ಉರುಸ್ ಎಸ್‌ಯುವಿ ಉತ್ಪಾದನೆಯಲ್ಲಿ ಲಂಬೋರ್ಗಿನಿ ಹೊಸ ಮೈಲಿಗಲ್ಲು

ಇಟಾಲಿಯನ್ ಕಾರು ಉತ್ಪಾದನಾ ಕಂಪನಿಯಾಗಿರುವ ಲಂಬೋರ್ಗಿನಿ ನಿರ್ಮಾಣದ ಉರುಸ್ ಐಷಾರಾಮಿ ಎಸ್‌ಯುವಿ ಕಾರು ಮಾದರಿಯು ಜಾಗತಿಕ ಮಾರುಕಟ್ಟೆಯಲ್ಲಿ ನೀರಿಕ್ಷೆಗೂ ಮೀರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಹೊಸ ಕಾರು ಅತಿ ಕಡಿಮೆ ಅವಧಿಯಲ್ಲಿ ದಾಖಲೆ ಪ್ರಮಾಣದ ಬೇಡಿಕೆ ಪಡೆದುಕೊಂಡಿದೆ.

ಉರುಸ್ ಐಷಾರಾಮಿ ಎಸ್‌ಯುವಿ ಉತ್ಪಾದನೆಯಲ್ಲಿ ಲಂಬೋರ್ಗಿನಿ ಹೊಸ ಮೈಲಿಗಲ್ಲು

2018ರ ಜನವರಿಯಲ್ಲಿ ಮೊದಲ ಬಾರಿಗೆ ಬಿಡುಗಡೆಗೊಂಡಿದ್ದ ಉರುಸ್ ಎಸ್‌ಯುವಿ ಕಾರು ಭಾರತ ಸೇರಿದಂತೆ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಮಾರಾಟಗೊಳ್ಳುತ್ತಿದ್ದು, ಲಂಬೋರ್ಗಿನಿ ಕಂಪನಿಯು ಹೊಸ ಕಾರಿನ ಉತ್ಪಾದನಾ ಪ್ರಮಾಣದಲ್ಲಿ ಇದೀಗ ಹೊಸ ಮೈಲಿಗಲ್ಲು ಸಾಧಿಸಿದೆ. ಉರುಸ್ ಕಾರು ಇದುವರೆಗೆ 15 ಸಾವಿರ ಯುನಿಟ್ ಉತ್ಪಾದನೆಗೊಳ್ಳುವ ಮೂಲಕ ಲಂಬೋರ್ಗಿನಿ ಕಂಪನಿಗೆ ಭಾರೀ ಪ್ರಮಾಣದ ಆದಾಯ ತಂದುಕೊಟ್ಟಿದ್ದು, ಭಾರತದಲ್ಲೂ ಈ ಕಾರು ಅತ್ಯುತ್ತಮ ಬೇಡಿಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಉರುಸ್ ಐಷಾರಾಮಿ ಎಸ್‌ಯುವಿ ಉತ್ಪಾದನೆಯಲ್ಲಿ ಲಂಬೋರ್ಗಿನಿ ಹೊಸ ಮೈಲಿಗಲ್ಲು

ಆಕರ್ಷಕ ಬೆಲೆಯೊಂದಿಗೆ ಅತ್ಯುತ್ತಮ ಎಂಜಿನ್ ಆಯ್ಕೆಯನ್ನು ಹೊಂದಿರುವ ಉರುಸ್ ಕಾರು ಗ್ರಾಹಕರ ಪ್ರಮುಖ ಆಕರ್ಷಿಸುವಲ್ಲಿ ಯಶಸ್ವಿಯಾಗಿದ್ದು, ಸಿನಿತಾರೆಯರು ಮತ್ತು ಉದ್ಯಮಿಗಳ ಹಾಟ್ ಫೆವರಿಟ್ ಕಾರು ಮಾದರಿಯಾಗಿ ಹೊರಹೊಮ್ಮಿದೆ.

