ಚೊಚ್ಚಲ ಎಲೆಕ್ಟ್ರಿಕ್ ಸೂಪರ್‌ಕಾರ್‌ ಬಿಡುಗಡೆಗೊಳಿಸಲು ಸಜ್ಜಾದ Lamborghini

ಖ್ಯಾತ ಸೂಪರ್‌ಕಾರ್‌ಗಳ ತಯಾರಕ ಕಂಪನಿಯಾದ ಲ್ಯಾಂಬೊರ್ಗಿನಿ (Lamborghini) ತನ್ನ ಮೊದಲ ಎಲೆಕ್ಟ್ರಿಕ್ ಕಾರ್ ಅನ್ನು ಬಿಡುಗಡೆಗೊಳಿಸಲು ಸಿದ್ದತೆ ನಡೆಸುತ್ತಿದೆ. ಇಟಲಿ ಮೂಲದ ಲ್ಯಾಂಬೊರ್ಗಿನಿ ಕಂಪನಿಯು ತನ್ನ ಮೊದಲ ಎಲೆಕ್ಟ್ರಿಕ್ ಕಾರ್ ಅನ್ನು 2027 ರಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಲ್ಯಾಂಬೊರ್ಗಿನಿ ತನ್ನ ಸೂಪರ್‌ಕಾರ್ ವಿಭಾಗದಲ್ಲಿ ಎಲೆಕ್ಟ್ರಿಕ್ ಕಾರ್ ಅನ್ನು ಬಿಡುಗಡೆಗೊಳಿಸುವುದಾಗಿ ಈ ಹಿಂದೆಯೇ ಮಾಹಿತಿ ನೀಡಿತ್ತು.

ಚೊಚ್ಚಲ ಎಲೆಕ್ಟ್ರಿಕ್ ಸೂಪರ್‌ಕಾರ್‌ ಬಿಡುಗಡೆಗೊಳಿಸಲು ಸಜ್ಜಾದ Lamborghini

ಕಂಪನಿಯು ತನ್ನ ವಾಹನಗಳನ್ನು ಹಂತ ಹಂತವಾಗಿ ಎಲೆಕ್ಟ್ರಿಕ್ ಪವರ್‌ಟ್ರೇನ್‌ಗಳಾಗಿ ಪರಿವರ್ತಿಸಲಿದೆ ಎಂದು ಹೇಳಲಾಗಿದೆ. ಲ್ಯಾಂಬೊರ್ಗಿನಿ ಕಂಪನಿ ಸಿಇಒ ಸ್ಟೀಫನ್ ವಿಂಕೆಲ್‌ಮನ್ ರವರು ಇತ್ತೀಚಿನ ಸಂದರ್ಶನವೊಂದರಲ್ಲಿ, ಮೊದಲ ಎಲೆಕ್ಟ್ರಿಕ್ ಲ್ಯಾಂಬೊರ್ಗಿನಿ ಕಾರ್ ಅನ್ನು 2027 ಅಥವಾ 2028 ರಲ್ಲಿ ಬಿಡುಗಡೆಗೊಳಿಸಲಾಗುವುದು ಎಂದು ಹೇಳಿದ್ದರು. ಆದರೆ ಅದಕ್ಕೂ ಮುನ್ನ ಪ್ಲಗ್ ಇನ್ ಹೈಬ್ರಿಡ್ ಕಾರುಗಳನ್ನು ಬಿಡುಗಡೆಗೊಳಿಸಲಾಗುವುದು ಎಂದು ಅವರು ಹೇಳಿದ್ದರು.

