ಬಿಡುಗಡೆಯಾದ ಒಂದು ವರ್ಷದೊಳಗೆ 1 ಲಕ್ಷ ಮಾರಾಟದ ಮೈಲಿಗಲ್ಲು ಸಾಧಿಸಿದ Kia Sonet

ಜನಪ್ರಿಯ ಕಾರು ತಯಾರಕ ಕಂಪನಿಯಾದ ಕಿಯಾ ಮೋಟಾರ್ಸ್ ಕಂಪನಿಯು ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ಭಾರತದಲ್ಲಿ ಸೊನೆಟ್(Sonet) ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಬಿಡುಗಡೆಗೊಳಿಸಲಾಯಿತು. ಸೆಲ್ಟೋಸ್ ಬಳಿಕ ಕಿಯಾ ಮೋಟಾರ್ಸ್ ಮೂರನೇ ಮಾದರಿಯಾಗಿ ಸೊನೆಟ್ ಕಾಂಪ್ಯಾಕ್ಟ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಿತ್ತು.

ಬಿಡುಗಡೆಯಾದ ಒಂದು ವರ್ಷದೊಳಗೆ 1 ಲಕ್ಷ ಮಾರಾಟದ ಮೈಲಿಗಲ್ಲು ಸಾಧಿಸಿದ Kia Sonet

ಕಿಯಾ ಸೊನೆಟ್ ಸಬ್ ಕಾಂಪ್ಯಾಕ್ಟ್ ಎಸ್‍ಯುವಿ 1 ಲಕ್ಷ ಯುನಿಟ್ ಗಳ ಮಾರಾಟ ಮೈಲಿಗಲ್ಲು ಸಾಧಿಸಿದೆ ಎಂದು ಕಿಯಾ ಇಂಡಿಯಾ ಅಧಿಕೃತವಾಗಿ ಘೋಷಿಸಿದೆ. ಕಳೆದ ವರ್ಷ ಬಿಡುಗಡೆಯಾದ ಎಸ್‌ಯುವಿ ಅದರ ಬೆಲೆ ಮತ್ತು ವೈಶಿಷ್ಟ್ಯಗಳ ಕಾರಣದಿಂದಾಗಿ ಸಾಕಷ್ಟು ಗಮನ ಸೆಳೆಯಿತು. ಈ ಎಸ್‍ಯುವಿಯು ಬಿಡುಗಡೆಯಾದ ಒಂದು ವರ್ಷದೊಳಗೆ ಈ ಹೆಗ್ಗುರುತನ್ನು ಸಾಧಿಸಿತು. ದಕ್ಷಿಣ ಕೊರಿಯಾದ ವಾಹನ ತಯಾರಕ ಕಂಪನಿ ಹೇಳುವಂತೆ ಇದೇ ಸಮಯದಲ್ಲಿ ಸೋನೆಟ್ ದೇಶದಲ್ಲಿ ನಾಲ್ಕನೇ ಅತಿ ಹೆಚ್ಚು ಮಾರಾಟವಾದ ಎಸ್‍ಯುವಿಯಾಗಿದೆ.

ಬಿಡುಗಡೆಯಾದ ಒಂದು ವರ್ಷದೊಳಗೆ 1 ಲಕ್ಷ ಮಾರಾಟದ ಮೈಲಿಗಲ್ಲು ಸಾಧಿಸಿದ Kia Sonet

ಮೇಡ್ ಇನ್ ಇಂಡಿಯಾ ಎಸ್‌ಯುವಿಯು ಕಿಯಾ ಇಂಡಿಯಾದ ಒಟ್ಟಾರೆ ಮಾರಾಟದಲ್ಲಿ ಶೇಕಡಾ 32 ರಷ್ಟು ಮತ್ತು ಈ ವಿಭಾಗಕ್ಕೆ ಸುಮಾರು 17 ಪ್ರತಿಶತದಷ್ಟು ಕೊಡುಗೆ ನೀಡುತ್ತದೆ. ಕಡಿಮೆ ಅವಧಿಯಲ್ಲಿ ಕಿಯಾ ಸೆಲ್ಟೋಸ್ ಹೆಚ್ಚು ಮಾರಾಟವಾದ ವಾಹನಗಳಲ್ಲಿ ಒಂದಾಗಿದೆ.

