ಸ್ಪೆಷಲ್ ಬ್ಯಾಡ್ಜ್ ಹೊಂದಿರುವ Defender V8 Bond Edition ಅನಾವರಣಗೊಳಿಸಿದ Land Rover

ಬ್ರಿಟಿಷ್ ಕಾರು ಉತ್ಪಾದನಾ ಕಂಪನಿಯಾಗಿರುವ ಲ್ಯಾಂಡ್ ರೋವರ್(Land Rover) ತನ್ನ ಜನಪ್ರಿಯ ಆಫ್ ರೋಡ್ ಎಸ್‌ಯುವಿ ಮಾದರಿಯಾದ ಡಿಫೆಂಡರ್(Defender) ಆವೃತ್ತಿಯಲ್ಲಿ ವಿ8 ಬಾಂಡ್ ಎಡಿಷನ್(V8 Bond Edition) ಅನಾವರಣಗೊಳಿಸಿದೆ.

ವಿಶೇಷ ವಿನ್ಯಾಸವುಳ್ಳ Defender V8 Bond Edition ಅನಾವರಣಗೊಳಿಸಿದ Land Rover

ವಿಶ್ವಾದ್ಯಂತ ಇದೇ ತಿಂಗಳಾಂತ್ಯಕ್ಕೆ ತೆರೆಕಾಣುತ್ತಿರುವ ಜೇಮ್ಸ್ ಬಾಂಡ್ ಸರಣಿಯ ನೋ ಟೈಮ್‌ ಟು ಡೈ(No Time To Die) ಚಿತ್ರದ ಪ್ರಾಯೋಜಕತ್ವ ಹೊಂದಿರುವ ಲ್ಯಾಂಡ್ ರೋವರ್ ಕಂಪನಿಯು ತನ್ನ ಜನಪ್ರಿಯ ಡಿಫೆಂಡರ್ ಎಸ್‌ಯುವಿ ಮಾದರಿಯಲ್ಲಿ ಬಾಂಡ್ ಎಡಿಷನ್ ಪರಿಚಯಿಸಲು ನಿರ್ಧರಿಸಿದ್ದು, ಬಾಂಡ್ ವಿಶೇಷ ಆವೃತ್ತಿಯನ್ನು ಡಿಫೆಂಡರ್ ವಿ8 ಮಾದರಿಯಲ್ಲಿ ಬಿಡುಗಡೆ ಮಾಡುತ್ತಿದೆ.

ವಿಶೇಷ ವಿನ್ಯಾಸವುಳ್ಳ Defender V8 Bond Edition ಅನಾವರಣಗೊಳಿಸಿದ Land Rover

ಡಿಫೆಂಡರ್ 90 ಮತ್ತು ಡಿಫೆಂಡರ್ 110 ಎರಡು ಮಾದರಿಗಳಲ್ಲೂ ಹೊಸ ಬಾಂಡ್ ಎಡಿಷನ್ ಖರೀದಿಗೆ ಲಭ್ಯವಿರಲಿದ್ದು, ಡಿಫೆಂಡರ್ ಹೈ ಎಂಡ್ ಮಾದರಿಯಾದ ವಿ8 ಎಂಜಿನ್ ಪ್ರೇರಿತ ಮಾದರಿಗಳಲ್ಲಿ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಲಾಗುತ್ತಿದೆ.

ವಿಶೇಷ ವಿನ್ಯಾಸವುಳ್ಳ Defender V8 Bond Edition ಅನಾವರಣಗೊಳಿಸಿದ Land Rover

ಡಿಫೆಂಡರ್ ವಿ8 ಬಾಂಡ್ ಎಡಿಷನ್‌ ಆಕರ್ಷಣೆಗಾಗಿ ವಿಶೇಷ ವಿನ್ಯಾಸದ 'Defender 007' ಬ್ಯಾಡ್ಜ್ ನೀಡಲಾಗಿದ್ದು, ಐಕಾನಿಕ್ 007 ಬ್ಯಾಡ್ಜ್‌ಗಳು ಕಾರಿನ ಸ್ಟೀರಿಂಗ್ ವೀಲ್ಹ್‌ನಲ್ಲಿ, ಹಿಂಬದಿಯ ಟೈಲ್‌ಗೆಟ್ ಮೇಲೆ ನೀಡಲಾಗಿದೆ.

