ಭಾರತದಲ್ಲಿ ಈ ವರ್ಷ ಬಿಡುಗಡೆಯಾದ ಐಷಾರಾಮಿ ಪರ್ಫಾಮೆನ್ಸ್ ಕಾರುಗಳಿವು..

ಸದ್ಯ ಆಟೋಮೊಬೈಲ್ ಉದ್ಯಮವು ಮಂದಗತಿಯಲ್ಲಿ ಸಾಗುತ್ತಿದೆ. ಈ ವರ್ಷ ದೇಶಿಯ ಮಾರುಕಟ್ಟೆಯಲ್ಲಿ ವಾಹನ ಮಾರಾಟದ ಮೇಲೆ ಕೊರೋನಾ ಎರಡನೇ ಅಲೆಯು ಭಾರೀ ಪರಿಣಾಮವನ್ನು ಬೀರಿದೆ. ಇದರ ಜೊತೆಗೆ ಸೆಮಿಕಂಡಕ್ಟರ್ ಕೊರತೆಯು ವಾಹನಗಳ ಉತ್ಪಾದನೆಯ ಮೇಲೆ ಪರಿಣಾಮ ಬೀರಿದೆ.

ಭಾರತದಲ್ಲಿ ಈ ವರ್ಷ ಬಿಡುಗಡೆಯಾದ ಐಷಾರಾಮಿ ಪರ್ಫಾಮೆನ್ಸ್ ಕಾರುಗಳಿವು..

ಈ ಎಲ್ಲಾ ಕಾರಣಗಳಿಂದ ದೇಶಿಯ ಮಾರುಕಟ್ಟೆಯಲ್ಲಿ ಈ ವರ್ಷ ವಾಹನಗಳ ಮಾರಾಟದಲ್ಲಿ ಕುಸಿತ ಕಂಡಿದೆ. ಆದರೆ ಈ ವರ್ಷ ಹಲವಾರು ಜನಪ್ರಿಯ ಕಾರುಗಳು ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಈ ಹೊಸ ಆಗಮನಗಳಲ್ಲಿ ಹಲವು ಅದ್ಭುತ ಕಾರುಗಳು ಮತ್ತು ವಿವಿಧ ವಿಭಾಗಗಳಲ್ಲಿ ಕಾರುಗಳು ಬಿಡುಗಡೆಯಾಗಿವೆ. ಇದರಲ್ಲಿ ಐಷಾರಾಮಿ ಪರ್ಫಾಮೆನ್ಸ್ ಕಾರುಗಳು ಕೂಡ ಒಳಗೊಂಡಿವೆ. ಈ ವರ್ಷ ಬಿಡುಗಡೆಗೊಂಡ ಐಷಾರಾಮಿ ಪರ್ಫಾಮೆನ್ಸ್ ಕಾರುಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಈ ವರ್ಷ ಬಿಡುಗಡೆಯಾದ ಐಷಾರಾಮಿ ಪರ್ಫಾಮೆನ್ಸ್ ಕಾರುಗಳಿವು..

