ಬಿಡುಗಡೆಯಾಗಲಿದೆ ಲಾಂಗ್ ವೀಲ್ಹ್‌ಬೆಸ್ ಹೊಂದಿರುವ ಲ್ಯಾಂಡ್ ರೋವರ್ ಡಿಫೆಂಡರ್

ಲ್ಯಾಂಡ್ ರೋವರ್ ಕಂಪನಿಯು ತನ್ನ ಜನಪ್ರಿಯ ಡಿಫೆಂಡರ್ ಲೈಫ್‌ಸ್ಟೈಲ್ ಆಫ್ ರೋಡ್ ಐಷಾರಾಮಿ ಎಸ್‌ಯುವಿ ಮಾದರಿಯನ್ನು ಭಾರತ ಸೇರಿದಂತೆ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಮಾರಾಟ ಮಾಡುತ್ತಿದ್ದು, ಕಂಪನಿಯು ಶೀಘ್ರದಲ್ಲೇ ಮತ್ತೊಂದು ಡಿಫೆಂಡರ್ ಹೊಸ ಮಾದರಿಯೊಂದನ್ನು ಬಿಡುಗಡೆ ಮಾಡುವ ಸಿದ್ದತೆಯಲ್ಲಿದೆ.

ಬಿಡುಗಡೆಯಾಗಲಿದೆ ಲಾಂಗ್ ವೀಲ್ಹ್‌ಬೆಸ್ ಹೊಂದಿರುವ ಲ್ಯಾಂಡ್ ರೋವರ್ ಡಿಫೆಂಡರ್

ಆಫ್ ರೋಡ್ ಎಸ್‌ಯುವಿ ಕಾರುಗಳ ವಿಭಾಗದಲ್ಲಿ ತನ್ನದೆ ಆದ ಜನಪ್ರಿಯತೆ ಹೊಂದಿರುವ ಲ್ಯಾಂಡ್ ರೋವರ್ ಡಿಫೆಂಡರ್ ಆವೃತ್ತಿಯು ಇತ್ತೀಚೆಗೆ ಹೊಸ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಜಾಗತಿಕ ಮಾರುಕಟ್ಟೆಗಾಗಿ ಅನಾವರಣಗೊಂಡಿದ್ದು, ವಿ8 ಎಂಜಿನ್‌ನೊಂದಿಗೆ ಬಿಡುಗಡೆಗಾಗಿ ಸಜ್ಜುಗೊಂಡಿದೆ. ವಿ8 ಪ್ರೇರಿತ ಹೊಸ ತಲೆಮಾರಿನ ಡಿಫೆಂಡರ್ ಬಿಡುಗಡೆಯ ಸಂದರ್ಭದಲ್ಲಿ ಲ್ಯಾಂಡ್ ರೋವರ್ ಕಂಪನಿಯು ಲಾಂಗ್ ವೀಲ್ಹ್‌ಬೆಸ್ ಆವೃತ್ತಿಯನ್ನು ಸಹ ಬಿಡುಗಡೆಯ ಸಿದ್ದತೆಯಲ್ಲಿರುವುದಾಗಿ ಮಾಹಿತಿ ಹಂಚಿಕೊಂಡಿದೆ.

ಬಿಡುಗಡೆಯಾಗಲಿದೆ ಲಾಂಗ್ ವೀಲ್ಹ್‌ಬೆಸ್ ಹೊಂದಿರುವ ಲ್ಯಾಂಡ್ ರೋವರ್ ಡಿಫೆಂಡರ್

ಲ್ಯಾಂಡ್ ರೋವರ್ ಕಂಪನಿಯು ಸದ್ಯ ಮಾರುಕಟ್ಟೆಯಲ್ಲಿ ಡಿಫೆಂಡರ್ 90, ಡಿಫೆಂಡರ್ 110 ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ವಿಸ್ತರಿತ ವೀಲ್ಹ್‌ಬೆಸ್ ಹೊಂದಿರುವ ಮಾದರಿಯು ಡಿಫೆಂಡರ್ 130 ಮಾದರಿಯಾಗಿ ರಸ್ತೆಗಿಳಿಯಲಿದೆ.

