ES 300h ಕಾರಿನ ಫೇಸ್ ಲಿಫ್ಟ್ ಆವೃತ್ತಿ ಬಿಡುಗಡೆಗೊಳಿಸಿದ Lexus

ಐಷಾರಾಮಿ ಕಾರು ತಯಾರಕ ಕಂಪನಿಯಾದ Lexus ಇಂಡಿಯಾ ಹೊಸ ಸೆಡಾನ್ ಕಾರಿನ ಬಿಡುಗಡೆಯೊಂದಿಗೆ ತನ್ನ ಭಾರತೀಯ ಪೋರ್ಟ್ ಫೋಲಿಯೋವನ್ನು ಅಪ್ ಡೇಟ್ ಮಾಡಿದೆ. ಕಂಪನಿಯು 2021 ES 300h ಸೆಡಾನ್ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಕಾರಿನ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ. 56.65 ಲಕ್ಷಗಳಾಗಿದೆ.

ES 300h ಕಾರಿನ ಫೇಸ್ ಲಿಫ್ಟ್ ಆವೃತ್ತಿ ಬಿಡುಗಡೆಗೊಳಿಸಿದ Lexus

ಹೊಸ Lexus ES 300h ಕಾರಿನಲ್ಲಿ ಕೆಲವು ಸೂಕ್ಷ್ಮ ಬದಲಾವಣೆಗಳನ್ನು ಮಾಡಲಾಗಿದೆ. Lexus ಕಂಪನಿಯು ಈ ಕಾರಿನ ಕ್ಯಾಬಿನ್‌ನಲ್ಲಿ ಹೆಚ್ಚುವರಿ ಫೀಚರ್ ಗಳನ್ನು ಪರಿಚಯಿಸಿದೆ. ಆಶ್ಚರ್ಯಕರ ಸಂಗತಿಯೆಂದರೆ ಇಷ್ಟೆಲ್ಲಾ ಬದಲಾವಣೆಗಳ ನಂತರ 2021 Lexus ES 300h ಕಾರಿನ ಬೆಲೆಯನ್ನು ಕೇವಲ ರೂ. 10,000 ಗಳಷ್ಟು ಏರಿಕೆ ಮಾಡಲಾಗಿದೆ. ಕಂಪನಿಯು ಹೊಸ ES 300h ಕಾರ್ ಅನ್ನು ಎಕ್ಸ್ ಕ್ಲೂಸಿವ್ ಹಾಗೂ ಲಕ್ಷುರಿ ಎಂಬ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಿದೆ.

ES 300h ಕಾರಿನ ಫೇಸ್ ಲಿಫ್ಟ್ ಆವೃತ್ತಿ ಬಿಡುಗಡೆಗೊಳಿಸಿದ Lexus

ಹೊಸ 2021 Lexus ES 300h ಕಾರಿನ ಒಟ್ಟಾರೆ ಸಿಲೂಯೆಟ್‌ನಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಆದರೆ ಕೆಲವು ಸಣ್ಣ ಅಪ್ ಡೇಟ್ ಗಳನ್ನು ಮಾಡಲಾಗಿದೆ. ಇದರಿಂದ ಕಾರಿನ ವಿನ್ಯಾಸ ಶೈಲಿ ಹೊಸದರಂತೆ ಭಾಸವಾಗುತ್ತದೆ. ಮುಂಭಾಗದಲ್ಲಿರುವ ಸಿಗ್ನೆಚರ್ ಸ್ಪಿಂಡಲ್ ಆಕಾರದ ಫ್ರಂಟ್ ಗ್ರಿಲ್ ಅನ್ನು ಮೆಶ್ ಮಾದರಿಯೊಂದಿಗೆ ಸ್ವಲ್ಪ ಪ್ರಮಾಣದಲ್ಲಿ ಪರಿಷ್ಕರಿಸಲಾಗಿದೆ.

ES 300h ಕಾರಿನ ಫೇಸ್ ಲಿಫ್ಟ್ ಆವೃತ್ತಿ ಬಿಡುಗಡೆಗೊಳಿಸಿದ Lexus

ಮತ್ತೊಂದೆಡೆ ಲೈಟ್ ಕ್ಲಸ್ಟರ್ ಮಾರುಕಟ್ಟೆಯಲ್ಲಿರುವ ಮಾದರಿಗಿಂತ ಹೆಚ್ಚು ಸುಧಾರಿತವಾಗಿದೆ. ಇದರ ಹೊರತಾಗಿ ಅಲಾಯ್ ವ್ಹೀಲ್ ಗಳ ವಿನ್ಯಾಸವೂ ಸಂಪೂರ್ಣವಾಗಿ ಹೊಸದಾಗಿದೆ. Lexus ಕಂಪನಿಯು ಈ ಅಲಾಯ್ ವ್ಹೀಲ್ ಗಳಿಗೆ ಎರಡು ಬಣ್ಣದ ಆಯ್ಕೆಗಳನ್ನು ಪರಿಚಯಿಸಿದೆ. ಇವುಗಳಲ್ಲಿ ಸೋನಿಕ್ ಇರಿಡಿಯಮ್ ಹಾಗೂ ಸೋನಿಕ್ ಕ್ರೋಮ್ ಬಣ್ಣಗಳು ಸೇರಿವೆ.

