6ನೇ ಬಾರಿಗೆ ವರ್ಷದ ವಿಶ್ವ ಕಾರು ಪ್ರಶಸ್ತಿ ಪಡೆದ ಜಾಗ್ವಾರ್ ಲ್ಯಾಂಡ್ ರೋವರ್ ಕಂಪನಿ

ಐಷಾರಾಮಿ ಎಸ್‌ಯುವಿ ತಯಾರಕ ಕಂಪನಿಯಾದ ಲ್ಯಾಂಡ್ ರೋವರ್‌ನ ಹೊಸ ಲ್ಯಾಂಡ್ ರೋವರ್ ಡಿಫೆಂಡರ್‌ ಎಸ್‌ಯುವಿಯು 2021ರ ವಿಶ್ವ ಕಾರು ವಿನ್ಯಾಸ ಪ್ರಶಸ್ತಿ ಪಡೆದಿದೆ. ಲ್ಯಾಂಡ್ ರೋವರ್ ಡಿಫೆಂಡರ್ ಎಸ್‌ಯುವಿಗೆ ಹೋಂಡಾ ಇ ಹಾಗೂ ಮಜ್ದಾ ಎಂಎಕ್ಸ್ 30 ಪೈಪೋಟಿ ನೀಡಿದ್ದವು.

6ನೇ ಬಾರಿಗೆ ವರ್ಷದ ವಿಶ್ವ ಕಾರು ಪ್ರಶಸ್ತಿ ಪಡೆದ ಜಾಗ್ವಾರ್ ಲ್ಯಾಂಡ್ ರೋವರ್ ಕಂಪನಿ

ಹೊಸ ತಲೆಮಾರಿನ ಡಿಫೆಂಡರ್ ಎಸ್‌ಯುವಿಯು ಈ ಹಣಾಹಣಿಯಲ್ಲಿ 299 ಅಂಕಗಳನ್ನು ಪಡೆಯಿತು. ಹಲವಾರು ಮಾನದಂಡಗಳ ಆಧಾರದ ಮೇಲೆ ಡಿಫೆಂಡರ್ ಎಸ್‌ಯುವಿಯು ವರ್ಷದ ವಿಶ್ವ ಕಾರು (ಡಬ್ಲ್ಯುಸಿಒಟಿವೈ) ಪ್ರಶಸ್ತಿಗೆ ಆಯ್ಕೆಯಾಗಿದೆ. ಡಬ್ಲ್ಯುಸಿಒಟಿವೈ ತೀರ್ಪುಗಾರರ ತಂಡವು 28 ದೇಶಗಳ 93 ಖ್ಯಾತ ಅಂತರರಾಷ್ಟ್ರೀಯ ಪತ್ರಕರ್ತರನ್ನು ಒಳಗೊಂಡಿತ್ತು.

6ನೇ ಬಾರಿಗೆ ವರ್ಷದ ವಿಶ್ವ ಕಾರು ಪ್ರಶಸ್ತಿ ಪಡೆದ ಜಾಗ್ವಾರ್ ಲ್ಯಾಂಡ್ ರೋವರ್ ಕಂಪನಿ

ಜಾಗ್ವಾರ್ ಲ್ಯಾಂಡ್ ರೋವರ್ ಕಂಪನಿಯು 17 ವರ್ಷಗಳ ಡಬ್ಲ್ಯುಸಿಒಟಿವೈ ಇತಿಹಾಸದಲ್ಲಿ 6 ಬಾರಿ ಈ ಪ್ರಶಸ್ತಿಯನ್ನು ಗೆದ್ದಿದೆ. ಈ ಮೂಲಕ ಈ ಸಾಧನೆ ಮಾಡಿದ ವಿಶ್ವದ ಮೊದಲ ಕಾರು ತಯಾರಕ ಕಂಪನಿಯಾಗಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

6ನೇ ಬಾರಿಗೆ ವರ್ಷದ ವಿಶ್ವ ಕಾರು ಪ್ರಶಸ್ತಿ ಪಡೆದ ಜಾಗ್ವಾರ್ ಲ್ಯಾಂಡ್ ರೋವರ್ ಕಂಪನಿ

ಜೆಎಲ್ಆರ್ ತನ್ನ ರೇಂಜ್ ರೋವರ್ ಇವೊಕ್'ಗಾಗಿ 2012ರಲ್ಲಿ ಮೊದಲ ಬಾರಿಗೆ ಈ ಪ್ರಶಸ್ತಿಯನ್ನು ಗೆದ್ದಿತ್ತು. ನಂತರ 2013ರಲ್ಲಿ ಜಾಗ್ವಾರ್ ಎಫ್-ಪೇಸ್-ಟೈಪ್, 2017ರಲ್ಲಿ ಜಾಗ್ವಾರ್ ಎಫ್-ಪೇಸ್, ​​2018ರಲ್ಲಿ ರೇಂಜ್ ರೋವರ್ ವೆಲಾರ್ ಹಾಗೂ 2019ರಲ್ಲಿ ಜಾಗ್ವಾರ್ ಐ-ಪೇಸ್ ಕಾರುಗಳು ಈ ಪ್ರಶಸ್ತಿಯನ್ನು ಗೆದ್ದಿದ್ದವು.

