2021ರ ಹಣಕಾಸು ವರ್ಷದಲ್ಲಿ ಭಾರೀ ಕುಸಿತ ಕಂಡ ಐಷಾರಾಮಿ ಕಾರು ಮಾರಾಟ

ಫಾಡಾ ಏಪ್ರಿಲ್ ತಿಂಗಳ ವಾಹನ ನೋಂದಣಿ ಅಂಕಿ ಅಂಶಗಳನ್ನು ಬಿಡುಗಡೆಗೊಳಿಸಿದೆ. ಕಳೆದ ತಿಂಗಳು ಎಲ್ಲಾ ಸೆಗ್ ಮೆಂಟಿನಲ್ಲಿಯೂ ವಾಹನ ಮಾರಾಟ ಪ್ರಮಾಣವು ಕುಸಿತ ದಾಖಲಿಸಿದೆ.

2021ರ ಹಣಕಾಸು ವರ್ಷದಲ್ಲಿ ಭಾರೀ ಕುಸಿತ ಕಂಡ ಐಷಾರಾಮಿ ಕಾರು ಮಾರಾಟ

ದ್ವಿಚಕ್ರ ವಾಹನ ಸೆಗ್ ಮೆಂಟಿನಲ್ಲಿ 27.63%, ತ್ರಿಚಕ್ರ ವಾಹನ ಸೆಗ್ ಮೆಂಟಿನಲ್ಲಿ 43.11%, ಪ್ರಯಾಣಿಕ ವಾಹನ ಸೆಗ್ ಮೆಂಟಿನಲ್ಲಿ 25.33%, ಟ್ರಾಕ್ಟರ್ ಸೆಗ್ ಮೆಂಟಿನಲ್ಲಿ 44.58% ಹಾಗೂ ಕಮರ್ಷಿಯಲ್ ವಾಹನಗಳ ಸೆಗ್ ಮೆಂಟಿನಲ್ಲಿ 23.65%ರಷ್ಟು ಕುಸಿತ ದಾಖಲಾಗಿದೆ. ಕಳೆದ ತಿಂಗಳು ಯಾವುದೇ ಸೆಗ್ ಮೆಂಟ್'ಗಳ ಮಾರಾಟವು ಉತ್ತಮವಾಗಿರಲಿಲ್ಲ.

2021ರ ಹಣಕಾಸು ವರ್ಷದಲ್ಲಿ ಭಾರೀ ಕುಸಿತ ಕಂಡ ಐಷಾರಾಮಿ ಕಾರು ಮಾರಾಟ

ಇನ್ನು ಐಷಾರಾಮಿ ಕಾರುಗಳ ಸೆಗ್ ಮೆಂಟಿನಲ್ಲಿ 2021ರ ಆರ್ಥಿಕ ವರ್ಷದಲ್ಲಿ 18,346 ಯುನಿಟ್ ಕಾರುಗಳು ಮಾರಾಟವಾಗಿವೆ. 2020ರ ಆರ್ಥಿಕ ವರ್ಷದಲ್ಲಿ ಈ ಸೆಗ್ ಮೆಂಟಿನಲ್ಲಿ 31,896 ಯುನಿಟ್‌ ಕಾರುಗಳನ್ನು ಮಾರಾಟ ಮಾಡಲಾಗಿತ್ತು.

MOST READ:ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

2021ರ ಹಣಕಾಸು ವರ್ಷದಲ್ಲಿ ಭಾರೀ ಕುಸಿತ ಕಂಡ ಐಷಾರಾಮಿ ಕಾರು ಮಾರಾಟ

2020ರ ಹಣಕಾಸು ವರ್ಷದ ಮಾರಾಟಕ್ಕೆ ಹೋಲಿಸಿದರೆ 2021ರ ಹಣಕಾಸು ವರ್ಷದ ಮಾರಾಟವು 42.5%ನಷ್ಟು ಕಡಿಮೆಯಾಗಿದೆ. ಕಳೆದ ವರ್ಷ 7087 ಯುನಿಟ್ ಮಾರಾಟದೊಂದಿಗೆ ಮರ್ಸಿಡಿಸ್ ಬೆಂಝ್ ಪ್ರಥಮ ಸ್ಥಾನದಲ್ಲಿದೆ.

2021ರ ಹಣಕಾಸು ವರ್ಷದಲ್ಲಿ ಭಾರೀ ಕುಸಿತ ಕಂಡ ಐಷಾರಾಮಿ ಕಾರು ಮಾರಾಟ

2020ರ ಹಣಕಾಸು ವರ್ಷದಲ್ಲಿ ಮರ್ಸಿಡಿಸ್ ಬೆಂಝ್ ಕಂಪನಿಯ 11,394 ಯುನಿಟ್'ಗಳು ಮಾರಾಟವಾಗಿದ್ದವು. ಈ ಮೂಲಕ ಕಂಪನಿಯ ಮಾರಾಟವು 37%ನಷ್ಟು ಕಡಿಮೆಯಾಗಿದೆ. ಬಿಎಂಡಬ್ಲ್ಯು ಕಂಪನಿಯು 5824 ಯುನಿಟ್ ಮಾರಾಟದೊಂದಿಗೆ ಎರಡನೇ ಸ್ಥಾನದಲ್ಲಿದೆ.