ಬಿಡುಗಡೆಯಾಗಲಿದೆ ಲಾಂಗ್ ವೀಲ್ಹ್‌ಬೆಸ್ ಹೊಂದಿರುವ ಲ್ಯಾಂಡ್ ರೋವರ್ ಡಿಫೆಂಡರ್

ಇತ್ತೀಚೆಗೆ ಅನಾವರಣಗೊಂಡ ವಿ8 ಎಂಜಿನ್ ಪ್ರೇರಿತ ಹೊಸ ತಲೆಮಾರಿನ ಆವೃತ್ತಿಯು ಡಿಫೆಂಡರ್ 90 ಮತ್ತು ಡಿಫೆಂಡರ್ 110 ಮಾದರಿಗಳಲ್ಲಿ ಖರೀದಿ ಲಭ್ಯವಿದ್ದು, ಹೊಸದಾಗಿ ಅಭಿವೃದ್ದಿಗೊಳ್ಳುತ್ತಿರುವ ಡಿಫೆಂಡರ್ 130 ಮಾದರಿಯು ಪ್ರತ್ಯೇಕ ಪವರ್‌ಟ್ರೇನ್ ಪಡೆದುಕೊಳ್ಳಲಿದೆ.

ಬಿಡುಗಡೆಯಾಗಲಿದೆ ಲಾಂಗ್ ವೀಲ್ಹ್‌ಬೆಸ್ ಹೊಂದಿರುವ ಲ್ಯಾಂಡ್ ರೋವರ್ ಡಿಫೆಂಡರ್

ಲಾಂಗ್ ವೀಲ್ಹ್‌ಬೆಸ್ ಹೊಂದಿರುವ ಡಿಫೆಂಡರ್ 130 ಮಾದರಿಯು ಮೂರನೇ ಸಾಲಿನ ಆಸನದೊಂದಿಗೆ 7 ಸೀಟರ್ ಮತ್ತು 8 ಸೀಟರ್ ಸೌಲಭ್ಯಗಳನ್ನು ಪಡೆದುಕೊಳ್ಳಲಿದ್ದು, ಗ್ರಾಹಕರ ಬೇಡಿಕೆಯ ಆಧಾರದ ಮೇಲೆ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಲಾಗುತ್ತಿದೆ. ಭಾರತದಲ್ಲಿ ಸದ್ಯಕ್ಕೆ ಡಿಫೆಂಡರ್ 90 ಮತ್ತು ಡಿಫೆಂಡರ್ 110 ಮಾರಾಟ ಮಾಡುತ್ತಿರುವ ಲ್ಯಾಂಡ್ ರೋವರ್ ಕಂಪನಿಯು ಶೀಘ್ರದಲ್ಲೇ ಭಾರತದಲ್ಲೂ ಹೊಸ ಆವೃತ್ತಿಯನ್ನು ಪರಿಚಯಿಸುವ ಸಿದ್ದತೆಯಲ್ಲಿದೆ.

ಬಿಡುಗಡೆಯಾಗಲಿದೆ ಲಾಂಗ್ ವೀಲ್ಹ್‌ಬೆಸ್ ಹೊಂದಿರುವ ಲ್ಯಾಂಡ್ ರೋವರ್ ಡಿಫೆಂಡರ್

ಐಷಾರಾಮಿ ಸೌಲಭ್ಯಗಳೊಂದಿಗೆ ಆಫ್ ರೋಡ್ ಚಾಲನೆಗಾಗಿಯೇ ವಿಶೇಷ ವೈಶಿಷ್ಟ್ಯತೆಗಳನ್ನು ಹೊಂದಿರುವ ಲ್ಯಾಂಡ್ ರೋವಲ್ ಡಿಫೆಂಡರ್ ಎಸ್‌ಯುವಿ ಸದ್ಯ ಐಷಾರಾಮಿ ಕಾರುಗಳ ವಿಭಾಗದಲ್ಲಿ ಉತ್ತಮ ಬೇಡಿಕೆ ಪಡೆದುಕೊಂಡಿದೆ.

