ಅನಾವರಣವಾಯ್ತು ಲ್ಯಾಂಬೊರ್ಗಿನಿ ಅವೆಂಟಡಾರ್ ಅಲ್ಟಿಮೇ ಸೂಪರ್ ಕಾರ್

ಇಟಲಿಯ ಐಷಾರಾಮಿ ಕಾರು ತಯಾರಕ ಕಂಪನಿಯಾದ ಲ್ಯಾಂಬೊರ್ಗಿನಿ ತನ್ನ ಐಕಾನಿಕ್ ಅವೆಂಟಡಾರ್ ಸೂಪರ್ ಕಾರ್ ಉತ್ಪಾದನೆಯನ್ನು ಕೊನೆಗೊಳಿಸುವ ಮೊದಲು ಅದರ ಕೊನೆಯ ಮಾದರಿಯನ್ನು ಅನಾವರಣಗೊಳಿಸಿದೆ. ಈ ಮಾದರಿಗೆ ಲ್ಯಾಂಬೊರ್ಗಿನಿ ಅವೆಂಟಡಾರ್ ಅಲ್ಟಿಮೇ ಎಂಬ ಹೆಸರನ್ನು ನೀಡಲಾಗಿದೆ.

ಅನಾವರಣವಾಯ್ತು ಲ್ಯಾಂಬೊರ್ಗಿನಿ ಅವೆಂಟಡಾರ್ ಅಲ್ಟಿಮೇ ಸೂಪರ್ ಕಾರ್

ಲ್ಯಾಂಬೊರ್ಗಿನಿ ಅವೆಂಟಡಾರ್ ಅಲ್ಟಿಮೇ ಸೂಪರ್ ಕಾರಿನಲ್ಲಿ ಅದೇ 6.5-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 769 ಬಿಹೆಚ್‍ಪಿ ಪವರ್ ಮತ್ತು 720 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 7-ಸ್ಪೀಡ್ ಸಿಂಗಲ್-ಕ್ಲಚ್ ಅನ್ನು ಜೋಡಿಸಲಾಗಿದೆ. ಈ ಅವೆಂಟಡಾರ್ ಅಲ್ಟಿಮೇ ಸೂಪರ್ ಕಾರ್ ತೂಕವನ್ನು ಕೇವಲ 1,550 ಕೆಜಿಗೆ ಇಳಿಸಲಾಗಿದೆ.

ಅನಾವರಣವಾಯ್ತು ಲ್ಯಾಂಬೊರ್ಗಿನಿ ಅವೆಂಟಡಾರ್ ಅಲ್ಟಿಮೇ ಸೂಪರ್ ಕಾರ್

ಇದು ಅವೆಂಟಡಾರ್ ಎಸ್‌ಗಿಂತ 25 ಕಿ.ಗ್ರಾಂ ಹಗುರವಾಗಿದೆ. ಹೊಸ ಅವೆಂಟಡಾರ್ ಅಲ್ಟಿಮೇ ಏರೋಡೈನಾಮಿಕ್ ಅನ್ನು ಸುಧಾರಿಸಲು ವಿಸ್ತೃತ ಮುಂಭಾಗದ ಸ್ಪ್ಲಿಟರ್ನೊಂದಿಗೆ ಅತ್ಯಂತ ಅಗ್ರೇಸಿವ್ ಬಂಪರ್ ಅನ್ನು ಹೊಂದಿದೆ.

ಅನಾವರಣವಾಯ್ತು ಲ್ಯಾಂಬೊರ್ಗಿನಿ ಅವೆಂಟಡಾರ್ ಅಲ್ಟಿಮೇ ಸೂಪರ್ ಕಾರ್

ಇನ್ನು ಈ ಹೊಸ ಲ್ಯಾಂಬೊರ್ಗಿನಿ ಅವೆಂಟಡಾರ್ ಅಲ್ಟಿಮೇ ಕಾರಿನಲ್ಲಿ ಹಿಂಭಾಗದ ಡಿಫ್ಯೂಸರ್ ಮತ್ತು ಫ್ರಿ ಫ್ಲೋಯಿಂಗ್ ಎಕ್ಸಾಸ್ಟ್ ಸಿಸ್ಟಂ ಅನ್ನು ಹೊಂದಿದೆ. ಇವೆರಡನ್ನೂ ಅವೆಂಟಡಾರ್ ಎಸ್‌ವಿಜೆ ಮಾದರಿಯಿಂದ ಪಡೆದುಕೊಂಡಿದೆ.

ಅನಾವರಣವಾಯ್ತು ಲ್ಯಾಂಬೊರ್ಗಿನಿ ಅವೆಂಟಡಾರ್ ಅಲ್ಟಿಮೇ ಸೂಪರ್ ಕಾರ್

ಇನ್ನೂ ಹೆಚ್ಚಿನ ಕಾರ್ಯಕ್ಷಮತೆಯನ್ನು ರೂಪಿಸಲು, ಲ್ಯಾಂಬೊರ್ಗಿನಿಯ ಎಂಜಿನಿಯರ್‌ಗಳು ಹೊಸ ಲ್ಯಾಂಬೊರ್ಗಿನಿ ಅವೆಂಟಡಾರ್ ಅಲ್ಟಿಮೇ ಸೂಪರ್ ಕಾರಿನಲ್ಲಿ ಫ್ಹೋರ್ ಸ್ಪೋಕ್ ಸ್ಟೀಯರಿಂಗ್ ಮತ್ತು ಮೂರು ವಿಭಿನ್ನ ಹಂತದ ಆಕ್ಟಿವ್ ರೇರ್ ಸ್ಪಾಯ್ಲರ್ ಅನ್ನು ಅಳವಡಿಸಿದ್ದಾರೆ.