ಆಡಿ ಎಸ್ಎಸ್5 ಸ್ಪೋರ್ಟ್‌ಬ್ಯಾಕ್ ಮತ್ತು ಆರ್‌ಎಸ್5 ಸ್ಪೋರ್ಟ್‌ಬ್ಯಾಕ್

ಜರ್ಮನ್ ಮೂಲದ ಜನಪ್ರಿಯ ಐಷಾರಾಮಿ ಕಾರು ತಯಾರಕ ಕಂಪನಿಯಾದ ಆಡಿ ತನ್ನ ಎಸ್5 ಸ್ಪೋರ್ಟ್‌ಬ್ಯಾಕ್ ಮತ್ತು ಆರ್‌ಎಸ್5 ಸ್ಪೋರ್ಟ್‌ಬ್ಯಾಕ್ ಈ ವರ್ಷ ಬಿಡುಗಡೆಗೊಳಿಸಿತ್ತು. ಇದರಲ್ಲಿ ಆಡಿ ಆರ್‌ಎಸ್5 ಸ್ಪೋರ್ಟ್‌ಬ್ಯಾಕ್ ಕಾರು ಇಂಗೋಲ್ಸ್ಟಾಟ್ ಆಧಾರಿತ ಕಂಪನಿಯ ವಿಸ್ತರಿಸುವ ಐಷಾರಾಮಿ ಪೋರ್ಟ್ಫೋಲಿಯೊದ ಭಾಗವಾಗಿದೆ. ಈ ಹೊಸ ಆಡಿ ಆರ್‌ಎಸ್5 ಸ್ಪೋರ್ಟ್‌ಬ್ಯಾಕ್ ಕಾರು ನಾರ್ಡೊ ಗ್ರೇ, ಟರ್ಬೊ ಬ್ಲೂ, ಟ್ಯಾಂಗೋ ರೆಡ್, ಮಿಥೋಸ್ ಬ್ಲ್ಯಾಕ್, ಗ್ಲೇಸಿಯರ್ ವೈಟ್, ನವರಾ ಬ್ಲೂ, ಸೊನೊಮಾ ಗ್ರೀನ್ ಮತ್ತು ಡೇಟೋನಾ ಗ್ರೇ ಬಣ್ಣಗಳ ಆಯ್ಕೆಯನ್ನು ಹೊಂದಿವೆ.

ಭಾರತದಲ್ಲಿ ಈ ವರ್ಷ ಬಿಡುಗಡೆಯಾದ ಐಷಾರಾಮಿ ಪರ್ಫಾಮೆನ್ಸ್ ಕಾರುಗಳಿವು..

ಈ ಹೊಸ ಆಡಿ ಆರ್‌ಎಸ್5 ಸ್ಪೋರ್ಟ್‌ಬ್ಯಾಕ್ ಕಾರಿನಲ್ಲಿ ವಿ6 2.9-ಲೀಟರ್ ಟ್ವಿನ್-ಟರ್ಬೊ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ ನೊಂದಿಗೆ 8-ಸ್ಪೀಡ್ ಟಿಪ್ಟ್ರಾನಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಬ್ರಾಂಡ್‌ನ ಕ್ವಾಟ್ರೊ ಪರ್ಮನೆಂಟ್ ಆಲ್-ವೀಲ್ ಡ್ರೈವ್ ಮೂಲಕ ಸೆಲ್ಫ್-ಲಾಕಿಂಗ್ ಸೆಂಟರ್ ಡಿಫರೆನ್ಷಿಯಲ್‌ನೊಂದಿಗೆ ಎಲ್ಲಾ ನಾಲ್ಕು ವ್ಭೀಲ್ ಗಳೊಂದಿಗೆ ಪವರ್ ಅನ್ನು ಕಳುಹಿಸಲಾಗುತ್ತದೆ. ಈ ಎಂಜಿನ್ ನೊಂದಿಗೆ 6,700 ಆರ್‌ಪಿಎಂನಲ್ಲಿ 443 ಬಿಹೆ‍ಪಿ ಪವರ್ ಮತ್ತು 5,000 ಆರ್‌ಪಿಎಂನಲ್ಲಿ 600 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಭಾರತದಲ್ಲಿ ಈ ವರ್ಷ ಬಿಡುಗಡೆಯಾದ ಐಷಾರಾಮಿ ಪರ್ಫಾಮೆನ್ಸ್ ಕಾರುಗಳಿವು..

ಇನ್ನು ಆಡಿ ಎಸ್5 ಸ್ಪೋರ್ಟ್‌ಬ್ಯಾಕ್ ಕಾರಿನಲ್ಲಿ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗುತ್ತದೆ. ಇದು 3.0-ಲೀಟರ್ ಟಿಎಫ್‌ಎಸ್‌ಐ ಎಂಜಿನ್‌ ಆಗಿರಬಹುದು ಎಂದು ಹೇಳಲಾಗುತ್ತಿದೆ. ಈ ಎಂಜಿನ್ 349 ಬಿಹೆಚ್‌ಪಿ ಪವರ್ ಮತ್ತು 500 ಎನ್‌ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ 3.0-ಲೀಟರ್ ಟಿಎಫ್‌ಎಸ್‌ಐ ಎಂಜಿನ್‌ ನೊಂದಿಗೆ 8-ಸ್ಪೀಡ್ ಟಿಪ್ಟ್ರೋನಿಕ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗುತ್ತದೆ.