ವಿಶೇಷ ವಿನ್ಯಾಸವುಳ್ಳ Defender V8 Bond Edition ಅನಾವರಣಗೊಳಿಸಿದ Land Rover

ಜೊತೆಗೆ 'Defender 007' ಬ್ಯಾಡ್ಜ್‌ಗಳು ಡೋರ್ ಪೆಡಲ್ ಲ್ಯಾಂಪ್ ಗ್ರಾಫಿಕ್‌ ಮೂಲಕ ಗಮನಸೆಳೆಯಲಿದ್ದು, ಹೊಸ ಕಾರಿನ ಇನ್ಪೋಟೈನ್‌ಮೆಂಟ್ ಸಿಸ್ಟಂ ಕಾರ್ಯನಿರ್ವಹಣೆ ಆರಂಭ ಸಂದರ್ಭದಲ್ಲೂ Defender 007 ಆ್ಯನಿಮೆಷನ್ ಗಮನಸೆಳೆಯಲಿದೆ.

ವಿಶೇಷ ವಿನ್ಯಾಸವುಳ್ಳ Defender V8 Bond Edition ಅನಾವರಣಗೊಳಿಸಿದ Land Rover

ಇದರ ಹೊರತಾಗಿ ಹೊಸ ಕಾರಿನಲ್ಲಿ ಕಸ್ಟಮೈಷನ್ ಸಹಭಾಗಿತ್ವ ಕಂಪನಿಯಾಗಿರುವ ಎಸ್‌ವಿ ಬಿಸ್ಪೋರ್ಕ್ ಲೊಗೊ ಸಹ ಕಾಣಬಹುದಾಗಿದ್ದು, ಡಿಫೆಂಡರ್ ವಿ8 ಬಾಂಡ್ ಎಡಿಷನ್ ವಿಶ್ವಾದ್ಯಂತ ಕೇವಲ 300 ಯುನಿಟ್‌ಗಳು ಮಾತ್ರ ಮಾರಾಟಗೊಳ್ಳಲಿವೆ.

ವಿಶೇಷ ವಿನ್ಯಾಸವುಳ್ಳ Defender V8 Bond Edition ಅನಾವರಣಗೊಳಿಸಿದ Land Rover

ಹೀಗಾಗಿ ಇದು ಸೀಮಿತ ಅವಧಿಗಾಗಿ ಮಾತ್ರ ಮಾರಾಟಗೊಳ್ಳಲಿದ್ದು, ವಿಶೇಷ ಬ್ಯಾಡ್ಜ್‌ಗಳನ್ನು ಹೊರತುಪಡಿಸಿ ಹೊಸ ಕಾರು ವಿ8 ಸ್ಟ್ಯಾಂಡರ್ಡ್ ಮಾದರಿಯಲ್ಲಿರುವಂತೆ ಬಹುತೇಕ ತಾಂತ್ರಿಕ ಅಂಶಗಳನ್ನು ಹೊಂದಿರಲಿದೆ.

ವಿಶೇಷ ವಿನ್ಯಾಸವುಳ್ಳ Defender V8 Bond Edition ಅನಾವರಣಗೊಳಿಸಿದ Land Rover

ಬಾಂಡ್ ಸರಣಿಯ ಬಹುತೇಕ ಚಿತ್ರಗಳಲ್ಲಿ ಲ್ಯಾಂಡ್ ರೋವರ್ ನಿರ್ಮಾಣದ ಕಾರುಗಳ ಸಾಹಸಮಯ ದೃಶ್ಯ ಪ್ರಧಾನ ಪಾತ್ರ ವಹಿಸುತ್ತಿದ್ದು, ನೋ ಟೈಮ್‌ ಟು ಡೈ ಚಿತ್ರದಲ್ಲೂ ಸಹ ಡಿಫೆಂಡರ್ ಎಸ್‌ಯುವಿ ಕಾರಿನ ಸಾಹಸಮಯ ದೃಶ್ಯಗಳು ಜೇಮ್ಸ್ ಬಾಂಡ್ ಅಭಿಮಾನಿಗಳನ್ನು ರಂಜಿಸಲಿವೆ.