ಬಿಡುಗಡೆಯಾದ ಒಂದು ವರ್ಷದೊಳಗೆ 1 ಲಕ್ಷ ಮಾರಾಟದ ಮೈಲಿಗಲ್ಲು ಸಾಧಿಸಿದ Kia Sonet

ಹೊಸ ಮೈಲಿಗಲ್ಲಿನ ಕುರಿತು ಕಿಯಾ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕರಾದ ಟೇ-ಜಿನ್ ಪಾರ್ಕ್ ಅವರು ಮಾತನಾಡಿ, "ಕೋವಿಡ್ -19 ಸಾಂಕ್ರಾಮಿಕದ ಆಗಮನದೊಂದಿಗೆ ಆಟೋ ಉದ್ಯಮವು ಇತಿಹಾಸದಲ್ಲಿ ಅತ್ಯಂತ ಕೆಟ್ಟ ಕುಸಿತವನ್ನು ಎದುರಿಸುತ್ತಿರುವಾಗ ಸೊನೆಟ್ ಅನ್ನು ಪ್ರಾರಂಭಿಸಲಾಯಿತು.

ಬಿಡುಗಡೆಯಾದ ಒಂದು ವರ್ಷದೊಳಗೆ 1 ಲಕ್ಷ ಮಾರಾಟದ ಮೈಲಿಗಲ್ಲು ಸಾಧಿಸಿದ Kia Sonet

ಒಟ್ಟು ಮಾರಾಟದಲ್ಲಿ ಐಎಂಟಿ ರೂಪಾಂತರದ ನಾಲ್ಕನೇ ಕೊಡುಗೆಯು ಈ ಮಾದರಿಯು ಹೊಸ ತಂತ್ರಜ್ಞಾನಗಳ ಅಳವಡಿಕೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ಮಾಡಿರುವುದನ್ನು ಸಾಬೀತುಪಡಿಸುತ್ತದೆ. ಪಿವಿ ವಿಭಾಗವು ಹಲವು ವರ್ಷಗಳಿಂದ ಅನೇಕ ರೂಪಾಂತರಗಳಿಗೆ ಸಾಕ್ಷಿಯಾಗಿದೆ. ಪ್ರಮುಖ ವಾಹನ ತಯಾರಕರಾಗಿ, ನಾವು ಬದಲಾಗುತ್ತಿರುವ ಪ್ರವೃತ್ತಿಗಳಿಗೆ ಬದ್ಧರಾಗಿದ್ದೇವೆ ಮತ್ತು ನವ-ವಯಸ್ಸಿನ ಚಾಲನಾ ಅನುಭವವನ್ನು ನಮ್ಮ ಗ್ರಾಹಕರಿಗೆ ವಿಭಾಗಗಳಾದ್ಯಂತ ನೀಡುತ್ತೇವೆ ಎಂದು ಹೇಳಿದರು.

ಬಿಡುಗಡೆಯಾದ ಒಂದು ವರ್ಷದೊಳಗೆ 1 ಲಕ್ಷ ಮಾರಾಟದ ಮೈಲಿಗಲ್ಲು ಸಾಧಿಸಿದ Kia Sonet

ರಿಫ್ರೆಶ್ ಮಾಡಿದ ಕಿಯಾ ಸೊನೆಟ್ ಈ ವರ್ಷದ ಆರಂಭದಲ್ಲಿ ಭಾರತದಲ್ಲಿ ಬ್ರಾಂಡ್‌ನ ಹೊಸ ಲೋಗೋ ಮತ್ತು ವೈಶಿಷ್ಟ್ಯಗಳ ವಿಸ್ತಾರವಾದ ಪಟ್ಟಿ ಮತ್ತು ಹಲವಾರು ಸೆಗ್ಮೆಂಟ್-ಫಸ್ಟ್‌ಗಳೊಂದಿಗೆ ಮಾರಾಟಕ್ಕೆ ಬಂದಿತು. ಇದು ಎರಡು ಟ್ರಿಮ್‌ಗಳಲ್ಲಿ 17 ರೂಪಾಂತರಗಳಲ್ಲಿ ಲಭ್ಯವಿದೆ. ಇದು ಟೆಕ್ ಲೈನ್ ಮತ್ತು ಜಿಟಿ -ಲೈನ್ ಅನ್ನು ಪವರ್‌ಟ್ರೇನ್‌ಗಳು ಮತ್ತು ಟ್ರಾನ್ಸ್‌ಮಿಷನ್‌ಗಳ ಆಧಾರದ ಮೇಲೆ ಹಲವಾರು ಆಯ್ಕೆಗಳಲ್ಲಿ ವರ್ಗೀಕರಿಸಲಾಗಿದೆ.