6ನೇ ಬಾರಿಗೆ ವರ್ಷದ ವಿಶ್ವ ಕಾರು ಪ್ರಶಸ್ತಿ ಪಡೆದ ಜಾಗ್ವಾರ್ ಲ್ಯಾಂಡ್ ರೋವರ್ ಕಂಪನಿ

ಕಳೆದ ವರ್ಷ ಅಕ್ಟೋಬರ್‌ ತಿಂಗಳಿನಲ್ಲಿ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‌ಯುವಿ ಭಾರತದಲ್ಲಿ ಬಿಡುಗಡೆಗೊಳಿಸಲಾಯಿತು. ದೇಶಿಯ ಮಾರುಕಟ್ಟೆಯಲ್ಲಿ ಈ ಎಸ್‌ಯುವಿಯ ಬೆಲೆ ಎಕ್ಸ್‌ಶೋರೂಂ ದರದಂತೆ ರೂ.73.98 ಲಕ್ಷಗಳಾಗಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

6ನೇ ಬಾರಿಗೆ ವರ್ಷದ ವಿಶ್ವ ಕಾರು ಪ್ರಶಸ್ತಿ ಪಡೆದ ಜಾಗ್ವಾರ್ ಲ್ಯಾಂಡ್ ರೋವರ್ ಕಂಪನಿ

ಇತ್ತೀಚೆಗೆ ಕಂಪನಿಯು ಲ್ಯಾಂಡ್ ರೋವರ್ ಡಿಫೆಂಡರ್‌ನ ಡೀಸೆಲ್ ಎಂಜಿನ್ ಆವೃತ್ತಿಯನ್ನು ಬಿಡುಗಡೆಗೊಳಿಸಿದೆ. ಈ ಮಾದರಿಯ ಬೆಲೆ ಎಕ್ಸ್‌ಶೋರೂಂ ದರದಂತೆ ರೂ.94.36 ಲಕ್ಷಗಳಾಗಿದೆ.

6ನೇ ಬಾರಿಗೆ ವರ್ಷದ ವಿಶ್ವ ಕಾರು ಪ್ರಶಸ್ತಿ ಪಡೆದ ಜಾಗ್ವಾರ್ ಲ್ಯಾಂಡ್ ರೋವರ್ ಕಂಪನಿ

ಲ್ಯಾಂಡ್ ರೋವರ್ ಕಂಪನಿಯು ಭಾರತದಲ್ಲಿ ಡಿಫೆಂಡರ್ ಎಸ್‌ಯುವಿಯನ್ನು ಟರ್ಬೊ ಡೀಸೆಲ್ ಎಂಜಿನ್'ನೊಂದಿಗೆ ಬಿಡುಗಡೆಗೊಳಿಸಿದೆ. ಟರ್ಬೊ ಡೀಸೆಲ್ ಎಂಜಿನ್ ಹೊಂದಿರುವ ಡಿಫೆಂಡರ್ ಎಸ್‌ಯುವಿಯನ್ನು 90 ಹಾಗೂ 110 ಎಂಬ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

6ನೇ ಬಾರಿಗೆ ವರ್ಷದ ವಿಶ್ವ ಕಾರು ಪ್ರಶಸ್ತಿ ಪಡೆದ ಜಾಗ್ವಾರ್ ಲ್ಯಾಂಡ್ ರೋವರ್ ಕಂಪನಿ

ಡಿಫೆಂಡರ್ 90 ಮಾದರಿಯು 3 ಡೋರ್'ಗಳನ್ನು ಹೊಂದಿದ್ದರೆ, ಡಿಫೆಂಡರ್ 110 ಮಾದರಿಯು 5 ಡೋರ್'ಗಳನ್ನು ಹೊಂದಿದೆ. ಡಿಫೆಂಡರ್ ಪೆಟ್ರೋಲ್ ಮಾದರಿಯಲ್ಲಿರುವ ಎಲ್ಲಾ ಫೀಚರ್'ಗಳನ್ನು ಡಿಫೆಂಡರ್ ಡೀಸೆಲ್ ಮಾದರಿಯಲ್ಲಿಯೂ ನೀಡಲಾಗಿದೆ.

