ಎಲೆಕ್ಟ್ರಿಕ್ ಕಾರು ಉತ್ಪಾದನೆ ಬಗ್ಗೆ ಮಾಹಿತಿ ನೀಡಿದ ಲ್ಯಾಂಬೊರ್ಗಿನಿ

ಲ್ಯಾಂಬೊರ್ಗಿನಿ ಕಂಪನಿಯು ತನ್ನ ಎಲೆಕ್ಟ್ರಿಕ್ ಕಾರುಗಳ ಬಗೆಗಿನ ಮಾರ್ಗಸೂಚಿಯನ್ನು ಘೋಷಿಸಿದೆ. ಇದರ ಅಡಿಯಲ್ಲಿ 10 ವರ್ಷಗಳ ಯೋಜನೆಯ ಬಗ್ಗೆ ಕಂಪನಿಯು ಮಾಹಿತಿ ನೀಡಿದೆ.

ಎಲೆಕ್ಟ್ರಿಕ್ ಕಾರು ಉತ್ಪಾದನೆ ಬಗ್ಗೆ ಮಾಹಿತಿ ನೀಡಿದ ಲ್ಯಾಂಬೊರ್ಗಿನಿ

ಕಂಪನಿಯು ಮೊದಲ ಪೂರ್ಣ ಪ್ರಮಾಣದ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸುವ ಮುನ್ನ ಹೈಬ್ರಿಡ್ ಕಾರುಗಳನ್ನು ಬಿಡುಗಡೆಗೊಳಿಸಲಿದೆ. ಕಂಪನಿಯ ಯೋಜನೆಯ ಪ್ರಕಾರ, ಮೊದಲ ಹಂತದಲ್ಲಿ ಕಂಪನಿಯು 2021ರಲ್ಲಿ ವಿ 21 ಸರಣಿಯಲ್ಲಿ ಎರಡು ಹೊಸ ಮಾದರಿಗಳನ್ನು ಬಿಡುಗಡೆಗೊಳಿಸಲು ಮುಂದಾಗಿದೆ.

ಎಲೆಕ್ಟ್ರಿಕ್ ಕಾರು ಉತ್ಪಾದನೆ ಬಗ್ಗೆ ಮಾಹಿತಿ ನೀಡಿದ ಲ್ಯಾಂಬೊರ್ಗಿನಿ

ವಿಶ್ವದಾದ್ಯಂತವಿರುವ ಪ್ರಮುಖ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಯತ್ತ ಸಾಗುತ್ತಿವೆ. ಹಲವು ಕಂಪನಿಗಳು ತಮ್ಮ ಯೋಜನೆಗಳನ್ನು ಬಹಿರಂಗಪಡಿಸಿ, ಅದರ ಕಡೆಗೆ ಕಾರ್ಯೋನ್ಮುಖವಾಗಿವೆ.

MOST READ:ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ಎಲೆಕ್ಟ್ರಿಕ್ ಕಾರು ಉತ್ಪಾದನೆ ಬಗ್ಗೆ ಮಾಹಿತಿ ನೀಡಿದ ಲ್ಯಾಂಬೊರ್ಗಿನಿ

ಈಗ ಈ ಸಾಲಿಗೆ ಲ್ಯಾಂಬೊರ್ಗಿನಿ ಕಂಪನಿ ಕೂಡ ಸೇರಿಕೊಂಡಿದ್ದು, ತನ್ನ ಎಲೆಕ್ಟ್ರಿಕ್ ಕಾರುಗಳ ಯೋಜನೆಗಳನ್ನು ಘೋಷಿಸಿದೆ. ಕಂಪನಿಯು ಮೊದಲ ಹಂತದಲ್ಲಿ ಐಸಿ ಎಂಜಿನ್ ಹೊಂದಿರುವ ಎರಡು ಹೊಸ ಮಾದರಿಗಳನ್ನು ಬಿಡುಗಡೆಗೊಳಿಸಲಿದೆ.

ಎಲೆಕ್ಟ್ರಿಕ್ ಕಾರು ಉತ್ಪಾದನೆ ಬಗ್ಗೆ ಮಾಹಿತಿ ನೀಡಿದ ಲ್ಯಾಂಬೊರ್ಗಿನಿ

ಲ್ಯಾಂಬೊರ್ಗಿನಿ ಕಂಪನಿಯು ಎರಡನೇ ಹಂತದಲ್ಲಿ ಹೈಬ್ರಿಡ್ ಮಾದರಿಗಳನ್ನು ಬಿಡುಗಡೆಗೊಳಿಸಲಿದೆ. ಮೊದಲ ಹೈಬ್ರಿಡ್ ಸೂಪರ್ ಕಾರು 2023ರಲ್ಲಿ ಬಿಡುಗಡೆಯಾಗಲಿದೆ ಎಂದು ಕಂಪನಿ ತಿಳಿಸಿದೆ.

