ಕೆಎಸ್‌ಆರ್‌ಟಿಸಿ ಟ್ರೇಡ್ ಮಾರ್ಕ್ ಸುದ್ದಿಯನ್ನು ಸುಳ್ಳೆಂದ ರಾಜ್ಯ ಸಾರಿಗೆ ನಿಗಮ

ಕೆಎಸ್‌ಆರ್‌ಟಿಸಿ ಟ್ರೇಡ್‌ಮಾರ್ಕ್ ಬಳಕೆ ವಿಚಾರಕ್ಕೆ ರಾಜ್ಯ ಸಾರಿಗೆ ನಿಗಮವು ಕೊನೆಗೂ ಮಾಧ್ಯಮಗಳ ವರದಿಗಳಿಗೆ ಪ್ರಕ್ರಿಯೆಸಿದ್ದು, ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳನ್ನು ತಳ್ಳಿಹಾಕಿದೆ.

ಕೆಎಸ್‌ಆರ್‌ಟಿಸಿ ಟ್ರೇಡ್ ಮಾರ್ಕ್ ಸುದ್ದಿಯನ್ನು ಸುಳ್ಳೆಂದ ರಾಜ್ಯ ಸಾರಿಗೆ ನಿಗಮ

ಕೊರೊನಾ ಹಾವಳಿಯ ನಡುವೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಇನ್ಮುಂದೆ 'ಕೆಎಸ್‌ಆರ್‌ಟಿಸಿ' ಟ್ರೇಡ್‌ಮಾರ್ಕ್ ಬಳಕೆ ಮಾಡಬಾರದೆಂದು ಕೋರ್ಟ್ ತೀರ್ಪು ನೀಡಿರುವುದಾಗಿ ಸುದ್ದಿಯೊಂದು ಭಾರೀ ಸಂಚಲನ ಮೂಡಿಸಿತ್ತು. ಆದರೆ ಟ್ರೇಡ್‌ಮಾರ್ಕ್ ಬಳಕೆ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಮಾಧ್ಯಮ ವರದಿಗಳ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದೆ.

ಕೆಎಸ್‌ಆರ್‌ಟಿಸಿ ಟ್ರೇಡ್ ಮಾರ್ಕ್ ಸುದ್ದಿಯನ್ನು ಸುಳ್ಳೆಂದ ರಾಜ್ಯ ಸಾರಿಗೆ ನಿಗಮ

ಕೆಎಸ್‌ಆರ್‌ಟಿಸಿ ಟ್ರೇಡ್‌ಮಾರ್ಕ್ ಬಳಕೆ ವಿರುದ್ಧವಾಗಿ ಸಂಸ್ಥೆಗೆ ಯಾವುದೇ ಆದೇಶ ಬಂದಿಲ್ಲ ಎಂದಿರುವ ರಾಜ್ಯ ಸಾರಿಗೆ ನಿಗಮದ ಹಿರಿಯ ಅಧಿಕಾರಿಗಳು ಒಂದು ವೇಳೆ ಅಂತಹ ನೋಟಿಸ್ ಬಂದಲ್ಲಿ ಸಂಸ್ಥೆಯಿಂದ ಸೂಕ್ತವಾದ ಉತ್ತರವನ್ನು ನೀಡಲಾಗುವುದು ಎಂದಿದ್ದಾರೆ.

ಕೆಎಸ್‌ಆರ್‌ಟಿಸಿ ಟ್ರೇಡ್ ಮಾರ್ಕ್ ಸುದ್ದಿಯನ್ನು ಸುಳ್ಳೆಂದ ರಾಜ್ಯ ಸಾರಿಗೆ ನಿಗಮ

ಕೆಎಸ್‌ಆರ್‌ಟಿಸಿ ಟ್ರೇಡ್ ಮಾರ್ಕ್ ಕುರಿತಾಗಿ ಕೇಂದ್ರದ ಟ್ರೇಡ್ ಮಾರ್ಕ್ ಮಂಡಳಿಯಿಂದ ಸಂಸ್ಥೆಗೆ ಇದುವರೆಗೂ ಯಾವುದೇ ಸೂಚನೆ ಮತ್ತು ಆದೇಶಗಳನ್ನು ಪಡೆದುಕೊಂಡಿಲ್ಲವೆಂದಿರುವ ಕೆಎಸ್‌ಆರ್‌ಟಿಸಿಯ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ ಸ್ಪಷ್ಟನೆ ನೀಡಿದ್ದಾರೆ.