ಬಿಡುಗಡೆಯಾದ ಒಂದು ವರ್ಷದೊಳಗೆ 1 ಲಕ್ಷ ಮಾರಾಟದ ಮೈಲಿಗಲ್ಲು ಸಾಧಿಸಿದ Kia Sonet

ಕಿಯಾ ಸೊನೆಟ್ ಸಬ್ ಕಾಂಪ್ಯಾಕ್ಟ್ ಎಸ್‍ಯುವಿಯಲ್ಲಿ ಎಲ್ಇಡಿ ಹೆಡ್‌ಲ್ಯಾಂಪ್ಸ್, ಎಲ್ಇಡಿ ಡಿಆರ್‌ಎಲ್ಎಸ್, ಫಾಗ್ ಲ್ಯಾಂಪ್ಸ್, ಸಿಗ್ನೆಚೆರ್ ಟೈಗರ್ ನೊಸ್ ಫ್ರಂಟ್ ಗ್ರಿಲ್, 16-ಇಂಚಿನ ಕ್ರಿಸ್ಟಲ್ ಕಟ್ ಅಲಾಯ್ ವೀಲ್ಹ್, ರಿಪ್ಲೆಕ್ಟರ್ ಸ್ಟ್ರೀಪ್‌ಗೆ ಹೊಂದಿಕೊಂಡಂತಿರುವ ಹಾರ್ಟ್ ಬಿಟ್‌ ವಿನ್ಯಾಸದ ಎಲ್ಇಡಿ ಟೈಲ್ ಲೈಟ್ಸ್, ಫ್ಲಕ್ಸ್ ಡಿಫ್ಯೂಸರ್ ಮತ್ತು ರಿಯರ್ ಬಂಪರ್ ನೀಡಲಾಗಿದೆ.

ಬಿಡುಗಡೆಯಾದ ಒಂದು ವರ್ಷದೊಳಗೆ 1 ಲಕ್ಷ ಮಾರಾಟದ ಮೈಲಿಗಲ್ಲು ಸಾಧಿಸಿದ Kia Sonet

ಒಳಭಾಗದಲ್ಲೂ ಕೂಡಾ ಹಲವಾರು ಪ್ರೀಮಿಯಂ ಫೀಚರ್ಸ್‌ಗಳ ನೀಡಲಾಗಿದೆ. ಇದರಲ್ಲಿ ಮುಂಭಾಗದಲ್ಲಿ ವೆಂಟಿಲೆಟೆಡ್ ಲೆದರ್ ಸೀಟುಗಳು, ತ್ರಿ ಸ್ಪೋಕ್ ಡಿ ಕಟ್ ಸ್ಟೀರಿಂಗ್ ವೀಲ್ಹ್ ಜೊತೆ ಮೌಂಟೆಡ್ ಕಂಟ್ರೋಲ್, ಸೆಮಿ ಡಿಜಿಟಲ್ ಇನ್‌ಸ್ಟುಮೆಂಟ್ ಕ್ಲಸ್ಟರ್, ಮಲ್ಟಿ ಇನ್‌ಫಾರ್ಮೆಷನ್ ಡಿಸ್‌ಪ್ಲೇ, 10.25-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ಜೊತೆಗೆ ಆ್ಯಪಲ್ ಕಾರ್‌ಪ್ಲೇ ಮತ್ತು ಅಂಡ್ರಾಯಿಡ್ ಆಟೋ ಕನೆಕ್ಟಿಟಿಯನ್ನು ಹೊಂದಿದೆ.

