ಸ್ಪೋರ್ಟಿ ಲುಕ್‍‍‍ನಲ್ಲಿ ಅನಾವರಣಗೊಂಡ ಹೊಸ Kia Sportage ಆಫ್-ರೋಡ್ ಎಸ್‍ಯುವಿ

ಜನಪ್ರಿಯ ಕಾರು ತಯಾರಕ ಕಂಪನಿಯಾದ ಕಿಯಾ ತನ್ನ ಬಹುನಿರೀಕ್ಷಿತ ನ್ಯೂ ಜನರೇಷನ್ ಸ್ಪೋರ್ಟೇಜ್ ಎಸ್‍ಯುವಿಯನ್ನು ಅನಾವರಣಗೊಳಿಸಿದೆ. ಕಿಯಾ ಸ್ಪೋರ್ಟೇಜ್(Kia Sportage) ಮಾದರಿಯು ಪ್ರಪಂಚದಾದ್ಯಂತ ಬ್ರ್ಯಾಂಡ್‌ನ‌ ಅತಿ ಹೆಚ್ಚು ಮಾರಾಟವಾಗುವ ಮಾದರಿಗಳಲ್ಲಿ ಒಂದಾಗಿದೆ.

ಸ್ಪೋರ್ಟಿ ಲುಕ್‍‍‍ನಲ್ಲಿ ಅನಾವರಣಗೊಂಡ ಹೊಸ Kia Sportage ಆಫ್-ರೋಡ್ ಎಸ್‍ಯುವಿ

ಯುಎಸ್ ಮಾರುಕಟ್ಟೆಗಳಿಗೆ ತನ್ನ ಹೊಸ ನವೀಕರಿಸಿದ ಕಿಯಾ ಸ್ಪೋರ್ಟೇಜ್ ಮಾದರಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಈ ನ್ಯೂ ಜನರೇಷನ್ ಕಿಯಾ ಸ್ಪೋರ್ಟೇಜ್ ಹೆಚ್ಚು ಆಫ್-ರೋಡರ್ ಆಗಿ ಮಾರ್ಪಟ್ಟಿದೆ, ದಪ್ಪ ವಿನ್ಯಾಸದ ಅಂಶಗಳೊಂದಿಗೆ ಗಾತ್ರದಲ್ಲಿ ಕೂಡ ಹೆಚ್ಚಾಗಿದೆ ಮತ್ತು ಹೆಚ್ಚಿನ ವೈಶಿಷ್ಟ್ಯಗಳು ಮತ್ತು ತಂತ್ರಜ್ಞಾನದೊಂದಿಗೆ ಲೋಡ್ ಆಗಿದೆ. ಕಿಯಾ ಹೊಸ ಸ್ಪೋರ್ಟೇಜ್ ಅನ್ನು ಎಕ್ಸ್-ಲೈನ್ ಮತ್ತು ಎಕ್ಸ್-ಪ್ರೊ ಸೇರಿದಂತೆ ಎರಡು ಟ್ರಿಮ್‌ಗಳಲ್ಲಿ ನೀಡುತ್ತದೆ, ಎರಡನೆಯದು ಅಡ್ವೆಂಚರ್ ಪ್ರಿಯರನ್ನು ಗುರಿಯಾಗಿಸಿ ಪರಿಚಯಿಸುತ್ತಿದೆ. ಇದರಲ್ಲಿ ಆಲ್-ಟೆರೈನ್ ಟೈರ್‌ಗಳನ್ನು ಒಳಗೊಂಡಂತೆ ಆಫ್-ರೋಡ್ ಸಿದ್ಧ ವೈಶಿಷ್ಟ್ಯಗಳೊಂದಿಗೆ ಪ್ಯಾಕ್ ಮಾಡಲಾಗಿದೆ.