MOST READ:ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ಎಲೆಕ್ಟ್ರಿಕ್ ಕಾರು ಉತ್ಪಾದನೆ ಬಗ್ಗೆ ಮಾಹಿತಿ ನೀಡಿದ ಲ್ಯಾಂಬೊರ್ಗಿನಿ

2024ರ ವೇಳೆಗೆ ಸಂಪೂರ್ಣ ಸರಣಿಯನ್ನು ಎಲೆಕ್ಟ್ರಿಕರಣಗೊಳಿಸಲಾಗುವುದು ಎಂದು ಕಂಪನಿ ಹೇಳಿದೆ. ಕಾರುಗಳ ಉತ್ಪಾದನೆಯಲ್ಲಿ ಕಂಪನಿಯು ಲಘು ಕಾರ್ಬನ್ ಫೈಬರ್ ವಸ್ತುಗಳನ್ನು ಬಳಸಲಿದೆ. ಲ್ಯಾಂಬೊರ್ಗಿನಿ ಕಂಪನಿಯು 1.5 ಬಿಲಿಯನ್ ಯುರೋಗಳನ್ನು ಹೂಡಿಕೆ ಮಾಡಲು ಮುಂದಾಗಿದೆ.

ಎಲೆಕ್ಟ್ರಿಕ್ ಕಾರು ಉತ್ಪಾದನೆ ಬಗ್ಗೆ ಮಾಹಿತಿ ನೀಡಿದ ಲ್ಯಾಂಬೊರ್ಗಿನಿ

ಈ ಹೂಡಿಕೆಯು ಕಂಪನಿಯ ಎಲೆಕ್ಟ್ರಿಕರಣ ಪ್ರಕ್ರಿಯೆಯಲ್ಲಿ ನೆರವಾಗುತ್ತದೆ. ಈ ಹೂಡಿಕೆಯನ್ನು 2025ಕ್ಕಿಂತ ಮೊದಲು ಕಾರ್ಬನ್ ಡೈ ಆಕ್ಸೈಡ್ ಹೊರಸೂಸುವಿಕೆಯನ್ನು 50%ನಷ್ಟು ಕಡಿಮೆ ಮಾಡಲು ಬಳಸಲಾಗುತ್ತದೆ.

MOST READ:ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ಎಲೆಕ್ಟ್ರಿಕ್ ಕಾರು ಉತ್ಪಾದನೆ ಬಗ್ಗೆ ಮಾಹಿತಿ ನೀಡಿದ ಲ್ಯಾಂಬೊರ್ಗಿನಿ

ಇದು ಲ್ಯಾಂಬೊರ್ಗಿನಿಯ ಕಂಪನಿಯ ಇತಿಹಾಸದಲ್ಲಿಯೇ ಅತಿದೊಡ್ಡ ಪ್ರಮಾಣದ ಹೂಡಿಕೆಯಾಗಲಿದೆ. ಮೂರನೇ ಹಾಗೂ ಕೊನೆಯ ಹಂತದ ಬಗ್ಗೆ ಹೇಳುವುದಾದರೆ, ಕಂಪನಿಯು ಈ ಹಂತದಲ್ಲಿ ಲ್ಯಾಂಬೊರ್ಗಿನಿಯ ಮೊದಲ ಪೂರ್ಣ ಪ್ರಮಾಣದ ಎಲೆಕ್ಟ್ರಿಕ್ ಕಾರ್ ಅನ್ನು ಬಿಡುಗಡೆಗೊಳಿಸಲಿದೆ.

