ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ರೇಂಜ್ ರೋವರ್ ಸ್ಪೋರ್ಟ್ ಎಸ್‍ಯುವಿ

ಜಾಗ್ವಾರ್ ಲ್ಯಾಂಡ್ ರೋವರ್(ಜೆಎಲ್ಆರ್) ತನ್ನ ರೇಂಜ್ ರೋವರ್ ಸ್ಪೋರ್ಟ್ ಮಾರಾಟದಲ್ಲಿ ಹೊಸ ಮೈಲಿಗಲ್ಲು ಅನ್ನು ತಲುಪಿದೆ. ಈ ರೇಂಜ್ ರೋವರ್ ಸ್ಪೋರ್ಟ್ ಎಸ್‍ಯುವಿಯು ಮಾರಾಟದಲ್ಲಿ ಜಾಗತಿಕವಾಗಿ 10 ಲಕ್ಷವನ್ನು ದಾಟಿ ಹೊಸ ಮೈಲಿಗಲ್ಲು ಸಾಧಿಸಿದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ರೇಂಜ್ ರೋವರ್ ಸ್ಪೋರ್ಟ್ ಎಸ್‍ಯುವಿ

ಈ ಐಷಾರಾಮಿ ರೇಂಜ್ ರೋವರ್ ಸ್ಪೋರ್ಟ್ ಎಸ್‍ಯುವಿಯ ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿರುವುದನ್ನು ಕಾರು ತಯಾರಕ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ಹಂಚಿಕೊಂಡಿದ್ದಾರೆ. ಇದರಲ್ಲಿ ಜಾಗತಿಕವಾಗಿ 10 ಲಕ್ಷ ಮಾರಟದ ಮೈಲಿಗಲ್ಲು ಸಾಧಿಸಿರುವುದು ಮತ್ತು ರೇಂಜ್ ರೋವರ್ ಸ್ಪೋರ್ಟ್ ಎಸ್‍ಯುವಿಯ ಮಾಲೀಕರಿಗೆ ಮತ್ತು ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ರೇಂಜ್ ರೋವರ್ ಸ್ಪೋರ್ಟ್ ಎಸ್‍ಯುವಿ

ಇದನ್ನು ಹೊರತುಪಡಿಸಿದರೆ ಲ್ಯಾಂಡ್ ರೋವರ್ ಕಂಪನಿಯ ಹೆಚ್ಚಿನ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿಲ್ಲ. ರೇಂಜ್ ರೋವರ್ ಸ್ಪೋರ್ಟ್‌ನ ಮೊದಲ ತಲೆಮಾರಿನ ಮಾದರಿ 2005ರಲ್ಲಿ ಉತ್ಪಾದನೆಯಾಯಿತು, ಆದರೆ ಎರಡನೇ ತಲೆಮಾರಿನ ಮಾದರಿಯನ್ನು 2013 ರಲ್ಲಿ ನ್ಯೂಯಾರ್ಕ್ ಆಟೋ ಪ್ರದರ್ಶನದಲ್ಲಿ ಪರಿಚಯಿಸಲಾಯಿತು.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ರೇಂಜ್ ರೋವರ್ ಸ್ಪೋರ್ಟ್ ಎಸ್‍ಯುವಿ

ರೇಂಜ್ ರೋವರ್ ಸ್ಪೋರ್ಟ್ ಎಸ್‌ಯುವಿಯ ಫೇಸ್‌ಲಿಫ್ಟ್ ಮಾದರಿಯನ್ನು 2017ರಲ್ಲಿ ಲಾಸ್ ಏಂಜಲೀಸ್ ಕಾರ್ ಶೋನಲ್ಲಿ ಘೋಷಿಸಲಾಯಿತು, ಅದರ ಉತ್ಪಾದನೆಯು 2018ರಲ್ಲಿ ಪ್ರಾರಂಭಿಸಿದ್ದರು.

