ಆಕರ್ಷಕ ಇಎಂಐ ಹೊಂದಿರುವ ಹೊಸ ಫೈನಾನ್ಸ್ ಯೋಜನೆಗಳನ್ನು ಘೋಷಣೆ ಮಾಡಿದ ಕಿಯಾ

ಕೋವಿಡ್ 2ನೇ ಅಲೆಯ ನಂತರ ಹೊಸ ವಾಹನ ಮಾರಾಟವು ಇದೀಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು, ದೇಶದ ಮುಂಚೂಣಿ ಕಾರು ತಯಾರಿಕಾ ಕಂಪನಿಯಾದ ಕಿಯಾ ಇಂಡಿಯಾ ತನ್ನ ಪ್ರಮುಖ ಕಾರುಗಳ ಖರೀದಿಯನ್ನು ಉತ್ತೇಜಿಸಲು ಹಲವಾರು ಆಫರ್‌ಗಳನ್ನು ಘೋಷಣೆ ಮಾಡಿದೆ.

ಹೊಸ ಫೈನಾನ್ಸ್ ಯೋಜನೆಗಳನ್ನು ಘೋಷಣೆ ಮಾಡಿದ ಕಿಯಾ

ಕಾರು ಉತ್ಪಾದನೆ ಮತ್ತು ಮಾರಾಟದಲ್ಲಿ ಸದ್ಯ ನಾಲ್ಕನೇ ಸ್ಥಾನದಲ್ಲಿರುವ ಕಿಯಾ ಕಂಪನಿಯು ಹೊಸ ಉತ್ಪನ್ನಗಳೊಂದಿಗೆ ಕಳೆದ ವರ್ಷಕ್ಕಿಂತಲೂ ಈ ವರ್ಷ ಹೆಚ್ಚಿನ ಮಟ್ಟದ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಕೋವಿಡ್ 2ನೇ ಅಲೆ ಪರಿಣಾಮ ತಗ್ಗಿದ್ದ ವಾಹನಗಳ ಮಾರಾಟವನ್ನು ಸುಧಾರಿಸಲು ಹಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಹೊಸ ಫೈನಾನ್ಸ್ ಯೋಜನೆಗಳನ್ನು ಘೋಷಣೆ ಮಾಡಿದ ಕಿಯಾ

ಕಿಯಾ ಕಂಪನಿಯು ಈಗಾಗಲೇ ವಿವಿಧ ಬ್ಯಾಂಕ್‌ಗಳ ಜೊತೆಗೂಡಿ ಹಲವು ಸರಳ ಸಾಲಸೌಲಭ್ಯಗಳ ಆಯ್ಕೆ ನೀಡುತ್ತಿದ್ದು, ಇದೀಗ ಯೆಸ್ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಜೊತೆಗೂಡಿ ಹೊಸ ಮಾದರಿಯ ಸಾಲಸೌಲಭ್ಯಗಳನ್ನು ಘೋಷಿಸಿದೆ.

ಹೊಸ ಫೈನಾನ್ಸ್ ಯೋಜನೆಗಳನ್ನು ಘೋಷಣೆ ಮಾಡಿದ ಕಿಯಾ

ಪೀಸ್ ಆಫ್ ಮೈಂಡ್ ಹೆಸರಿನಲ್ಲಿ ಆರಂಭವಾಗಿರುವ ಹೊಸ ಸೌಲಭ್ಯಗಳಲ್ಲಿ ವಿವಿಧ ಕಾರುಗಳ ಖರೀದಿ ಮೇಲೆ ಶೇ.100ರಷ್ಟು ಸಾಲ ಸೌಲಭ್ಯ ದೊರೆಯಲಿದ್ದು, ಸೊನೆಟ್ ಮತ್ತು ಸೆಲ್ಟೊಸ್ ಖರೀದಿ ಮಾಡುವ ಗ್ರಾಹಕರಿಗಾಗಿ ಗರಿಷ್ಠ 5 ವರ್ಷಗಳ ಕಾಲ ಪ್ರತಿ ಲಕ್ಷಕ್ಕೆ ರೂ.767 ಇಎಂಐ ವಿಧಿಸಲಾಗುತ್ತದೆ.

ಹೊಸ ಫೈನಾನ್ಸ್ ಯೋಜನೆಗಳನ್ನು ಘೋಷಣೆ ಮಾಡಿದ ಕಿಯಾ

ಜೊತೆಗೆ ಕಾರು ಖರೀದಿ ಮಾಡಿದ ಆರು ತಿಂಗಳ ತನಕ ರೂ. 13,999 ಇಎಂಐ ಪಾವತಿಗೆ ಹೆಚ್ಚುವರಿ ಅವಕಾಶ ನೀಡಲಿದ್ದು, ಕಾರು ಖರೀದಿ ಮಾಡಿದ ಆರಂಭದಲ್ಲೇ ದೊಡ್ಡ ಮೊತ್ತದ ಇಎಂಐ ಪಾವತಿ ಸಾಧ್ಯವಿಲ್ಲವಾದ ಇಎಂಐ ಪಾವತಿಗೆ ಹೆಚ್ಚುವರಿ ಸಮಯಾವಕಾಶ ದೊರೆಯುತ್ತದೆ.

