ಲ್ಯಾಂಬೊರ್ಗಿನಿ ಹುರಾಕನ್ ಇವೊ ಆರ್‌ಡಬ್ಲ್ಯೂಡಿ ಸ್ಪೈಡರ್ ಫಸ್ಟ್ ಲುಕ್ ರಿವ್ಯೂ

ಲ್ಯಾಂಬೊರ್ಗಿನಿ ಕಂಪನಿಯು 2020ರಲ್ಲಿ ಹುರಾಕನ್ ಇವೊ ಆರ್‌ಡಬ್ಲ್ಯೂಡಿ ಸ್ಪೈಡರ್ ಕಾರ್ ಅನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪರಿಚಯಿಸಿತ್ತು. ಈಗ ಈ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿದೆ.

ಲ್ಯಾಂಬೊರ್ಗಿನಿ ಹುರಾಕನ್ ಇವೊ ಆರ್‌ಡಬ್ಲ್ಯೂಡಿ ಸ್ಪೈಡರ್ ಫಸ್ಟ್ ಲುಕ್ ರಿವ್ಯೂ

ಹುರಾಕನ್ ಇವೊ ಆರ್‌ಡಬ್ಲ್ಯೂಡಿ ಸ್ಪೈಡರ್ ಕಾರಿನ ಬೆಲೆ ಎಕ್ಸ್ ಶೋ ದರದಂತೆ ರೂ.3.54 ಕೋಟಿಗಳಾಗಿದೆ. ಇತ್ತೀಚಿಗೆ ನಾವು ಮುಂಬೈನ ಲ್ಯಾಂಬೊರ್ಗಿನಿ ಶೋರೂಂಗೆ ಭೇಟಿ ನೀಡಿ ಈ ಕಾರ್ ಅನ್ನು ವೀಕ್ಷಿಸಿದೆವು. ಕಾರಿನ ಫಸ್ಟ್ ಲುಕ್ ರಿವ್ಯೂವನ್ನು ಈ ಲೇಖನದಲ್ಲಿ ನೋಡೋಣ.

ಲ್ಯಾಂಬೊರ್ಗಿನಿ ಹುರಾಕನ್ ಇವೊ ಆರ್‌ಡಬ್ಲ್ಯೂಡಿ ಸ್ಪೈಡರ್ ಫಸ್ಟ್ ಲುಕ್ ರಿವ್ಯೂ

ವಿನ್ಯಾಸ ಹಾಗೂ ಶೈಲಿ

ಲ್ಯಾಂಬೊರ್ಗಿನಿ ಹುರಾಕನ್ ಇವೊ ರೇರ್ ವ್ಹೀಲ್ ಡ್ರೈವ್ ಸ್ಪೈಡರ್ ಅನ್ನು ಲೈಫ್ ಸ್ಟೈಲ್ ಆಯ್ಕೆಯಾಗಿ ವಿನ್ಯಾಸಗೊಳಿಸಲಾಗಿದೆ. ಮುಂಭಾಗದಲ್ಲಿ ಈ ಕಾರು ಆರ್‌ಡಬ್ಲ್ಯೂಡಿ ಕೂಪೆ ಕಾರ್ ಅನ್ನು ಹೋಲುತ್ತದೆ.

ಲ್ಯಾಂಬೊರ್ಗಿನಿ ಹುರಾಕನ್ ಇವೊ ಆರ್‌ಡಬ್ಲ್ಯೂಡಿ ಸ್ಪೈಡರ್ ಫಸ್ಟ್ ಲುಕ್ ರಿವ್ಯೂ

ಈ ಕಾರಿನ ಮುಂಭಾಗದಲ್ಲಿ ಸಿಗ್ನೆಚರ್ ಡಿಆರ್‌ಎಲ್‌ಗಳೊಂದಿಗೆ ಲೇಸರ್ ಎಲ್‌ಇಡಿ ಹೆಡ್‌ಲೈಟ್‌, ಏರ್ ಡ್ಯಾಮ್, ಸ್ಪ್ಲಿಟರ್ ಹಾಗೂ ವರ್ಟಿಕಲ್ ಫಿನ್'ಗಳನ್ನು ನೀಡಲಾಗಿದೆ. ನಾವು ಪರೀಕ್ಷಿಸಿದ ಕಾರು ಬೆಸ್ಪೋಕ್ ಬ್ಲೂ ಸೈಡೆರಿಸ್ ಬಣ್ಣವನ್ನು ಹೊಂದಿತ್ತು.

