2021ರ ರೆಡ್ ಬುಲ್ ಎಕ್ಸ್-ಆಲ್ಪ್ಸ್ ಸ್ಪರ್ಧೆಯಲ್ಲಿ ಪ್ರಮುಖ ಪಾತ್ರವಹಿಸಲಿದೆ ಲ್ಯಾಂಡ್ ರೋವರ್ ಡಿಫೆಂಡರ್

ರೆಡ್ ಬುಲ್ ಎಕ್ಸ್-ಆಲ್ಪ್ಸ್ 2021ರ ಆವೃತ್ತಿಯಲ್ಲಿ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‌ಯುವಿ ಅಧಿಕೃತ ಬೆಂಬಲಿತ ವಾಹನವಾಗಿ ಆಯ್ಕೆ ಮಾಡಲಾಗಲಿದ್ದು, ವಿಶ್ವದ ಕಠಿಣ ಗುಡ್ಡಗಾಡು ಓಟದ ಸ್ಪರ್ಧೆಯ ಬೆಂಬಲಿತ ವಾಹನವಾಗಿ ಲ್ಯಾಂಡ್ ರೋವರ್ ಡಿಫೆಂಡರ್‌ಗೆ ಸ್ಧಾನ ನೀಡಲಾಗಿದೆ.

2021ರ ರೆಡ್ ಬುಲ್ ಎಕ್ಸ್-ಆಲ್ಪ್ಸ್ ಸ್ಪರ್ಧೆಯಲ್ಲಿ ಪ್ರಮುಖ ಪಾತ್ರವಹಿಸಲಿದೆ ಲ್ಯಾಂಡ್ ರೋವರ್ ಡಿಫೆಂಡರ್

ಯರೋಪಿನ್ ಜನಪ್ರಿಯ ರೆಡ್ ಬುಲ್ ಎಕ್ಸ್-ಆಲ್ಪ್ಸ್ 2021ರ ಆವೃತ್ತಿಯು ಆಸ್ಟೀಯಾ, ಜರ್ಮನಿ, ಇಟಾಲಿ ಮತ್ತು ಸ್ವಿಜರ್ಲ್ಯಾಂಡ್ ಗಡಿಗಳಲ್ಲಿ ವಿವಿಧ ಹಂತಗಳಲ್ಲಿ ನಡೆಯುತ್ತಿದ್ದು, ಸುಮಾರು 1 ಸಾವಿರ ಕಿ.ಮೀ ಸಾಗಬೇಕಿರುವ ಸ್ಪರ್ಧೆಯಲ್ಲಿ ಸ್ಪರ್ಧಿಗಳಿಗೆ ಅಗತ್ಯ ವೈದ್ಯಕೀಯ ಉಪಚಾರ ಒದಗಿಸಲು ಅಡ್ವೆಂಚರ್ ಕಾರು ಮಾದರಿಯಾದ ಲ್ಯಾಂಡ್ ರೋವರ್ ಆಯ್ಕೆ ಮಾಡಲಾಗಿದೆ.

2021ರ ರೆಡ್ ಬುಲ್ ಎಕ್ಸ್-ಆಲ್ಪ್ಸ್ ಸ್ಪರ್ಧೆಯಲ್ಲಿ ಪ್ರಮುಖ ಪಾತ್ರವಹಿಸಲಿದೆ ಲ್ಯಾಂಡ್ ರೋವರ್ ಡಿಫೆಂಡರ್

ವಿವಿಧ ಸ್ಪರ್ಧೆಗಳಲ್ಲಿ ಈಗಾಗಲೇ ಡಿಫೆಂಡರ್ 110 ಎಸ್‌ಯುವಿಯನ್ನು ಬೆಂಗಾವಲು ವಾಹನವನ್ನಾಗಿ ಆಯ್ಕೆ ಮಾಡಲಾಗಿದ್ದು, ಕಠಿಣ ಭೂ ಪ್ರದೇಶಗಳಲ್ಲೂ ಸರಾಗವಾಗಿ ನುಗ್ಗಬಲ್ಲ ಡಿಫೆಂಡರ್ ಕಾರು ಇತರೆ ಕಾರು ಮಾದರಿಗಳಿಂತಲೂ ಭಿನ್ನಲಾಗಿ ಗುರುತಿಸಿಕೊಂಡಿದೆ.