ವಿಶೇಷ ವಿನ್ಯಾಸವುಳ್ಳ Defender V8 Bond Edition ಅನಾವರಣಗೊಳಿಸಿದ Land Rover

ಜೇಮ್ಸ್ ಬಾಂಡ್ ಫ್ರಾಂಚೈಸಿ ಜೊತೆಗೆ ಬರೋಬ್ಬರಿ 38 ವರ್ಷ ಪ್ರಾಯೋಜಕತ್ವ ಹೊಂದಿರುವ ಲ್ಯಾಂಡ್ ರೋವರ್ ಕಂಪನಿಯು ಬಾಂಡ್ ಚಿತ್ರಗಳಲ್ಲಿನ ಸಾಹಸಮಯ ದೃಶ್ಯಗಳಿಗೆ ವಿವಿಧ ಕಾರು ಮಾದರಿಗಳನ್ನು ಒದಗಿಸುತ್ತಿದ್ದು, ಇತ್ತೀಚೆಗೆ ಬಿಡುಗಡೆಯಾದ ಡಿಫೆಂಡರ್ ವಿ8 ಮಾದರಿಯಲ್ಲಿ ಪ್ರಾಜೋಕತ್ವದ ಭಾಗವಾಗಿ ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಲಾಗುತ್ತಿದೆ.

ವಿಶೇಷ ವಿನ್ಯಾಸವುಳ್ಳ Defender V8 Bond Edition ಅನಾವರಣಗೊಳಿಸಿದ Land Rover

ಸ್ಪೆಷಲ್ ಎಡಿಷನ್ ಬೆಲೆ ಕುರಿತಾಗಿ ಕಂಪನಿಯು ಯಾವುದೇ ಮಾಹಿತಿ ನೀಡಿಲ್ಲವಾದರೂ ಹೊಸ ಕಾರು ಸ್ಟ್ಯಾಂಡರ್ಡ್ ಮಾದರಿಗಿಂತಲೂ ತುಸು ದುಬಾರಿಯಾಗಿರಲಿದ್ದು, ಸ್ಟ್ಯಾಂಡರ್ಡ್ ಡಿಫೆಂಡರ್ ವಿ8 ಮಾದರಿಯೇ ಭಾರತದಲ್ಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 1.82 ಕೋಟಿ ಬೆಲೆ ಹೊಂದಿದೆ.

ವಿಶೇಷ ವಿನ್ಯಾಸವುಳ್ಳ Defender V8 Bond Edition ಅನಾವರಣಗೊಳಿಸಿದ Land Rover

ಡಿಫೆಂಡರ್ ಎಸ್‌ಯುವಿ ಮಾದರಿಯು ಭಾರತದಲ್ಲೂ ಖರೀದಿಗೆ ಲಭ್ಯವಿದ್ದು, ಆರಂಭದಲ್ಲಿ ಹೊಸ ಕಾರಿನ ಆರಂಭಿಕ ಆವೃತ್ತಿಗಳನ್ನು ಬಿಡುಗಡೆ ಮಾಡಿದ್ದ ಲ್ಯಾಂಡ್ ರೋವರ್ ಕಂಪನಿಯು ಇತ್ತೀಚೆಗೆ ವಿ8 ಎಂಜಿನ್ ಹೊಂದಿರುವ ಟಾಪ್ ಎಂಡ್ ಮಾದರಿಗಳನ್ನು ಸಹ ಬಿಡುಗಡೆ ಮಾಡಿತ್ತು.

ವಿಶೇಷ ವಿನ್ಯಾಸವುಳ್ಳ Defender V8 Bond Edition ಅನಾವರಣಗೊಳಿಸಿದ Land Rover

ಡಿಫೆಂಡರ್ ವಿ8 ಮಾದರಿಯು ಸ್ಟ್ಯಾಂಡರ್ಡ್ ಮಾದರಿಗಿಂತಲೂ ಹೆಚ್ಚು ಪ್ರೀಮಿಯಂ ಮತ್ತು ಪವರ್‌ಫುಲ್ ಎಂಜಿನ್ ಆಯ್ಕೆ ಹೊಂದಿದ್ದು, ಡಿಫೆಂಡರ್ 90 ಮತ್ತು ಡಿಫೆಂಡರ್ 110 ಮಾದರಿಗಳಲ್ಲಿ ಹೊಸ ಕಾರು ಮಾರಾಟಕ್ಕೆ ಲಭ್ಯವಿದೆ.

