ಸ್ಪೋರ್ಟಿ ಲುಕ್‍‍‍ನಲ್ಲಿ ಅನಾವರಣಗೊಂಡ Kia Sportage GT Line ಎಸ್‍ಯುವಿ

ಜನಪ್ರಿಯ ಕಾರು ತಯಾರಕ ಕಂಪನಿಯಾದ Kia ತನ್ನ ಐದನೇ ತಲೆಮಾರಿನ Sportage GT Line ಎಸ್‍ಯುವಿಯನ್ನು ಯುರೋಪಿಯನ್ ಮಾರುಕಟ್ಟೆಗಳಿಗೆ ಅನಾವರಣಗೊಳಿಸಿದೆ. ಈ ಯುರೋ-ಸ್ಪೆಕ್ ಮಾದರಿಯು ಜಾಗತಿಕ ಮಾದರಿಯ ವಿನ್ಯಾಸ ಶೈಲಿಯನ್ನು ಹೊಂದಿದೆ.

ಸ್ಪೋರ್ಟಿ ಲುಕ್‍‍‍ನಲ್ಲಿ ಅನಾವರಣಗೊಂಡ Kia Sportage GT Line ಎಸ್‍ಯುವಿ

ಯುರೋಪಿಯನ್-ಸ್ಪೆಕ್ ಮಾದರಿಯು ಇತ್ತೀಚೆಗೆ ಆರಂಭವಾದ ಕೊರಿಯನ್-ಸ್ಪೆಕ್ ಸ್ಪೋರ್ಟೇಜ್‌ಗಿಂತ ಸ್ವಲ್ಪ ವಿಭಿನ್ನವಾಗಿ ಕಾಣಲು ಸೂಕ್ಷ್ಮ ಬದಲಾವಣೆಗಳನ್ನು ಪಡೆಯುತ್ತದೆ. ಇದು ಹುಂಡೈನ ಹೊಸ N3 ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ, ಇದು ಹೊಸ-ಜನರೇಷನ್ ಟ್ಯೂಸಾನ್ ಅನ್ನು ಸಹ ಬೆಂಬಲಿಸುತ್ತದೆ. ಯುರೋಪಿಯನ್-ಸ್ಪೆಕ್ ಮಾದರಿಯು ಸಣ್ಣ ವೀಲ್‌ಬೇಸ್‌ ಅನ್ನು ಹೊಂದಿದೆ. ಮತ್ತೊಂದೆಡೆ, ಯುಎಸ್ ಮತ್ತು ದಕ್ಷಿಣ ಕೊರಿಯಾದ ಮಾದರಿಯು ಉದ್ದವಾದ ವೀಲ್‌ಬೇಸ್ ಅನ್ನು ಹೊಂದಿದೆ. ಈ ಯುರೋಪಿಯನ್-ಸ್ಪೆಕ್ 2022 ಕಿಯಾ ಸ್ಪೋರ್ಟೇಜ್ 2,680 ಎಂಎಂ ವೀಲ್ ಬೇಸ್ ಹೊಂದಿದ್ದು, ಗ್ಲೋಬಲ್-ಸ್ಪೆಕ್ ಮಾಡೆಲ್ 1,755 ಎಂಎಂ ವೀಲ್ ಬೇಸ್ ಮೇಲೆ ಸವಾರಿ ಮಾಡುತ್ತದೆ.

ಸ್ಪೋರ್ಟಿ ಲುಕ್‍‍‍ನಲ್ಲಿ ಅನಾವರಣಗೊಂಡ Kia Sportage GT Line ಎಸ್‍ಯುವಿ

ಇದರ ಉದ್ದವು 4,515 ಎಂಎಂ ಅಳತೆಯಾಗಿರುವುದರಿಂದ 145 ಎಂಎಂ ಅನುಪಾತದಲ್ಲಿ ಕಡಿಮೆಯಾಗಿದೆ. ಯುರೋಪಿನ 2022ರ Kia Sportage GT Line ಎಸ್‍ಯುವಿಯು 4,515 ಎಂಎಂ ಉದ್ದ, 1,865 ಎಂಎಂ ಅಗಲ ಮತ್ತು 1,645 ಎಂಎಂ ಎತ್ತರ, ಮತ್ತು 2,680 ಎಂಎಂ ವೀಲ್ ಬೇಸ್ ಹೊಂದಿದೆ.