ಸ್ಪೋರ್ಟಿ ಲುಕ್‍‍‍ನಲ್ಲಿ ಅನಾವರಣಗೊಂಡ ಹೊಸ Kia Sportage ಆಫ್-ರೋಡ್ ಎಸ್‍ಯುವಿ

ಕಿಯಾ ಸ್ಪೋರ್ಟೇಜ್ 1993 ರಿಂದಲೇ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಲಭ್ಯವಿದೆ ಮತ್ತು ಇದರ ಎಲ್ಲಾ ನಾಲ್ಕು ತಲೆಮಾರುಗಳು ವಿನ್ಯಾಸದಕ್ಕೆ ಹೋಲಿಸಿದರೆ ಪ್ರಮುಖ ಬದಲಾವಣೆಗಳೊಂದಿಗೆ ಐದನೇ ತಲೆಮಾರಿನ ಸ್ಪೋರ್ಟೇಜ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಲು ಮುಂದಾಗಿದೆ.. ಮರುವಿನ್ಯಾಸಗೊಳಿಸಲಾದ 2022ರ ಕಿಯಾ ಸ್ಪೋರ್ಟೇಜ್ ಹಿಂದೆಂದಿಗಿಂತಲೂ ಹೆಚ್ಚು ಶಾರ್ಪ್ ಆದ ಅಗ್ರೇಸಿವ್ ಬಾಡಿ ಲೈನ್ ಗಳನ್ನು ಹೊಂದಿದೆ.

ಸ್ಪೋರ್ಟಿ ಲುಕ್‍‍‍ನಲ್ಲಿ ಅನಾವರಣಗೊಂಡ ಹೊಸ Kia Sportage ಆಫ್-ರೋಡ್ ಎಸ್‍ಯುವಿ

ಎಲ್ಲಾ ಎಲೆಕ್ಟ್ರಿಕ್ ಸ್ಪೋರ್ಟೇಜ್ ಎಸ್‌ಯುವಿ ಕೂಡ ಶೀಘ್ರದಲ್ಲೇ ಮಾರುಕಟ್ಟೆಗೆ ಬರಬಹುದು ಎಂದು ಕಿಯಾ ಹೇಳುತ್ತದೆ. ಕಿಯಾ ಉತ್ತರ ಅಮೆರಿಕಾದ ಅಧ್ಯಕ್ಷ ಮತ್ತು ಸಿಇಒ ಸೀನ್ ಯೂನ್ ಹೇಳಿದರು ಕಿಯಾ ಎಲೆಕ್ಟ್ರಿಕ್ ಕಡೆ ಸಾಗುತ್ತಿರುವಾಗ, ನಾವು ಎಲ್ಲಾ ರೀತಿಯ ಗ್ರಾಹಕರಿಗೆ ಸೂಕ್ತವಾದ ವಿವಿಧ ಆಯ್ಕೆಗಳನ್ನು ಸೇರಿಸುವ ಮೂಲಕ ಸ್ಪೋರ್ಟೇಜ್ ಶ್ರೇಣಿಯನ್ನು ಮತ್ತಷ್ಟು ಬಲಪಡಿಸುತ್ತಿದ್ದೇವೆ ಎಂದರು.

ಸ್ಪೋರ್ಟಿ ಲುಕ್‍‍‍ನಲ್ಲಿ ಅನಾವರಣಗೊಂಡ ಹೊಸ Kia Sportage ಆಫ್-ರೋಡ್ ಎಸ್‍ಯುವಿ

ವಿನ್ಯಾಸದ ವಿಷಯದಲ್ಲಿ, ಕಿಯಾ ಸ್ಪೋರ್ಟೇಜ್ ಎಸ್‍ಯುವಿ ಅದರ ಹಿಂದಿನದಕ್ಕಿಂತ 18 ಸೆಂ.ಮೀ ಉದ್ದ ಮತ್ತು 7 ಸೆಂ.ಮೀ ಉದ್ದದ ವೀಲ್‌ಬೇಸ್‌ನಿಂದ ಗಮನಾರ್ಹವಾಗಿ ದೊಡ್ಡದಾಗಿದೆ. ಡ್ಯುಯಲ್ ಸ್ಕ್ರೀನ್ ಡ್ಯಾಶ್‌ನೊಂದಿಗೆ ಒಳಾಂಗಣವನ್ನು ಸಂಪೂರ್ಣವಾಗಿ ಮರುವಿನ್ಯಾಸಗೊಳಿಸಲಾಗಿದೆ.

