆಲೆ ಹೊಂದಿದ್ದು, ಹೊಸ ಕಾರನ್ನು ಜಿಟಿ-ಲೈನ್ ಮತ್ತು ಟೆಕ್-ಲೈನ್ ವೆರಿಯೆಂಟ್‌ಗಳಲ್ಲಿ ಖರೀದಿ ಮಾಡಬಹುದಾಗಿದೆ. ಜಿಟಿ-ಲೈನ್ ಮಾದರಿಯಲ್ಲಿ ಹೆಚ್‌ಟಿಇ, ಹೆಚ್‌ಟಿಕೆ, ಹೆಚ್‌ಟಿಕೆ ಪ್ಲಸ್, ಹೆಚ್‌ಟಿಎಕ್ಸ್ ಮತ್ತು ಹೆಚ್‌ಟಿಎಕ್ಸ್ ಪ್ಲಸ್ ವೆರಿಯೆಂಟ್‌ಗಳೊಂದಿಗೆ ಖರೀದಿಗೆ ಲಭ್ಯವಿದ್ದಲ್ಲಿ ಜಿಟಿ ಲೈನ್‌ನಲ್ಲಿ ಜಿಟಿಎಕ್ಸ್ ಪ್ಲಸ್ ವೆರಿಯೆಂಟ್ ಖರೀದಿಗೆ ಲಭ್ಯವಿದೆ.

ಸೆಲ್ಟೊಲ್ ಮತ್ತು ಸೊನೆಟ್ ಕಾರಿನ ಪ್ರಮುಖ ವೆರಿಯೆಂಟ್‌ಗಳನ್ನು ಸ್ಥಗಿತಗೊಳಿಸಲಿದೆ ಕಿಯಾ ಮೋಟಾರ್ಸ್

ಹಾಗೆಯೇ ಸೆಲ್ಟೊಸ್ ಕಾರು ಮಾದರಿಯ ಸದ್ಯ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.9.90 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.17.66 ಲಕ್ಷ ಬೆಲೆ ಹೊಂದಿದ್ದು, ಗ್ರಾಹಕರ ಬೇಡಿಕೆಯೆಂತೆ ಮೂರು ಎಂಜಿನ್ ಆಯ್ಕೆಗಳನ್ನು ಪಡೆದುಕೊಂಡಿದೆ.

ಸೆಲ್ಟೊಲ್ ಮತ್ತು ಸೊನೆಟ್ ಕಾರಿನ ಪ್ರಮುಖ ವೆರಿಯೆಂಟ್‌ಗಳನ್ನು ಸ್ಥಗಿತಗೊಳಿಸಲಿದೆ ಕಿಯಾ ಮೋಟಾರ್ಸ್

ಬಿಎಸ್-6 ನಿಯಮ ಅನುಸಾರ ಜಿಟಿ ಲೈನ್ ಕಾರುಗಳಲ್ಲಿ 1.4-ಲೀಟರ್ ಟಿ-ಜಿಡಿಐ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದರೆ ಸಾಮಾನ್ಯ ಮಾದರಿಯ ಟೆಕ್-ಲೈನ್ ಕಾರುಗಳು ಬಿಎಸ್-6 ಪ್ರೇರಿತ ನ್ಯಾಚುರಲಿ ಆಸ್ಪೆರೆಟೆಡ್ 1.5-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಸಿಆರ್‌ಡಿಐ ಡೀಸೆಲ್ ಎಂಜಿನ್ ಪಡೆದುಕೊಂಡಿವೆ.

MOST READ: ನಿರ್ವಹಣಾ ವೆಚ್ಚ ತಗ್ಗಿಸಲು ವಾಣಿಜ್ಯ ವಾಹನಗಳಿಗಾಗಿ ಹೊಸ ಎಂಜಿನ್ ಪರಿಚಯಿಸಿದ ಟಾಟಾ ಮೋಟಾರ್ಸ್

ಸೆಲ್ಟೊಲ್ ಮತ್ತು ಸೊನೆಟ್ ಕಾರಿನ ಪ್ರಮುಖ ವೆರಿಯೆಂಟ್‌ಗಳನ್ನು ಸ್ಥಗಿತಗೊಳಿಸಲಿದೆ ಕಿಯಾ ಮೋಟಾರ್ಸ್