2021ರ ರೆಡ್ ಬುಲ್ ಎಕ್ಸ್-ಆಲ್ಪ್ಸ್ ಸ್ಪರ್ಧೆಯಲ್ಲಿ ಪ್ರಮುಖ ಪಾತ್ರವಹಿಸಲಿದೆ ಲ್ಯಾಂಡ್ ರೋವರ್ ಡಿಫೆಂಡರ್

ವಿಶ್ವದ ಪ್ರಮುಖ ಮೋಟಾರ್‌ಸ್ಪೋರ್ಟ್ ಸ್ಪರ್ಧೆಯಲ್ಲಿ ಭಾಗಿಯಾಗಿರುವ ಡಿಫೆಂಡರ್ ಮಾದರಿಯು ಸ್ಪೋರ್ಟ್ ವಾಹನ ಮಾದರಿಗಳಷ್ಟೇ ಬಲಿಷ್ಠ ಆಫ್ ರೋಡ್ ವೈಶಿಷ್ಟ್ಯತೆ ಹೊಂದಿದ್ದು, ವೈದ್ಯಕೀಯ ತಂಡದಲ್ಲಿನ ಸದಸ್ಯರ ಸೇವೆಗಾಗಿ ವಿಶೇಷ ಸೌಲಭ್ಯಗಳೊಂದಿಗೆ 4x4 ತಂತ್ರಜ್ಞಾನದೊಂದಿಗೆ ಎಲ್ಲಾ ಮಾದರಿಯ ಭೂಪ್ರದೇಶಗಳಲ್ಲೂ ಕೌಶಲ್ಯತೆಯನ್ನು ಪ್ರದರ್ಶಸುತ್ತದೆ.

2021ರ ರೆಡ್ ಬುಲ್ ಎಕ್ಸ್-ಆಲ್ಪ್ಸ್ ಸ್ಪರ್ಧೆಯಲ್ಲಿ ಪ್ರಮುಖ ಪಾತ್ರವಹಿಸಲಿದೆ ಲ್ಯಾಂಡ್ ರೋವರ್ ಡಿಫೆಂಡರ್

ಐಷಾರಾಮಿ ಸೌಲಭ್ಯಗಳೊಂದಿಗೆ ಆಫ್ ರೋಡ್ ಚಾಲನೆಗಾಗಿಯೇ ವಿಶೇಷ ವೈಶಿಷ್ಟ್ಯತೆಗಳನ್ನು ಹೊಂದಿರುವ ಲ್ಯಾಂಡ್ ರೋವಲ್ ಡಿಫೆಂಡರ್ ಎಸ್‌ಯುವಿ ಸದ್ಯ ಐಷಾರಾಮಿ ಕಾರುಗಳ ವಿಭಾಗದಲ್ಲಿ ಉತ್ತಮ ಬೇಡಿಕೆ ಪಡೆದುಕೊಂಡಿದೆ.

2021ರ ರೆಡ್ ಬುಲ್ ಎಕ್ಸ್-ಆಲ್ಪ್ಸ್ ಸ್ಪರ್ಧೆಯಲ್ಲಿ ಪ್ರಮುಖ ಪಾತ್ರವಹಿಸಲಿದೆ ಲ್ಯಾಂಡ್ ರೋವರ್ ಡಿಫೆಂಡರ್

ಭಾರತದಲ್ಲಿ ಡಿಫೆಂಡರ್ ಹೊಸ ಡೀಸೆಲ್ ಕಾರು ಮಾದರಿಯು ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ದರದಂತೆ ಆರಂಭಿಕವಾಗಿ ರೂ. 94.36 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ. 1.08 ಕೋಟಿ ಬೆಲೆ ಹೊಂದಿದ್ದು, ಎಸ್ಇ, ಹೆಚ್ಎಸ್ಇ, ಹೆಚ್-ಡೈನಾಮಿಕ್ ಹೆಚ್ಎಸ್ಇ ಮತ್ತು ಎಕ್ಸ್ ವೆರಿಯೆಂಟ್ ಹೊಂದಿದೆ.

2021ರ ರೆಡ್ ಬುಲ್ ಎಕ್ಸ್-ಆಲ್ಪ್ಸ್ ಸ್ಪರ್ಧೆಯಲ್ಲಿ ಪ್ರಮುಖ ಪಾತ್ರವಹಿಸಲಿದೆ ಲ್ಯಾಂಡ್ ರೋವರ್ ಡಿಫೆಂಡರ್

ಭಾರತದಲ್ಲಿ ಸದ್ಯಕ್ಕೆ ಡಿಫೆಂಡರ್ 90 ಮತ್ತು ಡಿಫೆಂಡರ್ 110 ಮಾರಾಟ ಮಾಡುತ್ತಿರುವ ಲ್ಯಾಂಡ್ ರೋವರ್ ಕಂಪನಿಯು ಐಷಾರಾಮಿ ಸೌಲಭ್ಯಗಳೊಂದಿಗೆ ಆಫ್ ರೋಡ್ ಚಾಲನೆಗಾಗಿಯೇ ವಿಶೇಷವಾಗಿ ಅಭಿವೃದ್ದಿಗೊಳಿಸಿದೆ.