ಸ್ಪೋರ್ಟಿ ಲುಕ್‍‍‍ನಲ್ಲಿ ಅನಾವರಣಗೊಂಡ ಹೊಸ Kia Sportage ಆಫ್-ರೋಡ್ ಎಸ್‍ಯುವಿ

ಹೊಸ ಕಿಯಾ ಸ್ಪೋರ್ಟೇಜ್ ಎಸ್‍ಯುವಿಯು ಹೆಚ್ಚು ಒರಟಾದ ಮತ್ತು ಅಗ್ರೇಸಿವ್ ಲುಕ್ ಅನ್ನು ಹೊಂದಿದೆ. ವಿಭಿನ್ನ ಫೆಂಡರ್ ಅನ್ನು ಹೊಂದಿದೆ, ಈ ಎಸ್‍ಯುವಿ ಸ್ಯಾಟಿನ್ ಕ್ರೋಮ್ ಮತ್ತು ಹೈ-ಗ್ಲಾಸ್ ಕಪ್ಪು ಟ್ರಿಮ್, ಮತ್ತು ರೂಫ್ ರೈಲ್ ಗಳನ್ನು ಹೆಚ್ಚಿಸಿದೆ. ಅಲ್ಲದೆ, ಬೂಮರಾಂಗ್-ಆಕಾರದ ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್‌ಗಳು, ಮಸ್ಕಲರ್ ಆರ್ಚ್ಸ್, ದಪ್ಪವಾದ ಲೈನ್ ಗಳು ಮತ್ತು ಎಲ್ಇಡಿ ಟೈಲ್‌ಲೈಟ್‌ಗಳನ್ನು ಹೊಂದಿವೆ.

ಸ್ಪೋರ್ಟಿ ಲುಕ್‍‍‍ನಲ್ಲಿ ಅನಾವರಣಗೊಂಡ ಹೊಸ Kia Sportage ಆಫ್-ರೋಡ್ ಎಸ್‍ಯುವಿ

ಹೊಸ ಸ್ಪೋರ್ಟೇಜ್‌ನ ಎಲ್ಲಾ ರೂಪಾಂತರಗಳು ಆಲ್-ವೀಲ್ ಡ್ರೈವ್ ಸಿಸ್ಟಂ ಅನ್ನು ಸ್ಟ್ಯಾಂಡರ್ಡ್ ಆಗಿ ಪಡೆಯುತ್ತವೆ ಮತ್ತು ಇದು ಸುಮಾರು ಒಂದು ಇಂಚು ಗ್ರೌಂಡ್ ಕ್ಲಿಯರೆನ್ಸ್ ಅನ್ನು ಸೇರಿಸುತ್ತದೆ. ಎಕ್ಸ್-ಲೈನ್ ಆವೃತ್ತಿಯು ಸಾಮಾನ್ಯ ಟೈರ್‌ಗಳೊಂದಿಗೆ 19-ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿದೆ.

