Just In
- 12 min ago
ವಿನೂತನ ವೈಶಿಷ್ಟ್ಯತೆಯೊಂದಿಗೆ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನವಾದ ರಾಯಲ್ ಎನ್ಫೀಲ್ಡ್ ಮಿಟಿಯೊರ್ 350
- 49 min ago
ಹೊಸ ಜೀಪ್ ರ್ಯಾಂಗ್ಲರ್ ರೂಬಿಕಾನ್ 392 ಲಾಂಚ್ ಎಡಿಷನ್ ಬಿಡುಗಡೆ
- 1 hr ago
ಸ್ಪ್ಲೆಂಡರ್ ಬೈಕುಗಳ ಮೇಲೆ ಭರ್ಜರಿ ಡಿಸ್ಕೌಂಟ್ ನೀಡುತ್ತಿದೆ ಹೀರೋ ಮೋಟೊಕಾರ್ಪ್
- 2 hrs ago
2021ರ ಸ್ವಿಫ್ಟ್ ಕಾರಿನ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಮಾರುತಿ ಸುಜುಕಿ
Don't Miss!
- News
ಅಂತರರಾಷ್ಟ್ರೀಯ ವಿಮಾನ ಸಂಚಾರದ ಮೇಲಿನ ನಿರ್ಬಂಧ ಮುಂದುವರಿಕೆ
- Movies
ನಿರ್ದೇಶಕನಿಗೆ ಅವಮಾನ: ಸ್ಟಾರ್ ನಟ ಆಗಿದ್ರೆ ಸುಮ್ಮನೆ ಬಿಡುತ್ತಿದ್ರಾ? ಚಂದ್ರಶೇಖರ್ ಅಸಮಾಧಾನ
- Finance
ಮುಂದಿನ 6 ತಿಂಗಳಿನಲ್ಲಿ ದೆಹಲಿಯ ಎಲ್ಲಾ ಸರ್ಕಾರಿ ಕಾರುಗಳು, ಎಲೆಕ್ಟ್ರಿಕ್ ಕಾರುಗಳಾಗಿ ಬದಲಾಗಲಿವೆ!
- Education
MCL Recruitment 2021: 8 ಸಾಮಾನ್ಯ ವೈದ್ಯಕೀಯ ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Sports
ಐಪಿಎಲ್ 2021: ರಾಜಸ್ಥಾನ್ ರಾಯಲ್ಸ್ ಜೊತೆ ಇಶ್ ಸೋಧಿ ಒಪ್ಪಂದ
- Lifestyle
ಅರಿಶಿನದ ಈ ಆರೋಗ್ಯ ಪ್ರಯೋಜನಗಳನ್ನು ಕೇಳಿದರೆ, ನೀವೂ ಶಾಕ್ ಆಗ್ತೀರಾ!
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಭಾರತದಲ್ಲಿ ಸೆಲ್ಟೊಸ್ ಫೇಸ್ಲಿಫ್ಟ್ ಆವೃತ್ತಿಯ ಬಿಡುಗಡೆಗಾಗಿ ಸಿದ್ದವಾದ ಕಿಯಾ ಮೋಟಾರ್ಸ್
ಕಂಪ್ಯಾಕ್ಟ್ ಎಸ್ಯುವಿ ಮಾರಾಟದಲ್ಲಿ ಹಲವಾರು ಹೊಸ ದಾಖಲೆಗಳಿಗೆ ಕಾರಣವಾಗಿರುವ ಕಿಯಾ ಸೆಲ್ಟೊಸ್ ಮಾದರಿಯು ಮುಂಬರುವ ಕೆಲವೇ ದಿನಗಳಲ್ಲಿ ಫೇಸ್ಲಿಫ್ಟ್ ಮಾದರಿಯನ್ನು ಪಡೆದುಕೊಳ್ಳುತ್ತಿದ್ದು, ಹೊಸ ಕಾರು ಹಲವಾರು ಹೊಸ ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದೆ.