ವಿಶೇಷ ವಿನ್ಯಾಸವುಳ್ಳ Defender V8 Bond Edition ಅನಾವರಣಗೊಳಿಸಿದ Land Rover

ಆರಂಭಿಕ ಡಿಫೆಂಡರ್ 90 ಮತ್ತು ಡಿಫೆಂಡರ್ 110 ಕಾರು ಮಾದರಿಗಳು ಎಕ್ಸ್‌ಶೋರೂಂ ಪ್ರಕಾರ ರೂ. 76.57 ಲಕ್ಷದಿಂದ ರೂ. 1.15 ಕೋಟಿ ಬೆಲೆ ಹೊಂದಿದ್ದರೆ V8 ಎಂಜಿನ್ ಹೊಂದಿರುವ ಡಿಫೆಂಡರ್ ಕಾರು ಮಾದರಿಗಳು ಆರಂಭಿಕವಾಗಿ ಎಕ್ಸ್‌ಶೋರೂಂ ಪ್ರಕಾರ ರೂ. 1.82 ಕೋಟಿ ಬೆಲೆ ಹೊಂದಿವೆ.

ವಿಶೇಷ ವಿನ್ಯಾಸವುಳ್ಳ Defender V8 Bond Edition ಅನಾವರಣಗೊಳಿಸಿದ Land Rover

ಸಾಮಾನ್ಯ ಡಿಫೆಂಡರ್ 90 ಮತ್ತು ಡಿಫೆಂಡರ್ 110 ಮಾದರಿಗಳಲ್ಲಿ ಲ್ಯಾಂಡ್ ರೋವರ್ ಕಂಪನಿಯು 2.0-ಲೀಟರ್ ಪೆಟ್ರೋಲ್, 3.0-ಲೀಟರ್ ಪೆಟ್ರೋಲ್ ಹೈಬ್ರಿಡ್, 3.0-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ನೀಡಲಾಗಿದ್ದು, ವಿ8 ಎಂಜಿನ್ ಹೊಂದಿರುವ ಡಿಫೆಂಡರ್ ಮಾದರಿಗಳಲ್ಲಿ ಕಂಪನಿಯು 5.0-ಲೀಟರ್(4998 ಸಿಸಿ) ಸೂಪರ್ ಚಾರ್ಜ್ಡ್ ಪೆಟ್ರೋಲ್ ಎಂಜಿನ್ ಜೋಡಿಸಲಾಗಿದೆ.

ವಿಶೇಷ ವಿನ್ಯಾಸವುಳ್ಳ Defender V8 Bond Edition ಅನಾವರಣಗೊಳಿಸಿದ Land Rover

ವಿ8 ಎಂಜಿನ್ ಹೊಂದಿರುವ ಕಾರುಗಳು ಸ್ಟ್ಯಾಂಡರ್ಡ್ ಫೋರ್ ಸಿಲಿಂಡರ್ ಕಾರು ಮಾದರಿಗಳಿಂತಲೂ ಹೆಚ್ಚು ಬಲಶಾಲಿಯಾಗಿರಲಿದ್ದು, ವಿ8 ಮಾದರಿಗಳು ಎಂಟು ಸಿಲಿಂಡರ್ ಪ್ರೇರಣೆ ಹೊಂದಿದೆ. ಇವು ಸೂಪರ್ ಸ್ಪೋರ್ಟ್ಸ್, ಅಡ್ವೆಂಚರ್ ಕಾರು ಮಾದರಿಗಳಿಗೆ ಹೆಚ್ಚು ಸೂಕ್ತವಾಗಿದ್ದು, ಆಲ್ ವ್ಹೀಲ್ ಡ್ರೈವ್ ಟೆಕ್ನಾಲಜಿಯೊಂದಿಗೆ 525-ಬಿಎಚ್‌ಪಿ ಮತ್ತು 625-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

Most Read Articles

Kannada
English summary
Land rover defender v8 bond edition unveiled
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X