Just In
- 5 hrs ago ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- 6 hrs ago ಕಂಪನಿಗೆ 140ರ ಸಂಭ್ರಮ: ಕೇವಲ 140 ವಿಶೇಷ ಆವೃತ್ತಿಗಳು ನಿರ್ಮಾಣ: ಬುಕಿಂಗ್ ಆರಂಭ
- 8 hrs ago ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- 8 hrs ago ರಾಜ್ಯದಲ್ಲಿ ತಯಾರಾಗುವ ಟೊಯೊಟಾ ಇನ್ನೋವಾ ಹೈಕ್ರಾಸ್ಗೆ ಸೆಲೆಬ್ರಿಟಿಗಳು ಫಿಧಾ: ಈ ಕಾರು ಖರೀದಿಸಿದ ನಟಿ
Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Movies ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಇವಿ9 ಪರಿಕಲ್ಪನಾ ಎಲೆಕ್ಟ್ರಿಕ್ ಆವೃತ್ತಿಯನ್ನು ಅನಾವರಣಗೊಳಿಸಿದ ಕಿಯಾ
ದಕ್ಷಿಣ ಕೊರಿಯಾದ ಕಿಯಾ ಕಂಪನಿಯು ಜಾಗತಿಕ ಮಾರುಕಟ್ಟೆಗಾಗಿ ವಿವಿಧ ಮಾದರಿಯ ಇವಿ ಆವೃತ್ತಿಗಳನ್ನು ಅಭಿವೃದ್ದಿಪಡಿಸುತ್ತಿದ್ದು, ಕಂಪನಿಯು ಲಾಸ್ ಏಂಜಲೀಸ್ನಲ್ಲಿ ನಡೆಯುತ್ತಿರುವ ಆಟೋ ಶೋನಲ್ಲಿ ತನ್ನ ಇವಿ9 ಪರಿಕಲ್ಪನೆ ಮಾದರಿಯನ್ನು ಅನಾವರಣಗೊಳಿಸಿದೆ.
ಅಮೆರಿಕದ ಅತಿ ದೊಡ್ಡ ಮೋಟಾರ್ ಶೋನಲ್ಲಿ ಅನಾವರಣಗೊಂಡ ಹ್ಯುಂಡೈ ಸೆವೆನ್ ಪರಿಕಲ್ಪನಾ ಮಾದರಿಯೊಂದಿಗೆ ಗಮನಾರ್ಹವಾದ ಹೋಲಿಕೆ ಹೊಂದಿರುವ ಕಿಯಾ ಇವಿ9 ಮಾದರಿಯು ಇ-ಜಿಎಂಪಿ ಪ್ಲ್ಯಾಟ್ಫಾರ್ಮ್ ಆಧರಿಸಿ ನಿರ್ಮಾಣಗೊಂಡಿದ್ದು, ಹೊಸ ಪರಿಕಲ್ಪನಾ ಆವೃತ್ತಿಯು ಮುಂಬರುವ ಕೆಲವೇ ದಿನಗಳಲ್ಲಿ ಉತ್ಪಾದನಾ ಆವೃತ್ತಿಯೊಂದಿಗೆ ರಸ್ತೆಗಿಳಿಯಲಿದೆ.
ಹೊಸ ಕಾರು ಅಮೆರಿಕದಲ್ಲಿ ಈಗಾಗಲೇ ಮಾರಾಟದಲ್ಲಿ ಫ್ಲ್ಯಾಗ್ಶಿಪ್ ಟೆಲ್ಲುರೈಡ್ ಎಸ್ಯುವಿಯನ್ನು ಗಾತ್ರವನ್ನು ಹೊಂದಿದ್ದು, ಇವಿ9 ಪರಿಕಲ್ಪನೆ ಮಾದರಿಯು ಟೆಲ್ಲುರೈಡ್ಗೆ ವಿದ್ಯುತ್ ಪರ್ಯಾಯವಾಗಿ ಕಾರ್ಯನಿರ್ವಹಿಸುತ್ತಿರಬಹುದು ಎನ್ನುವ ಮಾಹಿತಿಗಳಿವೆ.
ಹೊಸ ಕಾರು ಟೆಲ್ಲುರೈಡ್ ಮಾದರಿಯಲ್ಲಿ ವಿಶಾಲವಾದ ಕ್ಯಾಬಿನ್ ಸೌಲಭ್ಯದೊಂದಿಗೆ 5 ಸೀಟರ್ ಹಾಗೂ 7 ಸೀಟರ್ ಮಾದರಿಯಲ್ಲಿ ಮಾರಾಟಗೊಳ್ಳಬಹುದಾಗಿದ್ದು, ಹೊಸ ಕಾರು ಪ್ರತಿ ಚಾರ್ಜ್ಗೆ ಕನಿಷ್ಠ 482 ಕಿ.ಮೀ ಮೈಲೇಜ್ ನೀಡುವುದಾಗಿ ಕಿಯಾ ಕಂಪನಿಯೇ ಮಾಹಿತಿ ಹಂಚಿಕೊಂಡಿದೆ.