ಸ್ಪೋರ್ಟಿ ಲುಕ್‍‍‍ನಲ್ಲಿ ಅನಾವರಣಗೊಂಡ ಹೊಸ Kia Sportage ಆಫ್-ರೋಡ್ ಎಸ್‍ಯುವಿ

ಆದರೆ ಎಕ್ಸ್-ಪ್ರೊ ಮಾದರಿಗಳು ಆಫ್-ರೋಡ್ ಟೈರ್‌ಗಳೊಂದಿಗೆ 17-ಇಂಚಿನ ವ್ಹೀಲ್ ಗಳನ್ನು ಪಡೆಯುತ್ತವೆ. ಎಕ್ಸ್-ಪ್ರೊ ಎಲ್ಇಡಿ ಫಾಗ್ ಲೈಟ್‌ಗಳು, ಹೀಟೆಡ್ ವಿಂಡ್‌ಸ್ಕ್ರೀನ್ ಮತ್ತು ವೇರಿಯಬಲ್ ಡ್ರೈವ್ ಮೋಡ್‌ಗಳನ್ನು ಸಹ ಒಳಗೊಂಡಿದೆ. ಎಕ್ಸ್-ಪ್ರೊ ಪ್ರೆಸ್ಟೀಜ್ ವೆಂಟಿಲೆಟೆಡ್ ಫ್ರಂಟ್ ಸೀಟ್, ಎಲೆಕ್ಟ್ರಿಕ್ ಆಗಿ ಹೊಂದಾಣಿಕೆ ಮಾಡಬಹುದಾದ ಪ್ರಯಾಣಿಕರ ಸೀಟ್ ಮತ್ತು ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳನ್ನು ಹೊಂದಿದೆ,

ಸ್ಪೋರ್ಟಿ ಲುಕ್‍‍‍ನಲ್ಲಿ ಅನಾವರಣಗೊಂಡ ಹೊಸ Kia Sportage ಆಫ್-ರೋಡ್ ಎಸ್‍ಯುವಿ

ಕಿಯಾ ಇನ್ನೂ ಹೊಸ ಸ್ಪೋರ್ಟೇಜ್ ಎಸ್‌ಯುವಿಯ ಸಂಪೂರ್ಣ ವಿವರಗಳನ್ನು ಹಂಚಿಕೊಂಡಿಲ್ಲ. ಆದರೆ ಸ್ಪೋರ್ಟೇಜ್‌ನ ಬೇಸ್ ಎಂಜಿನ್ ಟರ್ಬೋಚಾರ್ಜ್ಡ್ ಎಂಜಿನ್‌ಗೆ ಬದಲಾಗಿ 2.5-ಲೀಟರ್ ನಾಲ್ಕು ಸಿಲಿಂಡರ್ ನ್ಯಾಚರಲ್ ಎಂಜಿನ್‌ನೊಂದಿಗೆ ಬರುತ್ತದೆ ಎಂದು ಖಚಿತಪಡಿಸಿದೆ. ಇದು ಸ್ಪೋರ್ಟೇಜ್‌ನ ಅಸ್ತಿತ್ವದಲ್ಲಿರುವ ಮಾದರಿಗಳಲ್ಲಿ ಬಳಸಲಾದ 2.4-ಲೀಟರ್ ಎಂಜಿನ್‌ಗಿಂತ ಸ್ವಲ್ಪ ದೊಡ್ಡದಾಗಿದೆ.

ಸ್ಪೋರ್ಟಿ ಲುಕ್‍‍‍ನಲ್ಲಿ ಅನಾವರಣಗೊಂಡ ಹೊಸ Kia Sportage ಆಫ್-ರೋಡ್ ಎಸ್‍ಯುವಿ

ಹೊಸ ಎಂಜಿನ್ 187 ಎಚ್‌ಪಿ ಗರಿಷ್ಠ ಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಸ್ಪೋರ್ಟೇಜ್‌ನ ಹೈಬ್ರಿಡ್ ಆವೃತ್ತಿಯು ಶೀಘ್ರದಲ್ಲೇ ಬರಲಿದೆ ಎಂದು ಕಿಯಾ ಖಚಿತಪಡಿಸಿದೆ. ಇನ್ನು ಎಂಜಿನ್ ನೊಂದಿಗೆ ಗೇರ್ ಬಾಕ್ಸ್ ವಿಭಾಗದಲ್ಲಿಯು ಕೂಡ ಬದಲಾವಣೆಯಾಗಿದೆ. ಕಿಯಾ ಸ್ಪೋರ್ಟೇಜ್ ಈಗ ಹಿಂದಿನ ಆರು-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಬದಲಾಗಿ ಹೊಸ ಎಂಟು-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ ಅನ್ನು ಜೋಡಿಸಲಾಗಿದೆ.