2021ರ ರೆಡ್ ಬುಲ್ ಎಕ್ಸ್-ಆಲ್ಪ್ಸ್ ಸ್ಪರ್ಧೆಯಲ್ಲಿ ಪ್ರಮುಖ ಪಾತ್ರವಹಿಸಲಿದೆ ಲ್ಯಾಂಡ್ ರೋವರ್ ಡಿಫೆಂಡರ್

ಡಿಫೆಂಡರ್ ಆವೃತ್ತಿಯ ಪೆಟ್ರೋಲ್ ಮಾದರಿಯು ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ದರದಂತೆ ಆರಂಭಿಕವಾಗಿ ರೂ. 73.91 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ.90.43 ಲಕ್ಷ ಬೆಲೆ ಹೊಂದಿದ್ದು, ಎಂಜಿನ್ ಹೊರತಾಗಿ ಡೀಸೆಲ್ ಮಾದರಿಯಲ್ಲಿ ಪೆಟ್ರೋಲ್ ಮಾದರಿಯಲ್ಲಿರುವಂತೆಯೇ ಬಹುತೇಕ ತಾಂತ್ರಿಕ ಸೌಲಭ್ಯಗಳನ್ನು ನೀಡಲಾಗಿದೆ.

2021ರ ರೆಡ್ ಬುಲ್ ಎಕ್ಸ್-ಆಲ್ಪ್ಸ್ ಸ್ಪರ್ಧೆಯಲ್ಲಿ ಪ್ರಮುಖ ಪಾತ್ರವಹಿಸಲಿದೆ ಲ್ಯಾಂಡ್ ರೋವರ್ ಡಿಫೆಂಡರ್

ಲ್ಯಾಂಡ್ ರೋವರ್ ಕಂಪನಿಯು ಡಿಫೆಂಡರ್ ಹೊಸ ಡೀಸೆಲ್ ಮಾದರಿಯಲ್ಲಿ 3.0-ಲೀಟರ್ ಟರ್ಬೊಚಾರ್ಜ್ಡ್ ಎಂಜಿನ್ ಜೋಡಣೆ ಮಾಡಿದ್ದು, 8-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್‌ಮಿಷನ್‌ನೊಂದಿಗೆ 298-ಬಿಎಚ್‌ಪಿ ಮತ್ತು 650 ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

2021ರ ರೆಡ್ ಬುಲ್ ಎಕ್ಸ್-ಆಲ್ಪ್ಸ್ ಸ್ಪರ್ಧೆಯಲ್ಲಿ ಪ್ರಮುಖ ಪಾತ್ರವಹಿಸಲಿದೆ ಲ್ಯಾಂಡ್ ರೋವರ್ ಡಿಫೆಂಡರ್

ಡಿಫೆಂಡರ್ ಎಸ್‌ಯುವಿಯ ಪೆಟ್ರೋಲ್ ಮಾದರಿಯು 2.0-ಲೀಟರ್ ಟರ್ಬೊ-ಪೆಟ್ರೋಲ್ ಪಿ 300 ಎಂಜಿನ್ ಜೋಡಣೆ ಹೊಂದಿದ್ದು, ಈ ಎಂಜಿನ್ 300 ಬಿಹೆಚ್‌ಪಿ ಹಾಗೂ 400 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಹೊಸ ಎಂಜಿನ್‌ನಲ್ಲಿ ಎಂಟು-ಸ್ಪೀಡಿನ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ ಜೋಡಿಸಲಾಗಿದ್ದು, ಎಂಜಿನ್ ಹೊರತುಪಡಿಸಿ ಬಹುತೇಕ ಫೀಚರ್ಸ್‌ಗಳು ಎರಡು ಮಾದರಿಯಲ್ಲೂ ಒಂದೇ ಆಗಿವೆ.

Most Read Articles

Kannada
English summary
Land Rover Defender 110 Is The Official Support Vehicle For World’s Toughest Adventure Race.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X