ಬಾಲಿವುಡ್ ಹಾಸ್ಯ ನಟರ ಬಳಿಯಿರುವ ದುಬಾರಿ ಬೆಲೆಯ ಐಷಾರಾಮಿ ಕಾರುಗಳಿವು

ಬೆಳ್ಳಿ ಪರದೆ ಮೇಲೆ ಹಾಸ್ಯನಟರಾಗಿ ಮಿಂಚುವ ಹಲವು ನಟರು ನಿಜ ಜೀವನದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಅವರ ಜೀವನ ಮಾತ್ರವಲ್ಲ ಅವರ ಬಳಿಯಿರುವ ಕಾರುಗಳೂ ಸಹ ನಮ್ಮನ್ನು ಬೆರಗುಗೊಳಿಸುತ್ತವೆ.

ಬಾಲಿವುಡ್ ಹಾಸ್ಯ ನಟರ ಬಳಿಯಿರುವ ದುಬಾರಿ ಬೆಲೆಯ ಐಷಾರಾಮಿ ಕಾರುಗಳಿವು

ಈ ಹಾಸ್ಯ ನಟರ ಬಳಿಯಿರುವ ಐಷಾರಾಮಿ ಕಾರುಗಳೇ ಇದಕ್ಕೆ ಕಾರಣ. ಈ ಲೇಖನದಲ್ಲಿ ದುಬಾರಿ ಬೆಲೆಯ ಐಷಾರಾಮಿ ಕಾರುಗಳನ್ನು ಹೊಂದಿರುವ ಕೆಲವು ಹಾಸ್ಯ ನಟರು ಹಾಗೂ ಅವರ ಬಳಿಯಿರುವ ಕಾರುಗಳ ಬಗೆಗಿನ ವಿವರಗಳನ್ನು ನೋಡೋಣ.

ಬಾಲಿವುಡ್ ಹಾಸ್ಯ ನಟರ ಬಳಿಯಿರುವ ದುಬಾರಿ ಬೆಲೆಯ ಐಷಾರಾಮಿ ಕಾರುಗಳಿವು

ಜಾನಿ ಲಿವರ್:

ಖ್ಯಾತ ಹಾಸ್ಯ ನಟ ಜಾನಿ ಲಿವರ್ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅವರು ವಿವಿಧ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಅವುಗಳಲ್ಲಿ ಆಡಿ ಎ 4 ಐಷಾರಾಮಿ ಕಾರು ಸಹ ಸೇರಿದೆ. ಈ ಕಾರಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 237 ಕಿ.ಮೀಗಳಾಗಿದೆ. ಈ ಕಾರಿನ ಬೆಲೆ ರೂ.45.86 ಲಕ್ಷಗಳಾಗಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಬಾಲಿವುಡ್ ಹಾಸ್ಯ ನಟರ ಬಳಿಯಿರುವ ದುಬಾರಿ ಬೆಲೆಯ ಐಷಾರಾಮಿ ಕಾರುಗಳಿವು

ಅವರು ಮರ್ಸಿಡಿಸ್ ಬೆಂಝ್ ಇ 220 ಟಿ ಐಷಾರಾಮಿ ಕಾರನ್ನು ಸಹ ಹೊಂದಿದ್ದಾರೆ. ಈ ಕಾರಿನಲ್ಲಿ ಅಳವಡಿಸಿರುವ 2.0 ಲೀಟರ್ ಎಂಜಿನ್ 194 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ. ಈ ಕಾರಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 243 ಕಿ.ಮೀಗಳಾಗಿದೆ. ಈ ಕಾರಿನ ಬೆಲೆ ರೂ.60.16 ಲಕ್ಷಗಳಾಗಿದೆ.