ಬಿಡುಗಡೆಯಾದ ಒಂದು ವರ್ಷದೊಳಗೆ 1 ಲಕ್ಷ ಮಾರಾಟದ ಮೈಲಿಗಲ್ಲು ಸಾಧಿಸಿದ Kia Sonet

ಇದರೊಂದಿಗೆ ವೈರ್‌ಲೆಸ್ ಚಾರ್ಜರ್, ಸೌಂಡ್ ಮೋಡ್ ಲೈಟಿಂಗ್ ಮತ್ತು ಬಾಷ್ ಸಿಸ್ಟಂ ಹೊಂದಿರುವ 7-ಸ್ಪೀಕರ್ಸ್ ಅನ್ನು ಒಳಗೊಂಡಿದೆ. ಇನ್ನು ಕಿಯಾ ಮೋಟಾರ್ಸ್‌ ಅಭಿವೃದ್ದಿಪಡಿಸಿರುವ ಯುವಿಒ ಕಾರ್ ಕನೆಕ್ಟ್ ಟೆಕ್ನಾಲಜಿ ಸೌಲಭ್ಯವು ಗರಿಷ್ಠ ಫೀಚರ್ಸ್ ಹೊಂದಿದ್ದು, ಸುಮಾರು 57 ಫೀಚರ್ಸ್‌ಗಳನ್ನು ಯುವಿಒ ಆ್ಯಪ್ ಮೂಲಕವೇ ಕಾರಿನ ಪ್ರಮುಖ ತಾಂತ್ರಿಕ ಅಂಶಗಳನ್ನು ನಿಯಂತ್ರಣ ಮಾಡಬಹುದಾಗಿದೆ.

ಬಿಡುಗಡೆಯಾದ ಒಂದು ವರ್ಷದೊಳಗೆ 1 ಲಕ್ಷ ಮಾರಾಟದ ಮೈಲಿಗಲ್ಲು ಸಾಧಿಸಿದ Kia Sonet

ಕಿಯಾ ಸೊನೆಟ್ ಸಬ್ ಕಾಂಪ್ಯಾಕ್ಟ್ ಎಸ್‍ಯುವಿಯ ಪೆಟ್ರೋಲ್ ಮತ್ತು ಎರಡು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಇದರಲ್ಲಿ 1.2-ಲೀಟರ್ ಯುನಿಟ್ ಮತ್ತು 1.0-ಲೀಟರ್ ಟರ್ಬೊ-ಚಾರ್ಜ್ಡ್ ಪೆಟ್ರೋಲ್ ಅನ್ನು ಹೊಂದಿದೆ. ಇದರೊಂದಿಗೆ 1.2-ಲೀಟರ್ ಎಂಜಿನ್ 84 ಬಿಹೆಚ್‌ಪಿ ಪವರ್ ಮತ್ತು 115 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್‌ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ

ಬಿಡುಗಡೆಯಾದ ಒಂದು ವರ್ಷದೊಳಗೆ 1 ಲಕ್ಷ ಮಾರಾಟದ ಮೈಲಿಗಲ್ಲು ಸಾಧಿಸಿದ Kia Sonet

ಇನ್ನು ಟಾಪ್ ಸ್ಪೆಕ್ ಮಾದರಿಯಲ್ಲಿರುವ 1.0-ಲೀಟರ್ ಎಂಜಿನ್ 119 ಬಿಹೆಚ್‌ಪಿ ಪವರ್ ಮತ್ತು 172 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 7 ಅಥವಾ 6-ಸ್ಪೀಡ್ ಐಎಂಟಿ ಅನ್ನು ಜೋಡಿಸಲಾಗಿದೆ.

