ಗ್ಲಾಸಿ ಆರೇಂಜ್ ವ್ಯಾರ್ಪ್‌ನೊಂದಿಗೆ ಮಾಡಿಫೈಗೊಂಡ ಕಿಯಾ ಸೊನೆಟ್ ಕಂಪ್ಯಾಕ್ಟ್ ಎಸ್‌ಯುವಿ

ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ದಾಖಲೆಗೆ ಕಾರಣವಾಗಿರುವ ಕಿಯಾ ಸೊನೆಟ್ ಕಾರು ಮಾದರಿಯು ಗ್ರಾಹಕರ ಬೇಡಿಕೆಯೆಂತೆ ವಿವಿಧ ಮಾಡಿಫೈ ಸೌಲಭ್ಯಗಳೊಂದಿಗೆ ಗ್ರಾಹಕರನ್ನು ಸೆಳೆಯುತ್ತಿದ್ದು, ನೋಯ್ಡಾ ಮೂಲದ ವ್ಯಾರ್ಪ್ ಹುಲಿಕ್ಸ್ ಮಾಡಿಫೈ ಕಂಪನಿಯು ಹೊಸ ಸೊನೆಟ್ ಕಾರಿಗೆ ಆಕರ್ಷಕ ಮಾಡಿಫೈ ಡಿಸೈನ್ ನೀಡಿ ಎಸ್‌ಯುವಿ ಪ್ರಿಯರ ಗಮನ ಸೆಳೆದಿದೆ.

ಗ್ಲಾಸಿ ಆರೇಂಜ್ ವ್ಯಾರ್ಪ್‌ನೊಂದಿಗೆ ಮಾಡಿಫೈಗೊಂಡ ಕಿಯಾ ಸೊನೆಟ್ ಕಂಪ್ಯಾಕ್ಟ್ ಎಸ್‌ಯುವಿ

ಐಷಾರಾಮಿ ಕಾರು ಮಾದರಿಗಳಲ್ಲಿ ಕಂಡುಬರುವ ವ್ಯಾರ್ಪ್ ಡಿಸೈನ್ ಹೊಂದಿರುವ ಕಿಯಾ ಸೊನೆಟ್ ಕಾರು ಮಾಡಿಫೈ ನಂತರ ಬಲಿಷ್ಠ ನೋಟ ಪಡೆದುಕೊಂಡಿದ್ದು, ಸ್ಟ್ಯಾಲಿನ್ ಗ್ಲಾಸಿ ಆರೇಂಜ್ ವ್ಯಾರ್ಪ್ ಗ್ರಾಹಕರನ್ನು ಮೊದಲ ನೋಟದಲ್ಲೇ ಗಮನಸೆಳೆಯುತ್ತದೆ. ಜೊತೆಗೆ ಸೊನೆಟ್ ಕಾರು ಮಾಲೀಕರು ಕಾರಿನ ನೋಟಕ್ಕೆ ಮತ್ತಷ್ಟು ಮೆರಗು ನೀಡಲು ಗ್ಲಾಸಿ ಆರೇಂಜ್ ವ್ಯಾರ್ಪ್‌ನೊಂದಿಗೆ ಕ್ರೋಮ್ ಸ್ಟ್ರೀಪ್ಸ್, ಫ್ರಂಟ್ ಗ್ರಿಲ್, ಡೋರ್ ಹ್ಯಾಂಡಲ್ ಮತ್ತು ಸಿಲ್ವರ್ ಫೀನಿಷ್ ಹೊಂದಿರುವ ರೂಫ್ ರೈಲ್ಸ್ ಮಾಡಿಫೈ ಡಿಸೈನ್‌ಗೆ ಪೂರಕವಾಗಿವೆ.

