50 ವರ್ಷದ ಸಂಭ್ರಮದಲ್ಲಿ ವಿಶ್ವದ ಮೊದಲ ಸೂಪರ್ ಕಾರು

ಇಟಲಿ ಮೂಲದ ಲ್ಯಾಂಬೊರ್ಗಿನಿ ವಿಶ್ವ ವಿಖ್ಯಾತ ಕಾರು ತಯಾರಕ ಕಂಪನಿಯಾಗಿದೆ. ಲ್ಯಾಂಬೊರ್ಗಿನಿ ಕಂಪನಿಯು ಐಷಾರಾಮಿ ಸ್ಪೋರ್ಟ್ಸ್ ಕಾರುಗಳನ್ನು ಉತ್ಪಾದಿಸುತ್ತದೆ. ಕಂಪನಿಯ ಕಾರುಗಳು ವಿಶ್ವದೆಲ್ಲೆಡೆ ಜನಪ್ರಿಯವಾಗಿವೆ.

50 ವರ್ಷದ ಸಂಭ್ರಮದಲ್ಲಿ ವಿಶ್ವದ ಮೊದಲ ಸೂಪರ್ ಕಾರು

ಲ್ಯಾಂಬೊರ್ಗಿನಿ ಕಂಪನಿಯ ವಿಶ್ವ ವಿಖ್ಯಾತ ಮಿಯುರಾ ಎಸ್‌ವಿ ಮಾದರಿಯು 50ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿದೆ. ಇತ್ತೀಚಿನ ಪಿ 400 ಯೋಜನೆಯ ಮೂಲವಾದ ಲ್ಯಾಂಬೊರ್ಗಿನಿ ಮಿಯುರಾ ಎಸ್‌ವಿ ಕಾರ್ ಅನ್ನು 1971ರ ಮಾರ್ಚ್ ತಿಂಗಳಿನಲ್ಲಿ ಜಿನಿವಾ ಮೋಟಾರ್ ಶೋದಲ್ಲಿ ಅಧಿಕೃತವಾಗಿ ಅನಾವರಣಗೊಳಿಸಲಾಗಿತ್ತು.

50 ವರ್ಷದ ಸಂಭ್ರಮದಲ್ಲಿ ವಿಶ್ವದ ಮೊದಲ ಸೂಪರ್ ಕಾರು

ಮಿಯುರಾ ಕಾರು ಲ್ಯಾಂಬೊರ್ಗಿನಿ ಕಾರಿಗೆ ಸಮಾನಾರ್ಥಕವಾಗಿದೆ. ಲ್ಯಾಂಬೊರ್ಗಿನಿ ಮಿಯುರಾ ಎಸ್‌ವಿ ವಿಶ್ವದ ಮೊದಲ ಸೂಪರ್ ಕಾರ್ ಎಂಬುದು ವಿಶೇಷ. ಅದ್ಭುತ ವಿನ್ಯಾಸ ಹಾಗೂ ಪರ್ಫಾಮೆನ್ಸ್'ನಿಂದಾಗಿ ಈ ಕಾರು ಮಾರುಕಟ್ಟೆಯಲ್ಲಿ ಜನಪ್ರಿಯವಾಗಿತ್ತು.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

50 ವರ್ಷದ ಸಂಭ್ರಮದಲ್ಲಿ ವಿಶ್ವದ ಮೊದಲ ಸೂಪರ್ ಕಾರು

ಈಗ ಲ್ಯಾಂಬೊರ್ಗಿನಿ ಕಂಪನಿಯ ಹೆಚ್ಚು ಬೇಡಿಕೆಯಿರುವ ಉತ್ಪಾದನಾ ಆವೃತ್ತಿಯಾಗಿರುವ ಮಿಯುರಾ ಎಸ್‌ವಿ ಕಾರನ್ನು ಆ ಕಾಲದ ಅತ್ಯುನ್ನತ ಪರ್ಫಾಮೆನ್ಸ್ ಮಾದರಿ ಎಂದು ಪರಿಗಣಿಸಲಾಗಿತ್ತು.