ಭಾರತದಲ್ಲಿ ಈ ವರ್ಷ ಬಿಡುಗಡೆಯಾದ ಐಷಾರಾಮಿ ಪರ್ಫಾಮೆನ್ಸ್ ಕಾರುಗಳಿವು..

ಮರ್ಸಿಡಿಸ್-ಎಎಂಜಿ ಎ45 ಎಸ್

ಮರ್ಸಿಡಿಸ್ ಬೆಂಝ್ ಕಂಪನಿಯು ತನ್ನ ಪವರ್‌ಫುಲ್ ಎಂಜಿನ್ ಹೊಂದಿರುವ ಮರ್ಸಿಡಿಸ್-ಎಎಂಜಿ ಎ 45 ಎಸ್ ಕಾರನ್ನು ಭಾರತಕ್ಕೆ ತಂದಿದೆ. ಪವರ್‌ಫುಲ್ ಎಂಜಿನ್ ಪ್ರೇರಿತ ಹೊಸ ಕಾರು ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ರೂ. 79.50 ಲಕ್ಷ ಬೆಲೆ ಹೊಂದಿದೆ.

ಭಾರತದಲ್ಲಿ ಈ ವರ್ಷ ಬಿಡುಗಡೆಯಾದ ಐಷಾರಾಮಿ ಪರ್ಫಾಮೆನ್ಸ್ ಕಾರುಗಳಿವು..

ಪವರ್‌ಫುಲ್ ಎಂಜಿನ್ ಅನ್ನು ಹೊಂದಿರುವ ಮರ್ಸಿಡಿಸ್-ಎಎಂಜಿ ಎ 45 ಎಸ್ ಕಾರು ಹ್ಯಾಚ್‌ಬ್ಯಾಕ್ ಮಾದರಿಯಾಗಿದೆ, ಇದು ಎಎಂಜಿ ತಂತ್ರಜ್ಞಾನದೊಂದಿಗೆ ಹೆಚ್ಚಿನ ಕಾರ್ಯಕ್ಷಮತೆಯನ್ನು ಹೊಂದಿದೆ. ಈ ಕಾರಿನ ಎಂಜಿನ್ ಉತ್ತಮ ಪವರ್ ಅನ್ನು ಉತ್ಪಾದಿಸುತ್ತದೆ. ಈ ಪರ್ಫಾಮೆನ್ಸ್ ಕಾರು ಭಾರತದ ಪರ್ಫಾಮೆನ್ಸ್ ಕಾರು ಪ್ರಿಯರನ್ನು ಸೆಳಯುವಂತಿದೆ.

ಭಾರತದಲ್ಲಿ ಈ ವರ್ಷ ಬಿಡುಗಡೆಯಾದ ಐಷಾರಾಮಿ ಪರ್ಫಾಮೆನ್ಸ್ ಕಾರುಗಳಿವು..

2.0-ಲೀಟರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 6,750 ಆರ್‌ಪಿಎಂನಲ್ಲಿ 421 ಬಿಹೆಚ್‌ಪಿ ಪವರ್ ಮತ್ತು 5,000 ಮತ್ತು 5,250 ಆರ್‌ಪಿಎಂನಲ್ಲಿ 500 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮಥ್ಯವನ್ನು ಹೊಂದಿದೆ. ಎಂಜಿನ್ ಅನ್ನು 8-ಸ್ಪೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ ಅದು ಎಲ್ಲಾ ನಾಲ್ಕು ವ್ಹೀಲ್ ಗಳಿಗೆ ಪವರ್ ಅನ್ನು ಕಳುಹಿಸುತ್ತದೆ.

