Just In
- 6 min ago Maruti Suzuki: 1 ವರ್ಷದಲ್ಲಿಯೇ ಹೊಸ ದಾಖಲೆ.. 134,735 ಫ್ರಾಂಕ್ಸ್ ಕಾರುಗಳು ಮಾರಾಟ, ಬೆಲೆ ರೂ.7.51 ಲಕ್ಷ
- 59 min ago ಮೇಡ್ ಇನ್ ಇಂಡಿಯಾ ಈ ಕಾರಿಗೆ ಜಪಾನ್ನಲ್ಲಿ ಭಾರೀ ಬೇಡಿಕೆ: ವಿಶ್ವಗುರು ಭಾರತಕ್ಕೆ ಎಲ್ಲವೂ ಸಾಧ್ಯ!
- 2 hrs ago ಭೂಮಿಯ ಸ್ವರ್ಗ: 1.50 ಕೋಟಿಯ ಟೊಯೊಟಾ ವೆಲ್ಫೈರ್ಗೆ ಮನಸೋತ ಖ್ಯಾತ ನಟ.. ಈ ಕಾರಿನಲ್ಲಿ ಏನಿದೆ?
- 2 hrs ago ಬರಲಿದೆ ಮತ್ತೊಂದು ಫ್ಯಾಮಿಲಿ ಎಲೆಕ್ಟ್ರಿಕ್ ಸ್ಕೂಟರ್: ಕಡಿಮೆ ಖರ್ಚಿನಲ್ಲಿ ಓಡಾಡಬಹುದು!
Don't Miss!
- News Water Crisis: ಜಲಕ್ಷಾಮ ತಡೆಗೆ ಜಲಸಂರಕ್ಷಣೆಯೇ ಪರಿಹಾರ: ಎಚ್ಚೆತ್ತುಕೊಳ್ಳುತ್ತಾ ಸರ್ಕಾರ?
- Sports T20 World Cup 2024: ವೀರೇಂದ್ರ ಸೆಹ್ವಾಗ್ ಆಯ್ಕೆಯ ಭಾರತ ತಂಡದಲ್ಲಿ ಪ್ರಮುಖ ಆಟಗಾರರಿಗೆ ಸ್ಥಾನವಿಲ್ಲ!
- Technology Realme: ರಿಯಲ್ಮಿ ನಾರ್ಜೋ 70 5G, ನಾರ್ಜೋ 70x 5G ಸ್ಮಾರ್ಟ್ಫೋನ್ ಲಾಂಚ್! ಸಖತ್ ಫೀಚರ್ಸ್... ಬೆಲೆ ಎಷ್ಟು?
- Movies "ಸದಾ ನನ್ನ ಹಿಂಭಾಗವನ್ನೇ ಜೂಮ್ ಮಾಡ್ತಾರೆ"; ನೋರಾ ಫತೇಹಿ ಆಕ್ರೋಶ
- Lifestyle ವಿಕಲಚೇತನರಿಗೆ ಸ್ಕೂಟಿ ಗಿಫ್ಟ್..! ಮನೆ ಕಟ್ಟಿಕೊಡುವ ಭರವಸೆ ನೀಡಿದ ನಟ ಲಾರೆನ್ಸ್..!
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶೀಘ್ರದಲ್ಲೇ ಅನಾವರಣಗೊಳ್ಳಲಿದೆ ಕಿಯಾ ನಿರ್ಮಾಣದ ಹೊಸ ಕೆರೆನ್ಸ್ ಎಂಪಿವಿ
ದೇಶಿಯ ಮಾರುಕಟ್ಟೆಯಲ್ಲಿ ಮಧ್ಯಮ ಗಾತ್ರದ ವಿವಿಧ ಕಾರು ಮಾದರಿಗಳ ಮೂಲಕ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿರುವ ಕಿಯಾ ಇಂಡಿಯಾ ಕಂಪನಿಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಕಾರುಗಳ ಬಿಡುಗಡೆಯನ್ನು ಖಚಿತಪಡಿಸಿದ್ದು, ಹೊಸ ಕಾರುಗಳಲ್ಲಿ ಬಹುನೀರಿಕ್ಷಿತ ಎಂಪಿವಿ(ಮಲ್ಟಿ ಪರ್ಪಸ್ ವೆಹಿಕಲ್) ಮಾದರಿಯ ಸಹ ಸೇರಿದೆ.