ಸ್ಪೋರ್ಟಿ ಲುಕ್‍‍‍ನಲ್ಲಿ ಅನಾವರಣಗೊಂಡ ಹೊಸ Kia Sportage ಆಫ್-ರೋಡ್ ಎಸ್‍ಯುವಿ

ಇನ್ನು ಕಿಯಾ ಕಂಪನಿಯು ಹೊಸ ಸ್ಪೋರ್ಟೇಜ್ ಜಿಟಿ-ಲೈನ್ ಎಸ್‍ಯುವಿಯನ್ನು ಯುರೋಪಿಯನ್ ಮಾರುಕಟ್ಟೆಗಳಿಗಾಗಿ ಇತ್ತೀಚೆಗೆ ಅನಾವರಣಗೊಳಿಸಿತ್ತು. ಈ ಯುರೋ-ಸ್ಪೆಕ್ ಮಾದರಿಯು ಜಾಗತಿಕ ಮಾದರಿಯ ವಿನ್ಯಾಸ ಶೈಲಿಯನ್ನು ಹೊಂದಿದೆ. ಯುರೋಪಿಯನ್-ಸ್ಪೆಕ್ ಮಾದರಿಯು ಇತ್ತೀಚೆಗೆ ಆರಂಭವಾದ ಕೊರಿಯನ್-ಸ್ಪೆಕ್ ಸ್ಪೋರ್ಟೇಜ್‌ಗಿಂತ ಸ್ವಲ್ಪ ವಿಭಿನ್ನವಾಗಿ ಕಾಣಲು ಸೂಕ್ಷ್ಮ ಬದಲಾವಣೆಗಳನ್ನು ಪಡೆದುಕೊಂಡಿದೆ,

ಸ್ಪೋರ್ಟಿ ಲುಕ್‍‍‍ನಲ್ಲಿ ಅನಾವರಣಗೊಂಡ ಹೊಸ Kia Sportage ಆಫ್-ರೋಡ್ ಎಸ್‍ಯುವಿ

ಹೊಸ ಸ್ಪೋರ್ಟೇಜ್ ಜಿಟಿ-ಲೈನ್ ಎಸ್‍ಯುವಿಯು ಹುಂಡೈನ ಹೊಸ N3 ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ, ಇದು ಹೊಸ-ಜನರೇಷನ್ ಟ್ಯೂಸಾನ್ ಅನ್ನು ಸಹ ಬೆಂಬಲಿಸುತ್ತದೆ. ಯುರೋಪಿಯನ್-ಸ್ಪೆಕ್ ಮಾದರಿಯು ಸಣ್ಣ ವೀಲ್‌ಬೇಸ್‌ ಅನ್ನು ಹೊಂದಿದೆ. ಮತ್ತೊಂದೆಡೆ, ಯುಎಸ್ ಮತ್ತು ದಕ್ಷಿಣ ಕೊರಿಯಾದ ಮಾದರಿಯು ಉದ್ದವಾದ ವೀಲ್‌ಬೇಸ್ ಅನ್ನು ಹೊಂದಿದೆ. ಈ ಯುರೋಪಿಯನ್-ಸ್ಪೆಕ್ 2022 ಕಿಯಾ ಸ್ಪೋರ್ಟೇಜ್ 2,680 ಎಂಎಂ ವೀಲ್ ಬೇಸ್ ಹೊಂದಿದ್ದು, ಗ್ಲೋಬಲ್-ಸ್ಪೆಕ್ ಮಾಡೆಲ್ 1,755 ಎಂಎಂ ವ್ಹೀಲ್ ಬೇಸ್ ಅನ್ನು ಒಳಗೊಂಡಿದೆ.

Most Read Articles

Kannada
English summary
Kia unveils new gen sportage suv loaded with new features details
Story first published: Thursday, October 28, 2021, 17:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X