ಭಾರತದಲ್ಲಿ ಈ ವರ್ಷ ಬಿಡುಗಡೆಯಾದ ಐಷಾರಾಮಿ ಪರ್ಫಾಮೆನ್ಸ್ ಕಾರುಗಳಿವು..

ಬಿಎಂಡಬ್ಲ್ಯು ಎಂ340ಐ

ಬಿಎಂಡಬ್ಲ್ಯು ಇಂಡಿಯಾ ತನ್ನ ಹೊಸ ಎಂ340ಐ ಎಕ್ಸ್‌ಡ್ರೈವ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಈ ವರ್ಷ ಪರಿಚಯಿಸಿದೆ ಈ ಐಷಾರಾಮಿ ಬಿಎಂಡಬ್ಲ್ಯು ಎಂ340ಐ ಎಕ್ಸ್‌ಡ್ರೈವ್ ಕಾರನ್ನು ಭಾರತದಲ್ಲಿ ಸ್ಥಳೀಯವಾಗಿ ಅಭಿವೃದ್ದಿಪಡಿಸಲಾಗಿದೆ. ಇನ್ನು ಈ ಹೊಸ ಬಿಎಂಡಬ್ಲ್ಯು ಎಂ340ಐ ಎಕ್ಸ್‌ಡ್ರೈವ್ ಕಾರಿನಲ್ಲಿ ಪವರ್ ಫುಲ್ 3.0-ಲೀಟರ್, ಆರು ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ ಮತ್ತು ಆಲ್-ವ್ಹೀಲ್ ಡ್ರೈವ್ ಸೆಟಪ್ ಒಳಗೊಂಡಿದೆ.

ಭಾರತದಲ್ಲಿ ಈ ವರ್ಷ ಬಿಡುಗಡೆಯಾದ ಐಷಾರಾಮಿ ಪರ್ಫಾಮೆನ್ಸ್ ಕಾರುಗಳಿವು..

ಈ ಎಂಜಿನ್ 87 ಬಿಹೆಚ್‌ಪಿ ಪವರ್ ಮತ್ತು 500 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು ಪ್ಯಾಡಲ್ ಶಿಫ್ಟರ್‌ಗಳೊಂದಿಗೆ ಎಂಜಿನ್ ಅನ್ನು 8-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಈ ಐಷಾರಾಮಿ ಬಿಎಂಡಬ್ಲ್ಯು ಕಾರು ಕೇವಲ 4.4 ಸೆಕೆಂಡುಗಳಲ್ಲಿ 100 ಕಿ,ಮೀ ವೇಗವನ್ನು ಪಡೆದುಕೊಳ್ಳುತ್ತದೆ.

ಭಾರತದಲ್ಲಿ ಈ ವರ್ಷ ಬಿಡುಗಡೆಯಾದ ಐಷಾರಾಮಿ ಪರ್ಫಾಮೆನ್ಸ್ ಕಾರುಗಳಿವು..

ಈ ಬಿಎಂಡಬ್ಲ್ಯು ಎಂ340ಐ ಎಕ್ಸ್‌ಡ್ರೈವ್ ಕಾರಿನಲ್ಲಿ ಎಂ-ಸ್ಪೆಸಿಫಿಕ್ ಚಾಸಿಸ್ ಟ್ಯೂನಿಂಗ್, ಬಿಎಂಡಬ್ಲ್ಯು ಎಕ್ಸ್‌ಡ್ರೈವ್ ಆಲ್-ವ್ಹೀಲ್ ಡ್ರೈವ್ ಮತ್ತು ಎಂ ಸ್ಪೋರ್ಟ್ ರಿಯರ್ ಡಿಫರೆನ್ಷಿಯಲ್ ಅನ್ನು ಹೊಂದಿದೆ. ಇನ್ನು ಈ ಕಾರಿನ ಸೈಡ್ ಪ್ರೊಫೈಲ್ ಉದ್ದಕೂ ಅಗ್ರೇಸಿವ್ ಬಾಡಿ ಲೈನ್ ಗಳನ್ನು ಒಳಗೊಂಡಿದೆ. ಹಿಂಭಾಗದಲ್ಲಿ ಎಲ್ಇಡಿ ಟೈಲ್‌ಲೈಟ್‌ಗಳನ್ನೂ ಸಹ ಒಳಗೊಂಡಿದೆ. ಇದು ಡ್ಯುಯಲ್ ಔಟ್ ಲೆಟ್ ಗಳೊಂದಿಗೆ ಎಂ ಸ್ಪೋರ್ಟ್ ಎಕ್ಸಾಸ್ಟ್ ಸಹ ಹೊಂದಿದೆ.