ಬಿಡುಗಡೆಯಾಗಲಿದೆ ಲಾಂಗ್ ವೀಲ್ಹ್‌ಬೆಸ್ ಹೊಂದಿರುವ ಲ್ಯಾಂಡ್ ರೋವರ್ ಡಿಫೆಂಡರ್

ಹೊಸ ಕಾರು ಸದ್ಯ ಭಾರತದಲ್ಲಿ ದೆಹಲಿ ಎಕ್ಸ್‌ಶೋರೂಂ ದರದಂತೆ ಆರಂಭಿಕವಾಗಿ ರೂ. 73.91 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ.90.43 ಲಕ್ಷ ಬೆಲೆ ಹೊಂದಿದ್ದು, ಡಿಫೆಂಡರ್ 130 ಮಾದರಿಯು ಡಿಫೆಂಡರ್ 110 ಮಾದರಿಗಿಂತಲೂ ತುಸು ದುಬಾರಿಯಾಗಿರಲಿದೆ.

ಬಿಡುಗಡೆಯಾಗಲಿದೆ ಲಾಂಗ್ ವೀಲ್ಹ್‌ಬೆಸ್ ಹೊಂದಿರುವ ಲ್ಯಾಂಡ್ ರೋವರ್ ಡಿಫೆಂಡರ್

ಲ್ಯಾಂಡ್ ರೋವರ್ ಡಿಫೆಂಡರ್ ಹೊಸ ಕಾರು ಮಾದರಿಯು ಡಿ7ಎಕ್ಸ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದ್ದು, ಮೊನೊಕೊಕ್ ಚಾಸಿಸ್ ಅನ್ನು ಹೊಂದಿದೆ. ಬೇಸ್, ಎಸ್, ಎಸ್ಇ, ಹೆಚ್ಎಸ್ಇ ಮತ್ತು ಫಸ್ಟ್ ಎಡಿಷನ್ ಎಂಬ ಐದು ರೂಪಾಂತರಗಳಲ್ಲಿ ಲಭ್ಯವಿದ್ದು, ಹೊಸ ಕಾರು ಭಾರತಕ್ಕೆ ಕಂಪ್ಲೀಟ್ ಬಿಲ್ಟ್ ಯುನಿಟ್ (ಸಿಬಿಯು) ಮಾದರಿಯಲ್ಲಿ ಮಾರಾಟಗೊಳ್ಳುತ್ತಿದೆ.

ಬಿಡುಗಡೆಯಾಗಲಿದೆ ಲಾಂಗ್ ವೀಲ್ಹ್‌ಬೆಸ್ ಹೊಂದಿರುವ ಲ್ಯಾಂಡ್ ರೋವರ್ ಡಿಫೆಂಡರ್

ಈ ಎಸ್‌ಯುವಿಯು ವಿಶಾಲವಾದ ಕ್ಯಾಬಿನ್, ದೊಡ್ಡದಾದ ಪನೋರಾಮಿಕ್ ಸನ್‌ರೂಫ್, ಸೈಡ್ ಆಲ್ಪೈನ್ ಲೈಟ್ ವಿಂಡೋಗಳನ್ನು ಹೊಂದಿದೆ. ಡಿಫೆಂಡರ್ ಎಸ್‌ಯುವಿ ಮೂರು ರೀತಿಯ ಇಂಟಿರಿಯರ್ ಬಣ್ಣಗಳನ್ನು ಹೊಂದಿದೆ. ಪ್ಯಾಂಗಿಯಾ ಗ್ರೀನ್ ಬಣ್ಣವು ಕಪ್ಪಾದ ಇಂಟಿರಿಯರ್ ಹೊಂದಿದ್ದರೆ, ಮತ್ತೊಂದು ಲೈಟ್ ಕ್ರೀಮ್ ಬಣ್ಣದ ಇಂಟಿರಿಯರ್ ಅನ್ನು ಹೊಂದಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಬಿಡುಗಡೆಯಾಗಲಿದೆ ಲಾಂಗ್ ವೀಲ್ಹ್‌ಬೆಸ್ ಹೊಂದಿರುವ ಲ್ಯಾಂಡ್ ರೋವರ್ ಡಿಫೆಂಡರ್