MOST READ:ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

2021ರ ಹಣಕಾಸು ವರ್ಷದಲ್ಲಿ ಭಾರೀ ಕುಸಿತ ಕಂಡ ಐಷಾರಾಮಿ ಕಾರು ಮಾರಾಟ

2020ರ ಹಣಕಾಸು ವರ್ಷದಲ್ಲಿ 9999 ಯುನಿಟ್ ಮಾರಾಟ ಮಾಡಲಾಗಿತ್ತು. ಕಂಪನಿಯ ಮಾರಾಟವು ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 41%ನಷ್ಟು ಕುಸಿತ ದಾಖಲಿಸಿದೆ. ಹೊಸ ಮಾದರಿಗಳನ್ನು ಬಿಡುಗಡೆಗೊಳಿಸಿದ್ದರೂ ಕಂಪನಿಯ ಮಾರಾಟವು ಸುಧಾರಿಸಿಲ್ಲ.

2021ರ ಹಣಕಾಸು ವರ್ಷದಲ್ಲಿ ಭಾರೀ ಕುಸಿತ ಕಂಡ ಐಷಾರಾಮಿ ಕಾರು ಮಾರಾಟ

2218 ಯುನಿಟ್ ಮಾರಾಟದೊಂದಿಗೆ ಆಡಿ ಕಂಪನಿಯು ಮೂರನೇ ಸ್ಥಾನದಲ್ಲಿದೆ. 2020ರ ಹಣಕಾಸು ವರ್ಷದಲ್ಲಿ ಕಂಪನಿಯು 4233 ಯುನಿಟ್ ಕಾರುಗಳನ್ನು ಮಾರಾಟ ಮಾಡಿತ್ತು. ಕಂಪನಿಯ ಮಾರಾಟವು ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 47%ನಷ್ಟು ಕುಸಿತ ಕಂಡಿದೆ.

MOST READ:ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

2021ರ ಹಣಕಾಸು ವರ್ಷದಲ್ಲಿ ಭಾರೀ ಕುಸಿತ ಕಂಡ ಐಷಾರಾಮಿ ಕಾರು ಮಾರಾಟ

ಕಂಪನಿಯ ಮಾರುಕಟ್ಟೆ ಪಾಲಿನಲ್ಲಿ 1.2%ನಷ್ಟು ಇಳಿಕೆ ಕಂಡುಬಂದಿದೆ. ಜೆಎಲ್‌ಆರ್‌ನ ಕಂಪನಿಯು 1696 ಯುನಿಟ್‌ ಕಾರುಗಳನ್ನು ಮಾರಾಟ ಮಾಡಿದೆ. ಈ ಹಣಕಾಸು ವರ್ಷದಲ್ಲಿ ಕಂಪನಿಯ ಮಾರಾಟವು 54%ನಷ್ಟು ಕುಸಿತ ದಾಖಲಿಸಿದೆ.

2021ರ ಹಣಕಾಸು ವರ್ಷದಲ್ಲಿ ಭಾರೀ ಕುಸಿತ ಕಂಡ ಐಷಾರಾಮಿ ಕಾರು ಮಾರಾಟ

9.2%ನಷ್ಟಿದ್ದ ಕಂಪನಿಯ ಮಾರುಕಟ್ಟೆ ಪಾಲು 2.5%ಗಳಿಗೆ ಕುಸಿದಿದೆ. ಕಂಪನಿಯ ಮಾರಾಟವು ಇತ್ತೀಚಿನ ದಿನಗಳಲ್ಲಿ ಕುಸಿಯುತ್ತಿದೆ. ಇನ್ನು ವೋಲ್ವೋ ಕಂಪನಿಯು ಕಳೆದ ಹಣಕಾಸು ವರ್ಷದಲ್ಲಿ 1197 ಯುನಿಟ್‌ಗಳನ್ನು ಮಾರಾಟ ಮಾಡಿದೆ.

MOST READ:ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

2021ರ ಹಣಕಾಸು ವರ್ಷದಲ್ಲಿ ಭಾರೀ ಕುಸಿತ ಕಂಡ ಐಷಾರಾಮಿ ಕಾರು ಮಾರಾಟ

ವೋಲ್ವೋ ಕಂಪನಿಯು 2020ರ ಹಣಕಾಸು ವರ್ಷದಲ್ಲಿ 2034 ಯುನಿಟ್‌ಗಳನ್ನು ಮಾರಾಟ ಮಾಡಿತ್ತು. ಕಂಪನಿಯ ಮಾರಾಟ ಪ್ರಮಾಣವು ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ಈ ಹಣಕಾಸು ವರ್ಷದಲ್ಲಿ 41%ನಷ್ಟು ಕಡಿಮೆಯಾಗಿದೆ.