ಭಾರತದಲ್ಲಿ ಈ ವರ್ಷ ಬಿಡುಗಡೆಯಾದ ಐಷಾರಾಮಿ ಪರ್ಫಾಮೆನ್ಸ್ ಕಾರುಗಳಿವು..

ಮಸರಾಟಿ ಎಂಸಿ20 ಸ್ಪೋರ್ಟ್ಸ್ ಕಾರ್

ಇಟಲಿ ಮೂಲದ ಮಸೆರಾಟಿ ಕಂಪನಿ ಕಾರುಗಳು ಹೆಚ್ಚಿನ ಪರ್ಫಾಮೆನ್ಸ್ ಗಾಗಿ ವಿಶ್ವದಾದ್ಯಂತ ಹೆಸರುವಾಸಿಯಾಗಿವೆ. ಈ ಮಸೆರಾಟಿ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಎಂಸಿ20 ಸ್ಪೋರ್ಟ್ಸ್ ಕಾರನ್ನು ಬಿಡುಗಡೆಗೊಳಿಸಿದೆ, ಈ ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ. 3.65 ಕೋಟಿಗಳಾಗಿದೆ.

ಭಾರತದಲ್ಲಿ ಈ ವರ್ಷ ಬಿಡುಗಡೆಯಾದ ಐಷಾರಾಮಿ ಪರ್ಫಾಮೆನ್ಸ್ ಕಾರುಗಳಿವು..

ಈ ಹೊಸ ಮಸೆರಾಟಿ ಎಂಸಿ20 ಕಾರಿನಲ್ಲಿ 3.0 ಲೀಟರಿನ ವಿ6 ಟ್ವಿನ್ ಟರ್ಬೊ ಎಂಜಿನ್ ಅಳವಡಿಸಲಾಗಿದೆ. ನೆಪ್ಚೂನ್ ಎಂದು ಹೆಸರಿಸಲಾದ ಈ ಎಂಜಿನ್ 621 ಬಿಹೆಚ್‌ಪಿ ಪವರ್ ಹಾಗೂ 730 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 8-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಇದು ಹಿಂಬಂದಿಯ ವ್ಹೀಲ್ ಗಳಿಗೆ ಪವರ್ ಅನ್ನು ಕಳುಹಿಸಲಾಗುತ್ತದೆ. ಈ ಹೊಸ ಮಸೆರಾಟಿ ಎಂಸಿ20 ಕಾರು ಕೇವಲ 2.9 ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ.

ಭಾರತದಲ್ಲಿ ಈ ವರ್ಷ ಬಿಡುಗಡೆಯಾದ ಐಷಾರಾಮಿ ಪರ್ಫಾಮೆನ್ಸ್ ಕಾರುಗಳಿವು..

ಮಸೆರಾಟಿಯ ಕನೆಕ್ಟೆಡ್ ಟೆಕ್ನಾಲಜಿಯ ಮೂಲಕ ಈ ಕಾರು ಸುಧಾರಿತ ಡ್ರೈವಿಂಗ್ ಅನುಭವವನ್ನು ನೀಡುತ್ತದೆ. ಈ ಕಾರಿನಲ್ಲಿ ವೆಟ್, ಜಿಟಿ, ಸ್ಪೋರ್ಟ್, ಕೊರ್ಸಾ, ಮತ್ತು ಇಎಸ್ಸಿ ಆಫ್ ಸೆಂಟರ್ ಕನ್ಸೋಲ್‌ನಲ್ಲಿನ ಡಯಲ್‌ನಿಂದ ಆಯ್ಕೆ ಮಾಡಬಹುದಾಗಿದೆ. ಈ ಸೂಪರ್‌ಕಾರ್‌ನ ಬೆಲೆಯ ಕುರಿತು ಹೆಚ್ಚಿನ ವಿವರಗಳು ಮುಂದಿನ ತಿಂಗಳುಗಳಲ್ಲಿ ಬಹಿರಂಗಗೊಳ್ಳುವ ಸಾಧ್ಯತೆಯಿದೆ.