ಸ್ಪೋರ್ಟಿ ಲುಕ್‍‍‍ನಲ್ಲಿ ಅನಾವರಣಗೊಂಡ Kia Sportage GT Line ಎಸ್‍ಯುವಿ

ಈ ಎಸ್‍ಯುವಿಯು 591 ಲೀಟರ್‌ಗಳ ಲಗೇಜ್ ಜಾಗವನ್ನು ನೀಡುತ್ತದೆ, ಇದನ್ನು ಹಿಂಭಾಗದ ಸೀಟುಗಳನ್ನು ಮಡಿಸುವ ಮೂಲಕ 1,780-ಲೀಟರ್‌ಗಳಿಗೆ ವಿಸ್ತರಿಸಬಹುದು. ಈ ಎಸ್‍ಯುವಿಯು ಕಡಿಮೆ ಹಿಂಭಾಗದ ಡೋರ್ ಅನ್ನು ಹೊಂದಿದೆ ಮತ್ತು ಸಂಪೂರ್ಣವಾಗಿ ಮರು ವಿನ್ಯಾಸಗೊಳಿಸಿದ ಸಿ-ಪಿಲ್ಲರ್ ಅನ್ನು ಹೊಂದಿದೆ.

ಸ್ಪೋರ್ಟಿ ಲುಕ್‍‍‍ನಲ್ಲಿ ಅನಾವರಣಗೊಂಡ Kia Sportage GT Line ಎಸ್‍ಯುವಿ

ಹೊಸ Kia Sportage GT Line ಎಸ್‍ಯುವಿಯು ಹೊಸ ವಿನ್ಯಾಸದ ಭಾಷೆಯ ಮೇಲೆ ಆಧಾರಿತವಾಗಿದೆ ಎಂದು ಹೇಳಿಕೊಂಡಿದೆ. ಇನ್ನು ಎಸ್‌ಯುವಿಯು ಟೈಗರ್ ನೋಸ್ ಗ್ರಿಲ್ ಮತ್ತು ಬೂಮರಾಂಗ್ ಆಕಾರದ ಎಲ್ಇಡಿ ಡಿಆರ್‌ಎಲ್‌ಗಳನ್ನು ಒಳಗೊಂಡಿದೆ,

ಸ್ಪೋರ್ಟಿ ಲುಕ್‍‍‍ನಲ್ಲಿ ಅನಾವರಣಗೊಂಡ Kia Sportage GT Line ಎಸ್‍ಯುವಿ

ಇನ್ನು ಈ ಎಸ್‍ಯುವಿಯಲ್ಲಿ ಮ್ಯಾಟ್ರಿಕ್ಸ್ ಎಲ್‌ಇಡಿ ಹೆಡ್‌ಲ್ಯಾಂಪ್ಸ್ ಅಕಾ ಇಂಟೆಲಿಜೆಂಟ್ ಫ್ರಂಟ್ ಲೈಟಿಂಗ್ ಸಿಸ್ಟಮ್ ಗಾಗಿ ಗಡಿ ರೇಖೆಗಳನ್ನು ರಚಿಸುತ್ತದೆ. ಸ್ಪೆಕ್ ಮತ್ತು ಮಾದರಿಯನ್ನು ಅವಲಂಬಿಸಿ, 17 ಇಂಚಿನ, 18 ಇಂಚಿನ ಅಥವಾ 19 ಇಂಚಿನ ವ್ಹೀಲ್ ಗಳನ್ನು ಹೊಂದಿದು, ಆರು ವಿಭಿನ್ನ ಅಲಾಯ್ ವ್ಹೀಲ್ ಗಳ ವಿನ್ಯಾಸಗಳು, ಬಣ್ಣಗಳ ಆಯ್ಕೆಯನ್ನು ಹೊಂದಿದೆ.