ಎಕ್ಸ್‌ಟಿರಿಯರ್ ನಲ್ಲಿ 360 ಡಿಗ್ರಿಯ ಆರು ಕ್ಯಾಮೆರಾ, ಸೆನ್ಸಾರ್ ಗಳಿವೆ. ಐಆರ್ ವಿಎಂ ಹಿಂದೆ ಒಂದು ಕ್ಯಾಮೆರಾ ಇದ್ದು, ಈ ಕ್ಯಾಮರಾ ಆಕ್ಟೀವ್ ಲೇನ್ ಅಸಿಸ್ಟ್ ಹಾಗೂ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಆಗಿ ಕಾರ್ಯ ನಿರ್ವಹಿಸಿದರೆ, ಐಆರ್ ವಿಎಂನಲ್ಲಿ (ಸ್ವಿಚ್ ಮೂಲಕ) ವೀಡಿಯೊವನ್ನು ಪ್ರದರ್ಶಿಸುವ ಶಾರ್ಕ್-ಫಿನ್ ಆಂಟೆನಾದಲ್ಲಿಯೂ ಕ್ಯಾಮೆರಾ ನೀಡಲಾಗಿದೆ.

ಬಿಡುಗಡೆಯಾಗಲಿದೆ ಲಾಂಗ್ ವೀಲ್ಹ್‌ಬೆಸ್ ಹೊಂದಿರುವ ಲ್ಯಾಂಡ್ ರೋವರ್ ಡಿಫೆಂಡರ್

ಈ ಎಸ್‌ಯುವಿಯು ಆಪಲ್ ಕಾರ್ ಪ್ಲೇ ಹಾಗೂ ಆಂಡ್ರಾಯ್ಡ್ ಆಟೋ ಹೊಂದಿರುವ 10 ಇಂಚಿನ ಇನ್ಫೋಟೇನ್ಮೆಂಟ್ ಸಿಸ್ಟಂ, ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಲೆದರ್ ವ್ರಾಪ್ ಸ್ಟೀಯರಿಂಗ್ ವ್ಹೀಲ್, ಕ್ರೂಸ್ ಕಂಟ್ರೋಲ್, 360 ಡಿಗ್ರಿ ಕ್ಯಾಮೆರಾ, 3 ಡಿ ಮೆರಿಡಿಯನ್ ಸರೌಂಡ್ ಸೌಂಡ್ ಸಿಸ್ಟಮ್, ಆ ಸ್ಟ್ರೀಮ್ ಕ್ರಾಸಿಂಗ್‌ಗಳಿಗಾಗಿ ವೇಡ್-ಸೆನ್ಸಿಂಗ್ ಹಾಗೂ ಡ್ರೈವರ್ ಕಂಡಿಷನ್ ಮಾನಿಟರಿಂಗ್ ಫೀಚರ್ ಗಳನ್ನು ಹೊಂದಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಬಿಡುಗಡೆಯಾಗಲಿದೆ ಲಾಂಗ್ ವೀಲ್ಹ್‌ಬೆಸ್ ಹೊಂದಿರುವ ಲ್ಯಾಂಡ್ ರೋವರ್ ಡಿಫೆಂಡರ್

ಇನ್ನು ಲ್ಯಾಂಡ್ ರೋವರ್ ಡಿಫೆಂಡರ್ ಕಾರು 5,018-ಎಂಎಂ ಉದ್ದ, 2,105-ಎಂಎಂ ಅಗಲ ಮತ್ತು 1,967-ಎಂಎಂ ಎತ್ತರವನ್ನು ಹೊಂದಿದ್ದು, ಈ ಎಸ್‍ಯುವಿಯು 3,022 ಎಂಎಂ ವ್ಹೀಲ್ ಬೇಸ್‌ನೊಂದಿಗೆ 218-ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿದ್ದು, ಬಿಡುಗಡೆಯಾಗಲಿರುವ ಡಿಫೆಂಡರ್ 130 ಮಾದರಿಯು 5,100 ಎಂಎಂ ಉದ್ದಳತೆಯೊಂದಿಗೆ ಉತ್ತಮ ಸ್ಥಳಾವಕಾಶ ಒದಗಿಸಲಿದೆ.

Most Read Articles

Kannada
English summary
Land Rover Confirmed The New Defender 130 Three-Row Model. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X