ಲ್ಯಾಂಬೊರ್ಗಿನಿ ಹುರಾಕನ್ ಇವೊ ಆರ್‌ಡಬ್ಲ್ಯೂಡಿ ಸ್ಪೈಡರ್ ಫಸ್ಟ್ ಲುಕ್ ರಿವ್ಯೂ

ಈ ಆರ್‌ಡಬ್ಲ್ಯೂಡಿ ಸ್ಪೈಡರ್‌ ಕಾರು 5 ಸ್ಪೋಕ್ 19 ಇಂಚಿನ ಅಲಾಯ್ ವ್ಹೀಲ್, ಕೆಂಪು ಬಣ್ಣದ ಬ್ರೇಕ್ ಕ್ಯಾಲಿಪರ್‌, ಡೋರುಗಳ ಹಿಂಭಾಗ ಎರಡೂ ಬದಿಯಲ್ಲಿ ದೊಡ್ಡ ಏರ್ ಡಕ್ಟ್ ಹೊಂದಿದೆ.

ಲ್ಯಾಂಬೊರ್ಗಿನಿ ಹುರಾಕನ್ ಇವೊ ಆರ್‌ಡಬ್ಲ್ಯೂಡಿ ಸ್ಪೈಡರ್ ಫಸ್ಟ್ ಲುಕ್ ರಿವ್ಯೂ

ಈ ಏರ್ ಡಕ್ಟ್ ಈ ಕಾರಿನಲ್ಲಿರುವ ಬೃಹತ್ ಗಾತ್ರದ ವಿ 10 ಎಂಜಿನ್ ಅನ್ನು ಕೂಲ್ ಆಗಿಡಲು ನೆರವಾಗುತ್ತದೆ. ಏರ್ ಡಕ್ಟ್ ಮೇಲೆ ಹುರಾಕನ್ ಇವೊ ಆರ್‌ಡಬ್ಲ್ಯೂಡಿ ಲೋಗೊ ಅಳವಡಿಸಲಾಗಿದೆ.

ಲ್ಯಾಂಬೊರ್ಗಿನಿ ಹುರಾಕನ್ ಇವೊ ಆರ್‌ಡಬ್ಲ್ಯೂಡಿ ಸ್ಪೈಡರ್ ಫಸ್ಟ್ ಲುಕ್ ರಿವ್ಯೂ

ಹಿಂಭಾಗದ ಬಂಪರ್'ನಲ್ಲಿ ಹೊಸ ಡಿಫ್ಯೂಸರ್ ನೀಡಲಾಗಿದೆ. ಈ ಕಾರಿನಲ್ಲಿ ಅಕ್ರಪೋವಿಕ್ ಅಭಿವೃದ್ಧಿಪಡಿಸುತ್ತಿರುವ ಎಕ್ಸಾಸ್ಟ್ ಸಿಸ್ಟಂ ಅಳವಡಿಸಲಾಗಿದೆ. ಈ ಸಿಸ್ಟಂ ಹಗುರವಾಗಿದ್ದು, ಪವರ್ ಅಂಕಿಅಂಶಗಳನ್ನು ಹೆಚ್ಚಿಸುತ್ತದೆ.

ಲ್ಯಾಂಬೊರ್ಗಿನಿ ಹುರಾಕನ್ ಇವೊ ಆರ್‌ಡಬ್ಲ್ಯೂಡಿ ಸ್ಪೈಡರ್ ಫಸ್ಟ್ ಲುಕ್ ರಿವ್ಯೂ

ಈ ಕಾರಿನ ಸಾಫ್ಟ್ ಟಾಪ್ ರೂಫ್ ಅನ್ನು 17 ಸೆಕೆಂಡುಗಳಲ್ಲಿ ತೆರೆಯಬಹುದು ಹಾಗೂ ಕಾರು 50 ಕಿ.ಮೀ ವೇಗದಲ್ಲಿ ಚಲಿಸುವಾಗ ನಿರ್ವಹಿಸಬಹುದು. ಸಾಫ್ಟ್-ಟಾಪ್ ಅನ್ನು ಮೇಲಕ್ಕೆ ಅಥವಾ ಕೆಳಕ್ಕೆ ತೆರೆಯಬಹುದು.