ಚೊಚ್ಚಲ ಎಲೆಕ್ಟ್ರಿಕ್ ಸೂಪರ್‌ಕಾರ್‌ ಬಿಡುಗಡೆಗೊಳಿಸಲು ಸಜ್ಜಾದ Lamborghini

ಆದರೆ ಕಂಪನಿಯು ಆಂತರಿಕ ದಹನಕಾರಿ ಎಂಜಿನ್ (ಐಸಿಇ) ಹೊಂದಿರುವ ಕಾರುಗಳ ಉತ್ಪಾದನೆಯನ್ನು ಮುಂದುವರಿಸುತ್ತದೆ ಎಂದು ಅವರು ಹೇಳಿದ್ದರು. ಕೃತಕವಾಗಿ ತಯಾರಾದ ಇಂಧನದಲ್ಲಿ ಚಲಿಸಲು ಸಾಧ್ಯವಾಗುವಂತಹ ವಾಹನಗಳನ್ನು ತಯಾರಿಸಲು ಕಂಪನಿಯು ಯೋಜನೆಯನ್ನು ಸಿದ್ಧಪಡಿಸಿದೆ. ಕೃತಕ ಇಂಧನದ ಬಳಕೆಯಿಂದಾಗಿ ಆ ವಾಹನಗಳು ಪೆಟ್ರೋಲ್ ಅಥವಾ ಡೀಸೆಲ್‌ಗಿಂತ ಕಡಿಮೆ ಪ್ರಮಾಣದಲ್ಲಿ ಕಾರ್ಬನ್ ಡೈಆಕ್ಸೈಡ್ ಅನ್ನು ಹೊರಸೂಸುತ್ತವೆ.

ಚೊಚ್ಚಲ ಎಲೆಕ್ಟ್ರಿಕ್ ಸೂಪರ್‌ಕಾರ್‌ ಬಿಡುಗಡೆಗೊಳಿಸಲು ಸಜ್ಜಾದ Lamborghini

ಲ್ಯಾಂಬೊರ್ಗಿನಿ ಕಂಪನಿಯ ಈ ಕಾರುಗಳು ಕಾರ್ಬನ್ ನ್ಯೂಟ್ರಲ್ ಆಗಿದ್ದು, ಪರಿಸರಕ್ಕೆ ಹೆಚ್ಚಿನ ಹಾನಿಯನ್ನುಂಟು ಮಾಡುವುದಿಲ್ಲ. ಈ ವರ್ಷದ ಆರಂಭದಲ್ಲಿ ಲ್ಯಾಂಬೊರ್ಗಿನಿ ಕಂಪನಿಯು 1.5 ಶತಕೋಟಿ ಡಾಲರ್ ಹೂಡಿಕೆ ಮೂಲಕ ತನ್ನ ವಿದ್ಯುದೀಕರಣದ ಗುರಿಗಳನ್ನು ಬಹಿರಂಗಪಡಿಸಿತು. ಕಂಪನಿಯು ಮುಂದಿನ 10 ವರ್ಷಗಳಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸಲಿದೆ ಎಂದು ಹೇಳಲಾಗಿದೆ.

ಚೊಚ್ಚಲ ಎಲೆಕ್ಟ್ರಿಕ್ ಸೂಪರ್‌ಕಾರ್‌ ಬಿಡುಗಡೆಗೊಳಿಸಲು ಸಜ್ಜಾದ Lamborghini

ವರದಿಗಳ ಪ್ರಕಾರ, ಲ್ಯಾಂಬೊರ್ಗಿನಿ ಕಂಪನಿಯ ಮೊದಲ ಎಲೆಕ್ಟ್ರಿಕ್ ಕಾರ್ ಅನ್ನು ಜಿಟಿ ಮಾದರಿಯಲ್ಲಿ ಬಿಡುಗಡೆಗೊಳಿಸಲಾಗುವುದು. ಈ ಕಾರು 4 ಸೀಟರ್ ಆಗಿರಲಿದೆ. ಈ ಮಾದರಿಯನ್ನು ಅಭಿವೃದ್ಧಿಪಡಿಸಲು ಪೋರ್ಷೆ ಕಂಪನಿಯು ಲ್ಯಾಂಬೊರ್ಗಿನಿ ಕಂಪನಿಗೆ ನೆರವಾಗಲಿದೆ. ಇನ್ನು ಲ್ಯಾಂಬೊರ್ಗಿನಿ ಕಂಪನಿಯು ತನ್ನ ಸೂಪರ್ ಎಸ್‌ಯುವಿಯಾದ ಉರುಸ್‌ನ 10,000 ನೇ ಯುನಿಟ್ ಉತ್ಪಾದನೆಯನ್ನು ಪೂರ್ಣಗೊಳಿಸಿದೆ.

