ಹೊಸ Carnival ಎಂಪಿವಿ ಬಿಡುಗಡೆಗೊಳಿಸಿದ Kia India

ಕಿಯಾ ಇಂಡಿಯಾ(Kia India) ಕಂಪನಿಯು ತನ್ನ 2021ರ Carnival ಎಂಪಿವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಎಂಪಿವಿಯ ಆರಂಭಿಕ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ. 24.95 ಲಕ್ಷಗಳಾಗಿದೆ.

ಹೊಸ Carnival ಎಂಪಿವಿ ಬಿಡುಗಡೆಗೊಳಿಸಿದ Kia Motors

ಈ ಹೊಸ ಎಂಪಿವಿಯನ್ನು ಅಪ್ ಗ್ರೇಡ್ ಮಾಡಲಾಗಿದ್ದು, ಹಳೆಯ ಮಾದರಿಗಿಂತ ಒಂದೆರಡು ಅಪ್ ಡೇಟ್ ಗಳನ್ನು ಹೊಂದಿದೆ. Kia ಕಂಪನಿಯು Carnival ಎಂಪಿವಿಯ ಹೊಸ Limousine + ಟಾಪ್ ಎಂಡ್ ಮಾದರಿಯನ್ನು ಪರಿಚಯಿಸಿದೆ. ಹೊಸ ಎಂಪಿವಿಗಾಗಿ ಬುಕ್ಕಿಂಗ್ ಗಳನ್ನು ಆರಂಭಿಸಲಾಗಿದೆ. ಈ ಎಂಪಿವಿಯ ವಿತರಣೆ ಶೀಘ್ರದಲ್ಲಿಯೇ ಶುರುವಾಗುವ ಸಾಧ್ಯತೆಗಳಿವೆ.

ಹೊಸ Carnival ಎಂಪಿವಿ ಬಿಡುಗಡೆಗೊಳಿಸಿದ Kia Motors

ಮಾದರಿಗಳು ಹಾಗೂ ಬೆಲೆ

2021 ಕಿಯಾ ಕಾರ್ನಿವಾಲ್ ಬೆಲೆ
Premium 7 Seater ₹24,95,000
Premium 8 Seater ₹25,15,000
Prestige 7 Seater ₹29,49,000
Prestige 9 Seater ₹29,95,000
Limousine 7 Seater ₹31,99,000
Limousine Plus 7 Seater ₹33,99,000
ಹೊಸ Carnival ಎಂಪಿವಿ ಬಿಡುಗಡೆಗೊಳಿಸಿದ Kia Motors

2021ರ Kia Carnival ಎಂಪಿವಿಯಲ್ಲಿ ಆಗಿರುವ ಬದಲಾವಣೆಗಳು

ಹೊಸ Carnival ಈಗ Kiaದ ಹೊಸ ಕಾರ್ಪೊರೇಟ್ ಲೋಗೋವನ್ನು ಹೊಂದಿದೆ. ಮೊದಲೇ ಹೇಳಿದಂತೆ Kia Motors ಕಂಪನಿಯು Limousine ಹಾಗೂ Limousine + ಮಾದರಿಗಳ ಪರಿಚಯದೊಂದಿಗೆ ಟ್ರಿಮ್ ಲೈನ್ ಅಪ್ ಅನ್ನು ಪುನರ್ ರಚಿಸಿದೆ. Carnival Limousine ಮಾದರಿಯ ಎರಡನೇ ಸಾಲಿನಲ್ಲಿ ಲೆಗ್ ಸಪೋರ್ಟ್ ನೊಂದಿಗೆ ಪ್ರೀಮಿಯಂ ಲೆಥೆರೆಟ್ ಸೀಟುಗಳನ್ನು ನೀಡಲಾಗಿದೆ.

ಹೊಸ Carnival ಎಂಪಿವಿ ಬಿಡುಗಡೆಗೊಳಿಸಿದ Kia Motors

ಇತರ ಫೀಚರ್ ಗಳು

2021 Kia Carnival ಎಂಪಿವಿಯು 8 ಇಂಚಿನ ಇನ್ಫೋಟೈನ್‌ಮೆಂಟ್, ಒಟಿಎ ಮ್ಯಾಪ್ ಅಪ್ ಡೇಟ್, ಯುವಿಒ ಸಪೋರ್ಟ್, ಇಸಿಎಂ ಮಿರರ್, ಹಿಂಭಾಗದ ಪ್ರಯಾಣಿಕರಿಗಾಗಿ ಸಿಂಗಲ್ 10.1 ಇಂಚಿನ ಡಿಸ್‌ಪ್ಲೇ, ಸ್ಮಾರ್ಟ್ ಪ್ಯೂರ್ ಏರ್ ಪ್ಯೂರಿಫೈಯರ್ ಗಳನ್ನು ಹೊಂದಿದೆ.