ಉರುಸ್ ಐಷಾರಾಮಿ ಎಸ್‌ಯುವಿ ಉತ್ಪಾದನೆಯಲ್ಲಿ ಲಂಬೋರ್ಗಿನಿ ಹೊಸ ಮೈಲಿಗಲ್ಲು

ವಿಶೇಷ ಅಂದ್ರೆ ಲಂಬೋರ್ಗಿನಿ ಕಂಪನಿಯು ತನ್ನ ಕಾರು ಉತ್ಪನಗಳಲ್ಲೇ ಉರುಸ್ ಮೂಲಕ ಮೊದಲ ಬಾರಿಗೆ ಟರ್ಬೋಚಾರ್ಜ್ಡ್ ಎಂಜಿನ್ ಪರಿಚಯಿಸಿದ್ದು, ಉರುಸ್ ಎಸ್‌ಯುವಿ ಮಾದರಿಯು 4.0-ಲೀಟರ್ ಟ್ವಿನ್ ಟರ್ಬೋ ವಿ8 ಎಂಜಿನ್ ಪಡೆದುಕೊಂಡಿದೆ.

ಉರುಸ್ ಐಷಾರಾಮಿ ಎಸ್‌ಯುವಿ ಉತ್ಪಾದನೆಯಲ್ಲಿ ಲಂಬೋರ್ಗಿನಿ ಹೊಸ ಮೈಲಿಗಲ್ಲು

ಈ ಮೂಲಕ ಪ್ರತಿ ಗಂಟೆಗೆ 305 ಕಿಮಿ ಟಾಪ್ ಸ್ಪೀಡ್‌ನಲ್ಲಿ ಕ್ರಮಿಸಬಲ್ಲ ಶಕ್ತಿ ಹೊಂದಿರುವ ಉರುಸ್ ಎಸ್‌ಯುವಿಯು ಕೇವಲ 3.6 ಸೇಕೆಂಡ್‌ಗಳಲ್ಲಿ 100 ಕಿಮಿ ವೇಗ ಪಡೆಯಬಲ್ಲದು. ಹೀಗಾಗಿ ಎಲ್ಲಾ ಪ್ರದೇಶಗಳಲ್ಲೂ ಸರಾಗವಾದ ಚಾಲನೆಗಾಗಿ ವಿವಿಧ ಡ್ರೈವಿಂಗ್ ಮೂಡ್‌ಗಳನ್ನು ಒದಗಿಸಲಾಗಿದೆ.

ಉರುಸ್ ಐಷಾರಾಮಿ ಎಸ್‌ಯುವಿ ಉತ್ಪಾದನೆಯಲ್ಲಿ ಲಂಬೋರ್ಗಿನಿ ಹೊಸ ಮೈಲಿಗಲ್ಲು

ಸ್ಟ್ರೀಟ್, ಟ್ರ್ಯಾಕ್ ಮತ್ತು ಆಫ್ ರೋಡಿಂಗ್ ಮೋಡ್‌ಗಳಾದ ಸ್ಯಾಂಡ್, ಗ್ರಾವೆಲ್, ಸ್ನೋ ಡ್ರೈವಿಂಗ್ ಮೋಡ್‌ಗಳನ್ನು ನೀಡಲಾಗಿದ್ದು, ಎಲ್ಲಾ ಕಠಿಣ ಪರಿಸ್ಥಿತಿಗಳಲ್ಲೂ ಸುಲಭ ಚಾಲನೆ ಮಾಡುವಂತಹ ಸೌಲಭ್ಯಗಳನ್ನು ಹೊಂದಿದೆ. ಹೀಗಾಗಿ ಇದು ಐಷಾರಾಮಿ ಕಾರು ಪ್ರಿಯರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸಿದ್ದು, ಹಲವು ವಿಶೇಷ ಸೌಲಭ್ಯಗಳನ್ನು ಪಡೆದುಕೊಂಡಿದೆ.