ಚೊಚ್ಚಲ ಎಲೆಕ್ಟ್ರಿಕ್ ಸೂಪರ್‌ಕಾರ್‌ ಬಿಡುಗಡೆಗೊಳಿಸಲು ಸಜ್ಜಾದ Lamborghini

ಈ ಯುನಿಟ್ ಅನ್ನು ರಷ್ಯಾಕ್ಕಾಗಿ ತಯಾರಿಸಲಾಗುತ್ತದೆ. ಕಂಪನಿಯು 2018 ರಲ್ಲಿ ಉರುಸ್ ಎಸ್‌ಯುವಿಯ ಉತ್ಪಾದನೆಯನ್ನು ಆರಂಭಿಸಿತು. 2020ರ ಜೂನ್ ತಿಂಗಳಿನಲ್ಲಿ ಕಂಪನಿಯು ಉರುಸ್‌ಗಾಗಿ ಹೊಸ ಪರ್ಲ್ ಕ್ಯಾಪ್ಸುಲ್ ಹಾಗೂ ಕಾರ್ಬನ್ ಫೈಬರ್ ಬಣ್ಣದ ಆಯ್ಕೆಯನ್ನು ಪರಿಚಯಿಸಿತು. ಉರುಸ್, ಲ್ಯಾಂಬೊರ್ಗಿನಿ ಕಂಪನಿಯ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ.

ಚೊಚ್ಚಲ ಎಲೆಕ್ಟ್ರಿಕ್ ಸೂಪರ್‌ಕಾರ್‌ ಬಿಡುಗಡೆಗೊಳಿಸಲು ಸಜ್ಜಾದ Lamborghini

ಈ ಕಾರು ಹಲವಾರು ಫೀಚರ್ ಗಳನ್ನು ಹೊಂದಿದ್ದು, ತನ್ನ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದೆ. ಭಾರತದಲ್ಲಿ ಲ್ಯಾಂಬೊರ್ಗಿನಿ ಉರುಸ್‌ ಕಾರಿನ 50 ಕ್ಕೂ ಹೆಚ್ಚು ಯುನಿಟ್‌ಗಳು ಮಾರಾಟವಾಗಿವೆ. ಕಳೆದ ವರ್ಷ ಭಾರತದ ಆಟೋ ಮೊಬೈಲ್ ಉದ್ಯಮದಲ್ಲಿ ನಿಧಾನಗತಿಯ ಹೊರತಾಗಿಯೂ, ಈ ಕಾರು ಉತ್ತಮ ಮಾರಾಟವನ್ನು ದಾಖಲಿಸಿದೆ.

ಚೊಚ್ಚಲ ಎಲೆಕ್ಟ್ರಿಕ್ ಸೂಪರ್‌ಕಾರ್‌ ಬಿಡುಗಡೆಗೊಳಿಸಲು ಸಜ್ಜಾದ Lamborghini

ಇನ್ನು ಉರುಸ್‌ ಕಾರಿನ ಬಗ್ಗೆ ಹೇಳುವುದಾದರೆ, ಈ ಐಷಾರಾಮಿ ಕಾರಿನಲ್ಲಿ 4.0 ಲೀಟರ್ 8 ಸಿಲಿಂಡರ್ ಟ್ವಿನ್ ಟರ್ಬೊ ವಿ 8 ಎಂಜಿನ್‌ ಅಳವಡಿಸಲಾಗಿದೆ. ಈ ಎಂಜಿನ್ 641 ಬಿ‌ಹೆಚ್‌ಪಿ ಪವರ್ ಹಾಗೂ 850 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಕಾರು ಲ್ಯಾಂಬೊರ್ಗಿನಿ ಕಂಪನಿಯ ಅತ್ಯಂತ ಶಕ್ತಿಶಾಲಿ ಕಾರುಗಳಲ್ಲಿ ಒಂದಾಗಿದೆ. ಈ ಕಾರು ಕೇವಲ 3.6 ಸೆಕೆಂಡ್‌ಗಳಲ್ಲಿ 0 - 100 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ.