ಬಾಲಿವುಡ್ ಹಾಸ್ಯ ನಟರ ಬಳಿಯಿರುವ ದುಬಾರಿ ಬೆಲೆಯ ಐಷಾರಾಮಿ ಕಾರುಗಳಿವು

ಜಾನಿ ಲಿವರ್ ಹೋಂಡಾ ಅಕಾರ್ಡ್ ಕಾರನ್ನು ಸಹ ಹೊಂದಿದ್ದಾರೆ. ಈ ಕಾರಿನಲ್ಲಿ ಅಳವಡಿಸಿರುವ 1.5-ಲೀಟರ್ ಎಂಜಿನ್ 156 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ.ಈ ಕಾರಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 212 ಕಿ.ಮೀಗಳಾಗಿದೆ. ಈ ಕಾರಿನ ಬೆಲೆ ರೂ.38.29 ಲಕ್ಷಗಳಾಗಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಬಾಲಿವುಡ್ ಹಾಸ್ಯ ನಟರ ಬಳಿಯಿರುವ ದುಬಾರಿ ಬೆಲೆಯ ಐಷಾರಾಮಿ ಕಾರುಗಳಿವು

ಗೋವಿಂದ

ಬಾಲಿವುಡ್‌ನ ಪ್ರಸಿದ್ಧ ಹಾಸ್ಯನಟರಲ್ಲಿ ಗೋವಿಂದ ಸಹ ಒಬ್ಬರು. ಅವರು ವಿವಿಧ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಗೋವಿಂದ ಹಾಸ್ಯದಲ್ಲಿ ಮಾತ್ರವಲ್ಲದೇ ನೃತ್ಯದಲ್ಲೂ ಸೈ ಎನಿಸಿಕೊಂಡಿದ್ದಾರೆ. ಅವರ ನೃತ್ಯವನ್ನು ಮೆಚ್ಚುವ ಅಸಂಖ್ಯಾತ ಅಭಿಮಾನಿಗಳಿದ್ದಾರೆ.

ಬಾಲಿವುಡ್ ಹಾಸ್ಯ ನಟರ ಬಳಿಯಿರುವ ದುಬಾರಿ ಬೆಲೆಯ ಐಷಾರಾಮಿ ಕಾರುಗಳಿವು

ಚಿತ್ರಕೃಪೆ: ಫಿಲ್ಮ್ ಫೇರ್

ಅವರು ಮರ್ಸಿಡಿಸ್ ಬೆಂಝ್, ಮಿಟ್ಸುಬಿಷಿ ಲ್ಯಾನ್ಸರ್, ಫೋರ್ಡ್ ಎಂಡೀವರ್ ಕಾರುಗಳನ್ನು ಹೊಂದಿದ್ದಾರೆ. ಅವರು ಹೆಚ್ಚಾಗಿ ಬೆಂಝ್ ಕಾರ್ ಅನ್ನು ಬಳಸುತ್ತಾರೆ. ಅವರ ಬಳಿಯಿರುವ ಬೆಂಝ್ ಕಾರಿನ ಬೆಲೆ ರೂ.50 ಲಕ್ಷಗಳಿಗಿಂತ ಹೆಚ್ಚು ಎಂಬುದು ಗಮನಾರ್ಹ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಬಾಲಿವುಡ್ ಹಾಸ್ಯ ನಟರ ಬಳಿಯಿರುವ ದುಬಾರಿ ಬೆಲೆಯ ಐಷಾರಾಮಿ ಕಾರುಗಳಿವು

ರಾಜ್‌ಪಾಲ್ ಯಾದವ್

ಹೆಚ್ಚು ಐಷಾರಾಮಿ ಕಾರುಗಳನ್ನು ಹೊಂದಿರುವ ಹಾಸ್ಯ ನಟರ ಪಟ್ಟಿಯಲ್ಲಿ ರಾಜ್‌ಪಾಲ್ ಯಾದವ್ ಮೊದಲ ಸ್ಥಾನದಲ್ಲಿದ್ದಾರೆ. ಅವರು ಬಿಎಂಡಬ್ಲ್ಯು 5 ಸೀರೀಸ್ ಕಾರ್ ಅನ್ನು ಹೊಂದಿದ್ದಾರೆ. ಈ ಕಾರಿನ ಬೆಲೆ ರೂ.66 ಲಕ್ಷಗಳಿಗಿಂತ ಹೆಚ್ಚು.