ಭಾರತದಲ್ಲಿ ಈ ವರ್ಷ ಬಿಡುಗಡೆಯಾದ ಐಷಾರಾಮಿ ಪರ್ಫಾಮೆನ್ಸ್ ಕಾರುಗಳಿವು..

ಫೆರಾರಿ ರೋಮಾ

ಇಟಲಿ ಮೂಲದ ಸೂಪರ್‍‍‍ಕಾರ್ ಉತ್ಪಾದನಾ ಸಂಸ್ಥೆಯಾದ ಫೆರಾರಿ ತನ್ನ ಹೊಸ ರೋಮಾ ಸೂಪರ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಈ ವರ್ಷದ ಜುಲೈ ತಿಂಗಳಿನಲ್ಲಿ ಬಿಡುಗಡೆಗೊಳಿಸಿತ್ತು. ಹೊಸ ಫೆರಾರಿ ರೋಮಾ ಸೂಪರ್‍‍‍ಕಾರ್ ಒಂದೇ ರೂಪಾಂತರದಲ್ಲಿ ಬಿಡುಗಡೆಯಾಗಿದೆ. ಗ್ರಾಹಕರು ತಮ್ಮ ಅಭಿರುಚಿಗೆ ಅನುಗುಣವಾಗಿ ಅದನ್ನು ಕಸ್ಟಮೈಸ್ ಮಾಡಬಹುದು.

ಭಾರತದಲ್ಲಿ ಈ ವರ್ಷ ಬಿಡುಗಡೆಯಾದ ಐಷಾರಾಮಿ ಪರ್ಫಾಮೆನ್ಸ್ ಕಾರುಗಳಿವು..

ಫೆರಾರಿ ರೋಮಾ ಸೂಪರ್‍‍‍ಕಾರ್ ಅನ್ನು ಪೋರ್ಟೊಫಿನೊ ಮಾದರಿಗಿಂತ ಮೇಲಿನ ಸ್ಥಾನದಲ್ಲಿರುತ್ತದೆ. ಹೊಸ ಫೆರಾರಿ ರೋಮಾ ಸೂಪರ್‍‍‍ಕಾರ್ ಟ್ವಿನ್-ಟರ್ಬೊ ವಿ8 ಎಂಜಿನ್‌ ಅನ್ನು ಹೊಂದಿದೆ. ಇದು ಪವರ್ ಫುಲ್ ಎಂಜಿನ್ ಆಗಿದೆ.

ಭಾರತದಲ್ಲಿ ಈ ವರ್ಷ ಬಿಡುಗಡೆಯಾದ ಐಷಾರಾಮಿ ಪರ್ಫಾಮೆನ್ಸ್ ಕಾರುಗಳಿವು..

ಈ ಎಂಜಿನ್ 7500 ಆರ್‌ಪಿಎಂನಲ್ಲಿ 602 ಬಿಹೆಚ್‌ಪಿ ಪವರ್ ಮತ್ತು 5,750 ಆರ್‌ಪಿಎಂನಲ್ಲಿ 760 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 8-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಈ ಹೊಸ ಫೆರಾರಿ ರೋಮಾ ಸೂಪರ್‍‍‍ಕಾರ್ ಕೇವಲ 3.4 ಸೆಕೆಂಡುಗಳಲ್ಲಿ 0 ದಿಂದ 100 ಕಿ,ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಸೆಕೆಂಡುಗಳಲ್ಲಿ 0 ದಿಂದ 200 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಈ ಸೂಪರ್‍‍‍ಕಾರ್ 320 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

Most Read Articles

Kannada
English summary
Luxury performance cars launched in 2021 in india details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X