ಹೊಸ Carnival ಎಂಪಿವಿ ಬಿಡುಗಡೆಗೊಳಿಸಿದ Kia Motors

ಇದರ ಜೊತೆಗೆ ಸಂಪೂರ್ಣ ಸುಸಜ್ಜಿತವಾದ Limousine + ಮಾದರಿಯು ಹರ್ಮನ್ ಕಾರ್ಡನ್ ಪ್ರೀಮಿಯಂ 8 ಸ್ಪೀಕರ್ ಆಡಿಯೋ ಸಿಸ್ಟಂ, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, 10 ವೇ ಪವರ್ ಡ್ರೈವರ್ ಸೀಟ್, ಡ್ರೈವರ್ ಸೀಟ್ ವೆಂಟಿಲೇಷನ್, ಲೆದರ್ ನಿಂದ ವ್ರಾಪ್ ಮಾಡಲಾದ ಸ್ಟೀಯರಿಂಗ್ ವ್ಹೀಲ್ ಹಾಗೂ ಗೇರ್ ನಾಬ್, ಪ್ರೀಮಿಯಂ ವುಡ್ ಗಾರ್ನಿಷ್, ಡ್ಯುಯಲ್ 10.1 ಇಂಚಿನ ಹಿಂಭಾಗದ ಡಿಸ್ಪ್ಲೇ, ಟಿಪಿಎಂಎಸ್ ಫೀಚರ್ ಗಳನ್ನು ಹೊಂದಿದೆ.

ಹೊಸ Carnival ಎಂಪಿವಿ ಬಿಡುಗಡೆಗೊಳಿಸಿದ Kia Motors

Kia Carnival ಈಗ 18 ಇಂಚಿನ ಕ್ರಿಸ್ಟಲ್ ಕಟ್ ಅಲಾಯ್ ವ್ಹೀಲ್‌ಗಳನ್ನು ಎಲ್ಲಾ ಮಾದರಿಗಳಲ್ಲಿ ಸ್ಟ್ಯಾಂಡರ್ಡ್ ಆಗಿ ಹೊಂದಿದೆ. ಹೆಚ್ಚುವರಿಯಾಗಿ ಪ್ರೀಮಿಯಂ ಲೆಥರೆಟ್ ಸೀಟುಗಳನ್ನು ಈಗ Prestige, Limousine ಹಾಗೂ Limousine + ಮಾದರಿಗಳಲ್ಲಿ ನೀಡಲಾಗುತ್ತದೆ.

ಹೊಸ Carnival ಎಂಪಿವಿ ಬಿಡುಗಡೆಗೊಳಿಸಿದ Kia Motors

ಹೆಚ್ಚುವರಿ ಬೆಂಬಲ, ಸೌಕರ್ಯವನ್ನು ನೀಡಲು ಡೈಮಂಡ್ ಶೇಪ್ ಕ್ವಿಲ್ಟಿಂಗ್‌ನೊಂದಿಗೆ ಬ್ರಾಂಡ್ ವಿಐಪಿ ಸೀಟಿನೊಂದಿಗೆ ಟಾಪ್ ಮಾದರಿಯನ್ನು ನೀಡಲಾಗಿದೆ. ಇವುಗಳು ಈ ಎಂಪಿವಿಯ ಒಟ್ಟಾರೆ ನೋಟವನ್ನು ಹೆಚ್ಚಿಸುತ್ತವೆ. ಉಳಿದ ಫೀಚರ್ ಗಳು, ಬಣ್ಣಗಳು ಹಾಗೂ ಎಂಜಿನ್ ಆಯ್ಕೆಗಳು ಹಿಂದಿನ ಮಾದರಿಯಂತೆಯೇ ಇರಲಿವೆ.

ಹೊಸ Carnival ಎಂಪಿವಿ ಬಿಡುಗಡೆಗೊಳಿಸಿದ Kia Motors

ಎಂಪಿವಿಯ ಮೆಕ್ಯಾನಿಕಲ್‌ ಅಂಶಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. Kia Carnival ಎಂಪಿವಿಯಲ್ಲಿ 2.2 ಲೀಟರ್ ನಾಲ್ಕು ಸಿಲಿಂಡರ್ ಟರ್ಬೊ ಡೀಸೆಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 197 ಬಿ‌ಹೆಚ್‌ಪಿ ಪವರ್ ಹಾಗೂ 440 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು ಎಂಟು ಸ್ಪೀಡ್ ಆಟೋಮ್ಯಾಟಿಕ್ ಟಾರ್ಕ್ ಕನ್ವರ್ಟರ್ ಗೇರ್ ಬಾಕ್ಸ್'ಗೆ ಸ್ಟ್ಯಾಂಡರ್ಡ್ ಆಗಿ ಜೋಡಿಸಲಾಗಿದೆ.