ಹ್ಯಾಚ್ಬ್ಯಾಕ್ ಮತ್ತು ಕಂಪ್ಯಾಕ್ಟ್ ಎಸ್ಯುವಿ ವಿಭಾಗವು ಸದ್ಯ ಮಾರುಕಟ್ಟೆಯಲ್ಲಿ ಉಳಿದ ಕಾರು ಮಾದರಿಗಳಿಂತಲೂ ಹೆಚ್ಚು ಬೇಡಿಕೆಯಲ್ಲಿದ್ದು, ತದನಂತರ ಎಸ್ಯುವಿ ಮತ್ತು ಎಂಪಿವಿ ಕಾರುಗಳು ಸಹ ಹೆಚ್ಚಿನ ಮಟ್ಟದ ಬೇಡಿಕೆಯಲ್ಲಿರುವ ಕಾರು ಮಾದರಿಗಳಾಗಿವೆ. ಎಂಪಿವಿ ಮಾದರಿಗಳಲ್ಲಿನ ಪ್ರತಿಸ್ಪರ್ಧಿ ಕಡಿಮೆ ಇರುವುದರಿಂದ ಮಾರುಕಟ್ಟೆಯಲ್ಲಿರುವ ಕೆಲವೇ ಕೆಲವು ಎಂಪಿವಿ ಕಾರು ಮಾದರಿಗಳು ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುತ್ತಿವೆ.
ಇದೇ ಕಾರಣಕ್ಕೆ ಮಧ್ಯಮ ಗಾತ್ರದ ಎಂಪಿವಿ ವಿಭಾಗಕ್ಕೆ ಪ್ರವೇಶಿಸಲು ಸಿದ್ದವಾಗಿರುವ ಕಿಯಾ ಕಂಪನಿಯು ಹೊಸ ಮಾದರಿಯ ಎಂಪಿವಿ ಮಾದರಿಯೊಂದನ್ನು ಅಭಿವೃದ್ದಿಗೊಳಿಸುತ್ತಿದ್ದು, ಹೊಸ ಕಾರನ್ನು 2022ರ ಆರಂಭದಲ್ಲಿ ಬಿಡುಗಡೆ ಮಾಡುವ ಸಿದ್ದತೆಯಲ್ಲಿದೆ.
ಹೊಸ ಕಾರು ಮಾದರಿಯ ಬಿಡುಗಡೆ ಮುನ್ನ ಕಾರಿನ ಉತ್ಪಾದನಾ ಮಾದರಿಯನ್ನು ಜಾಗತಿಕವಾಗಿ ಅನಾವರಣಗೊಳ್ಳುತ್ತಿದ್ದು, ಹೊಸ ಕಾರಿನ ಉತ್ಪಾದನಾ ಆವೃತ್ತಿಯು ಮುಂದಿನ ತಿಂಗಳು 16ರಂದು ಅನಾವರಣಗೊಳ್ಳುವುದು ಬಹುತೇಕ ಖಚಿತವಾಗಿದೆ. ಅನಾವರಣಗೊಂಡ ನಂತರ ಮುಂದಿನ ಕೆಲ ತಿಂಗಳಿನಲ್ಲಿ ಭಾರತ ಸೇರಿದಂತೆ ಪ್ರಮುಖ ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ಪ್ರವೇಶಿಸಲಿದೆ.
ಸದ್ಯ ಮಾರುಕಟ್ಟೆಯಲ್ಲಿರುವ ಕಿಯಾ ಕಾರ್ನಿವಾಲ್ ಎಂಪಿವಿ ಕಾರು ಮಾದರಿಯು ಇನೋವಾ ಕ್ರಿಸ್ಟಾ ಕಾರಿಗಿಂತಲೂ ಹೆಚ್ಚಿನ ಮಟ್ಟದ ಬೆಲೆಯೊಂದಿಗೆ ಮಾರಾಟಗೊಳ್ಳುತ್ತಿದ್ದು, ಹೊಸ ಕಾರನ್ನು ಮಧ್ಯಮ ವರ್ಗದ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ನಿರ್ಮಾಣ ಮಾಡುತ್ತಿದೆ.
ಕಿಯಾ ಕಾರ್ನಿವಾಲ್ ಕಾರು ಮಾದರಿಯು ಸದ್ಯ 2.2-ಲೀಟರ್ ವಿಜಿಟಿ ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ದೆಹಲಿ ಎಕ್ಸ್ಶೋರೂಂ ಪ್ರಕಾರ ಆರಂಭಿಕವಾಗಿ ರೂ.24.95 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 33.99 ಲಕ್ಷ ಬೆಲೆ ಹೊಂದಿದೆ.
ಹೊಸದಾಗಿ ಬಿಡುಗಡೆಯಾಗಲಿರುವ ಮಧ್ಯಮ ಕ್ರಮಾಂಕದ ಎಂಪಿವಿ ಕಾರು ಮಾದರಿಯು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಎಕ್ಸ್ಶೋರೂಂ ಪ್ರಕಾರ ರೂ. 12 ಲಕ್ಷದಿಂದ ರೂ. 17 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಬಹುದಾಗಿದೆ.
ಗ್ರಾಹಕರ ಬೇಡಿಕೆಯೆಂತೆ 6 ಸೀಟರ್ ಮತ್ತು 7 ಸೀಟರ್ ಸೌಲಭ್ಯ ಪಡೆದುಕೊಳ್ಳಲಿರುವ ಹೊಸ ಎಂಪಿವಿ ಕಾರು ಭರ್ಜರಿ ಬೇಡಿಕೆ ಗಿಟ್ಟಿಸಿಕೊಳ್ಳವ ನೀರಿಕ್ಷೆಯಲ್ಲಿದ್ದು, ಬೆಲೆಯಲ್ಲಿ ಎರ್ಟಿಗಾ ಕಾರಿಗಿಂತಲೂ ತುಸು ದುಬಾರಿ ಮತ್ತು ಮತ್ತು ಟೊಯೊಟಾ ಇನೋವಾ ಕ್ರಿಸ್ಟಾ ಕಾರಿಗಿಂತಲೂ ಕಡಿಮೆ ಬೆಲೆಯೊಂದಿಗೆ ಮಾರಾಟಗೊಳ್ಳಲಿದೆ.
ಮಧ್ಯಮ ಗಾತ್ರದ ಎಂಪಿವಿ ಕಾರು ಮಾದರಿಯ ಮಾರಾಟದಲ್ಲಿ ಸದ್ಯ ಮಾರುತಿ ಸುಜುಕಿ ಎರ್ಟಿಗಾ ಕಾರು ಅಧಿಕ ಬೇಡಿಕೆಯೊಂದಿಗೆ ಮೊದಲ ಸ್ಥಾನದಲ್ಲಿದ್ದು, ದುಬಾರಿ ಬೆಲೆ ನಡುವೆಯೂ ಟೊಯೊಟಾ ಇನೋವಾ ಕ್ರಿಸ್ಟಾ ಕಾರು ಎರ್ಟಿಗಾ ಮಾದರಿಯಷ್ಟೇ ಬೇಡಿಕೆಯೊಂದಿಗೆ ಎರಡನೇ ಸ್ಥಾನದಲ್ಲಿದೆ.
ಆದರೆ ಎರ್ಟಿಗಾ ಕಾರಿಗಿಂತಲೂ ದುಪ್ಪಟ್ಟು ಬೆಲೆ ಹೊಂದಿರುವ ಇನೋವಾ ಕ್ರಿಸ್ಟಾ ಕಾರು ಐಷಾರಾಮಿ ಕಾರು ಮಾದರಿಯಾಗಿ ಗುರುತಿಸಿಕೊಂಡಿದ್ದು, ಎರ್ಟಿಗಾ ಮತ್ತು ಇನೋವಾ ಕ್ರಿಸ್ಟಾ ನಡುವೆ ಬೆಲೆ ಅಂತರ ಸಾಕಷ್ಟಿದೆ.
ಈ ಎರಡು ಕಾರುಗಳ ನಡುವಿನ ಸ್ಥಾನದಲ್ಲಿರುವ ಮಹೀಂದ್ರಾ ಮರಾಜೋ ಕಾರು ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುವಲ್ಲಿ ವಿಫಲವಾಗುತ್ತಿದ್ದು, ಇನೋವಾ ಮತ್ತು ಎರ್ಟಿಗಾ ನಡುವಿನ ಸ್ಥಾನವನ್ನು ತುಂಬಲು ಕಿಯಾ ಕಂಪನಿಯು ಹೊಸ ಎಂಪಿವಿ ಕಾರು ಉತ್ಪನ್ನವನ್ನು ಸಿದ್ದಪಡಿಸುತ್ತಿದೆ.
ಪ್ರತಿ ವರ್ಷ ಎರಡು ಹೊಸ ಕಾರು ಮಾದರಿಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿರುವ ಕಿಯಾ ಮೋಟಾರ್ಸ್ ಕಂಪನಿಯು ಕಾರು ಮಾರಾಟ ಆರಂಭಿದ ಒಂದೂವರೆ ವರ್ಷದಲ್ಲಿ ಮೂರು ಕಾರುಗಳನ್ನು ಬಿಡುಗಡೆ ಮಾಡಿದ್ದು, ಇದೀಗ ನಾಲ್ಕನೇ ಕಾರು ಮಾದರಿಯಾಗಿ ಮಧ್ಯಮ ಕ್ರಮಾಂಕದ ಎಂಪಿವಿ ಕಾರನ್ನು ರಸ್ತೆಗಿಳಿಸುವ ಸಿದ್ದತೆ ನಡೆಸಿದೆ.
ಯೋಜನೆಯೆಂತೆ ಈ ವರ್ಷದ ಮಧ್ಯಂತರದಲ್ಲಿ ಬಿಡುಗಡೆ ಹೊಸ ಕಾರನ್ನು ಕೋವಿಡ್ ಕಾರಣಕ್ಕೆ 2022ಕ್ಕೆ ಮುಂದೂಡಿಕೆ ಮಾಡಿರುವ ಕಿಯಾ ಕಂಪನಿಯು ಹೊಸ ಕಾರನ್ನು ಸೊನೆಟ್ ಕಂಪ್ಯಾಕ್ಟ್ ಎಸ್ಯುವಿ ಮಾದರಿಯ ಪ್ಲ್ಯಾಟ್ಫಾರ್ಮ್ ಆಧರಿಸಿ ನಿರ್ಮಾಣಗೊಳಿಸುವ ಸಾಧ್ಯತೆಗಳಿವೆ.