ಲ್ಯಾಂಬೊರ್ಗಿನಿ ಹುರಾಕನ್ ಇವೊ ಆರ್‌ಡಬ್ಲ್ಯೂಡಿ ಸ್ಪೈಡರ್ ಫಸ್ಟ್ ಲುಕ್ ರಿವ್ಯೂ

ಈ ಕಾರಿನಲ್ಲಿರುವ ರೇರ್ ವಿಂಡೋವನ್ನು ಎಲೆಕ್ಟ್ರಾನಿಕ್ ಆಗಿ ತೆರೆಯಬಹುದು. ಈ ವಿಂಡೋ ವಿಂಡ್ ಷೀಲ್ಡ್'ನಂತೆ ಕಾರ್ಯ ನಿರ್ವಹಿಸುತ್ತದೆ. ಈ ಕಾರಿನಲ್ಲಿರುವಕವರ್ ತೆರೆದಾಗ ಎಂಜಿನ್‌ನ ಒಂದು ಭಾಗವನ್ನು ಹಾಗೂ ಎಕ್ಸಾಸ್ಟ್ ಸಿಸ್ಟಂ ಅನ್ನು ಮಾತ್ರ ನೋಡಲು ಸಾಧ್ಯವಾಗುತ್ತದೆ.

ಲ್ಯಾಂಬೊರ್ಗಿನಿ ಹುರಾಕನ್ ಇವೊ ಆರ್‌ಡಬ್ಲ್ಯೂಡಿ ಸ್ಪೈಡರ್ ಫಸ್ಟ್ ಲುಕ್ ರಿವ್ಯೂ

ಇಂಟಿರಿಯರ್

ಈ ಕಾರಿನ ಇಂಟಿರಿಯರ್'ನಲ್ಲಿ ಅಳವಡಿಸಿರುವ 8.4 ಇಂಚಿನ ಹೆಚ್‌ಎಂಐ ಟಚ್‌ಸ್ಕ್ರೀನ್ ಫೋನ್ ಕಾಲ್, ಇಂಟರ್ ನೆಟ್ ಆಕ್ಸೆಸ್ ಹಾಗೂ ಆಪಲ್ ಕಾರ್ ಪ್ಲೇಗಳಿಗೆ ಕನೆಕ್ಟ್ ಮಾಡುತ್ತದೆ.

ಲ್ಯಾಂಬೊರ್ಗಿನಿ ಹುರಾಕನ್ ಇವೊ ಆರ್‌ಡಬ್ಲ್ಯೂಡಿ ಸ್ಪೈಡರ್ ಫಸ್ಟ್ ಲುಕ್ ರಿವ್ಯೂ

ಅದರ ಮೇಲೆ ಟಾಗಲ್ ಸ್ವಿಚ್‌ ನೀಡಲಾಗಿದೆ. ಈ ಕಾರಿನಲ್ಲಿರುವ ಸೆಟಪ್ ವಿಮಾನದ ಕಾಕ್‌ಪಿಟ್‌ನಂತೆ ಕಾಣುತ್ತದೆ. ಈ ಕಾರಿನಲ್ಲಿರುವ ಸೀಟುಗಳನ್ನು ಕಾಂಟ್ರಾಸ್ಟ್ ರೆಡ್ ಹಾಗೂ ಕಪ್ಪು ಬಣ್ಣದಲ್ಲಿ ಸ್ಟಿಚ್ ಮಾಡಲಾಗಿದೆ.

ಲ್ಯಾಂಬೊರ್ಗಿನಿ ಹುರಾಕನ್ ಇವೊ ಆರ್‌ಡಬ್ಲ್ಯೂಡಿ ಸ್ಪೈಡರ್ ಫಸ್ಟ್ ಲುಕ್ ರಿವ್ಯೂ

ಗ್ರಾಹಕರು ತಮಗೆ ಬೇಕಾದ ಬಣ್ಣದಲ್ಲಿ ಸ್ಟಿಚ್ ಮಾಡಿಸಿಕೊಳ್ಳಬಹುದು. ಈ ಕಾರಿನಲ್ಲಿರುವ ಸ್ಟೀಯರಿಂಗ್ ವ್ಹೀಲ್ ಅನ್ನು ಲೆದರ್ ಹಾಗೂ ಅಲ್ಕಾಂಟರಾದಲ್ಲಿ ವ್ರಾಪ್ ಮಾಡಲಾಗಿದೆ. ಸ್ಟೀಯರಿಂಗ್ ವ್ಹೀಲ್‌ನಲ್ಲಿರುವ ಅನಿಮಾ ಬಟನ್ ಪಿ-ಟಿಸಿಎಸ್ ಮೂಲಕ ಡ್ರೈವಿಂಗ್ ಮೋಡ್'ಗಳನ್ನು ನಿಯಂತ್ರಿಸುತ್ತದೆ.