ಉರುಸ್ ಐಷಾರಾಮಿ ಎಸ್‌ಯುವಿ ಉತ್ಪಾದನೆಯಲ್ಲಿ ಲಂಬೋರ್ಗಿನಿ ಹೊಸ ಮೈಲಿಗಲ್ಲು

ಐಷಾರಾಮಿ ಕಾರುಗಳ ಮಾರಾಟದಲ್ಲಿ ಉನ್ನತ ಸ್ಥಾನ ಹೊಂದಿರುವ ಲಂಬೋರ್ಗಿನಿ ಕಂಪನಿಯು ಕಳೆದ 25 ವರ್ಷಗಳ ಹಿಂದೆಯೇ ಸೂಪರ್ ಕಾರುಗಳ ಜೊತೆಗೆ ಪ್ರಮುಖ 2 ಎಸ್‌ಯುವಿಗಳನ್ನು ಪರಿಚಯಿಸಿತ್ತು. ಆದ್ರೆ ಮಾರಾಟದಲ್ಲಿ ಆದ ಹಿನ್ನಡೆಯಿಂದಾಗಿ ಎಸ್‌ಯುವಿ ಮಾರಾಟವನ್ನು ಕೆಲ ವರ್ಷಗಳ ಹಿಂದೆ ಕೈಬಿಟ್ಟಿತ್ತು. ಆದ್ರೆ ಇದೀಗ ಮಾರುಕಟ್ಟೆಯಲ್ಲಿ ಬೇಡಿಕೆಗೆ ಅನುಗುಣವಾಗಿ ಹೊಸ ಉರುಸ್ ಮೂಲಕ ಕಂಪನಿಯು ಹೊಸ ದಾಖಲೆಗೆ ಕಾರಣವಾಗಿದೆ.

ಉರುಸ್ ಐಷಾರಾಮಿ ಎಸ್‌ಯುವಿ ಉತ್ಪಾದನೆಯಲ್ಲಿ ಲಂಬೋರ್ಗಿನಿ ಹೊಸ ಮೈಲಿಗಲ್ಲು

ಸೂಪರ್ ಸ್ಪೋರ್ಟಿ ವೈಶಿಷ್ಟ್ಯತೆಗಳೊಂದಿಗೆ ಅಭಿವೃದ್ಧಿ ಹೊಂದಿರುವ ಉರುಸ್ ಕಾರಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 3.15 ಕೋಟಿಗೆ ನಿಗದಿ ಮಾಡಲಾಗಿದ್ದು, ವಿ8 ಮತ್ತು ಪರ್ಲ್ ಕ್ಯಾಸ್ಸೊಲ್ ಎನ್ನುವ ಎರಡು ವೆರಿಯೆಂಟ್‌ಗಳನ್ನು ಹೊಂದಿದೆ.

ಉರುಸ್ ಐಷಾರಾಮಿ ಎಸ್‌ಯುವಿ ಉತ್ಪಾದನೆಯಲ್ಲಿ ಲಂಬೋರ್ಗಿನಿ ಹೊಸ ಮೈಲಿಗಲ್ಲು

ಹೊಸ ಕಾರಿನಲ್ಲಿ ಆಲ್ ವೀಲ್ಹ್ ಡ್ರೈವ್ ಸಿಸ್ಟಂ, 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್, ವೆಂಟಿಲೆಟೆಡ್ ಲೆದರ್ ಸೀಟುಗಳು, ಆಲ್ ವೀಲ್ಹ್ ಡಿಸ್ಕ್ ಬ್ರೇಕ್, 8-ಏರ್‌ಬ್ಯಾಗ್‌ಗಳು, ಅತ್ಯಾಧುನಿಕ ಇನ್ಪೋಟೈನ್‌ಮೆಂಟ್ ಸಿಸ್ಟಂ ಸೇರಿದಂತೆ 85-ಲೀಟರ್ ಸಾಮರ್ಥ್ಯದ ಫ್ಯೂಲ್ ಟ್ಯಾಂಕ್ ಹೊಂದಿದೆ.

ಉರುಸ್ ಐಷಾರಾಮಿ ಎಸ್‌ಯುವಿ ಉತ್ಪಾದನೆಯಲ್ಲಿ ಲಂಬೋರ್ಗಿನಿ ಹೊಸ ಮೈಲಿಗಲ್ಲು

ಸದ್ಯ ಹೊಸ ಕಾರು ಯುಎಸ್ಎ ಮಾರುಕಟ್ಟೆಗಿಂತಲೂ ಹೆಚ್ಚಿನ ಮಟ್ಟದ ಬೇಡಿಕೆಯನ್ನು ಯುರೋಪ್ ಮತ್ತು ಏಷಿಯನ್ ಮಾರುಕಟ್ಟೆಗಳಿಂದ ಹೆಚ್ಚಿನ ಬೇಡಿಕೆ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಮುಂಬರುವ ದಿನಗಳಲ್ಲಿ ಹೊಸ ಕಾರು ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

Most Read Articles

Kannada
English summary
Lamborghini Celebrates Urus SUV New Production Milestone. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X