50 ವರ್ಷದ ಸಂಭ್ರಮದಲ್ಲಿ ವಿಶ್ವದ ಮೊದಲ ಸೂಪರ್ ಕಾರು

ಎಸ್‌ವಿ ಎಂಬುದು ಎಸ್ ವೆಲೋಸ್ ಅಂದರೆ ಸೂಪರ್‌ಫಾಸ್ಟ್ ಎಂಬುದನ್ನು ಸೂಚಿಸುತ್ತದೆ. ಲ್ಯಾಂಬೊರ್ಗಿನಿ ಮಿಯುರಾ ಎಸ್‌ವಿಯಲ್ಲಿ 4.0-ಲೀಟರ್ ವಿ 12 ಎಂಜಿನ್ ಅಳವಡಿಸಲಾಗಿತ್ತು. ಈ ಎಂಜಿನ್ 385 ಬಿಹೆಚ್‌ಪಿ ಪವರ್ ಹಾಗೂ 400 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

50 ವರ್ಷದ ಸಂಭ್ರಮದಲ್ಲಿ ವಿಶ್ವದ ಮೊದಲ ಸೂಪರ್ ಕಾರು

ಲ್ಯಾಂಬೊರ್ಗಿನಿ ಮಿಯುರಾ ಎಸ್‌ವಿ ಸೂಪರ್ ಕಾರು ಎಂಜಿನ್ ಹಾಗೂ ಗೇರ್‌ಬಾಕ್ಸ್ ನಡುವೆ ವಿಶೇಷವಾದ ಲ್ಯೂಬ್ರಿಕೇಷನ್ ಸಿಸ್ಟಂ ಸಹ ಹೊಂದಿದೆ. ಆ ಸಮಯದಲ್ಲಿ ಈ ಕಾರು ಪ್ರತಿ ಗಂಟೆಗೆ 290 ಕಿ.ಮೀ ವೇಗದಲ್ಲಿ ಸಾಗುತ್ತಿತ್ತು.

50 ವರ್ಷದ ಸಂಭ್ರಮದಲ್ಲಿ ವಿಶ್ವದ ಮೊದಲ ಸೂಪರ್ ಕಾರು

ಒಂದು ಕಿ.ಮೀ ವ್ಯಾಪ್ತಿಯನ್ನು ಮಿಯುರಾ ಎಸ್‌ವಿ ಕೇವಲ 4 ಸೆಕೆಂಡುಗಳಲ್ಲಿ ಪೂರ್ಣಗೊಳಿಸುತ್ತಿತ್ತು. ಲ್ಯಾಂಬೊರ್ಗಿನಿ ಮಿಯುರಾ ಎಸ್‌ವಿ ಸೂಪರ್ ಕಾರಿನಲ್ಲಿರುವ ಮತ್ತೊಂದು ಫೀಚರ್ ಎಂದರೆ ಗಟ್ಟಿ ಮುಟ್ಟಾದ ಚಾಸಿಸ್.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

50 ವರ್ಷದ ಸಂಭ್ರಮದಲ್ಲಿ ವಿಶ್ವದ ಮೊದಲ ಸೂಪರ್ ಕಾರು

ಮಿಯುರಾ ಎಸ್‌ವಿ ಸೂಪರ್‌ಕಾರ್‌ನಲ್ಲಿ ವಿಭಿನ್ನ ಆಂಕರ್ ಪಾಯಿಂಟ್‌, ಆರ್ಮ್, ಟ್ವೀಕ್ಡ್ ರೇರ್ ಸಸ್ಪೆಂಷನ್ ಸಿಸ್ಟಂ ಹಾಗೂ 130 ಎಂಎಂ ಅಗಲದ ಟ್ರ್ಯಾಕ್'ಗಳನ್ನು ನೀಡಲಾಗಿತ್ತು. ಈ ಎಲ್ಲಾ ಟೆಕ್ನಿಕಲ್ ಅಂಶಗಳು ಮಿಯುರಾ ಎಸ್‌ವಿ ಆವೃತ್ತಿಯನ್ನು ಸ್ಟಾಂಡರ್ಡ್ ಮಾದರಿಗಿಂತ ಭಿನ್ನವಾಗಿಸಿವೆ.