ಚೊಚ್ಚಲ ಎಲೆಕ್ಟ್ರಿಕ್ ಸೂಪರ್‌ಕಾರ್‌ ಬಿಡುಗಡೆಗೊಳಿಸಲು ಸಜ್ಜಾದ Lamborghini

ಈ ಕಾರಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 305 ಕಿ.ಮೀಗಳಾಗಿದೆ. ಭಾರತದಲ್ಲಿ ಹಲವು ಚಿತ್ರ ತಾರೆಯರು ಹಾಗೂ ಉದ್ಯಮಿಗಳು ಲ್ಯಾಂಬೊರ್ಗಿನಿ ಉರುಸ್ ಕಾರ್ ಅನ್ನು ಹೊಂದಿದ್ದಾರೆ. ಈ ಕಾರಿನಲ್ಲಿ ಆಫ್ ರೋಡಿಂಗ್‌ಗಾಗಿ ವಿಭಿನ್ನ ಡ್ರೈವಿಂಗ್ ಮೋಡ್‌ಗಳನ್ನು ನೀಡಲಾಗಿದೆ. ಲ್ಯಾಂಬೊರ್ಗಿನಿ ಉರುಸ್ ಫೋಕ್ಸ್‌ವ್ಯಾಗನ್ ಗ್ರೂಪ್‌ನ MLB ಇವೊ ಪ್ಲಾಟ್‌ಫಾರಂ ಅನ್ನು ಆಧರಿಸಿದೆ.

ಚೊಚ್ಚಲ ಎಲೆಕ್ಟ್ರಿಕ್ ಸೂಪರ್‌ಕಾರ್‌ ಬಿಡುಗಡೆಗೊಳಿಸಲು ಸಜ್ಜಾದ Lamborghini

ಲ್ಯಾಂಬೊರ್ಗಿನಿ ಉರುಸ್ ಎಸ್‌ಯುವಿಯು ಸ್ಲಿಮ್ ಎಲ್‌ಇಡಿ ಹೆಡ್‌ಲೈಟ್ ಹಾಗೂ ಟೇಲ್ ಲೈಟ್‌ಗಳನ್ನು ಹೊಂದಿದೆ. ಈ ಕಾರಿನ ವಿನ್ಯಾಸವು ಲ್ಯಾಂಬೊರ್ಗಿನಿ ಕಂಪನಿಯ ಹುರಾಕನ್ ಸೂಪರ್‌ಕಾರ್‌ನಿಂದ ಪ್ರೇರಿತವಾಗಿದೆ. ಲ್ಯಾಂಬೊರ್ಗಿನಿ ಉರುಸ್ ಕಾರಿನಲ್ಲಿ 21 ಇಂಚಿನ ಐಷಾರಾಮಿ ಅಲಾಯ್ ವ್ಹೀಲ್ ನೀಡಲಾಗಿದೆ. 22 ಇಂಚಿನ ಹಾಗೂ 23 ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೆಚ್ಚುವರಿ ಆಯ್ಕೆಯಾಗಿ ನೀಡಲಾಗುತ್ತದೆ.

ಚೊಚ್ಚಲ ಎಲೆಕ್ಟ್ರಿಕ್ ಸೂಪರ್‌ಕಾರ್‌ ಬಿಡುಗಡೆಗೊಳಿಸಲು ಸಜ್ಜಾದ Lamborghini

ಲ್ಯಾಂಬೊರ್ಗಿನಿ ಕಂಪನಿಯು ತನ್ನ ಹೊಸ Huracan Evo Spyder ಕಾರ್ ಅನ್ನು ಮೇ ತಿಂಗಳಲ್ಲಿ ವಿಶ್ವ ಪ್ರೀಮಿಯರ್‌ನಲ್ಲಿ ಬಿಡುಗಡೆ ಮಾಡಿದೆ. ಲ್ಯಾಂಬೊರ್ಗಿನಿ ಹುರಾಕನ್ ಇವೊ ಸ್ಪೈಡರ್, ಸೂಪರ್‌ಫಾಸ್ಟ್ ಸ್ಪೋರ್ಟ್ಸ್ ಕಾರ್ ಆಗಿದ್ದು, ಕೇವಲ 3.5 ಸೆಕೆಂಡುಗಳಲ್ಲಿ 0 - 100 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ. ಈ ಕಾರಿನ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ. 1.44 ಕೋಟಿಗಳಾಗಿದೆ.