ಕಿಯಾ ಮೋಟಾರ್ಸ್ ಕಂಪನಿಯು 2019ರ ಮಧ್ಯಂತರದಲ್ಲಿ ಸೆಲ್ಟೊಸ್ ಎಸ್ಯುವಿ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ಮೂಲಕ ದೇಶಿಯ ಮಾರುಕಟ್ಟೆಯ ಆಟೋ ಉತ್ಪಾದನಾ ವಲಯಕ್ಕೆ ಅಧಿಕೃತವಾಗಿ ಎಂಟ್ರಿ ನೀಡಿತ್ತು. ಸೆಲ್ಟೊಸ್ ಎಸ್ಯುವಿ ಬಿಡುಗಡೆಯ ನಂತರ ಕಳೆದ ಒಂದೂವರೆ ವರ್ಷದಲ್ಲಿ ಕಿಯಾ ಮೋಟಾರ್ಸ್ ಕಂಪನಿಯು ಹಲವಾರು ದಾಖಲೆಗಳಿಗೆ ಕಾರಣವಾಗಿದ್ದು, ಶೀಘ್ರದಲ್ಲೇ ಹೆಚ್ಚುವರಿ ಫೀಚರ್ಸ್ ಹೊಂದಿರುವ ಫೇಸ್ಲಿಫ್ಟ್ ಮಾದರಿಯನ್ನು ಬಿಡುಗಡೆ ಮಾಡಲಿದೆ.

ಫೇಸ್ಲಿಫ್ಟ್ ಮಾದರಿಯು ಮುಂಬರುವ ಮಾರ್ಚ್ ಹೊತ್ತಿಗೆ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಗಳಿದ್ದು, ಹೊಸ ಕಾರಿನಲ್ಲಿ ಕಂಪನಿಯು ಉನ್ನತ ಮಟ್ಟದ ತಾಂತ್ರಿಕ ಅಂಶಗಳೊಂದಿಗೆ ಸುರಕ್ಷಾ ಫೀಚರ್ಸ್ಗಳ ಅಳವಡಿಕೆಯಲ್ಲಿ ಗ್ರಾಹಕರನ್ನು ಸೆಳೆಯಲಿದೆ.

ಫೇಸ್ಲಿಫ್ಟ್ ಸೆಲ್ಟೊಸ್ ಮಾದರಿಯಲ್ಲಿ ಕಿಯಾ ಮೋಟಾರ್ಸ್ ಕಂಪನಿಯು ಎಂಜಿನ್ ಆಯ್ಕೆಯನ್ನು ಪ್ರಸ್ತುತ ಮಾದರಿಯಲ್ಲಿರುವಂತೆ ಮುಂದುವರಿಸಲಿದ್ದು, ಆರಂಭಿಕ ಕಾರು ಮಾದರಿಗಳಲ್ಲಿ ಹಲವು ಸುರಕ್ಷಾ ಫೀಚರ್ಸ್ಗಳು ಸ್ಟ್ಯಾಂಡರ್ಡ್ ಆಗಿ ಜೋಡಣೆಯಾಗಲಿದೆ.

ಇನ್ನು ಕಿಯಾ ಮೋಟಾರ್ಸ್ ಕಂಪನಿಯು ಭಾರತದಲ್ಲಿ ಕಾರು ಮಾರಾಟ ಆರಂಭಿಸಿ ಮುಂಬರುವ ಅಗಸ್ಟ್ ಅವಧಿಗೆ 2 ವರ್ಷ ಪೂರೈಸಿದ್ದು, ಸೆಲ್ಟೊಸ್ ಕಾರು ಮಾರಾಟವು ಇದುವರೆಗೆ ಭಾರತದಲ್ಲಿ 1.35 ಲಕ್ಷ ಯುನಿಟ್ ಕಾರು ಮಾರಾಟದೊಂದಿಗೆ ಕಂಪನಿಯ ಶೇ.84 ರಷ್ಟು ಕಾರು ಮಾರಾಟ ಪಾಲು ಹೊಂದಿದೆ. ಹೊಸ ತಂತ್ರಜ್ಞಾನ ಪ್ರೇರಿತ ಫೀಚರ್ಸ್ನೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ಸೆಲ್ಟೊಸ್ ಕಾರು ಎಸ್ಯುವಿ ಕಾರು ಖರೀದಿದಾರರ ಪ್ರಮುಖ ಆಕರ್ಷಣೆಯಾಗಿದೆ.