ವಿವಿಧ ಎಂಜಿನ್ ಆಯ್ಕೆಗಳೊಂದಿಗೆ ಹೊಸ ಕಾರಿನಲ್ಲಿ ಹಲವಾರು ಪ್ರೀಮಿಯಂ ಫೀಚರ್ಸ್ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದ್ದು, ಕಿಯಾ ಕಂಪನಿಯು ಶೀಘ್ರದಲ್ಲೇ ಸೆಲ್ಟೊಸ್ ಫೇಸ್‌ಲಿಫ್ಟ್ ಮಾದರಿಯನ್ನು ಬಿಡುಗಡೆ ಮಾಡಲು ಸಿದ್ದಗೊಳ್ಳುತ್ತಿದೆ.

ಸೆಲ್ಟೊಲ್ ಮತ್ತು ಸೊನೆಟ್ ಕಾರಿನ ಪ್ರಮುಖ ವೆರಿಯೆಂಟ್‌ಗಳನ್ನು ಸ್ಥಗಿತಗೊಳಿಸಲಿದೆ ಕಿಯಾ ಮೋಟಾರ್ಸ್

ಇದೇ ತಿಂಗಳಾಂತ್ಯಕ್ಕೆ ಬಿಡುಗಡೆಯಾಗಲಿರುವ ಸೆಲ್ಟೊಸ್ ಫೇಸ್‌ಲಿಫ್ಟ್ ಮಾದರಿಯು ಹೊಸ ಲೊಗೊ, ಆರಂಭಿಕ ಮಾದರಿಗಳಲ್ಲೂ ಪನೋರಮಿಕ್ ಸನ್‌ರೂಫ್, ಮರು ವಿನ್ಯಾಸಗೊಳಿಸಲಾದ ಗ್ರಿಲ್, ಬ್ಯಾನೆಟ್ ಸೇರಿದಂತೆ ಹಲವಾರು ಬದಲಾವಣೆಗಳನ್ನು ಪಡೆದುಕೊಳ್ಳಲಿದ್ದು, ಬೇಡಿಕೆಯಿಲ್ಲದ ಕೆಲವು ವೆರಿಯೆಂಟ್‌ಗಳನ್ನು ಸಹ ತೆಗೆದುಹಾಕಲಿದೆ.

MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ಸೆಲ್ಟೊಲ್ ಮತ್ತು ಸೊನೆಟ್ ಕಾರಿನ ಪ್ರಮುಖ ವೆರಿಯೆಂಟ್‌ಗಳನ್ನು ಸ್ಥಗಿತಗೊಳಿಸಲಿದೆ ಕಿಯಾ ಮೋಟಾರ್ಸ್

ಕಿಯಾ ಮೋಟಾರ್ಸ್ ಕಂಪನಿಯು 2019ರ ಮಧ್ಯಂತರದಲ್ಲಿ ಸೆಲ್ಟೊಸ್ ಎಸ್‌ಯುವಿ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ಮೂಲಕ ದೇಶಿಯ ಮಾರುಕಟ್ಟೆಯ ಆಟೋ ಉತ್ಪಾದನಾ ವಲಯಕ್ಕೆ ಅಧಿಕೃತವಾಗಿ ಎಂಟ್ರಿ ನೀಡಿತ್ತು. ಸೆಲ್ಟೊಸ್ ಎಸ್‌ಯುವಿ ಬಿಡುಗಡೆಯ ನಂತರ ಕಳೆದ ಒಂದೂವರೆ ವರ್ಷದಲ್ಲಿ ಕಿಯಾ ಮೋಟಾರ್ಸ್ ಕಂಪನಿಯು ಹಲವಾರು ದಾಖಲೆಗಳಿಗೆ ಕಾರಣವಾಗಿದ್ದು, ಹೆಚ್ಚುವರಿ ಫೀಚರ್ಸ್ ಹೊಂದಿರುವ ಫೇಸ್‌ಲಿಫ್ಟ್ ಮಾದರಿಯು ಸಹ ಉತ್ತಮ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

Most Read Articles

Kannada
English summary
Kia Motors Ready To Discontinue Some Variants Of Seltos And Sonet. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X