MOST READ: ಜನವರಿ ತಿಂಗಳಿನಲ್ಲಿ ಮಾರುತಿ ಎಕ್ಸ್‌ಎಲ್6 ಕಾರು ಮಾರಾಟದಲ್ಲಿ ಶೇ.305ರಷ್ಟು ಹೆಚ್ಚಳ

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ರೇಂಜ್ ರೋವರ್ ಸ್ಪೋರ್ಟ್ ಎಸ್‍ಯುವಿ

2019ರಲ್ಲಿ ರೇಂಜ್ ರೋವರ್ ಸ್ಪೋರ್ಟ್ ಎಸ್‌ಯುವಿಯ 1,700 ಯುನಿಟ್‌ಗಳನ್ನು ಮಾರಾಟ ಮಾಡಿ ಒಟ್ಟಾರೆ ಮಾರಾಟದ ಸಂಖ್ಯೆಯು 7.47 ಲಕ್ಷ ಯೂನಿಟ್‌ಗಳನ್ನು ತಲುಪಿದ್ದರು. ಆದರೆ ಇದೀಗ 10 ಲಕ್ಷ ಯೂನಿಟ್‌ಗಳನ್ನು ಮಾರಾಟಗೊಳಿಸಿವೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ರೇಂಜ್ ರೋವರ್ ಸ್ಪೋರ್ಟ್ ಎಸ್‍ಯುವಿ

ಕಳೆದ ವರ್ಷ ಸೆಪ್ಟೆಂಬರ್‌ ತಿಂಗಳಿನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ರೇಂಜ್ ರೋವರ್ ಸ್ಪೋರ್ಟ್ ಬಿಡುಗಡೆಗೊಳಿಸಿತು. ಈ ರೇಂಜ್ ರೋವರ್ ಸ್ಪೋರ್ಟ್ ಎಸ್‍ಯುವಿಯ ಆರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.89.13 ಲಕ್ಷಗಳಾಗಿದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ರೇಂಜ್ ರೋವರ್ ಸ್ಪೋರ್ಟ್ ಎಸ್‍ಯುವಿ

ರೇಂಜ್ ರೋವರ್ ಸ್ಪೋರ್ಟ್ ಎಸ್‍ಯುವಿ ಎಸ್, ಎಸ್ಇ, ಎಚ್ಎಸ್ಇ, ಎಚ್ಎಸ್ಇ ಡೈನಾಮಿಕ್, ಆಟೋಬಯಾಗ್ರಫಿ ಡೈನಾಮಿಕ್, ಎಚ್ಎಸ್ಇ ಸಿಲ್ವರ್ ಮತ್ತು ಎಚ್ಎಸ್ಇ ಡೈನಾಮಿಕ್ ಬ್ಲ್ಯಾಕ್ ಎಂಬ 7 ರೂಪಾಂತರಗಳಲ್ಲಿ ಲಭ್ಯವಿದೆ.

MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ರೇಂಜ್ ರೋವರ್ ಸ್ಪೋರ್ಟ್ ಎಸ್‍ಯುವಿ

ರೇಂಜ್ ರೋವರ್ ಸ್ಪೋರ್ಟ್ ಪ್ರೀಮಿಯಂ ಎಸ್‌ಯುವಿಯಲ್ಲಿ ನಾಲ್ಕು ಎಂಜಿನ್ ಆಯ್ಕೆಗಳನ್ನು ಹೊಂದಿವೆ, ಇದು 3.0 ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್, 2.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಮತ್ತು 3.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಹೆಚ್‌ಇವಿ 48ವಿ ಮೈಲ್ಡ್-ಹೈಬ್ರಿಡ್ ಸೆಟಪ್. 2.0-ಲೀಟರ್, 4-ಸಿಲಿಂಡರ್, ಟರ್ಬೋಚಾರ್ಜ್ಡ್ ಗಳಾಗಿದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ರೇಂಜ್ ರೋವರ್ ಸ್ಪೋರ್ಟ್ ಎಸ್‍ಯುವಿ

ಇದರಲ್ಲಿ 3.0-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರುವ ರೇಂಜ್ ರೋವರ್ ಸ್ಪೋರ್ಟ್ ಎಸ್‍ಯುವಿಯು ಕೇವಲ 5.9 ಸೆಕೆಂಡುಗಳಲ್ಲಿ 0 ರಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಈ ಮಾದರಿಯು 225 ಕಿ.ಮೀ ಟಾಪ್ ಸ್ಫೀಡ್ ಅನ್ನ್ ಹೊಂದಿದೆ.

Most Read Articles

Kannada
English summary
Land Rover Range Rover Sport Crosses 1 Million Sales Milestone. Read In Kananda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X