ಲ್ಯಾಂಬೊರ್ಗಿನಿ ಹುರಾಕನ್ ಇವೊ ಆರ್‌ಡಬ್ಲ್ಯೂಡಿ ಸ್ಪೈಡರ್ ಫಸ್ಟ್ ಲುಕ್ ರಿವ್ಯೂ

ಎಂಜಿನ್ ಹಾಗೂ ಟ್ರಾನ್ಸ್'ಮಿಷನ್

ಲ್ಯಾಂಬೊರ್ಗಿನಿ ಹುರಾಕನ್ ಇವೊ ಆರ್‌ಡಬ್ಲ್ಯೂಡಿ ಸ್ಪೈಡರ್ ಕಾರಿನಲ್ಲಿ 5.2 ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ವಿ 10 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 8,000 ಆರ್‌ಪಿಎಂನಲ್ಲಿ 602 ಬಿಹೆಚ್‌ಪಿ ಪವರ್ ಹಾಗೂ 6,500 ಆರ್‌ಪಿಎಂನಲ್ಲಿ 560 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಲ್ಯಾಂಬೊರ್ಗಿನಿ ಹುರಾಕನ್ ಇವೊ ಆರ್‌ಡಬ್ಲ್ಯೂಡಿ ಸ್ಪೈಡರ್ ಫಸ್ಟ್ ಲುಕ್ ರಿವ್ಯೂ

ಈ ಕಾರು 3.5 ಸೆಕೆಂಡುಗಳಲ್ಲಿ 0 - 100 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ. ಈ ಕಾರಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 324 ಕಿ.ಮೀಗಳಾಗಿದೆ. ಈ ಕಾರಿನ ಅಲ್ಯೂಮಿನಿಯಂ ಹಾಗೂ ಥರ್ಮೋಪ್ಲಾಸ್ಟಿಕ್ ರೆಸಿನ್ ಬಾಡಿ ಅಲ್ಯೂಮಿನಿಯಂ ಹಾಗೂ ಕಾರ್ಬನ್ ಫೈಬರ್'ನಿಂದ ಮಾಡಿದ ಹಗುರವಾದ ಹೈಬ್ರಿಡ್ ಚಾಸಿಸ್ ಮೇಲೆ ಕೂರುತ್ತದೆ.

ಲ್ಯಾಂಬೊರ್ಗಿನಿ ಹುರಾಕನ್ ಇವೊ ಆರ್‌ಡಬ್ಲ್ಯೂಡಿ ಸ್ಪೈಡರ್ ಫಸ್ಟ್ ಲುಕ್ ರಿವ್ಯೂ

1,509 ಕೆಜಿ ಡ್ರೈ ವ್ಹೇಟ್ ಹೊಂದಿರುವ ಈ ಕಾರು ಪ್ರತಿ ಕೆ.ಜಿಗೆ 0.39 ಬಿಹೆಚ್‌ಪಿ ಪವರ್ ವ್ಹೇಟ್ ರೇಶಿಯೊ ಹೊಂದಿದೆ. ಹುರಾಕನ್ ಇವಿಒ ಆರ್‌ಡಬ್ಲ್ಯೂಡಿ ಸ್ಪೈಡರ್ ಕಾರಿನಲ್ಲಿರುವ ವಿಶೇಷವಾಗಿ ಟ್ಯೂನ್ ಮಾಡಲಾದ ಪಿ-ಟಿಸಿಎಸ್ ಟ್ರಾಕ್ಷನ್ ಕಂಟ್ರೋಲ್ ಅನ್ನು ಎಲ್ಲಾ ಪರಿಸ್ಥಿತಿಗಳಲ್ಲಿಯೂ ಅದ್ಭುತ ಪರ್ಫಾಮೆನ್ಸ್ ನೀಡುವಂತೆ ವಿನ್ಯಾಸಗೊಳಿಸಲಾಗಿದೆ.