ES 300h ಕಾರಿನ ಫೇಸ್ ಲಿಫ್ಟ್ ಆವೃತ್ತಿ ಬಿಡುಗಡೆಗೊಳಿಸಿದ Lexus

ಹೊಸ 2021 Lexus ES 300h ಕಾರಿನ ಇಂಟಿರಿಯರ್ ಬಗ್ಗೆ ಹೇಳುವುದಾದರೆ, ಈ ಕಾರಿನ ಕ್ಯಾಬಿನ್ ಅನ್ನು ಮೊದಲಿನಂತೆ ಇರಿಸಲಾಗಿದೆ. ಆದರೂ ಈಗ ಅದು ಹೊಸ ವಾಲ್ನಟ್ ಮೆಟೀರಿಯಲ್ ಅಪ್ ಹೊಲೆಸ್ಟರಿಯನ್ನು ಬಳಸುತ್ತದೆ. ಕಂಪನಿಯು ಈ ಕಾರಿನಲ್ಲಿ ಒರಗಿಕೊಳ್ಳುವ ಹಾಗೂ ವೆಂಟಿಲೇಷನ್ ಇರುವ ಹಿಂದಿನ ಆಸನಗಳಂತಹ ಅನೇಕ ಆಧುನಿಕ ಫೀಚರ್ ಗಳನ್ನು ನೀಡಿದೆ.

ES 300h ಕಾರಿನ ಫೇಸ್ ಲಿಫ್ಟ್ ಆವೃತ್ತಿ ಬಿಡುಗಡೆಗೊಳಿಸಿದ Lexus

ಇದರ ಹೊರತಾಗಿ ಈ ಕಾರು ಬ್ರೇಕ್ ಪೆಡಲ್‌ಗಾಗಿ ಎಕ್ಸ್ ಟೆಂಟೆಡ್ ಸರ್ಫೇಸ್, ಕಿಕ್ ಸೆನ್ಸಾರ್‌ ಹೊಂದಿರುವ ಪವರ್ ಟೇಲ್‌ಗೇಟ್, 360 ಡಿಗ್ರಿ ಕ್ಯಾಮೆರಾ, 12.3 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ, ಆಪಲ್ ಕಾರ್‌ಪ್ಲೇ ಹಾಗೂ ಆಂಡ್ರಾಯ್ಡ್ ಆಟೋ, 17 ಸ್ಪೀಕರ್ ಮಾರ್ಕ್ ಲೆವಿನ್ಸನ್ ಸೌಂಡ್ ಸಿಸ್ಟಂ ಹಾಗೂ ಏರ್ ಪ್ಯೂರಿಫೈಯರ್ ಗಳನ್ನು ಹೊಂದಿದೆ. ಹೊಸ 2021 Lexus ES 300h ಕಾರು ಇಳಿಜಾರಾದ ಬಾನೆಟ್ ಅನ್ನು ಹೊಂದಿದೆ.

ES 300h ಕಾರಿನ ಫೇಸ್ ಲಿಫ್ಟ್ ಆವೃತ್ತಿ ಬಿಡುಗಡೆಗೊಳಿಸಿದ Lexus

ಅದರ ಕೆಳಗಿರುವ ಎಂಜಿನ್‌ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಈ ಕಾರಿನಲ್ಲಿ 2.5 ಲೀಟರ್, ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಇದರ ಜೊತೆಗೆ ಕಂಪನಿಯು ಈ ಕಾರಿನಲ್ಲಿ 16 ಕಿ.ವ್ಯಾ ಬ್ಯಾಟರಿ ಪ್ಯಾಕ್ ಅನ್ನು ಸಹ ನೀಡಿದೆ. ಈ ಎಂಜಿನ್ ಬ್ಯಾಟರಿಯೊಂದಿಗೆ 215 ಬಿಹೆಚ್‌ಪಿ ಪವರ್ ಹಾಗೂ 221 ಎನ್ಎಂ ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ.

ES 300h ಕಾರಿನ ಫೇಸ್ ಲಿಫ್ಟ್ ಆವೃತ್ತಿ ಬಿಡುಗಡೆಗೊಳಿಸಿದ Lexus

Lexus ES 300h ಫ್ರಂಟ್ ವ್ಹೀಲ್ ಡ್ರೈವ್ ಕಾರ್ ಆಗಿದ್ದು, ಈ ಕಾರಿನಲ್ಲಿ ಸಿವಿಟಿ ಗೇರ್ ಬಾಕ್ಸ್ ಜೋಡಿಸಲಾಗಿದೆ. ಭಾರತದಲ್ಲಿ ಈ ಕಾರು Toyota Camry ಕಾರಿಗೆ ಪೈಪೋಟಿ ನೀಡುತ್ತದೆ. ದೇಶಿಯ ಮಾರುಕಟ್ಟೆಯಲ್ಲಿ Toyota Camry ಕಾರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 41.20 ಲಕ್ಷಗಳಾಗಿದೆ. ಅಂದ ಹಾಗೆ Lexus ಜಪಾನ್ ಮೂಲದ ಟೊಯೊಟಾ ಕಂಪನಿಯ ಭಾಗವಾಗಿದೆ.