ಸೆಲ್ಟೊಸ್ ಕಾರು ಮಾದರಿಯ ಪ್ರಮುಖ ಹೊಸ ಕಾರು ದೆಹಲಿ ಎಕ್ಸ್ಶೋರೂಂ ಪ್ರಕಾರ ಆರಂಭಿಕವಾಗಿ ರೂ.9.90 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.17.66 ಲಕ್ಷ ಬೆಲೆ ಹೊಂದಿದ್ದು, ಗ್ರಾಹಕರ ಬೇಡಿಕೆಯೆಂತೆ ಮೂರು ಎಂಜಿನ್ ಆಯ್ಕೆಗಳನ್ನು ಪಡೆದುಕೊಂಡಿದೆ.

ಬಿಎಸ್-6 ನಿಯಮ ಅನುಸಾರ ಜಿಟಿ ಲೈನ್ ಕಾರುಗಳಲ್ಲಿ 1.4-ಲೀಟರ್ ಟಿ-ಜಿಡಿಐ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದರೆ ಸಾಮಾನ್ಯ ಮಾದರಿಯ ಟೆಕ್-ಲೈನ್ ಕಾರುಗಳು ಬಿಎಸ್-6 ಪ್ರೇರಿತ ನ್ಯಾಚುರಲಿ ಆಸ್ಪೆರೆಟೆಡ್ 1.5-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಸಿಆರ್ಡಿಐ ಡೀಸೆಲ್ ಎಂಜಿನ್ ಪಡೆದುಕೊಂಡಿವೆ.

ವಿವಿಧ ಎಂಜಿನ್ ಆಯ್ಕೆಗಳೊಂದಿಗೆ ಹೊಸ ಕಾರಿನಲ್ಲಿ ಹಲವಾರು ಪ್ರೀಮಿಯಂ ಫೀಚರ್ಸ್ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದ್ದು, ಇತ್ತೀಚೆಗೆ ಕಂಪನಿಯು ಆ್ಯನಿವರ್ಸರಿ ಎಡಿಷನ್ ಬಿಡುಗಡೆಗೊಳಿಸುವ ಮೂಲಕ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುತ್ತಿದೆ.
MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಆ್ಯನಿವರ್ಸರಿ ಎಡಿಷನ್ ಮಾದರಿಯು ಪ್ರಮುಖ ಮೂರು ಮಾದರಿಗಳಲ್ಲಿ ಖರೀದಿಗೆ ಲಭ್ಯವಿದ್ದು, ದೆಹಲಿ ಎಕ್ಸ್ಶೋರೂಂ ಪ್ರಕಾರ ಆರಂಭಿಕ ಮಾದರಿಯು ರೂ. 13.87 ಲಕ್ಷ, ಮಧ್ಯಮ ಕ್ರಮಾಂಕದ ಮಾದರಿಯು ರೂ. 14.87 ಲಕ್ಷ ಮತ್ತು ಉನ್ನತ ಮಾದರಿಯು ರೂ. 14.97 ಲಕ್ಷ ಬೆಲೆ ಹೊಂದಿದೆ.

ಸ್ಟ್ಯಾಂಡರ್ಡ್ ಮಾದರಿಗಿಂತ ಆ್ಯನಿವರ್ಸರಿ ಎಡಿಷನ್ ಮಾದರಿಯು ರೂ. 50 ಸಾವಿರ ಹೆಚ್ಚುವರಿ ಬೆಲೆ ಹೊಂದಿದ್ದು, ಹೆಚ್ಚುವರಿ ಬೆಲೆಗೆ ತಕ್ಕಂತೆ ವಿಶೇಷ ಮಾದರಿಯಲ್ಲಿ ಹಲವು ಹೆಚ್ಚುವರಿ ಫೀಚರ್ಸ್ಗಳನ್ನು ಜೋಡಣೆ ಮಾಡಿರುವುದು ಆ್ಯನಿವರ್ಸರಿ ಎಡಿಷನ್ ಆಕರ್ಷಣೆಯನ್ನು ಹೆಚ್ಚಿಸಿದೆ.
MOST READ: ಕ್ರ್ಯಾಶ್ ಟೆಸ್ಟಿಂಗ್ನಲ್ಲಿ ಅತ್ಯುತ್ತಮ ರೇಟಿಂಗ್ಸ್ ಪಡೆದುಕೊಂಡ ನಿಸ್ಸಾನ್ ಮ್ಯಾಗ್ನೈಟ್