ಅನಾವರಣವಾಯ್ತು ಲ್ಯಾಂಬೊರ್ಗಿನಿ ಅವೆಂಟಡಾರ್ ಅಲ್ಟಿಮೇ ಸೂಪರ್ ಕಾರ್

ಲ್ಯಾಂಬೊರ್ಗಿನಿ ಅವೆಂಟಡಾರ್ ಕ್ರಮವಾಗಿ ಮುಂಭಾಗ ಮತ್ತು ಹಿಂಭಾಗದ 20 ಇಂಚು ಮತ್ತು 21 ಇಂಚಿನ ವ್ಹೀಲ್ ಆಯ್ಕೆಯೊಂದಿಗೆ ಬರುತ್ತದೆ. ಸೂಪರ್ ಕಾರ್ ಒಳಗೆ, ಐಷಾರಾಮಿ ಫೀಚರ್ಸ್ ಗಳನ್ನು ಹೊಂದಿವೆ.

ಅನಾವರಣವಾಯ್ತು ಲ್ಯಾಂಬೊರ್ಗಿನಿ ಅವೆಂಟಡಾರ್ ಅಲ್ಟಿಮೇ ಸೂಪರ್ ಕಾರ್

ಈ ಕಾರಿನಲ್ಲಿ ಕಸ್ಟಮೈಸ್ ಮಾಡಬಹುದಾದ ಟಿಎಫ್‌ಟಿ ಡಿಜಿಟಲ್ ಡ್ರೈವರ್ ಡಿಸ್ ಪ್ಲೇಯನ್ನು ಹೊಂದಿದೆ, ಇನ್ನು ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿಯೊಂದಿರುವ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಹೊಂದಿರಲಿದೆ, ಇದರಲ್ಲಿ ವಾಯ್ಸ್ ಕಮಾಂಡ್ ಫೀಚರ್ ಅನ್ನು ನೀಡಲಾಗುತ್ತದೆ.

ಅನಾವರಣವಾಯ್ತು ಲ್ಯಾಂಬೊರ್ಗಿನಿ ಅವೆಂಟಡಾರ್ ಅಲ್ಟಿಮೇ ಸೂಪರ್ ಕಾರ್

ಭಾರತೀಯ ಮಾರುಕಟ್ಟೆಯಲ್ಲಿ ಲ್ಯಾಂಬೊರ್ಗಿನಿ ಕಂಪನಿಯು ತನ್ನ ಟ್ರ್ಯಾಕ್ ಆಧಾರಿತ ಹುರಾಕನ್ ಕಾರನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಹೊಸ ಲ್ಯಾಂಬೊರ್ಗಿನಿ ಹುರಾಕನ್ ಎಸ್‌ಟಿಒ ಕಾರು ಇದೇ ತಿಂಗಳ 15 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. ಲ್ಯಾಂಬೊರ್ಗಿನಿ ಹುರಾಕನ್ ಎಸ್‌ಟಿಒ ಕಾರು ಮಾದರಿಯು ಹುರಾಕನ್ ಪರ್ಫಾರ್ಮೆಂಟೆ ಮತ್ತು ಹುರಾಕನ್ ಇವೊ ಮಾದರಿಗಳಲ್ಲಿರುವಂತಹ ಒಂದೇ ರೀತಿಯ ಎಂಜಿನ್ ಅನ್ನು ಬಳಸುತ್ತದೆ.

ಅನಾವರಣವಾಯ್ತು ಲ್ಯಾಂಬೊರ್ಗಿನಿ ಅವೆಂಟಡಾರ್ ಅಲ್ಟಿಮೇ ಸೂಪರ್ ಕಾರ್

ಇನ್ನು ಲ್ಯಾಂಬೊರ್ಗಿನಿ ಕಂಪನಿಯು ಮುಂದೆ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ಸೂಪರ್ ಕಾರುಗಳನ್ನು ಪರಿಚಯಿಸುತ್ತದೆ. ಲ್ಯಾಂಬೊರ್ಗಿನಿ ಕಂಪನಿಯು ಶೀಘ್ರದಲ್ಲೇ ಈ ಹೊಸ ಅವೆಂಟಡಾರ್ ಅಲ್ಟಿಮೇ ಸೂಪರ್ ಕಾರ್ ಅನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪರಿಚಯಿಸಬಹುದು.

Most Read Articles

Kannada
English summary
Lamborghini Aventador Ultimae Revealed. Read In Kannada.
Story first published: Saturday, July 10, 2021, 20:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X