ಕೆಎಸ್‌ಆರ್‌ಟಿಸಿ ಟ್ರೇಡ್ ಮಾರ್ಕ್ ಸುದ್ದಿಯನ್ನು ಸುಳ್ಳೆಂದ ರಾಜ್ಯ ಸಾರಿಗೆ ನಿಗಮ

ಎರಡು ರಾಜ್ಯಗಳ ನಡುವಿನ ಒಂದು ದಶಕದ ಕಾನೂನಾತ್ಮಕ ಹೋರಾಟವು ಅಂತ್ಯಗೊಂಡಂತಿದೆ ಎಂಬ ಮಾಧ್ಯಮಗಳ ವರದಿಯನ್ನು ನೋಡಿ ಆಶ್ಚರ್ಯವಾಗಿದೆ ಎಂದಿರುವ ಕೆಎಸ್ಆರ್‌ಟಿಸಿ ಸಂಸ್ಥೆಯು ಇದು ವಸ್ತುಷಃ ಸತ್ಯಕ್ಕೆ ದೂರವಾದ ವರದಿ ಎಂದಿದೆ.

ಕೆಎಸ್‌ಆರ್‌ಟಿಸಿ ಟ್ರೇಡ್ ಮಾರ್ಕ್ ಸುದ್ದಿಯನ್ನು ಸುಳ್ಳೆಂದ ರಾಜ್ಯ ಸಾರಿಗೆ ನಿಗಮ

ಬೌದ್ಧಿಕ ಆಸ್ತಿ ಮೇಲ್ಮನವಿ ಮಂಡಳಿ (ಐಪಿಎಬಿ)ಯ ಮುಂದೆ ಸಲ್ಲಿಸಲಾಗಿರುವ ಮೇಲ್ಮನವಿಗಳ ಕುರಿತು ವಿಚಾರಣೆ ನಡೆಯುತ್ತಿರುವ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಕೆಎಸ್ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿಚಾರಣೆಯ ಯಾವುದೇ ಅಂತಿಮ ಆದೇಶಗಳನ್ನು ಇನ್ನು ಸಹ ಹೊರಡಿಸಲಾಗಿಲ್ಲವೆಂದಿದ್ದಾರೆ.

ಕೆಎಸ್‌ಆರ್‌ಟಿಸಿ ಟ್ರೇಡ್ ಮಾರ್ಕ್ ಸುದ್ದಿಯನ್ನು ಸುಳ್ಳೆಂದ ರಾಜ್ಯ ಸಾರಿಗೆ ನಿಗಮ

ಕೇರಳದ ಕೆಎಸ್‌ಆರ್‌ಟಿಸಿಯು ಕರ್ನಾಟಕದ ಕೆಎಸ್ಆರ್‌ಟಿಸಿಗೆ ನೋಟಿಸ್ ನೀಡಲು ಉದ್ದೇಶಿಸಿದೆ ಎಂದು ಮಾಧ್ಯಮಗಳ ವರದಿಗಳನ್ನು ಸಹ ತಳ್ಳಿಹಾಕಿರುವ ರಾಜ್ಯ ಸಾರಿಗೆ ನಿಗಮವು ಒಂದು ವೇಳೆ ಅಂತಹ ನೋಟಿಸ್ ನೀಡಿದರೆ ಸಂಸ್ಥೆಯಿಂದ ಸೂಕ್ತವಾದ ಉತ್ತರವನ್ನು ನೀಡಲಾಗುವುದು ಎಂದಿದ್ದಾರೆ.