ಲ್ಯಾಂಬೊರ್ಗಿನಿ ಹುರಾಕನ್ ಇವೊ ಆರ್‌ಡಬ್ಲ್ಯೂಡಿ ಸ್ಪೈಡರ್ ಫಸ್ಟ್ ಲುಕ್ ರಿವ್ಯೂ

ಈ ಕಾರಿನಲ್ಲಿರುವ ಸ್ಟ್ರಾಡಾ ಮೋಡ್ ರೇರ್ ವ್ಹೀಲ್ ಸ್ಲಿಪರಿಯನ್ನು ಕಡಿಮೆ ಮಾಡುವ ಮೂಲಕ, ಲೋ ಅಡೆಶನ್ ಸರ್ಫೆಸ್'ಗಳಲ್ಲಿ ಟಾರ್ಕ್ ವಿತರಣೆಯನ್ನು ಹೆಚ್ಚಿಸಿ ಸ್ಟೆಬಿಲಿಟಿ ಹಾಗೂ ಸೆಫ್ಟಿಯನ್ನು ಒದಗಿಸುತ್ತದೆ.

ಲ್ಯಾಂಬೊರ್ಗಿನಿ ಹುರಾಕನ್ ಇವೊ ಆರ್‌ಡಬ್ಲ್ಯೂಡಿ ಸ್ಪೈಡರ್ ಫಸ್ಟ್ ಲುಕ್ ರಿವ್ಯೂ

ಸ್ಪೋರ್ಟ್ ಮೋಡ್, ಆಕ್ಸಲರೇಷನ್ ಸಮಯದಲ್ಲಿ ರೇರ್ ವ್ಹೀಲ್ ಸ್ಲಿಪ್ ಹಾಗೂ ಸ್ಲೈಡ್ ಆಗುವಂತೆ ಮಾಡಿ ಡ್ರಿಫ್ಟಿಂಗ್ ಮಾಡಲು ನೆರವಾಗುತ್ತದೆ. ಈ ಮೋಡ್'ನಲ್ಲಿ ಟಾರ್ಕ್ ಸೀಮಿತವಾಗಿರುವ ಕಾರಣ ಚಾಲಕನು ಕಾರ್ ಅನ್ನು ಸ್ಟೆಬಿಲೈಸ್ ಮಾಡಿ, ಕಂಟ್ರೋಲ್ ಮಾಡಬಹುದು.

ಲ್ಯಾಂಬೊರ್ಗಿನಿ ಹುರಾಕನ್ ಇವೊ ಆರ್‌ಡಬ್ಲ್ಯೂಡಿ ಸ್ಪೈಡರ್ ಫಸ್ಟ್ ಲುಕ್ ರಿವ್ಯೂ

ಇನ್ನು ಕೊರ್ಸಾ ಮೋಡ್, ಹೆಚ್ಚು ಪರ್ಫಾಮೆನ್ಸ್ ನೀಡಿ ಒಂದು ಮೂಲೆಯಿಂದ ನಿರ್ಗಮಿಸುವಾಗ ಡೈನಾಮಿಕ್ಸ್ ಹಾಗೂ ವೇಗವನ್ನು ಹೆಚ್ಚಿಸಿ ಕಾರಿನ ಟ್ರಾಕ್ಷನ್ ಹಾಗೂ ಅಜೈಲ್ ಅನ್ನು ಉತ್ತಮಗೊಳಿಸುತ್ತದೆ.

ಲ್ಯಾಂಬೊರ್ಗಿನಿ ಹುರಾಕನ್ ಇವೊ ಆರ್‌ಡಬ್ಲ್ಯೂಡಿ ಸ್ಪೈಡರ್ ಫಸ್ಟ್ ಲುಕ್ ರಿವ್ಯೂ

ಈ ಕಾರು ಮುಂಭಾಗ ಹಾಗೂ ಹಿಂಭಾಗದಲ್ಲಿ 40/60 ವ್ಹೇಟ್ ಡಿಸ್ಟ್ರಿಬ್ಯೂಷನ್ ಪಡೆಯುತ್ತದೆ. ಸಸ್ಪೆಂಷನ್'ಗಳಿಗಾಗಿ ಓವರ್ ಲ್ಯಾಪ್ ಮಾಡಲಾದ ಕ್ವಾಡ್ರಿಲ್ಯಾಟರಲ್, ಪ್ಯಾಸಿವ್ ಶಾಕ್ ಹೊಂದಿರುವ ಡಬಲ್ ವಿಷ್ಬೋನ್ ಸೆಟಪ್ ನೀಡಲಾಗಿದೆ.