ಹೊಸ ಫೈನಾನ್ಸ್ ಯೋಜನೆಗಳನ್ನು ಘೋಷಣೆ ಮಾಡಿದ ಕಿಯಾ

ಇದರ ಜೊತೆಗೆ ಕಾರ್ನಿವಾಲ್ ಕಾರು ಖರೀದಿ ಮೇಲೆ ಯೆಸ್ ಬ್ಯಾಂಕ್‌ನಲ್ಲಿ ಶೇ.100 ರಷ್ಟು ಆನ್ ರೋಡ್ ದರ ಮೇಲೆ ಸಾಲ ಸೌಲಭ್ಯ ನೀಡಲಿದ್ದು, ಯಾವುದೇ ಡೌನ್ ಪೇಮೆಂಟ್, ಮಾಲೀಕತ್ವದ ವೆಚ್ಚ ಮತ್ತು ಸಾಲದ ಪೂರ್ವಪಾವತಿ ಶುಲ್ಕವನ್ನು ಪಾವತಿಸದೆ ಖರೀದಿ ಮಾಡಬಹುದಾಗಿದೆ.

ಹೊಸ ಫೈನಾನ್ಸ್ ಯೋಜನೆಗಳನ್ನು ಘೋಷಣೆ ಮಾಡಿದ ಕಿಯಾ

ಇನ್ನು ಆರ್ಥಿಕ ಸಂಕಷ್ಟ ಪರಿಸ್ಥಿತಿಯಲ್ಲಿ ಹೊಸ ವಾಹನಗಳ ಖರೀದಿಗೆ ಹಿಂದೇಟು ಹಾಕುತ್ತಿರುವ ಗ್ರಾಹಕರನ್ನು ಸೆಳೆಯಲು ವಿವಿಧ ಬ್ಯಾಂಕ್‌ಗಳ ಜೊತೆಗೂಡಿ ಹಲವಾರು ಆಕರ್ಷಕ ಲೋನ್ ಆಫರ್‌ಗಳನ್ನು ನೀಡುತ್ತಿರುವ ವಿವಿಧ ಕಾರು ಕಂಪನಿಗಳು ಮುಂಬರುವ ದಿನಗಳಲ್ಲಿ ವಾಹನ ಮಾರಾಟ ಹೆಚ್ಚಳವಾಗುವ ನೀರಿಕ್ಷೆಯಲ್ಲಿವೆ.

ಹೊಸ ಫೈನಾನ್ಸ್ ಯೋಜನೆಗಳನ್ನು ಘೋಷಣೆ ಮಾಡಿದ ಕಿಯಾ

ಕೋವಿಡ್ 2ನೇ ಅಲೆಯ ಪರಿಣಾಮ ಮೇ ಮತ್ತು ಜೂನ್ ಆರಂಭದಲ್ಲಿ ಆರ್ಥಿಕ ಚಟುವಟಿಕೆಗಳು ಸಂಪೂರ್ಣವಾಗಿ ನೆಲಕಚ್ಚಿದ ಪರಿಣಾಮ ಆಟೋ ಉದ್ಯಮವು ಸಹ ಹಿನ್ನಡೆ ಅನುಭವಿಸಿದ್ದು, ಇದೀಗ ಪರಿಸ್ಥಿತಿಗೆ ಅನುಗುಣವಾಗಿ ಹೊಸ ವಾಹನಗಳ ಮಾರಾಟದಲ್ಲಿ ತುಸು ಚೇತರಿಕೆ ಕಂಡುಬಂದಿದೆ.

ಹೊಸ ಫೈನಾನ್ಸ್ ಯೋಜನೆಗಳನ್ನು ಘೋಷಣೆ ಮಾಡಿದ ಕಿಯಾ

ಕಿಯಾ ಕಂಪನಿಯು ಕೋವಿಡ್ ಪರಿಣಾಮ ಮೇ ತಿಂಗಳ ಅವಧಿಯಲ್ಲಿ ಹೊಸ ಕಾರುಗಳ ಮಾರಾಟದಲ್ಲಿ ಕುಸಿತ ಕಂಡಿದ್ದರೂ ಜೂನ್ ಅವಧಿಯ ಕಾರು ಮಾರಾಟದಲ್ಲಿ ತುಸು ಸುಧಾರಣೆ ಕಂಡಿದ್ದು, ಕಿಯಾ ಕಂಪನಿಯ ಈ ವರ್ಷದ ಜೂನ್ ತಿಂಗಳ ಕಾರು ಮಾರಾಟವು ಕಳೆದ ವರ್ಷದ ಜೂನ್ ಅವಧಿಯಲ್ಲಿನ ಕಾರು ಮಾರಾಟಕ್ಕಿಂತಲೂ ಶೇ.36 ರಷ್ಟು ಬೆಳವಣಿಗೆ ಸಾಧಿಸಿದೆ.

Most Read Articles

Kannada
English summary
Kia India Introduces New Finance Scheme. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X