ಎಲೆಕ್ಟ್ರಿಕ್ ಕಾರು ಉತ್ಪಾದನೆ ಬಗ್ಗೆ ಮಾಹಿತಿ ನೀಡಿದ ಲ್ಯಾಂಬೊರ್ಗಿನಿ

ಕಂಪನಿಯು ತಂತ್ರಜ್ಞಾನ ಆಧುನೀಕರಣದಲ್ಲಿ ಹೂಡಿಕೆ ಮಾಡುತ್ತಿದೆ. ಇದರಿಂದ ಹೊಸ ಉತ್ಪನ್ನಗಳನ್ನು ಈ ಸೆಗ್ ಮೆಂಟಿನಲ್ಲಿ ಕಾಣಬಹುದು. ಲ್ಯಾಂಬೊರ್ಗಿನಿ ಕಂಪನಿಯು 2030ರ ನಂತರ ಸುಸ್ಥಿರ ಕಾರ್ಯತಂತ್ರದಲ್ಲಿ ಕಾರ್ಯ ನಿರ್ವಹಿಸಲಿದೆ.

MOST READ:ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ಎಲೆಕ್ಟ್ರಿಕ್ ಕಾರು ಉತ್ಪಾದನೆ ಬಗ್ಗೆ ಮಾಹಿತಿ ನೀಡಿದ ಲ್ಯಾಂಬೊರ್ಗಿನಿ

ಹೊಸ ದಿಕ್ಕಿನಲ್ಲಿ ಸಾಗುತ್ತಿದ್ದರೂ, ತನ್ನ ಬೇರುಗಳಿಗೆ ಅಂಟಿಕೊಂಡಿರುವುದಾಗಿ ಲ್ಯಾಂಬೊರ್ಗಿನಿ ಕಂಪನಿ ಹೇಳಿದೆ. ಈ ಸೂಪರ್ ಕಾರ್ ತಯಾರಕ ಕಂಪನಿಯು ಈ ಪ್ರಯಾಣದಲ್ಲಿ ಹೇಗೆ ಸಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಎಲೆಕ್ಟ್ರಿಕ್ ಕಾರು ಉತ್ಪಾದನೆ ಬಗ್ಗೆ ಮಾಹಿತಿ ನೀಡಿದ ಲ್ಯಾಂಬೊರ್ಗಿನಿ

ದೇಶಿಯ ಮಾರುಕಟ್ಟೆಯಲ್ಲಿಯೂ ಐಷಾರಾಮಿ ಎಲೆಕ್ಟ್ರಿಕ್ ಕಾರುಗಳ ಮಾರಾಟವನ್ನು ಆರಂಭಿಸಲಾಗಿದೆ. ಮರ್ಸಿಡಿಸ್ ಬೆಂಝ್ ಕಂಪನಿಯು ಭಾರತದಲ್ಲಿ ಇಕ್ಯೂ ಎಲೆಕ್ಟ್ರಿಕ್ ಕಾರ್ ಅನ್ನು ಬಿಡುಗಡೆಗೊಳಿಸಿದೆ.

MOST READ:ಜೀವದ ಹಂಗು ತೊರೆದು ಮಗುವಿನ ಪ್ರಾಣ ಉಳಿಸಿದ ರಿಯಲ್ ಹೀರೋಗೆ ಬೈಕ್ ಉಡುಗೊರೆ ನೀಡಿದ ಜಾವಾ ಕಂಪನಿ

ಎಲೆಕ್ಟ್ರಿಕ್ ಕಾರು ಉತ್ಪಾದನೆ ಬಗ್ಗೆ ಮಾಹಿತಿ ನೀಡಿದ ಲ್ಯಾಂಬೊರ್ಗಿನಿ

ಇನ್ನು ಆಡಿ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಎ ಟ್ರಾನ್ ಎಲೆಕ್ಟ್ರಿಕ್ ಕಾರ್ ಅನ್ನು ಬಿಡುಗಡೆಗೊಳಿಸಿದೆ. ಶೀಘ್ರದಲ್ಲಿಯೇ ಟೆಸ್ಲಾ ಕಂಪನಿಯು ಸಹ ದೇಶಿಯ ಮಾರುಕಟ್ಟೆಯಲ್ಲಿ ತನ್ನ ಕಾರ್ ಅನ್ನು ಬಿಡುಗಡೆಗೊಳಿಸಲಿದೆ. ಮುಂಬರುವ ದಶಕದಲ್ಲಿ ಭಾರತದಲ್ಲಿ ಎಲೆಕ್ಟ್ರಿಕ್ ಸೂಪರ್ ಕಾರ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುವ ಸಾಧ್ಯತೆಗಳಿವೆ.

Most Read Articles

Kannada
English summary
Lamborghini announces its plans about electric car. Read in Kannada.
Story first published: Tuesday, May 18, 2021, 20:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X