6ನೇ ಬಾರಿಗೆ ವರ್ಷದ ವಿಶ್ವ ಕಾರು ಪ್ರಶಸ್ತಿ ಪಡೆದ ಜಾಗ್ವಾರ್ ಲ್ಯಾಂಡ್ ರೋವರ್ ಕಂಪನಿ

ಇವುಗಳಲ್ಲಿ ಟೆರೈನ್ ರೆಸ್ಪಾನ್ಸ್ ಮ್ಯಾನೇಜ್ಮೆಂಟ್ ಸಿಸ್ಟಂ, ಏರ್ ಸಸ್ಪೆಂಷನ್, ಎಲ್ಇಡಿ ಹೆಡ್'ಲೈಟ್, ಎಲ್ಇಡಿ ಟೇಲ್'ಲೈಟ್, ಪವರ್ ಒಆರ್‌ವಿಎಂ ರೇನ್ ಸೆನ್ಸಿಂಗ್ ವೈಪರ್, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಸ್ಮಾರ್ಟ್ ಕೀ ಲೆಸ್ ಎಂಟ್ರಿ, ಪುಶ್ ಬಟನ್ ಸ್ಟಾರ್ಟ್/ಸ್ಟಾಪ್ ಸೇರಿದಂತೆ ಹಲವಾರು ಫೀಚರ್'ಗಳನ್ನು ಹೊಂದಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

6ನೇ ಬಾರಿಗೆ ವರ್ಷದ ವಿಶ್ವ ಕಾರು ಪ್ರಶಸ್ತಿ ಪಡೆದ ಜಾಗ್ವಾರ್ ಲ್ಯಾಂಡ್ ರೋವರ್ ಕಂಪನಿ

ಇದರ ಜೊತೆಗೆ 10 ಇಂಚಿನ ಟಚ್‌ಸ್ಕ್ರೀನ್ ಡಿಸ್ ಪ್ಲೇ, 12.3 ಇಂಚಿನ ಡಿಜಿಟಲ್ ಇನ್ಸ್'ಟ್ರೂಮೆಂಟ್ ಕ್ಲಸ್ಟರ್ ಜೊತೆಗೆ ಹೆಡ್‌ಅಪ್ ಡಿಸ್ ಪ್ಲೇ ಹೊಂದಿದೆ. ಈ ಎಸ್‌ಯುವಿಯಲ್ಲಿರುವ ಇನ್ಫೋಟೇನ್ಮೆಂಟ್ ಸಿಸ್ಟಂ ಆಂಡ್ರಾಯ್ಡ್ ಆಟೋ ಹಾಗೂ ಆಪಲ್ ಕಾರ್ ಪ್ಲೇಗಳಿಗೆ ಕನೆಕ್ಟ್ ಮಾಡುತ್ತದೆ.

6ನೇ ಬಾರಿಗೆ ವರ್ಷದ ವಿಶ್ವ ಕಾರು ಪ್ರಶಸ್ತಿ ಪಡೆದ ಜಾಗ್ವಾರ್ ಲ್ಯಾಂಡ್ ರೋವರ್ ಕಂಪನಿ

ಇನ್ನು ಈ ಎಸ್‌ಯುವಿಯಲ್ಲಿರುವ ಎಂಜಿನ್ ಬಗ್ಗೆ ಹೇಳುವುದಾದರೆ, ಈ ಎಸ್‌ಯುವಿಯನ್ನು 3.0 ಲೀಟರ್ ಟರ್ಬೋಚಾರ್ಜ್ಡ್, ಇನ್-ಲೈನ್ ಡೀಸೆಲ್ ಹಾಗೂ 2.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೆ ಮಾರಾಟ ಮಾಡಲಾಗುತ್ತದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

6ನೇ ಬಾರಿಗೆ ವರ್ಷದ ವಿಶ್ವ ಕಾರು ಪ್ರಶಸ್ತಿ ಪಡೆದ ಜಾಗ್ವಾರ್ ಲ್ಯಾಂಡ್ ರೋವರ್ ಕಂಪನಿ

ಡೀಸೆಲ್ ಎಂಜಿನ್ 300 ಬಿಹೆಚ್‌ಪಿ ಪವರ್ ಹಾಗೂ 650 ಎನ್‌ಎಂ ಟಾರ್ಕ್ ಉತ್ಪಾದಿಸಿದರೆ, ಪೆಟ್ರೋಲ್ ಎಂಜಿನ್ 300 ಬಿಹೆಚ್‌ಪಿ ಪವರ್ ಹಾಗೂ 400 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

Most Read Articles

Kannada
English summary
Land Rover company wins world car of the year award for sixth time. Read in Kannada.
Story first published: Wednesday, April 21, 2021, 16:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X