ಚೊಚ್ಚಲ ಎಲೆಕ್ಟ್ರಿಕ್ ಸೂಪರ್‌ಕಾರ್‌ ಬಿಡುಗಡೆಗೊಳಿಸಲು ಸಜ್ಜಾದ Lamborghini

ಉರುಸ್ ಕಾರಿನಲ್ಲಿ ಎಲ್ಲಾ ಪ್ರದೇಶಗಳಲ್ಲೂ ಸರಾಗವಾದ ಚಾಲನೆಗಾಗಿ ವಿವಿಧ ಡ್ರೈವಿಂಗ್ ಮೋಡ್‌ಗಳನ್ನು ನೀಡಲಾಗಿದೆ. ಈ ಕಾರಿನಲ್ಲಿ ಸ್ಟ್ರೀಟ್, ಟ್ರ್ಯಾಕ್ ಹಾಗೂ ಆಫ್ ರೋಡಿಂಗ್ ಗಳಿಗಾಗಿ ಸ್ಯಾಂಡ್, ಗ್ರಾವೆಲ್, ಸ್ನೋ ಡ್ರೈವಿಂಗ್ ಮೋಡ್‌ಗಳನ್ನು ನೀಡಲಾಗಿದೆ. ಈ ಮೋಡ್ ಗಳಿಂದ ಉರುಸ್ ಕಾರ್ ಅನ್ನು ಎಲ್ಲಾ ಕಠಿಣ ಪರಿಸ್ಥಿತಿಗಳಲ್ಲೂ ಸುಲಭವಾಗಿ ಚಾಲನೆ ಮಾಡಲು ಸಾಧ್ಯವಾಗಲಿದೆ.

ಚೊಚ್ಚಲ ಎಲೆಕ್ಟ್ರಿಕ್ ಸೂಪರ್‌ಕಾರ್‌ ಬಿಡುಗಡೆಗೊಳಿಸಲು ಸಜ್ಜಾದ Lamborghini

ಉರುಸ್ ಐಷಾರಾಮಿ ಕಾರು ಪ್ರಿಯರ ಆಯ್ಕೆಯಲ್ಲಿ ಮುಂಚೂಣಿಯಲ್ಲಿದೆ. ಲ್ಯಾಂಬೊರ್ಗಿನಿ ಕಂಪನಿಯು ಕಳೆದ 25 ವರ್ಷಗಳ ಹಿಂದೆಯೇ ಸೂಪರ್ ಕಾರುಗಳ ಜೊತೆಗೆ ಪ್ರಮುಖ 2 ಎಸ್‌ಯುವಿಗಳನ್ನು ಪರಿಚಯಿಸಿತ್ತು. ಆದರೆ ಮಾರಾಟದಲ್ಲಿ ಹಿನ್ನಡೆ ಉಂಟಾದ ಕಾರಣಕ್ಕೆ ಎಸ್‌ಯುವಿ ಮಾರಾಟವನ್ನು ಕೆಲ ವರ್ಷಗಳ ಹಿಂದೆ ಕೈಬಿಟ್ಟಿತ್ತು. ಈಗ ಮಾರುಕಟ್ಟೆಯಲ್ಲಿ ಬೇಡಿಕೆಗೆ ಅನುಗುಣವಾಗಿ ಹೊಸ ಉರುಸ್ ಕಾರಿನ ಮೂಲಕ ಮಾರಾಟದಲ್ಲಿ ಹೊಸ ದಾಖಲೆ ಬರೆದಿದೆ.

Most Read Articles

Kannada
English summary
Lamborghini to launch its first electric supercar by 2027 details
Story first published: Wednesday, December 8, 2021, 19:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X