2021ರ ಹಣಕಾಸು ವರ್ಷದಲ್ಲಿ ಭಾರೀ ಕುಸಿತ ಕಂಡ ಐಷಾರಾಮಿ ಕಾರು ಮಾರಾಟ

2021ರ ಹಣಕಾಸು ವರ್ಷದಲ್ಲಿ ಪೋರ್ಷೆ ಕಂಪನಿಯು 249 ಯುನಿಟ್ ಕಾರುಗಳನ್ನು ಮಾರಾಟ ಮಾಡಿದೆ. ಪೋರ್ಷೆ ನಂತರದ ಸ್ಥಾನಗಳಲ್ಲಿ ಲ್ಯಾಂಬೊರ್ಗಿನಿ, ರೋಲ್ಸ್ ರಾಯ್ಸ್, ಫೆರಾರಿ ಹಾಗೂ ಬೆಂಟ್ಲಿ ಕಂಪನಿಗಳಿವೆ.

MOST READ:ಜೀವದ ಹಂಗು ತೊರೆದು ಮಗುವಿನ ಪ್ರಾಣ ಉಳಿಸಿದ ರಿಯಲ್ ಹೀರೋಗೆ ಬೈಕ್ ಉಡುಗೊರೆ ನೀಡಿದ ಜಾವಾ ಕಂಪನಿ

2021ರ ಹಣಕಾಸು ವರ್ಷದಲ್ಲಿ ಭಾರೀ ಕುಸಿತ ಕಂಡ ಐಷಾರಾಮಿ ಕಾರು ಮಾರಾಟ

ದೇಶಿಯ ಮಾರುಕಟ್ಟೆಯಲ್ಲಿರುವ ಐಷಾರಾಮಿ ಕಾರುಗಳ ಮಾರಾಟದಲ್ಲಿ ಭಾರಿ ಕುಸಿತ ಕಂಡುಬಂದಿದೆ. ದೇಶದಲ್ಲಿ ಬಿಎಸ್ 6 ಮಾಲಿನ್ಯ ನಿಯಮಗಳನ್ನು ಜಾರಿಗೊಳಿಸುವ ಸಂದರ್ಭದಲ್ಲಿಯೂ ಮಾರಾಟದಲ್ಲಿ ಕುಸಿತ ಕಂಡು ಬಂದಿತ್ತು.

2021ರ ಹಣಕಾಸು ವರ್ಷದಲ್ಲಿ ಭಾರೀ ಕುಸಿತ ಕಂಡ ಐಷಾರಾಮಿ ಕಾರು ಮಾರಾಟ

ಈಗ ಕೋವಿಡ್ 19 ಕಾರಣದಿಂದಾಗಿ ಮಾರಾಟದಲ್ಲಿ ಮತ್ತಷ್ಟು ಇಳಿಕೆ ಕಂಡುಬಂದಿದೆ. ಬಿಎಂಡಬ್ಲ್ಯು ಹಾಗೂ ಮರ್ಸಿಡಿಸ್ ಬೆಂಝ್ ನಂತಹ ಕಂಪನಿಗಳು ನಿರಂತರವಾಗಿ ಹೊಸ ಹೊಸ ಕಾರು ಮಾದರಿಗಳನ್ನು ಬಿಡುಗಡೆಗೊಳಿಸುತ್ತಿವೆ.

MOST READ:ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

2021ರ ಹಣಕಾಸು ವರ್ಷದಲ್ಲಿ ಭಾರೀ ಕುಸಿತ ಕಂಡ ಐಷಾರಾಮಿ ಕಾರು ಮಾರಾಟ

ಇದರ ಹೊರತಾಗಿಯೂ ಕಂಪನಿಗಳು ಗ್ರಾಹಕರನ್ನು ಆಕರ್ಷಿಸಲು ವಿಫಲವಾಗುತ್ತಿವೆ. ಹೊಸ ಹಣಕಾಸು ವರ್ಷದಲ್ಲಿ ಉತ್ತಮ ಮಾರಾಟವನ್ನು ನಿರೀಕ್ಷಿಸಲಾಗಿದ್ದರೂ ಮತ್ತೆ ಜಾರಿಗೊಳಿಸಲಾಗಿರುವ ಲಾಕ್‌ಡೌನ್ ಕಂಪನಿಗಳ ನಿರೀಕ್ಷೆಯನ್ನು ಬುಡಮೆಲು ಮಾಡುವ ಸಾಧ್ಯತೆಗಳಿವೆ.

Most Read Articles

Kannada
English summary
Luxury car sales declines in 2021 financial year. Read in Kannada.
Story first published: Tuesday, May 11, 2021, 12:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X