ES 300h ಕಾರಿನ ಫೇಸ್ ಲಿಫ್ಟ್ ಆವೃತ್ತಿ ಬಿಡುಗಡೆಗೊಳಿಸಿದ Lexus

ಈ ಕಂಪನಿಯು ಭಾರತದಲ್ಲಿ ಕಾರುಗಳನ್ನು ಮಾರಾಟ ಮಾಡುತ್ತದೆ. 2017 ರಿಂದ ಭಾರತದಲ್ಲಿ ಕಾರು ಮಾರಾಟ ಮಾಡುತ್ತಿರುವ Lexus‍‍ನ ಕಾರುಗಳು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿಲ್ಲ. Lexus ಕಂಪನಿಯು ಸದ್ಯಕ್ಕೆ ದೇಶಿಯ ಮಾರುಕಟ್ಟೆಯಲ್ಲಿ 1 - 2% ನಷ್ಟು ಷೇರುಗಳನ್ನು ಮಾತ್ರ ಹೊಂದಿದ್ದು, ಈ ಪ್ರಮಾಣವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. Lexus‍‍ನ ಕಾರುಗಳು ಐಷಾರಾಮಿಯಾಗಿದ್ದು, ದುಬಾರಿ ಬೆಲೆಯನ್ನು ಹೊಂದಿವೆ.

ES 300h ಕಾರಿನ ಫೇಸ್ ಲಿಫ್ಟ್ ಆವೃತ್ತಿ ಬಿಡುಗಡೆಗೊಳಿಸಿದ Lexus

Lexus ತನ್ನ ಕಾರುಗಳನ್ನು ಭಾರತಕ್ಕೆ ಆಮದು ಮಾಡಿಕೊಂಡು ಮಾರಾಟ ಮಾಡುತ್ತಿದೆ. ಈ ಕಾರಣಕ್ಕೆ Lexus ಕಂಪನಿಯ ಕಾರುಗಳ ಬೆಲೆಗಳು ದುಬಾರಿಯಾಗಿವೆ. ಆಮದು ಮಾಡಿಕೊಳ್ಳಲಾಗುವ ಕಾರುಗಳ ಮೇಲೆ 100% ನಷ್ಟು ತೆರಿಗೆಯನ್ನು ವಿಧಿಸಲಾಗುತ್ತದೆ. Lexus ಕಾರುಗಳನ್ನು ಭಾರತದಲ್ಲಿಯೇ ಉತ್ಪಾದಿಸಿದರೆ ಈ ಕಾರುಗಳ ಬೆಲೆ ಕಡಿಮೆಯಾಗಲಿದೆ. ಈ ಕಾರಣಕ್ಕೆ Lexus ಕಂಪನಿಯು ತನ್ನ ಕಾರುಗಳನ್ನು ಭಾರತದಲ್ಲಿಯೇ ಉತ್ಪಾದಿಸಿ ಮಾರಾಟ ಮಾಡಲು ನಿರ್ಧರಿಸಿದೆ.

ES 300h ಕಾರಿನ ಫೇಸ್ ಲಿಫ್ಟ್ ಆವೃತ್ತಿ ಬಿಡುಗಡೆಗೊಳಿಸಿದ Lexus

ಇದರಂತೆ Lexus ಕಂಪನಿಯು ಮೊದಲಿಗೆ ES 300h ಸೆಡಾನ್ ಕಾರಿನ ಉತ್ಪಾದನೆಯನ್ನು ಭಾರತದಲ್ಲಿ ಆರಂಭಿಸಲಿದೆ. ಅಂದ ಹಾಗೆ Lexus ಕಂಪನಿಯು ತನ್ನ ಕಾರುಗಳ ಉತ್ಪಾದನೆಯನ್ನು ಭಾರತದಲ್ಲಿ ಆರಂಭಿಸಿರುವುದು ನಮ್ಮ ಬೆಂಗಳೂರಿನಲ್ಲಿ. ಬೆಂಗಳೂರಿನ ಹೊರವಲಯದ ಬಿಡದಿಯಲ್ಲಿರುವ ಟೊಯೊಟಾ ಉತ್ಪಾದನಾ ಘಟಕದಲ್ಲಿ Lexus ಕಾರುಗಳ ಉತ್ಪಾದನೆಯನ್ನು ಆರಂಭಿಸಲಾಗಿದೆ.

Most Read Articles

Kannada
English summary
Lexus launches es300h facelift baby sedan car in india details
Story first published: Friday, October 8, 2021, 14:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X