ಬಾಲಿವುಡ್ ಹಾಸ್ಯ ನಟರ ಬಳಿಯಿರುವ ದುಬಾರಿ ಬೆಲೆಯ ಐಷಾರಾಮಿ ಕಾರುಗಳಿವು

ಚಿತ್ರ ಕೃಪೆ: ಪತ್ರಿಕಾ

ರಾಜ್‌ಪಾಲ್ ಯಾದವ್ ಸಹ ಹೋಂಡಾ ಅಕಾರ್ಡ್ ಕಾರ್ ಅನ್ನು ಹೊಂದಿದ್ದಾರೆ. ಈ ಕಾರಿನ ಬೆಲೆ ರೂ.44 ಲಕ್ಷಗಳಾಗಿದೆ. ಈ ಕಾರಿನಲ್ಲಿ ಅಳವಡಿಸಿರುವ 2.0 ಲೀಟರ್ ಎಂಜಿನ್ 143 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಬಾಲಿವುಡ್ ಹಾಸ್ಯ ನಟರ ಬಳಿಯಿರುವ ದುಬಾರಿ ಬೆಲೆಯ ಐಷಾರಾಮಿ ಕಾರುಗಳಿವು

ಕಪಿಲ್ ಶರ್ಮಾ

ಕಪಿಲ್ ಶರ್ಮಾ ಹೆಚ್ಚು ಬೇಡಿಕೆಯಿರುವ ನಟರಲ್ಲಿ ಒಬ್ಬರು. ಅವರು ಸಹ ಹಲವು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಅವರ ಬಳಿಯಿರುವ ಅಸಂಖ್ಯಾತ ಐಷಾರಾಮಿ ಕಾರುಗಳೇ ಇದಕ್ಕೆ ಸಾಕ್ಷಿ.

ಬಾಲಿವುಡ್ ಹಾಸ್ಯ ನಟರ ಬಳಿಯಿರುವ ದುಬಾರಿ ಬೆಲೆಯ ಐಷಾರಾಮಿ ಕಾರುಗಳಿವು

ಕಪಿಲ್ ಶರ್ಮಾ ಮರ್ಸಿಡಿಸ್ ಬೆಂಝ್ ಎಸ್ 350, ರೇಂಜ್ ರೋವರ್ ಇವೊಕ್, ವೋಲ್ವೋ ಎಕ್ಸ್‌ಸಿ 90, ಡಿಸಿ ವ್ಯಾನಿಟಿ ವ್ಯಾನ್‌ನಂತಹ ಹಲವಾರು ದುಬಾರಿ ವಾಹನಗಳನ್ನು ಹೊಂದಿದ್ದಾರೆ. ಅವರು ರಾಯಲ್ ಎನ್‌ಫೀಲ್ಡ್ ಬುಲೆಟ್ 500 ಬೈಕ್ ಸಹ ಹೊಂದಿದ್ದಾರೆ. ಅವರ ಬಳಿಯಿರುವ ಬೆಂಝ್ ಎಸ್ 350 ಅತ್ಯಂತ ದುಬಾರಿ ಕಾರುಗಳಲ್ಲಿ ಒಂದಾಗಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಬಾಲಿವುಡ್ ಹಾಸ್ಯ ನಟರ ಬಳಿಯಿರುವ ದುಬಾರಿ ಬೆಲೆಯ ಐಷಾರಾಮಿ ಕಾರುಗಳಿವು

ಈ ಕಾರಿನ ಬೆಲೆ ರೂ.1.2 ಕೋಟಿಗಳಾಗಿದೆ. ಅವರ ಬಳಿಯಿರುವ ವೋಲ್ವೋ ಎಕ್ಸ್‌ಸಿ 90 ಕಾರಿನ ಬೆಲೆ ರೂ.77.41 ಲಕ್ಷಗಳಾಗಿದೆ. ಅವರು ಬಳಸುವ ರೇಂಜ್ ರೋವರ್ ಇವೊಕ್ ಕಾರಿನ ಬೆಲೆ ರೂ.65 ಲಕ್ಷಗಳಾದರೆ, ವ್ಯಾನಿಟಿ ವ್ಯಾನ್ ಬೆಲೆ ರೂ.5.5 ಕೋಟಿಗಳಾಗಿದೆ.

Most Read Articles

Kannada
English summary
Luxury cars of Bollywood comedy actors. Read in Kannada.
Story first published: Saturday, April 10, 2021, 9:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X