ಲ್ಯಾಂಬೊರ್ಗಿನಿ ಹುರಾಕನ್ ಇವೊ ಆರ್‌ಡಬ್ಲ್ಯೂಡಿ ಸ್ಪೈಡರ್ ಫಸ್ಟ್ ಲುಕ್ ರಿವ್ಯೂ

ಹುರಾಕನ್ ಇವೊ ಆರ್‌ಡಬ್ಲ್ಯೂಡಿ ಸ್ಪೈಡರ್ ಕಾರಿನಲ್ಲಿ ವಿಶೇಷವಾಗಿ ಅಭಿವೃದ್ಧಿಪಡಿಸಲಾದ ಪಿರೆಲ್ಲಿ ಪಿ ಝೀರೋ ಟಯರ್‌ಗಳನ್ನು ಅಳವಡಿಸಲಾಗಿದೆ.ಇದರ ಜೊತೆಗೆ ಲ್ಯಾಂಬೊರ್ಗಿನಿ ಕಂಪನಿಯು 20 ಇಂಚಿನ ರಿಮ್ಸ್ ಹಾಗೂ ಕಾರ್ಬನ್ ಸೆರಾಮಿಕ್ ಬ್ರೇಕ್‌ಗಳನ್ನು ಐಚ್ಚಿಕವಾಗಿ ನೀಡುತ್ತದೆ.

ಲ್ಯಾಂಬೊರ್ಗಿನಿ ಹುರಾಕನ್ ಇವೊ ಆರ್‌ಡಬ್ಲ್ಯೂಡಿ ಸ್ಪೈಡರ್ ಫಸ್ಟ್ ಲುಕ್ ರಿವ್ಯೂ

ಲ್ಯಾಂಬೊರ್ಗಿನಿ ಹುರಾಕನ್ ಇವೊ ಆರ್‌ಡಬ್ಲ್ಯೂಡಿ ಸ್ಪೈಡರ್ ಬಗ್ಗೆ ನಮ್ಮ ಅಭಿಪ್ರಾಯವನ್ನು ಹೇಳುವುದಾದರೆ ಈ ಕಾರ್ ಅನ್ನು ಕಳೆದ ವರ್ಷ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಪರಿಚಯಿಸಲಾಗಿತ್ತು.

ಲ್ಯಾಂಬೊರ್ಗಿನಿ ಹುರಾಕನ್ ಇವೊ ಆರ್‌ಡಬ್ಲ್ಯೂಡಿ ಸ್ಪೈಡರ್ ಫಸ್ಟ್ ಲುಕ್ ರಿವ್ಯೂ

ಈಗ ಈ ಸೂಪರ್ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿದೆ. ನಾವು ವೀಕ್ಷಿಸಿದ ಕಾರಿನ ಮಾಲೀಕ ತನ್ನ ಕಾರ್ ಅನ್ನು ತನಗೆ ಇಷ್ಟ ಬಂದ ರೀತಿಯಲ್ಲಿ ಕಸ್ಟಮೈಸ್ ಮಾಡಿದ್ದಾನೆ.

ಲ್ಯಾಂಬೊರ್ಗಿನಿ ಹುರಾಕನ್ ಇವೊ ಆರ್‌ಡಬ್ಲ್ಯೂಡಿ ಸ್ಪೈಡರ್ ಫಸ್ಟ್ ಲುಕ್ ರಿವ್ಯೂ

ಈ ಲ್ಯಾಂಬೊರ್ಗಿನಿ ಕಾರಿನ ಎಕ್ಸ್'ಟಿರಿಯರ್, ಇಂಟಿರಿಯರ್, ಬ್ರೇಕ್ ಕ್ಯಾಲಿಪರ್‌ಗಳನ್ನು ಯಾವ ಬಣ್ಣದಲ್ಲಿ ಆರಿಸಿಕೊಂಡರೂ ಆಕರ್ಷಕವಾಗಿ ಕಾಣುವುದರಲ್ಲಿ ಅನುಮಾನವಿಲ್ಲ.

Most Read Articles

Kannada
English summary
Lamborghini Huracan EVO RDW Spyder First look review. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X