ಸ್ಪೋರ್ಟಿ ಲುಕ್‍‍‍ನಲ್ಲಿ ಅನಾವರಣಗೊಂಡ Kia Sportage GT Line ಎಸ್‍ಯುವಿ

ಈ ಯುರೋಪ್‌ಗಾಗಿ 2022ರ Kia Sportage GT Line ಎಸ್‍ಯುವಿಯ ಒಳಭಾಗದಲ್ಲಿ ಜಾಗತಿಕ ಮಾದರಿಯನ್ನು ಹೋಲುತ್ತದೆ. ಇದು 12.3-ಇಂಚಿನ ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಸ್ಮಾರ್ಟ್ ಫೋನ್ ಕೆನೆಕ್ಟಿವಿಟಿ ಮತ್ತು ಸಂಪರ್ಕಿತ ಕಾರ್ ಟೆಕ್ ಹೊಂದಿದೆ.

ಸ್ಪೋರ್ಟಿ ಲುಕ್‍‍‍ನಲ್ಲಿ ಅನಾವರಣಗೊಂಡ Kia Sportage GT Line ಎಸ್‍ಯುವಿ

ಇನ್ನು ಈ ಎಸ್‍ಯುವಿಯಲ್ಲಿ 12.3-ಇಂಚಿನ ಇನ್‌ಸ್ಟ್ರುಮೆಂಟ್ ಕನ್ಸೋಲ್ ಅನ್ನು ಹೊಂದಿದೆ, ಇದು ನಿಖರವಾದ ಮತ್ತು ಸ್ಪಷ್ಟವಾದ ಗ್ರಾಫಿಕ್ಸ್‌ಗಾಗಿ ಇತ್ತೀಚಿನ-ಜನರೇಷನ್ ಪೂರ್ಣ ತೆಳು-ಫಿಲ್ಮ್-ಟ್ರಾನ್ಸಿಸ್ಟರ್ ಡಿಸ್ ಪ್ಲೇಯನ್ನು ಹೊಂದಿದೆ, ಈ ಎಸ್‍ಯುವಿಯು ಹರ್ಮನ್ ಕಾರ್ಡನ್ ಪ್ರೀಮಿಯಂ ಸೌಂಡ್ ಸಿಸ್ಟಂನೊಂದಿಗೆ ಬರುತ್ತದೆ. ಯುರೋಪಿಯನ್-ಸ್ಪೆಕ್ ಮಾದರಿಯನ್ನು ಸ್ಪೋರ್ಟಿ ಜಿಟಿ-ಲೈನ್ ಅವತಾರದಲ್ಲಿ ನೀಡಲಾಗಿದೆ,

ಸ್ಪೋರ್ಟಿ ಲುಕ್‍‍‍ನಲ್ಲಿ ಅನಾವರಣಗೊಂಡ Kia Sportage GT Line ಎಸ್‍ಯುವಿ

ಇದು ಜಿಟಿ ಲೈನ್ ಬ್ಯಾಡ್ಜ್‌ಗಳು, ಹೊಸ ಬಣ್ಣ ಆಯ್ಕೆಗಳು ಮತ್ತು ಡ್ಯುಯಲ್-ಟೋನ್ ಇಂಟೀರಿಯರ್ ಸ್ಕೀಮ್‌ನೊಂದಿಗೆ ಬರುತ್ತದೆ. ಇನ್ನುಯುರೋಪಿಯನ್-ಸ್ಪೆಕ್ Kia Sportage GT Line ಎಸ್‍ಯುವಿಯಲ್ಲಿ ಹೈಬ್ರಿಡ್, ಪ್ಲಗ್-ಇನ್ ಹೈಬ್ರಿಡ್, ಪೆಟ್ರೋಲ್ ಮತ್ತು ಡೀಸೆಲ್ ಸೇರಿದಂತೆ ಹಲವು ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ. ಕಂಪನಿಯು ಸ್ಪೋರ್ಟೇಜ್‌ನ ಎಲೆಕ್ಟ್ರಿಕ್ ಆವೃತ್ತಿಯನ್ನು ಪ್ರಾರಂಭಿಸುವ ಯಾವುದೇ ಯೋಜನೆಯನ್ನು ಹೊಂದಿಲ್ಲ