ಪರಿಕಲ್ಪನಾ ಮಾದರಿಯ ಅನಾವರಣ ಮತ್ತು ಮೈಲೇಜ್ ಮಾಹಿತಿಯ ಹೊರತಾಗಿ ಕಂಪನಿಯು ಹೊಸ ಕಾರಿನ ತಾಂತ್ರಿಕ ಅಂಶಗಳ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲವಾದರೂ ಶೀಘ್ರದಲ್ಲೇ ಇದು ಉತ್ಪಾದನಾ ಮಾದರಿಯೊಂದಿಗೆ ಇವಿ ಕಾರು ಪ್ರಿಯರನ್ನು ಗಮನಸೆಳೆಯಲಿದೆ.
ಅಲ್ಟ್ರಾ ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನ ಪ್ರೇರಣೆ ಹೊಂದಿರುವ ಕಿಯಾ ಹೊಸ ಇವಿ ಕಾರುಗಳು ಹೊಸ ತಂತ್ರಜ್ಞಾನ ಸೌಲಭ್ಯಗಳೊಂದಿಗೆ ಕೇವಲ 10 ನಿಮಿಷದಲ್ಲಿ ಶೇ.80 ರಷ್ಟು ಚಾರ್ಜ್ ಆಗಲಿದ್ದು, ಚಾರ್ಜ್ಗಾಗಿ ಗಂಟೆಗಟ್ಟಲೇ ಕಾಯುವಿಕೆಯನ್ನು ತಪ್ಪಿಸಲಿದೆ.
ಹಾಗೆಯೇ ಹೊಸ ಕಾರು ರಿಯರ್ ವ್ಹೀಲ್ ಡ್ರೈವ್ ಮತ್ತು ಆಲ್ ವ್ಹೀಲ್ ಡ್ರೈವ್ ತಂತ್ರಜ್ಞಾನದೊಂದಿಗೆ ಯಾವುದೇ ಭೂಪ್ರದೇಶಗಳಲ್ಲೂ ಸರಾಗವಾಗಿ ಚಾಲನೆ ಮಾಡುವ ಶಕ್ತಿಯುತವಾದ ಎಸ್ಯುವಿ ಮಾದರಿಯಾಗಲಿದ್ದು, ಹೊಸ ಕಾರು 2022ರ ಮಧ್ಯಂತರದಲ್ಲಿ ಇಲ್ಲವೇ 2023ರ ಆರಂಭದಲ್ಲಿ ಬಿಡುಗಡೆಯಾಗಲಿದೆ.
ಇನ್ನು ಹೆಚ್ಚುತ್ತಿರುವ ಮಾಲಿನ್ಯ ತಡೆ ಮತ್ತು ಇಂಧನಗಳ ಮೇಲಿನ ಅವಲಂಬನೆ ತಗ್ಗಿಸಲು ವಿವಿಧ ರಾಷ್ಟ್ರಗಳು 2030ರಿಂದ ಹಂತ-ಹಂತವಾಗಿ ಇಂಧನ ಚಾಲಿತ ವಾಹನಗಳ ಮಾರಾಟವನ್ನು ಸ್ಥಗಿತಗೊಳಿಸುವ ನಿರ್ಣಯ ಕೈಗೊಂಡಿದ್ದು, ಇದಕ್ಕೆ ಪೂರಕವಾಗಿ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚಿಸಲಾಗುತ್ತಿದೆ.
ಎಲೆಕ್ಟ್ರಿಕ್ ವಾಹನಗಳಿಗೆ ಪೂರಕವಾಗಿ ಯುರೋಪ್ ಒಕ್ಕೂಟದಲ್ಲಿನ ಪ್ರಮುಖ ರಾಷ್ಟ್ರಗಳ ಹೊಸ ನಿರ್ಣಯಗಳಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಮಾರಾಟವು ಸಾಕಷ್ಟು ಇಳಿಕೆಯಾಗುತ್ತಿದ್ದು, ಹೈಬ್ರಿಡ್ ಮತ್ತು ಪೂರ್ಣ ಪ್ರಮಾಣದ ಎಲೆಕ್ಟ್ರಿಕ್ ವಾಹನಗಳ ಮಾರಾಟವದಲ್ಲಿ ಸಾಕಷ್ಟು ಬೆಳವಣಿಗೆ ಕಂಡುಬಂದಿದೆ.