MOST READ: ಸೆಕೆಂಡ್ ಹ್ಯಾಂಡ್ ಎಲೆಕ್ಟ್ರಿಕ್ ವಾಹನ ಖರೀದಿಸುವ ಮುನ್ನ ತಿಳಿದಿರಬೇಕಾದ ಪ್ರಮುಖ ಅಂಶಗಳಿವು

ಕೆಎಸ್‌ಆರ್‌ಟಿಸಿ ಟ್ರೇಡ್ ಮಾರ್ಕ್ ಸುದ್ದಿಯನ್ನು ಸುಳ್ಳೆಂದ ರಾಜ್ಯ ಸಾರಿಗೆ ನಿಗಮ

ಜೊತೆಗೆ ಕೆಎಸ್‌ಆರ್‌ಟಿಸಿ ಟ್ರೇಡ್ ಮಾರ್ಕ್ ಕುರಿತಾದ ನಮ್ಮ ಹಕ್ಕುಗಳನ್ನು ರಕ್ಷಿಸಲು ಅಗತ್ಯ ಕಾನೂನು ಹೋರಾಟಗಳನ್ನು ಮುಂದುವರಿಸುವುದಾಗಿ ಸ್ಪಷ್ಟನೆ ನೀಡಿದ್ದು, ಸತ್ಯಕ್ಕೆ ದೂರವಾದ ಹಾಗೂ ಕಾನೂನಾತ್ಮಕವಲ್ಲದ ವರದಿಗಳನ್ನು ಪ್ರಕಟಿಸದಂತೆ ವಿನಂತಿಸಲಾಗಿದೆ.

ಕೆಎಸ್‌ಆರ್‌ಟಿಸಿ ಟ್ರೇಡ್ ಮಾರ್ಕ್ ಸುದ್ದಿಯನ್ನು ಸುಳ್ಳೆಂದ ರಾಜ್ಯ ಸಾರಿಗೆ ನಿಗಮ

ಕೆಎಸ್‌ಆರ್‌ಟಿಸಿ ಟ್ರೇಡ್ ಮಾರ್ಕ್ ಕುರಿತಂತೆ ಇದೀಗ ಸಂಸ್ಥೆಯೇ ಸ್ಪಷ್ಟನೆ ನೀಡಿರುವುದರಿಂದ ಉಪಾಪೋಹ ಸುದ್ದಿಗಳಿಗೆ ತೆರೆಬಿದ್ದಿದ್ದು, ಮುಂಬರುವ ದಿನಗಳಲ್ಲಿ ಇಂತಹ ತೀರ್ಪು ಪ್ರಕಟವಾದರೂ ಕಾನೂನಾತ್ಮಕ ಹೋರಾಟದ ಸ್ಪಷ್ಟತೆ ನೀಡಲಾಗಿದೆ.

MOST READ: ಲಾಕ್‌ಡೌನ್ ಹಿನ್ನಲೆ ವಾಹನ ದಾಖಲೆಗಳ ಮಾನ್ಯತಾ ಅವಧಿ ಕುರಿತು ಸಾರಿಗೆ ಇಲಾಖೆಯಿಂದ ಹೊಸ ಆದೇಶ

ಕೆಎಸ್‌ಆರ್‌ಟಿಸಿ ಟ್ರೇಡ್ ಮಾರ್ಕ್ ಸುದ್ದಿಯನ್ನು ಸುಳ್ಳೆಂದ ರಾಜ್ಯ ಸಾರಿಗೆ ನಿಗಮ

ಇನ್ನು ಕರ್ನಾಟಕದ ಕೆಎಸ್ಆರ್‌ಟಿಸಿ ಸಂಸ್ಥೆಯು ಟ್ರೇಡ್ ಮಾರ್ಕ್ ಅನ್ನು ತಾನು ಮಾತ್ರ ಬಳಸಲು ಅವಕಾಶ ನೀಡುವಂತೆ ಕೋರಿ 2014ರಲ್ಲಿ ಕೇಂದ್ರ ಟ್ರೇಡ್ ಮಾರ್ಕ್ ನೋದಂಣಿ ಪ್ರಾಧಿಕಾರದ ಮೆಟ್ಟಿಲೇರಿದೆ. ಇದಕ್ಕೆ ಪ್ರತಿಯಾಗಿ ಕೇರಳ ಸಹ ಪ್ರತಿದೂರು ಸಲ್ಲಿಸಿದ್ದು, ಬೌದ್ಧಿಕ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ರಾಜ್ಯಗಳ ಸಾರಿಗೆ ನಿಗಮಗಳಿಂದ ಕಾನೂನು ಹೋರಾಟವು ಮುಂದುವರಿದೆ.

Most Read Articles

Kannada
English summary
KSRTC Trademark Case Latest Update. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X