ಸ್ಪೋರ್ಟಿ ಲುಕ್‍‍‍ನಲ್ಲಿ ಅನಾವರಣಗೊಂಡ Kia Sportage GT Line ಎಸ್‍ಯುವಿ

ಕಿಯಾ ಬ್ರ್ಯಾಂಡ್ ಇವಿ 6 ಎಲೆಕ್ಟ್ರಿಕ್ ಕ್ರಾಸ್ಒವರ್ ಅನ್ನು ಪರಿಚಯಿಸುತ್ತದೆ. ಎಂಜಿನ್ ಆಯ್ಕೆಗಳು 1.6L ಪೆಟ್ರೋಲ್ ಮತ್ತು ಮೈಳ್ಡ್ ಹೈಬ್ರಿಡ್ ಸಿಸ್ಟಮ್, ಡೀಸೆಲ್ MHEV ಮತ್ತು 13.8kWh ಬ್ಯಾಟರಿಯೊಂದಿಗೆ ಪ್ಲಗ್-ಇನ್ ಹೈಬ್ರಿಡ್ ಅನ್ನು ಒಳಗೊಂಡಿರುವ ಸಾಧ್ಯತೆಯಿದೆ.

ಸ್ಪೋರ್ಟಿ ಲುಕ್‍‍‍ನಲ್ಲಿ ಅನಾವರಣಗೊಂಡ Kia Sportage GT Line ಎಸ್‍ಯುವಿ

ಇನ್ನು ಭಾರತದಲ್ಲಿ Kia India 2021ರ ಆಗಸ್ಟ್ ತಿಂಗಳ ಮಾಸಿಕ ಮಾರಾಟ ವರದಿಯನ್ನು ಪ್ರಕಟಿಸಿದೆ. ವರದಿಗಳ ಪ್ರಕಾರ, ಕಿಯಾ ಇಂಡಿಯಾ ಕಂಪನಿಯು ಕಳೆದ ತಿಂಗಳಿನಲ್ಲಿ 16,750 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಇನ್ನು 2020ರ ಆಗಸ್ಟ್ ತಿಂಗಳಿನಲ್ಲಿ ಕಿಯಾ ಇಂಡಿಯಾ ಕಂಪನಿಯು 10,824 ಯುನಿಟ್‌ಗಳನ್ನು ಮಾರಾಟಗೊಳಿಸಿವೆ, ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.54.4 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ.

ಸ್ಪೋರ್ಟಿ ಲುಕ್‍‍‍ನಲ್ಲಿ ಅನಾವರಣಗೊಂಡ Kia Sportage GT Line ಎಸ್‍ಯುವಿ

ಇನ್ನು ಈ ವರ್ಷದ ಜುಲೈ ತಿಂಗಳಿನಲ್ಲಿ 15,016 ಯುನಿಟ್‌ಗಳನ್ನು ಮಾರಾಟಗೊಳಿಸಿವೆ. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ Kia India ಕಂಪನಿಯು ಶೇ.11.5 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ. ಕಳೆದ ತಿಂಗಳು ಸೆಲ್ಟೋಸ್ ಮಾದರಿಯ 8,619 ಯೂನಿಟ್‌ಗಳನ್ನು ಮಾರಾಟಗೊಳಿಸಿವೆ, ಇದು ಕಳೆದ ತಿಂಗಳು ಕಿಯಾದಲ್ಲಿ ಹೆಚ್ಚು ಮಾರಾಟವಾದ ಮಾದರಿಯಾಗಿದೆ.ನಂತರ ಸೊನೆಟ್ 7,752 ಯುನಿಟ್‌ಗಳನ್ನು ಮಾರಾಟಗೊಳಿಸಿವೆ. ಇನ್ನು ಕಂಪನಿಯು ಕಾರ್ನೀವಲ್ ಪ್ರೀಮಿಯಂ ಎಂಪಿವಿಯ 379 ಯುನಿಟ್‌ಗಳನ್ನು ಭಾರತದಲ್ಲಿ ಮಾರಾಟ ಮಾಡಲಾಗಿದೆ,

Most Read Articles

Kannada
English summary
Kia unveiled 2022 sportage gt line suv for europe details
Story first published: Friday, September 3, 2021, 15:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X