ತಾಂತ್ರಿಕವಾಗಿ ಸ್ಟ್ಯಾಂಡರ್ಡ್ ಮಾದರಿಯಂತೆಯೇ ಸೌಲಭ್ಯಗಳನ್ನು ಹೊಂದಿರುವ ಆ್ಯನಿವರ್ಸರಿ ಎಡಿಷನ್ ಮಾದರಿಯಲ್ಲಿ ಆಕರ್ಷಣೆಗಾಗಿ ಫಾಗ್ ಲೈಟ್, ಸೈಡ್ ಸ್ಕರ್ಟ್ಸ್, ಫ್ಲಕ್ಸ್ ಡ್ಯುಯಲ್ ಎಕ್ಸಾಸ್ಟ್, ರಿಯರ್ ಬಂಪರ್ ಮತ್ತು ಅಲಾಯ್ ವೀಲ್ಹ್ ಸುತ್ತ ಆರೇಂಜ್ ಆಕ್ಸೆಂಟ್ ನೀಡಲಾಗಿದೆ. ಹಾಗೆಯೇ ಟೈಲ್ಲೈಟ್ ಬಳಿಯಲ್ಲಿ ಆ್ಯನಿವರ್ಸರಿ ಎಡಿಷನ್ ಬ್ಯಾಡ್ಜ್, ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಹೊಸ ವಿನ್ಯಾಸದ ಬಂಪರ್ ಜೊತೆಗೆ ಫ್ಲಕ್ಸ್ ಸ್ಕ್ರೀಡ್ ಪ್ಲೇಟ್ ಜೋಡಿಸಲಾಗಿದ್ದು, ಸೈಡ್ ಸ್ಕರ್ಟ್ಸ್ಗಳನ್ನು ಸಹ ಸಿಲ್ವರ್ ಲೇಪನದೊಂದಿಗೆ ನೀಡಲಾಗಿದೆ.

ಇದಲ್ಲದೆ ಹೊಸ ಕಾರಿಗೆ ಮತ್ತಷ್ಟು ಮೆರಗು ನೀಡಲು ಗ್ರಾವಿಟಿ ಗ್ರೇ, ಅರೋರಾ ಬ್ಲ್ಯಾಕ್, ಸ್ಟ್ಪೀಲ್ ಸಿಲ್ವರ್, ಅರೋರಾ ಬ್ಲ್ಯಾಕ್ ಪರ್ಲ್ ಜೊತೆಗೆ ಡ್ಯುಯಲ್ ಮಾದರಿಯಾಗಿ ಅರೋರಾ ಬ್ಲ್ಯಾಕ್ ಪರ್ಲ್ ಪೇಂಟ್ ಶೇಡ್ ಹಾಗೂ ಗಾರ್ಸಿರ್ ವೈಟ್ ಡ್ಯುಯಲ್ ಟೋನ್ ಬಣ್ಣಗಳನ್ನು ನೀಡಲಾಗಿದ್ದು, ಫೇಸ್ಲಿಫ್ಟ್ ಮಾದರಿಯಲ್ಲಿ ಹೆಚ್ಚುವರಿ ಬಣ್ಣಗಳ ಆಯ್ಕೆ ಮತ್ತು ಪ್ರೀಮಿಯಂ ಫೀಚರ್ಸ್ಗಳು ಮತ್ತಷ್ಟು ಗ್ರಾಹಕರನ್ನು ಸೆಳೆಯಲಿವೆ.