ಗ್ಲಾಸಿ ಆರೇಂಜ್ ವ್ಯಾರ್ಪ್‌ನೊಂದಿಗೆ ಮಾಡಿಫೈಗೊಂಡ ಕಿಯಾ ಸೊನೆಟ್ ಕಂಪ್ಯಾಕ್ಟ್ ಎಸ್‌ಯುವಿ

ಹೊರ ಭಾಗದಲ್ಲಿ ಗ್ಲಾಸಿ ಆರೇಂಜ್ ವ್ಯಾರ್ಪ್‌ ಮಾದರಿಯಲ್ಲೇ ಕಾರಿನ ಒಳಭಾಗದ ವಿನ್ಯಾಸದಲ್ಲೂ ಬದಲಾವಣೆ ತರಲಾಗಿದ್ದು, ಸಂಪೂರ್ಣವಾಗಿ ಕಪ್ಪು ಬಣ್ಣದ ಕ್ಯಾಬಿನ್ ಒಳಗೊಂಡಿರುವುದು ಮಾಡಿಫೈ ಕಾರು ಪ್ರಿಯರನ್ನು ಸೆಳೆಯುತ್ತಿದೆ.

ಗ್ಲಾಸಿ ಆರೇಂಜ್ ವ್ಯಾರ್ಪ್‌ನೊಂದಿಗೆ ಮಾಡಿಫೈಗೊಂಡ ಕಿಯಾ ಸೊನೆಟ್ ಕಂಪ್ಯಾಕ್ಟ್ ಎಸ್‌ಯುವಿ

ಆದರೆ ಹೊಸ ಕಾರಿನಲ್ಲಿ ಗ್ಲಾಸಿ ಆರೇಂಜ್ ವ್ಯಾರ್ಪ್ ಹೊರತುಪಡಿಸಿ ಯಾವುದೇ ತಾಂತ್ರಿಕ ಅಂಶಗಳನ್ನು ಬದಲಾವಣೆಗೊಳಿಸಿಲ್ಲ. ಮೂಲ ಕಾರು ಮಾದರಿಯಲ್ಲಿನ ತಾಂತ್ರಿಕ ಅಂಶಗಳೇ ಮಾಡಿಫೈ ಮಾದರಿಯಲ್ಲೂ ಮುಂದುವರಿಸಲಾಗಿದ್ದು, ಹೊಸ ಮಾಡಿಫೈ ಸೌಲಭ್ಯಕ್ಕೆ ತಗುಲಿದ ವೆಚ್ಚದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ.

ಗ್ಲಾಸಿ ಆರೇಂಜ್ ವ್ಯಾರ್ಪ್‌ನೊಂದಿಗೆ ಮಾಡಿಫೈಗೊಂಡ ಕಿಯಾ ಸೊನೆಟ್ ಕಂಪ್ಯಾಕ್ಟ್ ಎಸ್‌ಯುವಿ

ಇನ್ನು ಮಾಡಿಫೈ ಸೊನೆಟ್ ಮಾಲೀಕರು ಬ್ರಾಂಡ್‌ನ ಹೆಚ್‌ಟಿಎಕ್ಸ್ ವೆರಿಯೆಂಟ್ ಅನ್ನು ಮಾಡಿಫೈ ಮಾದರಿಯಾಗಿ ಆಯ್ಕೆ ಮಾಡಿದ್ದು, ಈ ಕಾರು 6-ಸ್ಪೀಡ್ ಐಎಂಟಿ ಗೇರ್‌ಬಾಕ್ಸ್ ಹೊಂದಿರುವ 1.0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್‌ನೊಂದಿಗೆ 120-ಬಿಎಚ್‌ಪಿ ಮತ್ತು 172-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

ಗ್ಲಾಸಿ ಆರೇಂಜ್ ವ್ಯಾರ್ಪ್‌ನೊಂದಿಗೆ ಮಾಡಿಫೈಗೊಂಡ ಕಿಯಾ ಸೊನೆಟ್ ಕಂಪ್ಯಾಕ್ಟ್ ಎಸ್‌ಯುವಿ

ಭಾರತದಲ್ಲಿ ಕಿಯಾ ಮೋಟಾರ್ಸ್ ನಿರ್ಮಾಣದ ಮೂರನೇ ಕಾರು ಮಾದರಿಯಾಗಿ ಬಿಡುಗಡೆಯಾಗಿರುವ ಸೊನೆಟ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯು ಗ್ರಾಹಕರ ಬೇಡಿಕೆಯೆಂತೆ 1.2-ಲೀಟರ್ ಪೆಟ್ರೋಲ್, 1.5-ಲೀಟರ್ ಡೀಸೆಲ್ ಮತ್ತು ಪರ್ಫಾಮೆನ್ಸ್ ಪ್ರಿಯರಿಗಾಗಿ 1.0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಪಡೆದುಕೊಂಡಿದೆ.

MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ಗ್ಲಾಸಿ ಆರೇಂಜ್ ವ್ಯಾರ್ಪ್‌ನೊಂದಿಗೆ ಮಾಡಿಫೈಗೊಂಡ ಕಿಯಾ ಸೊನೆಟ್ ಕಂಪ್ಯಾಕ್ಟ್ ಎಸ್‌ಯುವಿ

ದೆಹಲಿ ಎಕ್ಸ್‌ಶೋರೂಂ ಪ್ರಕಾರ ಹೊಸ ಸೊನೆಟ್ ಕಾರು ಆರಂಭಿಕವಾಗಿ ರೂ. 6.79 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 13.20 ಲಕ್ಷ ಬೆಲೆ ಹೊಂದಿದ್ದು, ಹೊಸ ಕಾರನ್ನು ಜಿಟಿ-ಲೈನ್ ಮತ್ತು ಟೆಕ್-ಲೈನ್ ವೆರಿಯೆಂಟ್‌ಗಳಲ್ಲಿ ಖರೀದಿ ಮಾಡಬಹುದಾಗಿದೆ.

ಗ್ಲಾಸಿ ಆರೇಂಜ್ ವ್ಯಾರ್ಪ್‌ನೊಂದಿಗೆ ಮಾಡಿಫೈಗೊಂಡ ಕಿಯಾ ಸೊನೆಟ್ ಕಂಪ್ಯಾಕ್ಟ್ ಎಸ್‌ಯುವಿ

ಜಿಟಿ-ಲೈನ್ ಮಾದರಿಯಲ್ಲಿ ಹೆಚ್‌ಟಿಇ, ಹೆಚ್‌ಟಿಕೆ, ಹೆಚ್‌ಟಿಕೆ ಪ್ಲಸ್, ಹೆಚ್‌ಟಿಎಕ್ಸ್ ಮತ್ತು ಹೆಚ್‌ಟಿಎಕ್ಸ್ ಪ್ಲಸ್ ವೆರಿಯೆಂಟ್‌ಗಳೊಂದಿಗೆ ಖರೀದಿಗೆ ಲಭ್ಯವಿದ್ದಲ್ಲಿ ಜಿಟಿ ಲೈನ್‌ನಲ್ಲಿ ಜಿಟಿಎಕ್ಸ್ ಪ್ಲಸ್ ವೆರಿಯೆಂಟ್ ಖರೀದಿಗೆ ಲಭ್ಯವಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಗ್ಲಾಸಿ ಆರೇಂಜ್ ವ್ಯಾರ್ಪ್‌ನೊಂದಿಗೆ ಮಾಡಿಫೈಗೊಂಡ ಕಿಯಾ ಸೊನೆಟ್ ಕಂಪ್ಯಾಕ್ಟ್ ಎಸ್‌ಯುವಿ

ಹೊಸ ಸೊನೆಟ್ ಕಾರಿನಲ್ಲಿ ಹಲವಾರು ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಪ್ರಯಾಣಿಕ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಸಬ್ ಫೋರ್ ಮೀಟರ್ ಕಾರು ಮಾದರಿಯಲ್ಲೇ ವಿಶೇಷ ತಾಂತ್ರಿಕ ಸೌಲಭ್ಯಗಳನ್ನು ಹೊಂದಿದೆ.

Image Courtesy: Wrapaholix

Most Read Articles

Kannada
English summary
Kia Sonet glossy orange colour body wrap details. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X