ಬಿಡುಗಡೆಯಾದ ಒಂದು ವರ್ಷದೊಳಗೆ 1 ಲಕ್ಷ ಮಾರಾಟದ ಮೈಲಿಗಲ್ಲು ಸಾಧಿಸಿದ Kia Sonet

ಈ ಸಬ್ ಕಾಂಪ್ಯಾಕ್ಟ್ ಎಸ್‍ಯುವಿಯ ಡೀಸೆಲ್ ಎಂಜಿನ್ ಬಗ್ಗೆ ಹೇಳುವುದಾದರೆ, 1.5-ಲೀಟರ್ ಡೀಸೆಲ್ ಡಬ್ಲ್ಯುಜಿಟಿ ಎಂಜಿನ್ 99 ಬಿಹೆಚ್‌ಪಿ ಪವರ್ ಮತ್ತು 240 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು ವಿಜಿಟಿ ಎಂಜಿನ್ 114 ಬಿಹೆಚ್‌ಪಿ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ,

ಬಿಡುಗಡೆಯಾದ ಒಂದು ವರ್ಷದೊಳಗೆ 1 ಲಕ್ಷ ಮಾರಾಟದ ಮೈಲಿಗಲ್ಲು ಸಾಧಿಸಿದ Kia Sonet

ಈ ಕಿಯಾ ಸೊನೆಟ್ ಸಬ್ ಕಾಂಪ್ಯಾಕ್ಟ್ ಎಸ್‍ಯುವಿಯಲ್ಲಿ ಪ್ರಯಾಣಿಕ ಸುರಕ್ಷತೆಗಾಗಿ, 6-ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ವೆಹಿಕಲ್ ಸ್ಟ್ಯಾಬಿಲಿಟಿ ಮ್ಯಾನೆಜ್‌ಮೆಂಟ್(ವಿಎಸ್ಎಂ), ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೊಲ್, ಬ್ರೇಕ್ ಅಸಿಸ್ಟ್, ಎಮರ್ಜೆನ್ಸಿ ಸ್ಟಾಪ್ ಸಿಗ್ನಲ್, ಇಂಪ್ಯಾಕ್ಟ್ ಸೆನ್ಸಾರ್ ಆಟೋ ಡೋರ್ ಅನ್‌ಲಾಕ್, ಸ್ಪೀಡ್-ಸೆನ್ಸಿಂಗ್ ಆಟೋ ಡೋರ್ ಲಾಕ್, ಫ್ರಂಟ್ ಆ್ಯಂಡ್ ರಿಯರ್ ಪಾರ್ಕಿಂಗ್ ಸೆನ್ಸಾರ್, ಕ್ರೂಸ್ ಕಂಟ್ರೊಲ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಮತ್ತು ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್ ಅನ್ನು ನೀಡಲಾಗಿದೆ.

ಬಿಡುಗಡೆಯಾದ ಒಂದು ವರ್ಷದೊಳಗೆ 1 ಲಕ್ಷ ಮಾರಾಟದ ಮೈಲಿಗಲ್ಲು ಸಾಧಿಸಿದ Kia Sonet

ಭಾರತೀಯ ಮಾರುಕಟ್ಟೆಯಲ್ಲಿ ಕಿಯಾ ಸೊನೆಟ್ ಬಿಡುಗಡೆಯಾದ ಆರಂಭದಲ್ಲೇ ಅತಿ ಹೆಚ್ಚು ಪೈಪೋಟಿ ಹೊಂದಿರುವ ಕಾಂಪ್ಯಾಕ್ಟ್ ಎಸ್‍ಯುವಿ ವಿಭಾಗದಲ್ಲಿ ಹೊಸ ಸಂಚಲವನ್ನು ಮೂಡಿಸಿತು. ಕಿಯಾ ಸೊನೆಟ್ ದೇಶಿಯ ಮಾರುಕಟ್ಟೆಯಲ್ಲಿ ತನ್ನ ಪ್ರತಿಸ್ಪರ್ಧಿಗಳಿಗೆ ಪ್ರಬಲ ಪೈಪೋಟಿಯನ್ನು ನೀಡುತ್ತಿದೆ. ಕಿಯಾ ಸೊನೆಟ್ ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ವಿಟಾರಾ ಬ್ರೆಝಾ, ಹ್ಯುಂಡೈ ವೆನ್ಯೂ, ಫೋರ್ಡ್ ಇಕೋಸ್ಪೋರ್ಟ್ ಮತ್ತು ಟಾಟಾ ನೆಕ್ಸಾನ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತಿದೆ.

Most Read Articles

Kannada
English summary
Kia sonet sub compact suv reached 1 lakh unit sales milestone details
Story first published: Tuesday, September 14, 2021, 18:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X