ಹೊಸ Carnival ಎಂಪಿವಿ ಬಿಡುಗಡೆಗೊಳಿಸಿದ Kia Motors

Carnival ಎಂಪಿವಿಯನ್ನು ಭಾರತದಲ್ಲಿ 2020 ರ ಆಟೋ ಎಕ್ಸ್‌ಪೋದಲ್ಲಿ ಮೊದಲು ಬಿಡುಗಡೆಗೊಳಿಸಲಾಗಿತ್ತು. ಗಮನಿಸಬೇಕಾದ ಸಂಗತಿಯೆಂದರೆ ಈ ಎಂಪಿವಿಯು ಬಿಡುಗಡೆಯಾದಾಗಿನಿಂದ ಅದರ ಬೆಲೆಗಳು ಬದಲಾಗದೆ ಹಾಗೆ ಉಳಿದಿವೆ. Carnival ಎಂಪಿವಿಯನ್ನು ಕಂಪ್ಲೀಟ್ಲಿ ನಾಕ್ ಡೌನ್ (ಸಿಕೆಡಿ) ಮೂಲಕ ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತದೆ. ನಂತರ ಆಂಧ್ರಪ್ರದೇಶದಲ್ಲಿರುವ Kia Motors ಕಂಪನಿಯ ಉತ್ಪಾದನಾ ಘಟಕದಲ್ಲಿ ಜೋಡಿಸಲಾಗುತ್ತದೆ.

ಹೊಸ Carnival ಎಂಪಿವಿ ಬಿಡುಗಡೆಗೊಳಿಸಿದ Kia Motors

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಭಾರತದಲ್ಲಿ ಬಿಡುಗಡೆಯಾಗಿರುವ Carnival ಎಂಪಿವಿಯನ್ನು Kia Motors ಕಂಪನಿಯು ಹೊಸ ಲೋಗೋ ಹಾಗೂ ಸುಧಾರಿತ ಮಾದರಿಗಳೊಂದಿಗೆ ಅಪ್ ಡೇಟ್ ಮಾಡಿದೆ. ಈ ಮೂಲಕ ಈ ಸೆಗ್ ಮೆಂಟ್ ಗ್ರಾಹಕರಿಗೆ ಹೆಚ್ಚು ಆಯ್ಕೆಯನ್ನು ನೀಡುತ್ತದೆ. Carnival ಎಂಪಿವಿಯು ಭಾರತದಲ್ಲಿ ಯಾವುದೇ ನೇರ ಪ್ರತಿಸ್ಪರ್ಧಿಗಳನ್ನು ಹೊಂದಿಲ್ಲ. ಇದರಿಂದ ಈ ಬೆಲೆಯಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ದೊರೆಯುವ ಏಕೈಕ ಐಷಾರಾಮಿ ಎಂಪಿವಿ ಆಗಿದೆ.

ಕೊರಿಯಾ ಮೂಲದ ಕಾರು ತಯಾರಕ ಕಂಪನಿಯಾದ Kia India 2021ರ ಆಗಸ್ಟ್ ತಿಂಗಳ ಮಾಸಿಕ ಮಾರಾಟ ವರದಿಯನ್ನು ಪ್ರಕಟಿಸಿದೆ. ಈ ವರದಿಗಳ ಪ್ರಕಾರ, ಕಿಯಾ ಇಂಡಿಯಾ ಕಂಪನಿಯು ಕಳೆದ ತಿಂಗಳಿನಲ್ಲಿ 16,750 ಯುನಿಟ್‌ಗಳನ್ನು ಮಾರಾಟ ಮಾಡಿದೆ. 2020ರ ಆಗಸ್ಟ್ ತಿಂಗಳಿನಲ್ಲಿ ಕಿಯಾ ಇಂಡಿಯಾ ಕಂಪನಿಯು 10,824 ಯುನಿಟ್‌ ವಾಹನಗಳನ್ನು ಮಾರಾಟ ಮಾಡಿತ್ತು.ಕಳೆದ ವರ್ಷದ ಆಗಸ್ಟ್ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಈ ವರ್ಷದ ಆಗಸ್ಟ್ ತಿಂಗಳ ಮಾರಾಟದಲ್ಲಿ 54.4% ನಷ್ಟು ಏರಿಕೆ ಕಂಡು ಬಂದಿದೆ. ಕಂಪನಿಯು ಈ ವರ್ಷದ ಜುಲೈ ತಿಂಗಳಿನಲ್ಲಿ 15,016 ಯುನಿಟ್‌ಗಳನ್ನು ಮಾರಾಟ ಮಾಡಿತ್ತು. ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಕಿಯಾ ಇಂಡಿಯಾ ಕಂಪನಿಯು 11.5% ನಷ್ಟು ಬೆಳವಣಿಗೆಯನ್ನು ಸಾಧಿಸಿದೆ.

Most Read Articles

Kannada
English summary
Kia motors launches 2021 new carnival mpv in india details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X