50 ವರ್ಷದ ಸಂಭ್ರಮದಲ್ಲಿ ವಿಶ್ವದ ಮೊದಲ ಸೂಪರ್ ಕಾರು

ಈ ಎಸ್‌ವಿ ಸೂಪರ್ ಕಾರಿನಲ್ಲಿ ರೇಡಿಯೇಟರ್‌ಗಾಗಿ ಹೊಸ ಏರ್ ಇನ್ ಟೇಕ್ ಸಂಯೋಜಿಸಲು ವಿಶಾಲವಾದ ರೇರ್ ಫೆಂಡರ್‌, ರಿಶ್ಟ್ರೆನ್ ಟೇಲ್ ಲೈಟ್ ಹಾಗೂ ಮುಂಭಾಗದ ಬಾನೆಟ್'ಗಳನ್ನು ನೀಡಲಾಗಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

50 ವರ್ಷದ ಸಂಭ್ರಮದಲ್ಲಿ ವಿಶ್ವದ ಮೊದಲ ಸೂಪರ್ ಕಾರು

ಲ್ಯಾಂಬೊರ್ಗಿನಿ ಮಿಯುರಾ ಎಸ್‌ವಿ ಕಾರಿನಲ್ಲಿ ಸ್ವಲ್ಪ ಹೆಚ್ಚು ಎನಿಸುವಂತಹ ಪ್ರೀಮಿಯಂ ಅಂಶಗಳನ್ನು ಸೇರಿಸಲಾಗಿದೆ. ಲೆದರ್ ಅಪ್ ಹೊಲೆಸ್ಟರಿ ಹಾಗೂ ಕ್ರೋಮ್ ಅಸೆಂಟ್'ಗಳನ್ನು ಸಹ ಹೆಚ್ಚಾಗಿ ನೀಡಲಾಗಿದೆ.

50 ವರ್ಷದ ಸಂಭ್ರಮದಲ್ಲಿ ವಿಶ್ವದ ಮೊದಲ ಸೂಪರ್ ಕಾರು

ಮಿಯುರಾ ಎಸ್‌ವಿ ಕಾರಿನಲ್ಲಿ ಸ್ಟ್ಯಾಂಡರ್ಡ್ ಮಾದರಿ ಕಾರುಗಳ ರೀತಿಯಲ್ಲಿ ಹೆಡ್‌ಲೈಟ್‌ಗಳ ಸುತ್ತಲೂ ಐಲ್ಯಾಶ್'ಗಳನ್ನು ನೀಡಲಾಗಿಲ್ಲ. ಮಿಯುರಾದ ಉತ್ಪಾದನಾ ಅವಧಿಯನ್ನು ಕಡಿಮೆ ಮಾಡುವುದು ಇದರ ಹಿಂದಿನ ಉದ್ದೇಶವಾಗಿತ್ತು.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

50 ವರ್ಷದ ಸಂಭ್ರಮದಲ್ಲಿ ವಿಶ್ವದ ಮೊದಲ ಸೂಪರ್ ಕಾರು

ಆದರೆ ಐಲ್ಯಾಶ್'ಗಳನ್ನು ಹೊಂದಿದ್ದ ಮಿಯುರಾ ಎಸ್‌ವಿ ಕಾರುಗಳನ್ನು ಸಹ ಉತ್ಪಾದಿಸಲಾಗಿತ್ತು. ಇವುಗಳಲ್ಲಿ ಫೆರುಸಿಯೊ ಲ್ಯಾಂಬೊರ್ಗಿನಿ ಕಾರುಗಳು ಸೇರಿವೆ. 1973ರ ಆರಂಭದಲ್ಲಿ 150 ಯೂನಿಟ್'ಗಳನ್ನು ಉತ್ಪಾದಿಸಿದ ನಂತರ ಲ್ಯಾಂಬೊರ್ಗಿನಿ ಕಂಪನಿಯು ಮಿಯುರಾ ಎಸ್‌ವಿ ಕಾರಿನ ಉತ್ಪಾದನೆಯನ್ನು ಸ್ಥಗಿತಗೊಳಿಸಿತು.

50 ವರ್ಷದ ಸಂಭ್ರಮದಲ್ಲಿ ವಿಶ್ವದ ಮೊದಲ ಸೂಪರ್ ಕಾರು

ಆದರೆ ಎರಡು ವರ್ಷಗಳ ನಂತರ ಅಂದರೆ 1975ರಲ್ಲಿ ಲ್ಯಾಂಬೊರ್ಗಿನಿ ಕಂಪನಿಯು ವಾಲ್ಟರ್ ವುಲ್ಫ್‌ಗಾಗಿ ಅಂತಿಮ ಮೂಲ ಮಾದರಿಯನ್ನು ಉತ್ಪಾದಿಸಲು ಸಿದ್ಧವಾಯಿತು.

Most Read Articles

Kannada
English summary
Lamborghini Miura SV world's first supercar celebrates 50 years. Read in Kannada.
Story first published: Monday, April 19, 2021, 10:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X