2020ರಲ್ಲೇ ಯುರೋಪಿನ ಪ್ರಮುಖ ರಾಷ್ಟ್ರಗಳಲ್ಲಿ ವಿವಿಧ ಆಟೋ ಉತ್ಪಾದನಾ ಕಂಪನಿಗಳು ಭಾರೀ ಪ್ರಮಾಣದ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡಿದ್ದು, ಡೀಸೆಲ್ ಕಾರುಗಳ ಮಾರಾಟದಲ್ಲಿ ಸಾಕಷ್ಟು ಇಳಿಕೆಯಾಗಿದೆ.
ಡೀಸೆಲ್ ಕಾರುಗಳ ಬಳಕೆಗೆ ಹಲವಾರು ನಿರ್ಬಂಧ ವಿಧಿಸುತ್ತಿರುವ ಯುರೋಪ್ ಒಕ್ಕೂಟವು ಎಲೆಕ್ಟ್ರಿಕ್ ವಾಹನಗಳ ಮಾರಾಟ ಮತ್ತು ಬಳಕೆಗೆ ಸಾಕಷ್ಟು ವಿನಾಯ್ತಿಗಳನ್ನು ನೀಡುತ್ತಿರುವುದೇ ಇವಿ ವಾಹನಗಳ ಬಳಕೆ ಹೆಚ್ಚಳವಾಗಲು ಪ್ರಮುಖ ಕಾರಣವಾಗಿದೆ. ಮುಂಬರುವ ದಿನಗಳಲ್ಲಿ ಡೀಸೆಲ್ ಜೊತೆಗೆ ಪೆಟ್ರೋಲ್ ವಾಹನಗಳ ಬಳಕೆಯನ್ನು ನಿರ್ಬಂಧಿಸುವತ್ತ ಹಲವಾರು ಹೊಸ ನೀತಿಗಳನ್ನು ಜಾರಿಗೆ ತರಲಾಗುತ್ತಿದ್ದು, ಇವಿ ವಾಹನಗಳ ಅಭಿವೃದ್ದಿ ಕುರಿತಂತೆ ಕಿಯಾ ಕಂಪನಿಯು ಕೂಡಾ ಹೊಸ ನಿರ್ಣಯ ಕೈಗೊಂಡಿದೆ.
ಜಗತ್ತಿನ ಎಂಟನೇ ಅತಿ ದೊಡ್ಡ ಕಾರು ಉತ್ಪಾದನಾ ಕಂಪನಿಯಾಗಿರುವ ದಕ್ಷಿಣ ಕೊರಿಯಾದ ಕಿಯಾ ಕಂಪನಿಯು ಕೂಡಾ 2040ರ ವೇಳೆಗೆ ಸಂಪೂರ್ಣವಾಗಿ ಇವಿ ವಾಹನಗಳನ್ನು ಮಾತ್ರ ಉತ್ಪಾದನೆ ಮಾಡುವುದಾಗಿ ನಿರ್ಣಯ ಕೈಗೊಂಡಿದ್ದು, ಹೊಸ ಗುರಿಸಾಧನೆಗಾಗಿ ಈಗಿನಿಂದಲೇ ಹೊಸ ಯೋಜನೆಗಳತ್ತ ಗಮನಹರಿಸಿದೆ.
2025ರ ವೇಳೆ ವಿವಿಧ ರಾಷ್ಟ್ರಗಳಲ್ಲಿ ಸುಮಾರು 10ಕ್ಕೂ ಹೆಚ್ಚು ಹೊಸ ಇವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡುವ ಯೋಜನೆ ಹೊಂದಿದ್ದು, ಭಾರತದಲ್ಲೂ ಕಿಯಾ ಕಂಪನಿಯು ವಿವಿಧ ಇವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲು ಸಿದ್ದವಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಈಗಾಗಲೇ ಸೊಲ್, ನಿರೋ ಮತ್ತು ಇವಿ6 ಕಾರು ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಸೀಮಿತ ಮಾರುಕಟ್ಟೆಗಳಲ್ಲಿ ಮಾತ್ರ ಖರೀದಿಗೆ ಲಭ್ಯವಿರುವ ಪ್ರಸ್ತುತ ಇವಿ ಮಾದರಿಗಳು ಶೀಘ್ರದಲ್ಲೇ ವಿವಿಧ ರಾಷ್ಟ್ರಗಳಲ್ಲಿ ಮಾರಾಟಗೊಳ್ಳಲಿವೆ.